ಕರಾವಳಿ

ದ.ಕದಲ್ಲಿ ಸಾವಿನ ಸಂಖ್ಯೆ 18ಕ್ಕೇರಿಕೆ ➤ 49 ವರ್ಷದ ವ್ಯಕ್ತಿ ಕೊರೊನಾಗೆ ಬಲಿ

(ನ್ಯೂಸ್ ಕಡಬ) newskadaba.com ಮಂಗಳೂರು,ಜು.02: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಕ್ಕೆ ಜು.2 ರ ಗುರುವಾರ ಮತ್ತೊಂದು ಬಲಿಯಾಗಿದೆ. ಬಂಟ್ವಾಳ ತಾಲೂಕಿನ ಕಲ್ಕಡ್ಕ ನಿವಾಸಿಯಾಗಿರುವ 49 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 18ಕ್ಕೇರಿಕೆಯಾಗಿದೆ.   ಕಳೆದ 20 ದಿನಗಳಿಂದ ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಶನಿವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ, ಟಿ.ಬಿ.ಹಾಗೂ ಲಿವರ್ ನ ಸಮಸ್ಯೆಯಿಂದ ಬಳಲುತ್ತಿದ್ದ ಇವರಲ್ಲಿ ಸೊಂಕು ಪತ್ತೆಯಾಗಿತ್ತು.ಇನ್ನು ಬುಧವಾರಷ್ಟೇ ಜಿಲ್ಲೆಯಲ್ಲಿ ಕೊರೋನಾ ಮೂರು […]

ದ.ಕದಲ್ಲಿ ಸಾವಿನ ಸಂಖ್ಯೆ 18ಕ್ಕೇರಿಕೆ ➤ 49 ವರ್ಷದ ವ್ಯಕ್ತಿ ಕೊರೊನಾಗೆ ಬಲಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

 ಮೀನಿನ ಪರಿಮಳವನ್ನು ಹೀರುವವರ ಆರೋಗ್ಯ ಉತ್ತಮವಾಗಿರುತ್ತದೆ ➤ ಕೋಟ ಶ್ರೀನಿವಾಸ ಪೂಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.02. , ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯವು 50 ವರ್ಷಗಳನ್ನು ಪೂರೈಸಿದ ಸುಸಂದರ್ಭದಲ್ಲಿ ಮುದ್ರಿಸಲಾದ ಮೀನಿನ ಚಿತ್ರವಿರುವ ಭಾರತೀಯ ಅಂಚೆ ಚೀಟಿಯನ್ನು ಮೀನುಗಾರಿಕೆ, ಬಂದರು, ಒಳನಾಡು ಜಲ ಸಾರಿಗೆ ಮತ್ತು ದ.ಕ. ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳವಾರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮೀನು ಉತ್ತಮ ಪೌಷ್ಟಿಕಾಂಶವನ್ನು ಹೊಂದಿರುವ ಅಹಾರವಾಗಿದೆ. ಮೀನನ್ನು ಸೇವಿಸುವವರು ಮತ್ತು ಅದರ ಪರಿಮಳವನ್ನು ಹೀರುವವರ ಆರೋಗ್ಯ ಉತ್ತಮವಾಗಿರುವುದಲ್ಲದೇ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ

 ಮೀನಿನ ಪರಿಮಳವನ್ನು ಹೀರುವವರ ಆರೋಗ್ಯ ಉತ್ತಮವಾಗಿರುತ್ತದೆ ➤ ಕೋಟ ಶ್ರೀನಿವಾಸ ಪೂಜಾರಿ Read More »

ಕರಾವಳಿ

ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್‌ ನಿಧನ ➤ ಚಿತ್ರರಂಗದ ಗಣ್ಯರ ಸಂತಾಪ

