ಕರಾವಳಿ

ಉಪ್ಪಿನಂಗಡಿ: ಗೃಹರಕ್ಷಕದಳದ ವತಿಯಿಂದ ಹುತಾತ್ಮ ಯೋಧರಿಗೆ ಮೌನ ಪ್ರಾರ್ಥನೆ ಮೂಲಕ ಗೌರವ ಸಮರ್ಪಣೆ

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಜೂ.21, ಚೀನಾ- ಭಾರತ ಗಡಿ ಸಂಘರ್ಷದಲ್ಲಿ ಹುತಾತ್ಮರಾದ ಯೋಧರಿಗೆ ಉಪ್ಪಿನಂಗಡಿ ಗೃಹರಕ್ಷಕ ದಳದ ವತಿಯಿಂದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಗೃಹರಕ್ಷಕ ದಳದ ವತಿಯಿಂದ ನಡೆಸುವ ವಾರದ ಕವಾಯತು ವೇಳೆಯಲ್ಲಿ ಜೂ.16 ರಂದು ಭಾರತ- ಚೀನಾ ಗಡಿಯಲ್ಲಿ ಗಾಲ್ವನ್ ಕಣಿವೆಯ ಗಡಿ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ವೀರ ಯೋಧರಿಗೆ ಐದು ನಿಮಿಷಗಳ ಮೌನ ಪ್ರಾರ್ಥನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.

ಉಪ್ಪಿನಂಗಡಿ: ಗೃಹರಕ್ಷಕದಳದ ವತಿಯಿಂದ ಹುತಾತ್ಮ ಯೋಧರಿಗೆ ಮೌನ ಪ್ರಾರ್ಥನೆ ಮೂಲಕ ಗೌರವ ಸಮರ್ಪಣೆ Read More »

ಕರಾವಳಿ

ನಾಪತ್ತೆಯಾಗಿದ್ದ ಕಡಬದ ಯುವಕ ಉಡುಪಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com.ಕಡಬ,ಜೂ.21: ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಶೀನಪ್ಪ ಎಂಬವರ ಪುತ್ರ ಪೃಥ್ವಿ ಮೇ 15ರಂದು  ನಾಪತ್ತೆಯಾಗಿದ್ದರು. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಯುವಕನ್ನು ಪತ್ತೆಹಚ್ಚಿದ್ದಾರೆ. ಇಂದು ಉಡುಪಿ ಜಿಲ್ಲೆಯ ಕೋಟ ಎಂಬಲ್ಲಿ ಯವಕನಿರುವ ಖಚಿತ ಮಾಹಿತಿ ಪಡೆದು ಅಲ್ಲಿಗೆ ತೆರಲಿದ ಹೆಡ್ ಕಾನ್ಸ್ಟೇಬಲ್ ಮೋನಪ್ಪ ಗೌಡರು ಅಲ್ಲಿಂದ ಠಾಣೆಗೆ ಕರೆತಂದು ಆತನ ತಂದೆ ತಾಯಿಯೊಂದಿಗೆ ಮನೆಗೆ ಕಳುಹಿಸಿಕೊಡಲಾಗಿದೆ. ಇದರೊಂದಿಗೆ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.

ನಾಪತ್ತೆಯಾಗಿದ್ದ ಕಡಬದ ಯುವಕ ಉಡುಪಿಯಲ್ಲಿ ಪತ್ತೆ Read More »

ಕರಾವಳಿ

ಆಲಂಕಾರಿನಲ್ಲಿ ರತ್ನಶ್ರೀ ಸಂಸ್ಥೆಯಿಂದ ನೂತನ ಪೆಟ್ರೋಲ್ ಬಂಕ್ ➤ ಎಂಆರ್‌ಪಿಎಲ್‌ನ ರಿಟೈಲ್ ಔಟ್‌ಲೆಟ್‌ಗೆ ಭೂಮಿಪೂಜೆ

