ಕರಾವಳಿ

ಡಿವೈಡರ್ ಮೇಲೇರಿದ ಗ್ಯಾಸ್ ಸಿಲಿಂಡರ್ ಸಾಗಟದ ಲಾರಿ ➤ ತಪ್ಪಿದ ಅನಾಹುತ

(ನ್ಯೂಸ್ ಕಡಬ) newskadaba.com ಪಡುಬಿದ್ರಿ,ಜೂ.25:  ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿಯೊಂದು ಡಿವೈಡರ್ ಮೇಲೇರಿದ ಘಟನೆ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.   ಬುಧವಾರ ತಡರಾತ್ರಿ ಶಿವಮೊಗ್ಗದಿಂದ ಖಾಲಿ ಗ್ಯಾಸ್ ಸಿಲಿಂಡರ್ ಹೊತ್ತುಕೊಂಡು ಮಂಗಳೂರಿನತ್ತ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚಲಿಸುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ಕಳೆದುಕೊಂಡು, ಪಡುಬಿದ್ರಿ ಪ್ರಗತಿ ಕಾಂಪ್ಲೆಕ್ಸ್ ಸಮೀಪದ ಹೆದ್ದಾರಿ ಹಾಗು ಸರ್ವೀಸ್ ರಸ್ತೆ ಮಧ್ಯೆ ಹಾಕಲಾದ ಡಿವೈಡರ್ ಮೇಲೇರಿ ನಿಂತಿದೆ.ಘಟನೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ. ವಿಭಜಕದಲ್ಲಿ […]

ಡಿವೈಡರ್ ಮೇಲೇರಿದ ಗ್ಯಾಸ್ ಸಿಲಿಂಡರ್ ಸಾಗಟದ ಲಾರಿ ➤ ತಪ್ಪಿದ ಅನಾಹುತ Read More »

ಕರಾವಳಿ, ಕರ್ನಾಟಕ

ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ಆರೋಗ್ಯದಲ್ಲಿ ಏರುಪೇರು ವೇಳೆ

(ನ್ಯೂಸ್ ಕಡಬ) newskadaba.com.ಬಂಟ್ವಾಳ,ಜೂ.25: ಎಸ್.ಎಸ್.ಎಲ್. ಸಿ. ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿ ಓರ್ವಳು ಪರೀಕ್ಷಾ ಕೇಂದ್ರದಲ್ಲಿ ವಾಂತಿ ಮಾಡಿದ ಘಟನೆ ಬಿ.ಸಿ ರೋಡ್ ನ ಶಾಲೆಯೊಂದರಲ್ಲಿ ನಡೆದಿದೆ. ಪರೀಕ್ಷೆ ಬರೆಯಲು ಆರಂಭವಾದ ಬಳಿಕ ಏಕಾಏಕಿ ವಾಂತಿಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯನ್ನು ವಿಶ್ರಾಂತಿ ಕೊಠಡಿಗೆ ಕಳುಹಿಸಲಾಯಿತು. ಕೂಡಲೇ ಸ್ಥಳಕ್ಕೆ ಬಂಟ್ವಾಳ ವೈದ್ಯಾಧಿಕಾರಿ ಭೇಟಿ ನೀಡಿ ಪರೀಕ್ಷೆ ನಡೆಸುತ್ತಿದ್ದಾರೆ. ಪರೀಕ್ಷೆ ನಡೆಸಿದ ಬಳಿಕ ಯಾವುದೇ ತೊಂದರೆಯಿಲ್ಲದಿದ್ದರೆ ಅವರನ್ನು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಅಂತಹ ತೊಂದರೆಗಳು ಏನಾದರೂ ಇದ್ದಲ್ಲಿ ವಿಶ್ರಾಂತಿ ನೀಡಿ ಅವರಿಗೆ

ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ಆರೋಗ್ಯದಲ್ಲಿ ಏರುಪೇರು ವೇಳೆ Read More »

