ಕರಾವಳಿ

ಪುತ್ತೂರು ಖಾಸಗಿ ಆಸ್ಪತ್ರೆ ವೈದ್ಯರ ಪತ್ನಿ ಸೇರಿದಂತೆ 3 ಮಂದಿಗೆ ಕೊರೋನಾ ದೃಢ..!!

(ನ್ಯೂಸ್ ಕಡಬ) newskadaba.com ಪುತ್ತೂರು :ಜು.19., ತಾಲೂಕಿನಲ್ಲಿ ಕೊರೋನಾ ಸೋಂಕು ಪ್ರಕರಣಗಳು ಶರವೇಗದಲ್ಲಿ ಹಬ್ಬುತ್ತಿದೆ, ಆದಿತ್ಯವಾರ ಬೆಳಗ್ಗಿನ ಬುಲೆಟಿನ್ ನಲ್ಲೂ ಮೂರು ಹೊಸ ಪ್ರಕರಣಗಳು ವರದಿಯಾಗಿದೆ. ಈಗಾಗಲೇ ಕೊರೋನಾ ಸೋಂಕು ದೃಢಪಟ್ಟ ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ಪತ್ನಿ ವೈದ್ಯೆಗೂ ಕೊರೋನಾ ದೃಢ ಸೇರಿದಂತೆ ತಾಲೂಕಿನಲ್ಲಿ ಮೂವರಿಗೆ ಕೊರೋನಾ ಸೊಂಕು ದೃಢಪಟ್ಟಿದೆ. ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ಪ್ರಾಥಮಿಕ ಸಂಪರ್ಕದಿಂದ ಅವರ ಪತ್ನಿ ವೈದ್ಯೆಗೂ ಕೊರೋನಾ ಸೋಂಕು ದೃಢಪಟ್ಟಿದೆ. ನರಿಮೊಗರು ಗ್ರಾಮದ 45 ವರ್ಷದ ಮಹಿಳೆ ಮತ್ತು […]

ಪುತ್ತೂರು ಖಾಸಗಿ ಆಸ್ಪತ್ರೆ ವೈದ್ಯರ ಪತ್ನಿ ಸೇರಿದಂತೆ 3 ಮಂದಿಗೆ ಕೊರೋನಾ ದೃಢ..!! Read More »

ಕರಾವಳಿ

ದ.ಕನ್ನಡದಲ್ಲಿ ಸಂಡೇ ಲಾಕ್ ಡೌನ್ ಹಿನ್ನೆಲೆ : ಸಂಪೂರ್ಣ ಸ್ಥಬ್ಧವಾದ ಕಡಬ ವಲಯ

(ನ್ಯೂಸ್ ಕಡಬ ) newskadaba ಕಡಬ, ಜು.19: ಜಿಲ್ಲೆಯಲ್ಲಿ ಕೋವಿಡ್ -19 ಸೋಂಕು ಹರಡುವುದನ್ನು ತಡೆಗಟ್ಟಲು ಒಂದು ವಾರದ ಲಾಕ್ ಡೌನ್ ವಿಧಿಸಿದ್ದರೂ ಇಂದು ಭಾನುವಾರದ ಲಾಕ್ ಡೌನ್ ಅನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಹೀಗಾಗಿ ಇಂದು ಕಡಬ  ಮುಂಜಾನೆಯಿಂದಲೇ ಜಿಲ್ಲೆ ಬಹುತೇಕ ಸ್ಥಬ್ದವಾಗಿದೆ.  

ದ.ಕನ್ನಡದಲ್ಲಿ ಸಂಡೇ ಲಾಕ್ ಡೌನ್ ಹಿನ್ನೆಲೆ : ಸಂಪೂರ್ಣ ಸ್ಥಬ್ಧವಾದ ಕಡಬ ವಲಯ Read More »

