ಕರಾವಳಿ

ದ.ಕ ಜಿಲ್ಲೆಯಲ್ಲಿ ಬಿಡುವು ನೀಡಿದ ವರುಣ

(ನ್ಯೂಸ್ ಕಡಬ) newskadaba.com ಕಡಬ, ಆ.10.ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಧಾರಾಕಾರ ಮಳೆ¸ಸೋಮವಾರ ಸ್ವಲ್ಪ ಬಿಡುವು ನೀಡಿದೆ. ಹವಾಮಾನ ಇಲಾಖೆ ಸೋಮವಾರ ಬೆಳಗ್ಗಿನ ತನಕ ಭಾರಿ ಮಳೆ ಸುರಿಯುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿತ್ತು. ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ನೇತ್ರಾವತಿ ನದಿ ನೀರು ನಿನ್ನೆಯಿಂದ ಇಳಿಮುಖಂಡಿದೆ. ಘಟ್ಟ ಪ್ರದೇಶದಲ್ಲಿ ಸುರಿಯುವ ಮಳೆ ಹಾಗೂ ನೀರಿನ ಹರಿವು ಹೊಂದಿಕೊಂಡು ನೇತ್ರಾವತಿ ನದಿಯ ಹರಿವು ಬಂಟ್ವಾಳದಲ್ಲಿ ಏರಿಳಿತವಾಗುತ್ತದೆ ಎಂದು ತಹಸೀಲ್ದಾರ್ ರಶ್ಮಿ […]

ದ.ಕ ಜಿಲ್ಲೆಯಲ್ಲಿ ಬಿಡುವು ನೀಡಿದ ವರುಣ Read More »

ಕರಾವಳಿ

ಕರ್ನಾಟಕ ಕೇರಳ ಗಡಿಯಲ್ಲಿ ಗುಡ್ಡ ಕುಸಿತ ➤ ಅಪಾಯದ ಅಂಚಿನಲ್ಲಿ ಜನತೆ

(ನ್ಯೂಸ್ ಕಡಬ) newskadaba.com ಕಡಬ: ಆ.10,. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಪ್ರಕೃತಿವಿಕೋಪಗಳು ಸಂಭವಿಸುತ್ತಲೇ ಇದೆ.  ಕರ್ನಾಟಕ ಕೇರಳ ಗಡಿ ಪ್ರದೇಶವಾಗಿರುವ ಬಡ್ಡಡ್ಕ ಸಮೀಪದ ಬಾಟೋಳಿ ಎಂಬಲ್ಲಿ ನಿರಂತರ ಸುರಿದ ಮಳೆಯಿಂದಾಗಿ ಗುಡ್ಡ ಕುಸಿದಿದೆ. ಕಳೆದ ವರ್ಷ ಇದೇ ಸ್ಥಳದಲ್ಲಿ ಭೂಮಿ ಬಿರುಕು ಬಿಟ್ಟಿತ್ತು. ಈ ಬಾರಿ ಸುಮಾರು ಎರಡು ಎಕರೆಯಷ್ಟು ಜಾಗ, ಇನ್ನೂರು ಮೀಟರ್ ದೂರಕ್ಕೆ ಗುಡ್ಡ ಜರಿದಿದೆ. ಎರಡು ಮೀಟರ್ ಅಗಲದಲ್ಲಿ ಮಣ್ಣು ಕುಸಿದಿದ್ದು ಪರಿಸರದ ಜನತೆಯಲ್ಲಿ ಆತಂಕ ಮನೆ ಮಾಡಿದೆ.