(ನ್ಯೂಸ್ ಕಡಬ)newskadaba.com ಅಲಂಕಾರು, ಜೂ. 21, ಎಂಆರ್‌ಪಿಎಲ್‌ನ ರಿಟೈಲ್ ಔಟ್‌ಲೆಟ್‌ಗೆ ಆಲಂಕಾರಿನಲ್ಲಿ ಜೂ.20ರಂದು ಬೆಳಿಗ್ಗೆ ಭೂಮಿಪೂಜೆ ನೆರವೇರಿಸಲಾಯಿತು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧ್ಯಕ್ಷ ಕೃಷ್ಣಮೂರ್ತಿ ಕಲ್ಲೇರಿಯವರು ಶಿಲಾನ್ಯಾಸ ನೆರವೇರಿಸಿ, ಪುರೋಹಿತರಾದ ಶ್ರೀಕಾಂತ ಕಲ್ಲೂರಾಯ ಬಾಜಳ್ಳಿಯವರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ವಿದ್ಯಾರಣ್ಯ ಕಲ್ಲೇರಿ, ಪೆರಾಬೆ ಗ್ರಾ.ಪಂ. ಅಧ್ಯಕ್ಷೆ ಸುಗುಣ, ಕಡಬ ಸಿ.ಎ ಬ್ಯಾಂಕ್ ಅಧ್ಯಕ್ಷ ರಮೇಶ್ ಕಲ್ಪುರೆ, ಆಲಂಕಾರು ಗ್ರಾ.ಪಂ. ಸದಸ್ಯ ಕೇಶವ ಗೌಡ ಆಲಡ್ಕ, ಉಪ್ಪಿನಂಗಡಿ ರಾಜ್ ಬೋರ್‌ವೆಲ್ಸ್‌ನ ಕೃಷ್ಣರಾಜ್, ಆಲಂಕಾರು ಹಾಲು ಉತ್ಪಾದಕರ ಸಹಕಾರಿ

ಆಲಂಕಾರಿನಲ್ಲಿ ರತ್ನಶ್ರೀ ಸಂಸ್ಥೆಯಿಂದ ನೂತನ ಪೆಟ್ರೋಲ್ ಬಂಕ್ ➤ ಎಂಆರ್‌ಪಿಎಲ್‌ನ ರಿಟೈಲ್ ಔಟ್‌ಲೆಟ್‌ಗೆ ಭೂಮಿಪೂಜೆ Read More »

ಕರಾವಳಿ

ಕೊಯಿಲ: ಸಬಳೂರು ಶ್ರೀರಾಮ ಭಜನಾ ಮಂಡಳಿ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

(ನ್ಯೂಸ್ ಕಡಬ) newskadaba.com ಕಡಬ, ಜೂ.21. ಕಡಬ ತಾಲೂಕು ಕೊಯಿಲ ಗ್ರಾಮದ ಸಬಳೂರು ಅಯೋದ್ಯನಗರ ಶ್ರೀ ರಾಮ ಭಜನಾ ಮಂಡಳಿ ವತಿಯಿಂದ ಲಡಕ್ ಗಡಿ ಭಾಗದಲ್ಲಿ ಚೀನಾ ಯೋಧರೊಂದಿಗೆ ಹೋರಾಡಿ ದೇಶಕ್ಕಾಗಿ ಬಲಿದಾನಗೈದಿರುವ ನಮ್ಮ ದೇಶದ ಇಪ್ಪತ್ತು ವೀರ ಯೋಧರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ಶನಿವಾರ ಭಜನಾ ಮಂದಿರದಲ್ಲಿ ನಡೆಯಿತು. ವೀರ ಮರಣವನ್ನಪ್ಪಿದ ಯೋಧರಿಗೆ ನುಡಿನಮನ ಸಲ್ಲಿಸಿ, ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಆಲಂಕಾರು ಸಿ . ಎ ಬ್ಯಾಂಕ್ ನಿರ್ದೇಶಕ ರಾಮಚಂದ್ರ ನಾಯ್ಕ ಏಣಿತ್ತಡ್ಕ, ಶ್ರೀ

