ಕರಾವಳಿ

ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪ.ಪೂ ಕಾಲೇಜು, ಶಕ್ತಿನಗರದ ವತಿಯಿಂದ ಮಂಗಳೂರು ವಿವಿ ಸಹಕಾರದೊಂದಿಗೆ ನಾಳೆ ಪದವಿನಂಗಡಿಯಲ್ಲಿ ಫಿಟ್‍ ಇಂಡಿಯಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.25    ಶಕ್ತಿನಗರದ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪದವಿ ಪೂರ್ವಕಾಲೇಜು ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದ ಸಹಕಾರದೊಂದಿಗೆ ನಾಳೆ ಪದವಿನಂಗಡಿಯಲ್ಲಿ ಬೆಳಗ್ಗೆ 9:30ಕ್ಕೆ ಕೇಂದ್ರ ಸರ್ಕಾರದ ಫಿಟ್‍ ಇಂಡಿಯಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನೀವು ನಿಮ್ಮ ಶರೀರವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಿ, ಸಂತಸ ಮತ್ತು ಮಾನಸಿಕ ನೆಮ್ಮದಿ ನಿಮ್ಮದಾಗುವುದು ಎಂಬುವುದು ಪ್ರಧಾನಿ ನರೇಂದ್ರ ಮೋದಿಯವರ ಫಿಟ್‍ ಇಂಡಿಯಾದ ಕಲ್ಪನೆ ಫಿಟ್‍ ಇಂಡಿಯಾ ಎಂಬುವುದು ಒಂದು ರಾಷ್ಟ್ರವ್ಯಾಪಿ ಆಂದೋಲನ, ದಿನದಲ್ಲಿ ಒಂದು ನಿಯಮಿತ ಕಾಲ […]

ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪ.ಪೂ ಕಾಲೇಜು, ಶಕ್ತಿನಗರದ ವತಿಯಿಂದ ಮಂಗಳೂರು ವಿವಿ ಸಹಕಾರದೊಂದಿಗೆ ನಾಳೆ ಪದವಿನಂಗಡಿಯಲ್ಲಿ ಫಿಟ್‍ ಇಂಡಿಯಾ ಕಾರ್ಯಕ್ರಮ Read More »

ಕರಾವಳಿ

ಒರುಂಬಾಲು ರಸ್ತೆಗೆ ಶಾಸಕರಿಂದ ಗುದ್ದಲಿ ಪೂಜೆ

(ನ್ಯೂಸ್ ಕಡಬ) newskadaba.com, ಕಡಬ, ಜ.25    ನೂಜಿಬಾಳ್ತಿಲ ಗ್ರಾಮದ ತೀವ್ರ ಹದಗೆಟ್ಟಿದ್ದ ಬದಿಬಾಗಿಲು-ಒರುಂಬಾಲು ರಸ್ತೆಗೆ ಶಾಸಕರ 15 ಲಕ್ಷ ರೂ. ಅನುದಾನದಲ್ಲಿ ನಡೆಯಲಿರುವ ಕಾಂಕ್ರೀಟ್ ಕಾಮಗಾರಿಗೆ ಶುಕ್ರವಾರ ಸುಳ್ಯ ಶಾಸಕ ಎಸ್.ಅಂಗಾರ ಶಂಕುಸ್ಥಾಪನೆ ನೆರವೇರಿಸಿದರು. ಹಿರಿಯರಾದ ದೇಜಪ್ಪ ಪೂಜಾರಿ ಅವರು ದೀಪ ಬೆಳಗಿಸಿ, ಉದ್ಘಾಟಿಸಿದರು. ಶಾಸಕ ಎಸ್.ಅಂಗಾರ ತೆಂಗಿನ ಕಾಯಿ ಒಡೆದು ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, 1994ರ ಬಳಿಕ ಸುಮಾರು 25 ವರ್ಷಗಳ ಬಳಿಕ ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದು

ಒರುಂಬಾಲು ರಸ್ತೆಗೆ ಶಾಸಕರಿಂದ ಗುದ್ದಲಿ ಪೂಜೆ Read More »