ಕರ್ನಾಟಕ ಕೇರಳ ಗಡಿಯಲ್ಲಿ ಗುಡ್ಡ ಕುಸಿತ ➤ ಅಪಾಯದ ಅಂಚಿನಲ್ಲಿ ಜನತೆ Read More »

ಕರಾವಳಿ

ಕೊರೋನಾದಿಂದ ಚೇತರಿಕೆ ಕಂಡ ಬಿ ಎಸ್ ವೈ ➤ ನಾಳೆಯೇ ಆಸ್ಪತ್ರೆಯಿಂದ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 10, ಸಿಎಂ ಬಿ.ಎಸ್‌‌. ಯಡಿಯೂರಪ್ಪರವರಿಗೆ ಪುನಃ ಕೊರೋನಾ ಪರೀಕ್ಷೆ ಮಾಡಲಾಗಿದ್ದು, ಪರೀಕ್ಷಾ ವರದಿಯಲ್ಲಿ ನೆಗೆಟಿವ್‌‌ ಬಂದಿದೆ. ಸಿಎಂ ಬಿಎಸ್‌ವೈ ಅವರಿಗೆ ಕಳೆದ ವಾರದಂದು ಕೊರೋನಾ ಸೋಂಕು ತಗುಲಿದ್ದ ಕಾರಣ ಅವರು ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಚೇತರಿಸಿಕೊಂಡಿದ್ದಾರೆ. ಇದೀಗ ಅವರಿಗೆ ನಡೆಸಿದ ಕೊರೋನಾ ಪರೀಕ್ಷಾ ವರದಿಯಲ್ಲಿ ನೆಗೆಟಿವ್‌ ಬಂದರೆ, ಅವರು ಶೀಘ್ರವೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವರದಿಯಲ್ಲಿ ಅವರಿಗೆ ಕೊರೊನಾ ನೆಗೆಟಿವ್‌ ಬಂದಿದೆ.

ಕೊರೋನಾದಿಂದ ಚೇತರಿಕೆ ಕಂಡ ಬಿ ಎಸ್ ವೈ ➤ ನಾಳೆಯೇ ಆಸ್ಪತ್ರೆಯಿಂದ Read More »

ಕರಾವಳಿ

ಆಯುಷ್ಮಾನ್ ಭಾರತ್ ಕಾರ್ಡ್ ಅಭಿಯಾನ ➤ ಪಿಎಫ್ಐ ನೆಲ್ಯಾಡಿ ವಲಯದ ವತಿಯಿಂದ ಅರ್ಹ ಫಲಾನುಭವಿಗಳಿಗೆ ವಿತರಣೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ. 10, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನೆಲ್ಯಾಡಿ ವಲಯದ ವತಿಯಿಂದ ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆಯನ್ನು ಪರಿಸರದ ಅರ್ಹ ಮುನ್ನೂರಕ್ಕಿಂತಲೂ ಹೆಚ್ಚಿನ ಫಲಾನುಭವಿಗಳಿಗೆ ನೀಡುವ ಮೂಲಕ ಸಾಮಾಜಿಕ ಕಾರ್ಯ ಮೆರೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೆಡಿಕಲ್ ಉಸ್ತುವಾರಿ ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದೀಕ್ ನೆಲ್ಯಾಡಿ ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆಯ ಕುರಿತು ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪಿಎಫ್ಐ ನೆಲ್ಯಾಡಿ

ಆಯುಷ್ಮಾನ್ ಭಾರತ್ ಕಾರ್ಡ್ ಅಭಿಯಾನ ➤ ಪಿಎಫ್ಐ ನೆಲ್ಯಾಡಿ ವಲಯದ ವತಿಯಿಂದ ಅರ್ಹ ಫಲಾನುಭವಿಗಳಿಗೆ ವಿತರಣೆ Read More »