ಕರಾವಳಿ, ಕರ್ನಾಟಕ, ಕ್ರೀಡಾ ನ್ಯೂಸ್

ಸುಳ್ಯದ ನಾರಿಗೆ ಒಲಿದ ಮಿಸೆಸ್ ಕರ್ನಾಟಕ -2020 ಕಿರೀಟ

(ನ್ಯೂಸ್ ಕಡಬ) newskadaba.com ಸುಳ್ಯ,ಜು.19 : ಮಿಸೆಸ್ ಕರ್ನಾಟಕ -2020 ಕಿರೀಟವನ್ನು ಸುಳ್ಯದ ಬ್ಯಾಂಕ್ ಉದ್ಯೋಗಿಯಾಗಿರುವ ಬೀರಮಂಗಲ ನಿವಾಸಿ ಸುಪ್ರೀತಾ ಕೆ.ಎಸ್ ಅವರು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಸುಳ್ಯದ ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿ ಸೇರಿದೆ. ಸುಳ್ಯದ ಬ್ಯಾಂಕ್ ಉದ್ಯೋಗಿಯಾಗಿರುವ ಬೀರಮಂಗಲ ನಿವಾಸಿ ಸುಪ್ರೀತಾ ಕೆ,ಎಸ್ ಅವರು ಮಿಸೆಸ್ ಕರ್ನಾಟಕ -2020 ಆಗಿ ಆಯ್ಕೆಯಾಗಿದ್ದು, ಸೌಂದರ್ಯ ಸ್ಪರ್ಧೆಯಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮೈಸೂರಿನ ಆರ್. ಆರ್ ಗ್ರೂಪ್ಸ್ ಪ್ರತಿ ವರ್ಷ ಈ ಸೌಂದರ್ಯ ಸ್ಪರ್ಧೆ ಏರ್ಪಡಿಸುತ್ತಿದ್ದು, ಈ ವರ್ಷದ ಕಿರೀಟವನ್ನು ಸುಳ್ಯದ

ಸುಳ್ಯದ ನಾರಿಗೆ ಒಲಿದ ಮಿಸೆಸ್ ಕರ್ನಾಟಕ -2020 ಕಿರೀಟ Read More »

ಕರಾವಳಿ, ಕರ್ನಾಟಕ

ಅಯೋಧ್ಯೆಯಲ್ಲಿ 300 ಕೋಟಿ ರೂ. ವೆಚ್ಚದ ರಾಮಮಂದಿರ ನಿರ್ಮಾಣ ➤ ಉಡುಪಿ ಪೇಜಾವರ ಶ್ರೀ

(ನ್ಯೂಸ್ ಕಡಬ) newskadaba.com ಉಡುಪಿ:ಜು.19., ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟ್ ನ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿಯಾದರು. ಈ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಹತ್ವದ ವಿಷಯಗಳು ಚರ್ಚೆಯಾಗಿದ್ದು, ಅಂದಾಜು 300 ಕೋಟಿ ರುಪಾಯಿ ವೆಚ್ಚದಲ್ಲಿ ಭವ್ಯ ಮಂದಿರ ನಿರ್ಮಾಣದ ಕುರಿತು ತೀರ್ಮಾನ‌ ಕೈಗೊಳ್ಳಲಾಗಿದೆ. ಈ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ವಿಶ್ವಪ್ರಸನ್ನ ತೀರ್ಥ ಶ್ರೀಗಳು, ರಾಮಮಂದಿರ ನಿರ್ಮಾಣಕ್ಕೆ ಭೂಮಿಯ ಧಾರಣಾ ಸಾಮರ್ಥ್ಯದ ಅಧ್ಯಯನ ನಡೆಯಲಿದ್ದು, ಎಲ್

ಅಯೋಧ್ಯೆಯಲ್ಲಿ 300 ಕೋಟಿ ರೂ. ವೆಚ್ಚದ ರಾಮಮಂದಿರ ನಿರ್ಮಾಣ ➤ ಉಡುಪಿ ಪೇಜಾವರ ಶ್ರೀ Read More »

ಕರಾವಳಿ

ಪುತ್ತೂರು : ಕೊರೋನಾ ಪೀಡಿತ ಮಗು ಮೃತ್ಯು ➤ ಅಂತ್ಯಸಂಸ್ಕಾರ ನಡೆಸಿದ ಭಜರಂಗದಳ..

(ನ್ಯೂಸ್ ಕಡಬ) newskadaba.com ಪುತ್ತೂರು, :,ಜು.19.ಕೊರೊನ ಪೀಡಿತವಾಗಿದ್ದ ಪುತ್ತೂರಿನ ಎರಡು ತಿಂಗಳ ಮಗು ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು, ಆದರೆ  ಫಲಕಾರಿಯಾಗದೇ ಮಗು ಶನಿವಾರ  ಸಾವನ್ನಪ್ಪಿದೆ. ಈ ಹಿನ್ನೆಲೆಯಲ್ಲಿ ಮಗುವಿನ ಮೃತ ದೇಹವನ್ನು ದೂರದ ಪುತ್ತೂರಿಗೆ ಕೊಂಡು ಹೋಗಿ ದಫನ ಮಾಡಲು ತಾಂತ್ರಿಕ ಅಡಚಣೆಗಳು ಎದುರಾದ ಹಿನ್ನೆಲೆಯಲ್ಲಿ ಮಗುವಿನ ಹೆತ್ತವರಿಗೆ ಏನು ಮಾಡಬೇಕೆಂದು ಧಿಕ್ಕೇ ತೋಚದಂತಾಗಿತ್ತು. ಇದರ ಮಾಹಿತಿ ಪಡೆದ ಭಜರಂಗ ದಳದ ಕಾರ್ಯಕರ್ತರು ಮುಂದಾಳತ್ವ ವಹಿಸಿ ಮಂಗಳೂರಿನಲ್ಲೇ ಅಂತ್ಯ ಕ್ರೀಯೆ ನಡೆಸಲು ಮುಂದಾದರು. ನಂದಿಗುಡ್ಡೆ