ಕರಾವಳಿ

ಕೌಶಲ್ಯ ಪರೀಕ್ಷೆ ಹಾಗೂ ಪ್ರಮಾಣೀಕರಣ – ಉಚಿತ ತರಬೇತಿ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.25     ಭಾರತ ಸರ್ಕಾರ, ಪ್ರವಾಸೋದ್ಯಮ ಮಂತ್ರಾಲಯದಿಂದ ಪ್ರಾಯೋಜಿತ ಸ್ಕಿಲ್ ಟೆಸ್ಟಿಂಗ್ ಆ್ಯಂಡ್ ಸರ್ಟಿಫಿಕೇಶನ್ 6 ದಿನಗಳ ತರಬೇತಿಯನ್ನು ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವ ಉದ್ಯೋಗಿಗಳಿಗೆ ಉಚಿತವಾಗಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತರಬೇತಿಯ  ಕ್ಷೇತ್ರಗಳು:  ಆಹಾರ ತಯಾರಿಕೆ, ಆಹಾರ ವಿತರಣೆ, ವಸತಿ ನಿರ್ವಹಣೆ, ಬೇಕರಿ. ತರಬೇತಿಯ ನಿಯಮ ಹಾಗೂ ನಿಬಂಧನೆಗಳು: ಅಭ್ಯರ್ಥಿಗಳು ಹೋಟೆಲ್, ರೆಸ್ಸಾಟ್ರ್ಸ್, ರೆಸ್ಟೋರೆಂಟ್, ಕ್ಯಾಂಟೀನ್, ಡಾಬಾ, ಅತಿಥಿಗೃಹ, ಕ್ಲಬ್‍ಹೌಸ್, ಹಾಸ್ಟೆಲ್ಸ್, ಹೋಂಸ್ಟೇ, ಮೆಸ್ ಮುಂತಾದ ಕೇಟರಿಂಗ್ ಕ್ಷೇತ್ರದಲ್ಲಿ ಉದ್ಯೋಗಿಯಾಗಿ

ಕೌಶಲ್ಯ ಪರೀಕ್ಷೆ ಹಾಗೂ ಪ್ರಮಾಣೀಕರಣ – ಉಚಿತ ತರಬೇತಿ Read More »

ಕರಾವಳಿ

ಬೆರಳಚ್ಚುಗಾರರ ಸೇವೆ – ಅರ್ಹ ಸಂಸ್ಥೆಯಿಂದ ಅರ್ಜಿ ಆಹ್ವಾನ 

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.25    ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ, ಪುತ್ತೂರು ಕಚೇರಿಯಲ್ಲಿ ಬೆರಳಚ್ಚುಗಾರರ ಸೇವೆಯನ್ನು  ಹೊರಗುತ್ತಿಗೆ ಆಧಾರದ ಮೇಲೆ ನಿರ್ವಹಿಸಲು ಅರ್ಹ ಸಂಸ್ಥೆಯಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಫೆಬ್ರವರಿ 20 ರಂದು ಸಂಜೆ 5 ಗಂಟೆ ಒಳಗಾಗಿ ಟೆಂಡರ್ ಮೊಹರು ಮಾಡಿದ ಲಕೋಟೆಯಲ್ಲಿ ಅರ್ಜಿ ಸಲ್ಲಿಸಬೇಕು. ಫೆಬ್ರವರಿ 24 ರಂದು ಮಧ್ಯಾಹ್ನ 3 ಗಂಟೆಗೆ ಹಾಜರಿರುವ ಟೆಂಡರುದಾರರ ಸಮಕ್ಷಮ ಪರಿಶೀಲನೆ ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ  ದೂರವಾಣಿ ಸಂಖ್ಯೆ : 08251-230905 ನ್ನು

ಬೆರಳಚ್ಚುಗಾರರ ಸೇವೆ – ಅರ್ಹ ಸಂಸ್ಥೆಯಿಂದ ಅರ್ಜಿ ಆಹ್ವಾನ  Read More »