ಕರಾವಳಿ, ಕರ್ನಾಟಕ

ವಿದೇಶದಿಂದ ಬಂದವರಿಗೆ ಕ್ವಾರೆಂಟೈನ್ ಮಾರ್ಗಸೂಚಿ ಬದಲಾಯಿಸಿದ ರಾಜ್ಯ ಸರಕಾರ

(ನ್ಯೂಸ್ ಕಡಬ) newskadaba.com ಕಡಬ, ಆ.10.ಮಂಗಳೂರು: ಕೊರೊನಾದಿಂದಾಗಿ ವಿದೇಶದಲ್ಲಿದ್ದಾಗ ಒಮ್ಮೆ ಊರಿಗೆ ಹೋದರೆ ಸಾಕಪ್ಪ ಅಂತ ಇದ್ದವರಿಗೆ ಊರಿಗೆ ಬಂದಾಗ ಕ್ವಾರಂಟೈನ್‍ನಿಂದಾಗಿ ಮತ್ತೆ ಸಮಸ್ಯೆ ಎದುರಾಗುತ್ತಿತ್ತು ಆದರೆ ಇದೀಗ ರಾಜ್ಯ ಸರಕಾರ ಇದ್ದನ್ನು ದೂರ ಮಾಡಿದೆ. ವಿದೇಶದಿಂದ ಕರ್ನಾಟಕ ರಾಜ್ಯಕ್ಕೆ ವಾಪಾಸ್ ಆಗುವವರ ಕ್ವಾರಂಟೈನ್ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಬದಲಿಸಿದ್ದು ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದಿದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗಬೇಕಾಗಿಲ್ಲ. ಬದಲಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್ಗೆ ಒಳಗಾಗಬೇಕಾಗಿದೆ. ಈ ಹಿಂದೆ ವಿದೇಶದಿಂದ ವಾಪಾಸ್

ವಿದೇಶದಿಂದ ಬಂದವರಿಗೆ ಕ್ವಾರೆಂಟೈನ್ ಮಾರ್ಗಸೂಚಿ ಬದಲಾಯಿಸಿದ ರಾಜ್ಯ ಸರಕಾರ Read More »

ಕರಾವಳಿ

ಓವನ್ ಸ್ಪೋಟ ಬೇಕರಿ ಮಾಲಕ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಆ.10.ಸಾಸ್ತಾನ: ಬೇಕರಿ ಮಾಲಕರೋರ್ವರು ತನ್ನ ಬೇಕರಿಯಲ್ಲಿ  ಗ್ಯಾಸ್ ಸ್ಪೋಟಗೊಂಡು ದಾರುಣವಾಗಿ  ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ಸಂಭವಿಸಿದೆ. ಕೆಲವು ದಿನ ಬಂದ್ ಮಾಡಲಾಗಿದ್ದ ಮಾಬುಕಳದ ಬೇಕರಿ ಆಹಾರ ತಯಾರಿಸುವ ಘಟಕಕ್ಕೆ ಹೋದ ಮಾಲಕ ರೋಬರ್ಟ್ ಪುಟಾರ್ಡೊ(58), ಮೈಕ್ರೋ ಓವನ್ ನ ಚಾಲನೆ ಮಾಡುವ ಸಂಧರ್ಭ ಹತ್ತಿರ ಇದ್ದ ಗ್ಯಾಸ್ ಸೋರಿಕೆಯಾಗಿದ್ದರಿಂದ ಸಿಲಿಂಡರ್ ಸಿಡಿದು ಅವರು ಸ್ಥಳದಲ್ಲೇ ಮೃತ ಪಟ್ಟರೆಂಬ ತಿಳಿದು ಬಂದಿದೆ. ಕೋಟ ಪೊಲೀಸರು ಸ್ಥಳಕೆ ಧಾವಿಸಿ ಪರೀಶಿಲನೆ ನಡೆಸಿದ್ದಾರೆ.

ಓವನ್ ಸ್ಪೋಟ ಬೇಕರಿ ಮಾಲಕ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಕಡಬದ ವ್ಯಕ್ತಿ ಕೊರೋನಾ ಸೋಂಕಿಗೆ ಬಲಿ ➤ ತಾಲೂಕಿನಲ್ಲಿ ಇಬ್ಬರನ್ನು ಬಲಿ ಪಡೆದ ಕೊರೋನಾ