ಪುತ್ತೂರು : ಕೊರೋನಾ ಪೀಡಿತ ಮಗು ಮೃತ್ಯು ➤ ಅಂತ್ಯಸಂಸ್ಕಾರ ನಡೆಸಿದ ಭಜರಂಗದಳ.. Read More »

ಕರಾವಳಿ

ಗಾಯತ್ರಿ ಮಂತ್ರದ ಲಾಭ ಮತ್ತು ದಿನ ಭವಿಷ್ಯ ಮಾಹಿತಿ

ಗಾಯತ್ರಿ ಮಂತ್ರವನ್ನು ನೀವು ದಿನನಿತ್ಯ ಜಪಿಸುವುದರಿಂದ ಕುಟುಂಬದಲ್ಲಿ ನೆಮ್ಮದಿ ಹಾಗೂ ವೈವಾಹಿಕ ಜೀವನ ಸಂತೃಪ್ತ ವಾಗಿರುತ್ತದೆ. ನಿಮ್ಮ ಜಾತಕದಲ್ಲಿನ ಕುಜ ದೋಷವು ಸಹ ದೂರವಾಗುವುದು. ವಿವಾಹದಲ್ಲಿ ಅಡತಡೆಗಳು ಉಂಟಾಗಿದ್ದರೆ ಖಂಡಿತವಾಗಿಯೂ ಸರಿಹೋಗುತ್ತದೆ. ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ

ಗಾಯತ್ರಿ ಮಂತ್ರದ ಲಾಭ ಮತ್ತು ದಿನ ಭವಿಷ್ಯ ಮಾಹಿತಿ Read More »

ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

(ನ್ಯೂಸ್ ಕಡಬ)newskadaba.com ಜು.19ರಂದು ಸರಕಾರ ಜಾರಿಗೊಳಿಸಿರುವ ಸಂಡೇ ಲಾಕ್ ಡೌನ್ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಜಿಲ್ಲಾಡಳಿತ ನೀಡಿರುವ ಆದೇಶದ ಮಾರ್ಗಸೂಚಿಯಲ್ಲಿ, ಹಾಲು ಹಾಗೂ ಹಾಲಿನಿಂದ ತಯಾರಾಗುವ ಉತ್ಪನ್ನಗಳಿಗೆ ವಿನಾಯಿತಿ ನೀಡಿರುವ ಹಿನ್ನೆಲೆಯಲ್ಲಿ ಜುಲೈ 19ರಂದು ಬೆಳಿಗ್ಗೆ 8ರಿಂದ 11 ಗಂಟೆಯವರೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳು ಸಾಕಷ್ಟು ಪ್ರಮಾಣದಲ್ಲಿ ಡೀಲರ್ ಕೇಂದ್ರಗಳಲ್ಲಿ ದೊರೆಯುತ್ತದೆ. ಗ್ರಾಹಕರು ಗೊಂದಲಕ್ಕೀಡಾಗುವ ಅಗತ್ಯವಿಲ್ಲ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ

Read More »