ಕೊಯಿಲ: ಸಬಳೂರು ಶ್ರೀರಾಮ ಭಜನಾ ಮಂಡಳಿ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ Read More »

ಕರಾವಳಿ

ಕೋವಿಡ್ -19 ಸಂಕಷ್ಟ➤ ನಷ್ಟದ ಭೀತಿಯಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.21:   ಕೋವಿಡ್ 19 ಸಂಕಷ್ಟದಿಂದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಹಿವಾಟಿಗೂ ತೊಮದರೆ ಉಂಟಾಗಿದೆ. ಒಕ್ಕೂಟದಲ್ಲಿ ಹಾಲು ಶೇಖರಣೆ ಏರಿಕೆಯಾಗಿದ್ದು, ನಿತ್ಯ 5 ಲಕ್ಷ ಕೆ.ಜಿ. ಗೂ ಸಧೀಕ ಹಾಲು ಸಂಗ್ರಹಣೆಯಾಗುತ್ತಿದೆ. ಕೋವಿಡ್ -19 ರ ಸಮಸ್ಯೆಯಿಮದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಕರ್ನಾಟಕ ಹಾಲು ಮಹಾಮಂಡಳಿಗೆ ನಿತ್ಯ ಮಹಾಮಂಡಳಿಗೆ ನಿತ್ಯ 86.73 ಲಕ್ಷ ಲೀಟರ್ ಹಾಲು ಸಂಗ್ರಹನೆಯಾಗುತ್ತಿದ್ದು, ರಾಜ್ಯದಲ್ಲಿ ಹಾಲು ಮತ್ತು

ಕೋವಿಡ್ -19 ಸಂಕಷ್ಟ➤ ನಷ್ಟದ ಭೀತಿಯಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ Read More »

ಕರಾವಳಿ, ಕರ್ನಾಟಕ

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬೇಕಿದ್ದ ಬಾಲಕನಿಗೆ ಕೊರೊನಾ

(ನ್ಯೂಸ್ ಕಡಬ) newskadaba.com.ಬೆಳಗಾವಿ,ಜೂ.21:ಜೂನ್ 25 ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬೇಕಿದ್ದ 16 ವರ್ಷದ ಬಾಲಕನಿಗೆ ಕೊರೊನಾ ಸೋಂಕು ತಗುಲಿರುವ ಘಟನೆ ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕಿನ ಕಲಬಾಂವಿಯಲ್ಲಿ ನಡೆದಿದೆ. ಈ ಬಾಲಕ ಹೊರರಾಜ್ಯದ ಹಿನ್ನೆಲೆ ಹೊಂದಿದ್ದರಿಂದ ಸೋಂಕು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈತ ಕಲಬಾಂವಿಯಲ್ಲಿ ಮುಂಬರಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬೇಕಿತ್ತು ಆದರೆ ಈಗ ಆತನಿಗೆ ಸೋಂಕು ತಗುಲಿರುವುದರಿಂದ ಪರೀಕ್ಷೆ ಎದುರಿಸುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಬಾಲಕ ಈ ಹಿಂದೆ ಚೆನ್ನೈನಲ್ಲಿರುವ ಆತನ ಅಕ್ಕನ ಮನೆಗೆ ಹೋಗಿ ಬಂದಿದ್ದ

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬೇಕಿದ್ದ ಬಾಲಕನಿಗೆ ಕೊರೊನಾ Read More »