ಕರಾವಳಿ

ಉಚಿತ ಕೌಶಲ್ಯ ತರಬೇತಿ ಹಾಗೂ ಉದ್ಯೋಗ ಸಹಾಯ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.25   ಕರ್ನಾಟಕ ಸರ್ಕಾರ, ಕೌಶಲ್ಯ ಅಭಿವೃದ್ದಿ ಯೋಜನೆಯಡಿಯಲ್ಲಿ, ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಅರ್ಹ ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯ ಅಭಿವೃದ್ದಿ ತರಬೇತಿಯನ್ನು ಉಚಿತವಾಗಿ ಹೋಟೆಲ್ ಮ್ಯಾನೇಜ್‍ಮೆಂಟ್ ಕ್ಷೇತ್ರದಲ್ಲಿ ಪ್ರಾರಂಭಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೋಟೆಲ್ ಮ್ಯಾನೇಜ್‍ಮೆಂಟ್  ತರಬೇತಿಯ  ಕ್ಷೇತ್ರಗಳು: ಫುಡ್ ಪ್ರೊಡಕ್ಷನ್, ತರಬೇತಿ ಅವಧಿ – 18 ವಾರಗಳು, ವಿದ್ಯಾರ್ಹತೆ 8 ನೇ ತರಗತಿ ಉತ್ತೀರ್ಣ, ರೂ. 2000 ಸ್ಟೈಫಂಡ್, ಬೇಕರಿ ಅಂಡ್ ಕನ್‍ಫೆಕ್ಷನರಿ ತರಬೇತಿ ಅವಧಿ – 6

ಉಚಿತ ಕೌಶಲ್ಯ ತರಬೇತಿ ಹಾಗೂ ಉದ್ಯೋಗ ಸಹಾಯ Read More »

ಕರಾವಳಿ

ಜ.27 ರಂದು ಚಲನಚಿತ್ರ ಪ್ರದರ್ಶನ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.25    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಜನವರಿ 27 ರಂದು ಗಣರಾಜ್ಯೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟ ಹಾಗೂ ಭಾರತದ ಸಂವಿಧಾನದ ನಿರ್ಮಾತೃರ ಮಹತ್ವ ತಿಳಿಸುವ ಚಲನಚಿತ್ರಗಳ ಪ್ರದರ್ಶನವನ್ನು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸಲಾಗಿದೆ. ನಗರದ ವಿಶ್ವ ವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಜನವರಿ 27 ಸೋಮವಾರ ಬೆಳಿಗ್ಗೆ 10.30 ಗಂಟೆಗೆ  ರಿಚರ್ಡ್ ಅಟೆನ್‍ಬುರೋ ನಿರ್ದೆಶನದ ಗಾಂಧಿ ಹಾಗೂ ಜಬ್ಬಾರ್ ಪಟೇಲ್

ಜ.27 ರಂದು ಚಲನಚಿತ್ರ ಪ್ರದರ್ಶನ Read More »

ಕರಾವಳಿ

ದ.ಕ ಜಿಲ್ಲಾಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.25    ದಕ್ಷಿಣ ಕನ್ನಡ ಜಿಲ್ಲೆ ಸರ್ವೋತ್ತಮ ಸೇವಾ ಪ್ರಶಸ್ತಿ-2020 ಗೆ ಆಯ್ಕೆಯಾದ ಸರ್ಕಾರಿ ನೌಕರರ ಹೆಸರು ಮತ್ತು ಹುದ್ದೆಯ ವಿವರ ಇಂತಿವೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಂಗಳೂರು ಡಾ. ರಾಮಕೃಷ್ಣ ರಾವ್, ಕಾರ್ಮಿಕ ಅಧಿಕಾರಿ ಮಂಗಳೂರು ವಿಲ್ಮ ಎಲಿಜಬೆತ್ ತೌವ್ರೋ, ಉಪತಹಶೀಲ್ದಾರರು ತಾಲೂಕು ಕಚೇರಿ ಮಂಗಳೂರು ವತ್ಸಲ, ಕಂದಾಯ ನಿರೀಕ್ಷಕರು ತಾಲೂಕು ಕಚೇರಿ ಸುಳ್ಯ ಕೊರಗಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಬಿ

ದ.ಕ ಜಿಲ್ಲಾಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆ Read More »

ಕರಾವಳಿ

ಕೃಷಿ ಹಾಗೂ ತೋಟಗಾರಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಿ – ಶಾಸಕ ಡಿ. ವೇದವ್ಯಾಸ ಕಾಮತ್