ಕರಾವಳಿ

?? ?ig Breaking News ದ.ಕ ಜಿಲ್ಲೆಯ ಐವರು ವೈದ್ಯರಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ.25, ಐವರು ವೈದ್ಯರಿಗೆ ಕೊರೋನಾ ದೃಢಪಟ್ಟ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನಗರದ ಎರಡು ಸರಕಾರಿ ಆಸ್ಪತ್ರೆಗಳ ಮೂವರು, ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರಿಗೆ ಕೊರೋನಾ ದೃಢಪಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಇವರ ಸಂಪರ್ಕದಲ್ಲಿದ್ದ 30 ವೈದ್ಯರನ್ನು ಕ್ವಾರಂಟೈನ್ ಗೊಳಪಡಿಸಲಾಗಿದೆ. ವೈದ್ಯರು ಪಿಪಿಇ ಕಿಟ್ ಧರಿಸಿ ಸಾಕಷ್ಟು ಸುರಕ್ಷಾ ನಿಯಮ ಪಾಲಿಸಿದ್ದರೂ ಸಹ ಅವರಿಗೆ ಕೊರೋನಾ ದೃಢಪಟ್ಟಿದ್ದು, ಇದನ್ನು ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಬೇಕಾಗಿದ್ದು, ನಿರ್ಲಕ್ಷ್ಯ ವಹಿಸಿದರೆ ಸಾಮುದಾಯಿಕವಾಗಿ ಹರಡುವ ಸಾಧ್ಯತೆಯಿದೆ. ಆದುದರಿಂದ ಈ

?? ?ig Breaking News ದ.ಕ ಜಿಲ್ಲೆಯ ಐವರು ವೈದ್ಯರಿಗೆ ಕೊರೋನಾ ಪಾಸಿಟಿವ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಾಕ ಶಾಲೆಯಾದ ಪಾಠಶಾಲೆ ➤ ಬಾಣಸಿಗರಾದ ಉಪನ್ಯಾಸಕರು

(ನ್ಯೂಸ್ ಕಡಬ) newskadaba.com ಪುತ್ತೂರು ,ಜೂ.25:  ಕೋವಿಡ್ 19 ಆರ್ಥಿಕ ಸಂಕಷ್ಟವನ್ನು ಎದುರಿಸುವ ಸಲುವಾಗಿ ಪುತ್ತೂರಿನ ಅಂಬಿಕಾ ವಿದ್ಯಾಸಂಸ್ಥೆಯು ಸದ್ಯದ ಮಟ್ಟಿಗೆ ಪಾಠದ ಬದಲು ಪಾಕಶಾಲೆಯಾಗಿ ಬದಲಾಗಿದೆ. ವಿದ್ಯಾಲಯದ ಬೋದಕ ಹಾಗೂ ಬೋಧಕೇತರ ವರ್ಗದಿಮದ ಆಹಾರೋತ್ಪನ್ನಗಳನ್ನು ತಯಾರಿಸುವ ಪ್ರಯತ್ನ ಆರಂಭಗೊಂಡಿದ್ದು, ಬದುಕಿನ ಪಾಠಕ್ಕೆ ವಿದ್ಯಾಲಯ ಸಾಕ್ಷಿಯಾಗಿದೆ. ಕೋವಿಡ್ -19 ಪರಿಣಾಮ ಈ ವರ್ಷ ವಿದ್ಯಾಲಯದ ಪ್ರವೇಶಾತಿ ಆರಂಭಗೊಂಡಿಲ್ಲ. ಇದರಿಂದ ಎಲ್ಲ ಶಾಳಾ ಕಾಲೇಜುಗಳಳತೆ ಅಂಬಿಕಾ ವಿದ್ಯಾಲಯವೂ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಆದರೆ ಪುತ್ತೂರಿನ ಅಂಬಿಕಾ ವಿದ್ಯಾಲಯವು “ಶಿವಂ

ಪಾಕ ಶಾಲೆಯಾದ ಪಾಠಶಾಲೆ ➤ ಬಾಣಸಿಗರಾದ ಉಪನ್ಯಾಸಕರು Read More »

ಕರಾವಳಿ, ಕರ್ನಾಟಕ

ಉಳ್ಳಾಲದ ಖಾಸಗಿ ಆಸ್ಪತ್ರೆ ಸೀಲ್ಡೌನ್

(ನ್ಯೂಸ್ ಕಡಬ) newskadaba.com.ಉಳ್ಳಾಲ,ಜೂ.25: ಉಳ್ಳಾಲದ ಆಝಾದ್ ನಗರದ  57 ವರ್ಷದ ಮಹಿಳೆ ಬುಧವಾರ ಸಾವನ್ನಪ್ಪಿದ ಬಳಿಕ ಉಳ್ಳಾಲದ ಖಾಸಗಿ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಸೀಲ್ಡೌನ್ ಮಾಡಲಾಗಿದೆ. ತೊಕ್ಕೊಟಿನ ಖಾಸಗಿ ಆಸ್ಪತ್ರೆಗೆ ಉಳ್ಳಾಲದ ಆಝಾದ್ ನಗರದ 57 ವರ್ಷದ ಮಹಿಳೆ ಭೇದಿ ಕಾರಣದಿಂದ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದರು. ಆದರೆ ಆರೋಗ್ಯದಲ್ಲಿ ಮತ್ತೆ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ  ೮ ದಿನಗಳ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದು ವರದಿ ಬಂದಾಗ ಸೋಂಕು