ಕರಾವಳಿ, ಕರ್ನಾಟಕ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ಸಿಂಧೂ.ಬಿ ರೂಪೇಶ್ ಸೂಚನೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ.21, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪ್ರತೀ ವರ್ಷದಂತೆ ಈ ವರ್ಷವೂ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುವ ಜೊತೆಗೆ ಕೋವಿಡ್ –19 ವೈರಸ್‍ನಿಂದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕಾಪಾಡುವ ದೃಷ್ಠಿಯಿಂದ ಪ್ರತೀ ಕೇಂದ್ರದ ಪ್ರತಿಯೊಂದು ಕೊಠಡಿಗಳನ್ನು ನಿತ್ಯವೂ ಸ್ಯಾನಿಟೈಸರ್ ಮಾಡುವುದು ಕಡ್ಡಾಯವಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಕೌಂಟರ್ ಸ್ಥಾಪಿಸಿ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ರೀನ್ ಮೂಲಕ ಪರೀಕ್ಷಿಸಿ ನಂತರದಲ್ಲಿ ಕೊಠಡಿಗೆ ತೆರಳಲು ಅವಕಾಶ ಮಾಡಿ ಕೋಡಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಹೇಳಿದ್ದಾರೆ. ನಗರದ ಕಪಿತಾನಿಯೋ ಪ್ರೌಢ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ಸಿಂಧೂ.ಬಿ ರೂಪೇಶ್ ಸೂಚನೆ Read More »

ಕರಾವಳಿ

ಮಾಂಸ ಸಾಗಾಟಕ್ಕೆ ಅಡ್ಡಿ ➤ ವಾಹನ ಚಾಲಕನಿಗೆ ಹಲ್ಲೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.21: ಕುದ್ರೋಳಿಯ ವಧಾಗೃಹದಿಂದ ಕಂಕನಾಡಿಯ ಮಾರುಕಟ್ಟೆಗೆ ಮಾಂಸ ಸಾಗಾಟಕ್ಕೆ ಅಡ್ಡಿಪಡಿಸಿ , ಚಾಲಕನಿಗೆ ಹಲ್ಲೆಗೈದ ಕೃತ್ಯ ರವಿವಾರ ಬೆಳಗ್ಗೆ ಕಂಕನಾಡಿ ಬಳಿ ನಡೆದಿದೆ. ಕುದ್ರೋಳಿಯ ರಶೀದ್ ಎಂಬವರು ತನ್ನ ರಿಕ್ಷಾ ಟೆಂಪೋದಲ್ಲಿ ಕಂಕನಾಡಿ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್ ಹೊಂದಿರುವ ಝಾಕಿರ್ ಎಂಬವರ ಅಂಗಡಿಗೆ ಸುಮಾರು 200 ಕೆಜಿಯಷ್ಟು ದನದ ಮಾಂಸವನ್ನು ಸಾಗಾಟ ಮಾಡುತ್ತಿದ್ದರು. ಸುಮಾರು ಐದಾರು ಮಂದಿಯನ್ನೊಳಗೊಂಡ ದುಷ್ಕರ್ಮಿಗಳ ತಂಡವು ಕಾರು ಮತ್ತು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ಹೈಲ್ಯಾಂಡ್ ಆಸ್ಪತ್ರೆ-ಕಂಕನಾಡಿ

ಮಾಂಸ ಸಾಗಾಟಕ್ಕೆ ಅಡ್ಡಿ ➤ ವಾಹನ ಚಾಲಕನಿಗೆ ಹಲ್ಲೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡೇಶ್ವಾಲ್ಯ ಬೆಂಕಿ ಅವಘಡಕ್ಕೆ ತುತ್ತಾಗಿದ್ದ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com.ಬಂಟ್ಚಾಳ,ಜೂ.21:ಬೆಂಕಿ ತಗುಲಿ ಸುಟ್ಟ ಗಾಯಗೊಂಡಿದ್ದ ಕಡೇಶ್ವಾಲ್ಯ ಗ್ರಾಮದ ನೆತ್ತರಮನೆ ನಿವಾಸಿ ಮಹಿಳೆ ಹರಿಣಾಕ್ಷಿ(35) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ  ನಡೆದಿದೆ. ಜೂ. 2 ರಂದು ಮನೆಯಲ್ಲಿ ಗ್ಯಾಸ್ ಖಾಲಿಯಾದ ಹಿನ್ನೆಯಲ್ಲಿ ಕಟ್ಟಿಗೆಯ ಒಲೆಯಲ್ಲಿ ತಿಂಡಿ ಮಾಡುತ್ತಿದ್ದ ವೇಳೆ ಬೆಂಕಿ ಆಕಸ್ಮಿಕವಾಗಿ ಅವರು ಧರಿಸದ್ದ ಬಟ್ಟೆಗೆ ತಗುಲಿತ್ತು ಇದರಿಂದ ದೇಹಕ್ಕೆ ತೀವ್ರ ಸುಟ್ಟಗಾಯಗಳಾಗಿತ್ತು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು ಆದರೆ ಮತ್ತೆಗಾಯ ಉಲ್ಬಣಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕಡೇಶ್ವಾಲ್ಯ ಬೆಂಕಿ ಅವಘಡಕ್ಕೆ ತುತ್ತಾಗಿದ್ದ ಮಹಿಳೆ ಮೃತ್ಯು Read More »