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.25   ಕೃಷಿ ಹಾಗೂ ತೋಟಗಾರಿಕೆಯಲ್ಲಿ ಹೆಚ್ಚಿನ ಜನರು  ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಹಾಗೂ ಇದಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕು ಎನ್ನುವ ಉದ್ದೇಶದಿಂದ  ತೋಟಗಾರಿಕಾ ಇಲಾಖೆ ಯಶಸ್ವಿಯಾದ ಕಾರ್ಯಕ್ರಮ ಆಯೋಜಿಸಿದೆ ಎಂದು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು. ತೋಟಗಾರಿಕಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಹಾಗೂ ಸಿರಿ ತೋಟಗಾರಿಕೆ(ರಿ), ಮಂಗಳೂರು ಇತರ ಅಭಿವೃದ್ಧಿ ಇಲಾಖೆಗಳ ಸಹಭಾಗಿತ್ವದಲ್ಲಿ

ಕೃಷಿ ಹಾಗೂ ತೋಟಗಾರಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಿ – ಶಾಸಕ ಡಿ. ವೇದವ್ಯಾಸ ಕಾಮತ್ Read More »

ಕರಾವಳಿ

ರಾಜನಾಥ್ ಸಿಂಗ್ ಮಂಗಳೂರಿಗೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.25  ಮಂಗಳೂರು ಕೇಂದ್ರ ಸಚಿವ ರಾಜನಾಥ್ ಸಿಂಗ್ ಜನವರಿ 27ರಂದು ಮಂಗಳೂರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಬೆಂಬಲಿಸಿ ನಡೆಯಲಿರುವ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು  ಆಗಮಿಸಲಿದ್ದಾರೆ. ಪೌರತ್ವ ಕಾಯಿದೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಈ ಕಾರ್ಯಕ್ರಮದಲ್ಲಿ  ಲಕ್ಷಾಂತರ ಜನರು  ಭಾಗವಹಿಸುವ ನಿರೀಕ್ಷೆ ಇದೆ. ಇದೆ ಸಂಧರ್ಭದಲ್ಲಿ ನಗರದ ಬಸ್ ,ಟ್ಯಾಕ್ಸಿ, ಮತ್ತು ಆಟೋ ಚಾಲಕರ ಸಂಘದ ಸದಸ್ಯರು  ಬೆಂಬಲ ನೀಡಲಿದ್ದು, ವ್ಯಾಪಾರಸ್ತರು  ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮದಲ್ಲಿ

ರಾಜನಾಥ್ ಸಿಂಗ್ ಮಂಗಳೂರಿಗೆ Read More »

ಕರಾವಳಿ

ಕುಂದಾಪುರ: ಬೈಕ್ ಢಿಕ್ಕಿ ಹೊಡೆದು ಮಹಿಳೆ ಮೃತ್ಯು

ಕುಂದಾಪುರ, ಜ.25: ಪಾದಚಾರಿ ಮಹಿಳೆಯೊಬ್ಬಳಿಗೆ ಬೈಕ್ಕೊಂದು ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇರುವ ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಮಹಾದ್ವಾರದ ಎದುರು ನಡೆದಿದೆ.         ಮೃತ ಮಹಿಳೆಯನ್ನು ಸ್ಥಳೀಯ ನಿವಾಸಿ ವಿನಯ ಕಾಮತ್‌(62) ಎಂದು ಗುರುತಿಸಲಾಗಿದೆ. ಸವಾರ ಹಳವಳ್ಳಿ ನಿವಾಸಿ ಕೀರ್ತಿರಾಜ್ ಕೊಟೇಶ್ವರದಿಂದ ಕುಂಭಾಶಿ ಕಡೆಗೆ ಅತೀ ವೇಗದಿಂದ ಬಂದಿದ್ದು ಪಾದಚಾರಿ ವೃದ್ಧೆಗೆ ಢಿಕ್ಕಿ ಹೊಡೆದಿದ್ದಾನೆ. ಈ ಸಂದರ್ಭದಲ್ಲಿ ಬೈಕ್‌ ಸವಾರ ಕೀರ್ತಿರಾಜ್‌ ತಲೆಗೂ

ಕುಂದಾಪುರ: ಬೈಕ್ ಢಿಕ್ಕಿ ಹೊಡೆದು ಮಹಿಳೆ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top