ಉಳ್ಳಾಲದ ಖಾಸಗಿ ಆಸ್ಪತ್ರೆ ಸೀಲ್ಡೌನ್ Read More »

ಕರಾವಳಿ

ದ್ವಿಚಕ್ರ ವಾಹನ ಬಹಿರಂಗ ಹರಾಜು

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ. 25, ಸಂಚಾರ ಉತ್ತರ ಪೊಲೀಸ್ ಠಾಣೆಯ ಆವರಣದಲ್ಲಿ ಇರಿಸಿರುವ ಅಪಘಾತ ಪ್ರಕರಣದಲ್ಲಿ ಸ್ವಾಧೀನಪಡಿಸಿಕೊಂಡ ಎರಡು ದ್ವಿಚಕ್ರ ವಾಹನಗಳ ಬಹಿರಂಗ ಹರಾಜು ನಡೆಯಲಿದೆ. ಜುಲೈ 1 ರಂದು ಬೆಳಿಗ್ಗೆ 10 ಗಂಟೆಗೆ ಬೈಕಂಪಾಡಿ ಸಂಚಾರ ಉತ್ತರ ಠಾಣಾ ಆವರಣದಲ್ಲಿ ಯಥಾಸ್ಥಿತಿಯಲ್ಲಿ ಬಹಿರಂಗ ಹರಾಜು ನಡೆಸಲು ಉದ್ದೇಶಿಸಿದ್ದು, ಆಸಕ್ತರು ಸಂಚಾರ ಉತ್ತರ ಠಾಣಾ ಆವರಣದಲ್ಲಿ ಹಾಜರಾಗಬಹುದು ಎಂದು ಪ್ರಕಟಣೆ ತಿಳಿಸಿದೆ.

ದ್ವಿಚಕ್ರ ವಾಹನ ಬಹಿರಂಗ ಹರಾಜು Read More »

ಕರಾವಳಿ

ಮಂದಾರ ಕೇಶವ ಭಟ್ ಮನೆ ಉಳಿಸಲು ತುಳು ಅಕಾಡೆಮಿ ಅಧ್ಯಕ್ಷರ ಮನವಿ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ. 25, ತುಳುವಿನ ಮಹಾಕವಿ, ತುಳು ವಾಲ್ಮೀಕಿ ಎಂದೇ ಪ್ರಸಿದ್ಧರಾದ, ತುಳುವಿಗೆ ಆಕರ ಗ್ರಂಥವನ್ನು ನೀಡಿದ “ಮಂದಾರ ರಾಮಾಯಣ” ಗ್ರಂಥದ ಕರ್ತೃ ಮಂದಾರ ಕೇಶವ ಭಟ್ ರವರು ಹುಟ್ಟು ವಾಸಿಸಿದ ಪಾರಂಪರಿಕ ಮನೆಯು ಶತಮಾನ ಕಂಡು, ಇತ್ತೀಚೆಗೆ ಸಂಭವಿಸಿದ ಮಾನವ ನಿರ್ಮಿತ ತ್ಯಾಜ್ಯ ದುರಂತದಲ್ಲಿ ಸಂಪೂರ್ಣ ಹಾನಿಗೀಡಾಗಿದ್ದು, ವಿನಾಶದ ಅಂಚಿನಲ್ಲಿದೆ. ಮಂದಾರರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿಯೂ ಈ ದುರಂತ ಸಂಭವಿಸಿರುವುದು ತುಳುನಾಡಿಗೆ ಬಂದಂತಹ ಘೋರ ದುರಂತ. ಮುಂದಿನ ಪೀಳಿಗೆಗಾಗಿ ಈ ಮಹಾಕವಿಯ ವಾಸ್ತು

ಮಂದಾರ ಕೇಶವ ಭಟ್ ಮನೆ ಉಳಿಸಲು ತುಳು ಅಕಾಡೆಮಿ ಅಧ್ಯಕ್ಷರ ಮನವಿ Read More »