(ನ್ಯೂಸ್ ಕಡಬ) newskadaba.com ಬೆಂಗಳೂರು,ಜು.02: 650ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಹಾಸ್ಯ ಕಲಾವಿದ ಮಿಮಿಕ್ರಿ ರಾಜಗೋಪಾಲ್‌ ಬುಧವಾರ  ರಾತ್ರಿ ಕೊನೆಯುಸಿರೆಳೆದರು. ಕಿಡ್ನಿ ಮತ್ತು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್‌ ಅವರು ಜು.1ರ ರಾತ್ರಿ ನಿಧನರಾದರು. 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವುದು ಮಾತ್ರವಲ್ಲದೆ, ವೇದಿಕೆಗಳಲ್ಲಿ ಮಿಮಿಕ್ರಿ ಮಾಡುವ ಮೂಲಕವೂ ಅವರು ಫೇಮಸ್‌ ಆಗಿದ್ದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.     ಕೆಂಗೇರಿಯ ಬಿಡಿಎ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ರಾಜಗೋಪಾಲ್‌ ಅವರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್‌ ನಿಧನ ➤ ಚಿತ್ರರಂಗದ ಗಣ್ಯರ ಸಂತಾಪ Read More »

ಕರಾವಳಿ, ಕರ್ನಾಟಕ

ಆಕರ್ಷಣ ತಂತ್ರ ಮತ್ತು ದಿನ ಭವಿಷ್ಯ

ಓಂ ನಮೋ ಆದಿ ಪುರುಷಾಯಸ್ಯ ಆಕರ್ಷಣ ಕುರು ಕುರು ಸ್ವಾಹಾ! ಈ ಆಕರ್ಷಣ ಮಂತ್ರವು ನಿಮ್ಮ ಸರ್ವ ಕಾರ್ಯಗಳಿಗೆ ಯಶಸ್ಸು ನೀಡುತ್ತದೆ ಹಾಗೂ ನೋಡುವ ಜನಗಳಿಗೆ ನೀವು ಆಕರ್ಷಿತರಾಗುವಿರಿ. ಇದನ್ನು ದಿನ ಪ್ರಾತಃಕಾಲದಲ್ಲಿ ಪೂರ್ವಾಭಿಮುಖವಾಗಿ 21 ಬಾರಿ ಜಪಿಸಬೇಕು. ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ,

ಆಕರ್ಷಣ ತಂತ್ರ ಮತ್ತು ದಿನ ಭವಿಷ್ಯ Read More »

ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಕಾರು ಅಪಘಾತ ➤ ದ. ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಪ್ರಾಣಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಮೂಡಬಿದಿರೆ,ಜು.01: ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಅವರ ಕಾರು ಅಪಘಾತಗೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಅದೃಷ್ಟಶವಾತ್ ಸುದರ್ಶನ್ ಮೂಡಬಿದಿರೆ ಅವರು ಅಪಾಯವಿಲ್ಲದೆ ಪಾರಾಗಿದ್ದಾರೆ. ಮೂಡಬಿದಿರೆಯ ಮಿಜಾರು ಸಮೀಪ ಅಪಘಾತ ನಡೆದಿದ್ದು,  ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಸುದರ್ಶನ್ ಅವರು ಮೂಡಿಬಿದಿರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಗಳೂರಿಗೆ ಹೋಗುತ್ತಿದ್ದರು. ಈ ವೇಳೆ ಮಿಜಾರು ಬಳಿಯ ತೋಡಾರು ಸಮೀಪ ಒಳರಸ್ತೆಯಿಂದ ಬಂದ ಬೈಕ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸಲ ಹೋಗಿ ಸುದರ್ಶನ್ ಅವರ ಇನ್ನೋವಾ

ಕಾರು ಅಪಘಾತ ➤ ದ. ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಪ್ರಾಣಪಾಯದಿಂದ ಪಾರು Read More »

ಕರಾವಳಿ, ಕರ್ನಾಟಕ

ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್ .!

(ನ್ಯೂಸ್ ಕಡಬ) newskadaba.com ಉಡುಪಿ,ಜು.01: ಕೊರೋನಾ ಮಹಾಮಾರಿ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಬುಧವಾರ ಮತ್ತೊಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಗೆ ಕೊರೋನಾ ಸೋಂಕು ದೃಢಗೊಂಡಿದ್ದು ಒಟ್ಟು ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಬೈಂದೂರು ತಾಲೂಕಿನ ವಿದ್ಯಾರ್ಥಿನಿಗೆ ಜ್ವರ ಇದ್ದು ಆಕೆಯ ಗಂಟಲ ದ್ರವ ಪರೀಕ್ಷೆಯ ವೇಳೆ ಕೊರೋನಾ ಪಾಸಿಟಿವ್ ಇರುವುದು ದೃಢಗೊಂಡಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಮಾಹಿತಿ ಮಾಹಿತಿ ನೀಡಿದ್ದಾರೆ.    

ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್ .! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Astrology

ಪತಿಯ ಪ್ರೇಮವನ್ನು ಅಪೇಕ್ಷಿಸುತ್ತಿದ್ದೀರಾ? ಹೀಗೆ ಮಾಡಿ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ಪತಿಯ ಪ್ರೇಮವನ್ನು ತಾವು ಬಹಳಷ್ಟು ಅಪೇಕ್ಷಿಸುವ ಸಾಧ್ಯತೆ ಇರುತ್ತದೆ. ಆದರೆ ನಿಮ್ಮ ವಿಚಾರಗಳಿಗೆ ಅವರು ಯಾವುದೇ ರೀತಿಯ ಸ್ಪಂದನೆ ನೀಡುವುದಿಲ್ಲ. ಸದಾಕಾಲ ತಮ್ಮ ಕೆಲಸಗಳಿಗೆ ಅಥವಾ ಇನ್ನೊಬ್ಬರ ವ್ಯವಸ್ಥೆಗೆ ಪೂರಕವಾಗಿ ಇರುತ್ತಾರೆ ವಿನಹ ನಿಮಗೆ ಸಿಗುವಂತಹ ಸೂಕ್ತಸ್ಥಾನ, ಮಾನ, ನೆಲೆ ದೊರಕದೆ ಇರಬಹುದು. ಇಂತಹ ಪರಿಸ್ಥಿತಿಯಲ್ಲಿ ತಾವು ಜೀವನ ಸಾಗಿಸುತ್ತಿದ್ದರೆ ಹಾಗೂ ನಿಮ್ಮ ಪತಿಯೊಡನೆ ಪ್ರೇಮದಿಂದ ಜೀವನ ಕಳೆಯಬೇಕು ಎನ್ನುವ ಭಾವನೆ ನಿಮ್ಮಲ್ಲಿ ಇದ್ದರೆ ಈ

ಪತಿಯ ಪ್ರೇಮವನ್ನು ಅಪೇಕ್ಷಿಸುತ್ತಿದ್ದೀರಾ? ಹೀಗೆ ಮಾಡಿ Read More »

ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಬಜ್ಪೆಯಲ್ಲಿ ಬಂಧನಕ್ಕೊಳಗಾದ ಆರೋಪಿಗಳಿಗೂ ಕೋವಿಡ್ ಪಾಸಿಟಿವ್ ➤ ಪೋಲಿಸ್ ಠಾಣೆ ಸೀಲ್ ಡೌನ್

(ನ್ಯೂಸ್ ಕಡಬ)newskadaba.com ಮಂಗಳೂರು, ಜು.1, ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಬಂಧನಕ್ಕೊಳಗಾದ ಇಬ್ಬರು ಆರೋಪಿಗಳಿಗೆ ಕೊರೋನ ಸೋಂಕು ತಗುಲಿರುವುದು ಖಚಿತವಾಗಿದೆ. ಬಜ್ಪೆಯ ನಿವಾಸಿಗಳಾದ 34 ಹಾಗೂ 26 ವರ್ಷದ ಇಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ದನ ಕಳವಿಗೆ ಹೊಂಚು ಹಾಕುತ್ತಿದ್ದ ಆರೋಪದಲ್ಲಿ ಇವರನ್ನು ಬಜ್ಪೆ ಪೊಲೀಸರು ಮಂಗಳವಾರ ಬಂಧಿಸಿದ್ದರು. ಬಳಿಕ ವೈದ್ಯರಲ್ಲಿ ಕೊವೀಡ್ ಪರೀಕ್ಷೆಗೆ ಕರೆದೊಯ್ದಿದ್ದರು. ಈ ವರದಿ ಬಂದಿದ್ದು, ಕೊರೋನ ಸೋಂಕು ತಗುಲಿರುವುದು ಪತ್ತೆಯಾಗಿದೆ. ಆರೋಪಿಗಳನ್ನು ಬಂಧಿಸಿದ್ದ ಎಂಟು ಪೊಲೀಸರಿಗೂ ಸೋಂಕು ತಗುಲಿರುವ ಸಾಧ್ಯತೆಯ ಹಿನ್ನೆಲೆ