ಕರಾವಳಿ, ಕರ್ನಾಟಕ

ಉಳ್ಳಾಲ: ಯುವಕ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಉಳ್ಳಾಲ ಜು.18, ಠಾಣಾ ವ್ಯಾಪ್ತಿಯ ಪಾನೀರ್ ಎಂಬಲ್ಲಿ ಬಾಡಿಗೆ ಕೋಣೆಯೊಂದರಲ್ಲಿ ವಾಸ ಮಾಡುತ್ತಿದ್ದ ಯುವಕನೋರ್ವ ಕೌಟುಂಬಿಕ ಸಮಸ್ಯೆಯಿಂದ ನೊಂದುಕೊಂಡು ಆತ್ಮಹತ್ಯೆಗೈದ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಮೃತರನ್ನು ಬೆಳ್ಮ ಗ್ರಾಮದ ರೆಂಜಾಡಿ ನಿವಾಸಿ ಮಲಿಕ್ (21) ಎಂದು ಗುರುತಿಸಲಾಗಿದೆ. ಈತನು ಮುಡಿಪು ಮೂಲದ ಯುವತಿಯನ್ನು ಪ್ರೀತಿಸಿ ವಿವಾಹವಾದ ಬಳಿಕ, ತನ್ನ ಮನೆಯಿಂದ ಹೊರಬಂದು ಬಾಡಿಗೆ ಮನೆಯಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ವಾಸವಾಗಿದ್ದನು. ಮಲಿಕ್ ಗೆ ದುಡಿಯಲೆಂದು ಪತ್ನಿಯ ತಂದೆ ಅಟೋ ರಿಕ್ಷಾವೊಂದನ್ನು ಖರೀದಿಸಿ

ಉಳ್ಳಾಲ: ಯುವಕ ನೇಣು ಬಿಗಿದು ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸುಳ್ಯ ಒಡಾಬಾಯಿ ಬಳಿ ಕಾರು ಅಪಘಾತ ➤ ಗಾಯಾಳುಗಳು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಸುಳ್ಯ,ಜು.18: ಸುಳ್ಯದಿಂದ ಪುತ್ತೂರು ಕಡೆಗೆ ಸಂಚರಿಸುತ್ತಿದ್ದ ಆಲ್ಟೋ 800 ಕಾರು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಮತ್ತು ಅಗ್ನಿ ಶಾಮಕ ದಳದ ಕಛೇರಿ ನಾಮಫಲಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರಾವಾಗಿ  ಗಾಯಗೊಂಡ ಘಟನೆ ಇಂದು ನಡೆದಿದೆ. ಕಾರಿನಲ್ಲಿ ಓರ್ವ ಯುವತಿ ಮತ್ತು ಎರಡು ಮಂದಿ ಯುವಕರು ಇದ್ದರೆಂದು ತಿಳಿದು ಬಂದಿದೆ. ಅಪಘಾತ ಸಂಭವಿಸಿದ್ದ ವೇಳೆ ಸ್ಥಳದಲ್ಲಿದ್ದ ಸ್ಥಳೀಯರು ಗಾಯಳುಗಳನ್ನು ತಕ್ಷಣ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುಳ್ಯ ಒಡಾಬಾಯಿ ಬಳಿ ಕಾರು ಅಪಘಾತ ➤ ಗಾಯಾಳುಗಳು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲು Read More »

ಕರಾವಳಿ, ಕರ್ನಾಟಕ

ಹಿರಿಯ ತುಳುಭಾಷ ವಿದ್ವಾಂಸಕ ಯು.ಪಿ ಉಪಾಧ್ಯಾಯ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಉಡುಪಿ ,ಜು.18: ಹಿರಿಯ ಭಾಷಾ ವಿಜ್ಷಾನಿ ತುಳು ವಿದ್ವಾಂಸ, ಭಾಷಾ ಸಂಶೋಧಕ ಯು. ಪಿ ಉಪಾಧ್ಯಾಯ ಅವರು (85) ಶುಕ್ರವಾರ ರಾತ್ರಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ದಿರ್ಘಕಾಲದ ಅನಾರೋಗ್ಯದದಿಂದ ಬಳಲುತ್ತಿದ್ದ ಉಪಾದ್ಯಾಯರು ಕಳೆದ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.   ಭಾಷೆ, ಜಾನಪದ, ಸಂಸ್ಕೃತಿ ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆ ಮಾಡಿದ್ದ ಯು. ಪಿ ಉಪಾಧ್ಯಾಯರು ರಾಷ್ಟ್ರಕವಿ ಗೋವಿಂದ ಪೈ ತುಳು ನಿಘಂಟು ಯೋಜನೆಯ ಸಂಪಾದಕರಾಗಿದ್ದರು. ಈ ಯೋಜನೆಯಲ್ಲಿ ಆರು ಸಂಪುಟಗಳ ತುಳು ನಿಘಂಟು

ಹಿರಿಯ ತುಳುಭಾಷ ವಿದ್ವಾಂಸಕ ಯು.ಪಿ ಉಪಾಧ್ಯಾಯ ಇನ್ನಿಲ್ಲ Read More »

ಕರಾವಳಿ, ಕರ್ನಾಟಕ
Scroll to Top