ಕರಾವಳಿ

ಚಾರ್ಮಾಡಿ ಘಾಟಿಯಲ್ಲಿ ಅಕ್ರಮ ಗೋ ಸಾಗಾಟಕ್ಕೆ ಎಸ್.ಐ ಬ್ರೇಕ್ ➤ ಮೂವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ,ಜೂ.25:  ಅಕ್ರಮ ಗೋಸಾಗಾಟಕ್ಕೆ ಬೆಳಂಬೆಳಗ್ಗೆ ಧರ್ಮಸ್ಥಳ ಪೊಲೀಸರು ಬ್ರೇಕ್ ಹಾಕಿದ್ದಾರೆ. ಚಿತ್ರದುರ್ಗದಿಂದ ನೆಚ್ಚೆಪದವು, ವರ್ಕಾತಿ ಕೇರಳಕ್ಕೆ ಲಾರಿಯಲ್ಲಿ ಅಕ್ರಮವಾಗಿ ಗೋವುಗಳನ್ನ ಸಾಗಿಸುತ್ತಿದ್ದ ಖಚಿತ ಮಾಹಿತಿ ಆಧಾರದಲ್ಲಿ, ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ಧರ್ಮಾಸ್ಥಳ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪವನ್ ಕುಮಾರ್ ನೇತೃತ್ವದಲ್ಲಿ ಲಾರಿ ಮತ್ತು ದನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಲಾದ ಮಹಮ್ಮದ್ ಹಫೀಜ್, ಮಹಮ್ಮದ್ ಅಝರಿದ್ದೀನ್ ಹಾಗೂ ಡ್ರೈವರ್ ನರೇಶ್ ರವರನ್ನ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.  

ಚಾರ್ಮಾಡಿ ಘಾಟಿಯಲ್ಲಿ ಅಕ್ರಮ ಗೋ ಸಾಗಾಟಕ್ಕೆ ಎಸ್.ಐ ಬ್ರೇಕ್ ➤ ಮೂವರು ಆರೋಪಿಗಳ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪೊಲೀಸ್ ಇಲಾಖೆ ವಾಹನಗಳ ಬಿಡಿಭಾಗಗಳ ಹರಾಜು

(ನ್ಯೂಸ್ ಕಡಬ)newskadaba.com ಮಂಗಳೂರು ಜೂ. 25, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಗೆ ಸೇರಿದ ಮೋಟಾರು ವಾಹನ ವಿಭಾಗದ 2019-20ನೇ ಸಾಲಿನ ನಿಷ್ಕ್ರಿಯಗೊಳಿಸಲಾದ ಹಳೆಯ ಬಿಡಿಭಾಗಗಳು, ಹಳೆಯ ಟಯರು ಟ್ಯೂಬುಗಳು ಹಾಗೂ ಹಳೆಯ ಮಡ್ಡ್ ಆಯಿಲ್‍ಗಳ ಬಹಿರಂಗ ಹರಾಜು ಮೂಲಕ ವಿಲೇವಾರಿ ಜುಲೈ 9 ರಂದು ಬೆಳಿಗ್ಗೆ 11 ಗಂಟೆಗೆ  ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು. ನಿರುಪಯುಕ್ತ ವಸ್ತುಗಳ ವಿವರ:- ಹಳೆಯ ನಿಷ್ಕ್ರಿಯಗೊಳಿಸಲಾದ ಬಿಡಿ ಭಾಗಗಳ

ಪೊಲೀಸ್ ಇಲಾಖೆ ವಾಹನಗಳ ಬಿಡಿಭಾಗಗಳ ಹರಾಜು Read More »

ಕರಾವಳಿ

ಕಾರು ಮತ್ತು ಸ್ಕೂಟಿ ನಡುವೆ ಅಪಘಾತ ➤ ಯುವತಿ ಸ್ಥಳದಲ್ಲೆ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.25: ಸ್ವಿಪ್ಟ್ ಕಾರೊಂದು ಅತಿವೇಗ ಮತ್ತು ಅಜಾರೂಗತೆಯಿಂದ ಚಲಿಸಿ ಆಕ್ಟಿವಾ ಸ್ಕೂಟರ್ ಮತ್ತು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿದ್ದ ಯುವತಿ ಗಂಭೀರ ಗಾಯಗೊಂಡು ಮೃತ ಪಟ್ಟ ಗಟನೆ ನಗರದ ಹೊರ ವಲಯದ ಬೆಂಜನಪದವು ದಿವ್ಯ ಜ್ಯೋತಿ ಅಂಗಡಿ ಎದುರು ಬುಧವಾರ ನಡೆದಿದೆ.     ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ 23 ವರ್ಷದ ಶ್ಯಾಮಲಾ ಎಂಬ ಯುವತಿ ಗಂಭೀರಾ ಗಾಯಗೊಂಡು ಸಾವನ್ನಪ್ಪಿದ್ದಾರೆ. ಮೃತ ಪಟ್ಟ ಶ್ಯಾಮಲಾ ಎಂಬುವವರು ಬಂಟ್ವಾಳದ ಕ್ಷೇತ್ರ ಶಿಕ್ಷಣ

ಕಾರು ಮತ್ತು ಸ್ಕೂಟಿ ನಡುವೆ ಅಪಘಾತ ➤ ಯುವತಿ ಸ್ಥಳದಲ್ಲೆ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top