ಬಜ್ಪೆಯಲ್ಲಿ ಬಂಧನಕ್ಕೊಳಗಾದ ಆರೋಪಿಗಳಿಗೂ ಕೋವಿಡ್ ಪಾಸಿಟಿವ್ ➤ ಪೋಲಿಸ್ ಠಾಣೆ ಸೀಲ್ ಡೌನ್ Read More »

ಕರಾವಳಿ, ಕರ್ನಾಟಕ

ಮಂಗಳೂರು :ಎಸಿಪಿಗೆ ಕೊರೋನ ಸೋಂಕು

(ನ್ಯೂಸ್ ಕಡಬ) newskadaba.com ಮಂಗಳೂರು,ಜು.01:ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಸಿಪಿಯೊಬ್ಬರಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ. ಇತ್ತೀಗೆ ಕೊರೋನದಿಂದ ಮೃತಪಟ್ಟವರೋರ್ವರ ಅಂತ್ಯಸಂಸ್ಕಾರಕ್ಕೆ ಬೋಳಾರದಲ್ಲಿ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು.     ಈ ಸಂದರ್ಭ ಪೊಲೀಸರು ಸಹಿತ ಹಲವು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮನವೊಲಿಸಿದ್ದರು. ನಂತರ ಅಂತ್ಯಸಂಸ್ಕಾರ ನೆರವೇರಿತ್ತು. ಅಂತ್ಯಸಂಸ್ಕಾರದ ಬಂದೋಬಸ್ತ್‌ನಲ್ಲಿ ಎಸಿಪಿಯವರು ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಎಸಿಪಿಯವರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಸೋಂಕು ಸಮುದಾಯಕ್ಕೆ ಹಬ್ಬುತ್ತಿದ್ದು ಜಿಲ್ಲೆಯನ್ನು

ಮಂಗಳೂರು :ಎಸಿಪಿಗೆ ಕೊರೋನ ಸೋಂಕು Read More »

ಕರಾವಳಿ, ಕರ್ನಾಟಕ

ಕೊರೋನಾ ವಾರಿಯರ್ ಗೆ ಕೊರೊನಾ ಪಾಸಿಟಿವ್ ಹಿನ್ನಲೆ ➤ ಮರ್ಧಾಳದ ಚಿಕನ್ ಸೆಂಟರ್ ಸೀಲ್ ಡೌನ್

(ನ್ಯೂಸ್ ಕಡಬ) newskadaba.com ಕಡಬ,ಜು.01: ಮಂಗಳವಾರದಂದು ಕಡಬಕ್ಕೆ ಮತ್ತೆ ಕೊರೋನಾ ಅಘಾತ ಉಂಟಾಗಿದ್ದು, ಕಡಬದ ಕೊರೋನಾ ವಾರಿಯರ್ ಗೆ ಕೊರೊನಾ ಪಾಸಿಟಿವ್ ದೃಢ ಪಟ್ಟಿದೆ. ಇದರಿಂದಾಗಿ ಕೊರೋನಾ ಸೋಂಕಿತ ಮಹಿಳೆ ಭೇಟಿ ನಿಡೀದ್ದಾರೆ ಎನ್ನಲಾದ ಮರ್ಧಾಳದ ಚಿಕನ್ ಸೆಂಟರ್ ಅಂಗಡಿಯನ್ನ ಸೀಲ್ ಡೌನ್ ಮಾಡಿದ್ದಾರೆ.   ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ಕೊರೋನಾ ವಾರಿಯರ್, ಸುಳ್ಯದಲ್ಲಿ ಕರ್ತವ್ಯದಲ್ಲಿದ್ದ ನರ್ಸ್ ಓರ್ವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಅವರು ಸುಳ್ಯದಿಂದ ಪ್ರತೀದಿನ ತನ್ನ ಮನೆಗೆ ಬರುತ್ತಿದ್ದರು ಎನ್ನಲಾಗಿದೆ. ಇಂದು

ಕೊರೋನಾ ವಾರಿಯರ್ ಗೆ ಕೊರೊನಾ ಪಾಸಿಟಿವ್ ಹಿನ್ನಲೆ ➤ ಮರ್ಧಾಳದ ಚಿಕನ್ ಸೆಂಟರ್ ಸೀಲ್ ಡೌನ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top