ಕರಾವಳಿ

ಡಾ| ಮುರಲೀ ಮೋಹನ್ ಚೂಂತಾರು ರವರ ಸಂಕಲ್ಪ -2020 ಒಂದು ಮೌಲಿಕ ಕೃತಿಯಾಗಿದೆ ➤ಡಾ|| ರಮಾನಂದ ಬನಾರಿ ಶ್ಲಾಘನೆ

ಸಂಕಲ್ಪ-2020 (ಕೋವಿಡ್-19 ಆರೋಗ್ಯ ಮಾರ್ಗದರ್ಶಿ) ಎನ್ನುವ ಕೃತಿ ಶೀರ್ಷಿಕೆಯನ್ನು ಅರ್ಥವತ್ತಾಗಿಸಿಕೊಂಡು ಅತ್ಯುತ್ತಮವಾಗಿ ಮೂಡಿ ಬಂದಿದೆ. ಕೊರೋನಾ ಸಾಂಕ್ರಾಮಿಕ ಕಾಯಿಲೆಯ ಬಗ್ಗೆ ಸಮಗ್ರವಾದ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ಮತ್ತು ವಿಸ್ತಾರವಾಗಿ ಔಚಿತ್ಯ ಪ್ರಜ್ಞೆಯೊಂದಿಗೆ ಹೇಗೆ ಬೇಕೋ ಹಾಗೆ ಸಮನ್ವಯಿಸಿಕೊಂಡಿರುವ ಡಾ|| ಮುರಲೀಮೋಹನ ಚೂಂತಾರು ರವರು ನಿಜಕ್ಕೂ ಅಭಿನಂದನಾರ್ಹರು. ಕಾಸರಗೋಡಿನ ಮಂಜೇಶ್ವರದಲ್ಲಿ ಅವರು ನನ್ನ ನಿಕಟವರ್ತಿ ಎಂಬುದು ನನಗೊಂದು ಹೆಮ್ಮೆಯ ವಿಷಯ. ರೋಗಿಗಳ ಕುರಿತಾದ ಸಮಾಜಮುಖಿ ವೈದ್ಯ ಸಾಹಿತ್ಯ ಹೇಗಿರಬೇಕು ಎನ್ನುವುದಕ್ಕೆ ಸಂಕಲ್ಪ-2020 ಬಹುಮಟ್ಟಿಗೆ ಒಂದು ಮಾದರಿ ಎಂಬಂತೆ ಮೈವೆತ್ತಿದೆ. ರೋಗಕ್ಕೆ

ಡಾ| ಮುರಲೀ ಮೋಹನ್ ಚೂಂತಾರು ರವರ ಸಂಕಲ್ಪ -2020 ಒಂದು ಮೌಲಿಕ ಕೃತಿಯಾಗಿದೆ ➤ಡಾ|| ರಮಾನಂದ ಬನಾರಿ ಶ್ಲಾಘನೆ Read More »

ಕರಾವಳಿ, ವಿಶೇಷ ಲೇಖನಗಳು
Scroll to Top