(ನ್ಯೂಸ್ ಕಡಬ) newskadaba.com ಕಡಬ, ಆ.10. ಕೊರೋನಾ ಸೋಂಕಿಗೆ ಕಡಬ ತಾಲೂಕಿನಲ್ಲಿ ಎರಡನೇ ಬಲಿಯಾಗಿದ್ದು, ಕೋಡಿಂಬಾಳದ ಮಡ್ಯಡ್ಕ ನಿವಾಸಿ ಕೊರೋನಾ ಸೋಂಕಿತ ವ್ಯಕ್ತಿಯೋರ್ವರು ಬಲಿಯಾಗಿದ್ದಾರೆ. 74 ವರ್ಷ ಪ್ರಾಯದ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿತ್ತು. ಆದರೆ ಅವರಿಗೆ ಯಾವುದೇ ರೋಗ ಲಕ್ಷಣಗಳು ಇರಲಿಲ್ಲ ಎನ್ನಲಾಗಿದೆ. ಮನೆಯಲ್ಲೇ ಇದ್ದ ಅವರು ಇಂದು ಮುಂಜಾನೆ ಮೃತಪಟ್ಟಿದ್ದಾರೆ‌.  

ಕಡಬದ ವ್ಯಕ್ತಿ ಕೊರೋನಾ ಸೋಂಕಿಗೆ ಬಲಿ ➤ ತಾಲೂಕಿನಲ್ಲಿ ಇಬ್ಬರನ್ನು ಬಲಿ ಪಡೆದ ಕೊರೋನಾ Read More »

ಕರಾವಳಿ

ದಾಂಪತ್ಯದಲ್ಲಿ ಸಮಸ್ಯೆಯೇ? ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ.

ನಿಮ್ಮ ದಾಂಪತ್ಯ ಸಮಸ್ಯೆಗೆ ಪರಿಹಾರ: ಪ್ರಾತಃಕಾಲದಲ್ಲಿ ಮಡಿಯಿಂದ ನಿಮ್ಮ ಮನೆ ದೇವರನ್ನು ಪೂಜಿಸಿ, ಬಿಳಿಯ ವಸ್ತ್ರದಲ್ಲಿ ಕಪ್ಪು ಶಾಹಿಯಲ್ಲಿ ದಂಪತಿಗಳನ್ನು ಹೆಸರನ್ನು ಬರೆದು ನಂತರ ಅದರಲ್ಲಿ ಕೃಷ್ಣ ತುಳಸಿ ಯನ್ನು ಹಾಕಿ ಹರಿಯುವ ನೀರಿಗೆ ಬಿಡಿ ಇದರಿಂದ ನಿಮ್ಮ ದಾಂಪತ್ಯ ಜೀವನ ಸರಿದಾರಿಗೆ ಬರುತ್ತದೆ. ಶ್ರೀ ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ

ದಾಂಪತ್ಯದಲ್ಲಿ ಸಮಸ್ಯೆಯೇ? ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ. Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ, ಕರ್ನಾಟಕ, ಭವಿಷ್ಯ, ರಾಷ್ಟ್ರೀಯ ನ್ಯೂಸ್, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ನೆಲ್ಯಾಡಿ: ಬೊಲೇರೋ – ಪಿಕಪ್ ನಡುವೆ ಮುಖಾಮುಖಿ ಢಿಕ್ಕಿ ➤ ಓರ್ವ ಗಂಭೀರ, ಬೊಲೇರೋ ಇಂಜಿನ್ ಬೆಂಕಿಗಾಹುತಿ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.09. ಬೊಲೆರೋ ಹಾಗೂ ಪಿಕಪ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೊಲೆರೋ ವಾಹನವು ಬೆಂಕಿಗೆ ಆಹುತಿಯಾದ ಘಟನೆ ಭಾನುವಾರ ಸಂಜೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಸಮೀಪದ ಲಾವತ್ತಡ್ಕ ಎಂಬಲ್ಲಿ ನಡೆದಿದೆ. ಆಸ್ಪತ್ರೆಗೆ ಆಕ್ಸಿಜನ್ ಸಾಗಾಟ ಮಾಡುತ್ತಿದ್ದ ಪಿಕಪ್ ಹಾಗೂ ಶಿಬಾಜೆ ನಿವಾಸಿ ರಮೇಶ್ ಎಂಬವರಿಗೆ ಸೇರಿದ ಬೊಲೇರೋ ನಡುವೆ ಲಾವತ್ತಡ್ಕದಲ್ಲಿ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ರಮೇಶ್ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನೆಲ್ಯಾಡಿ: ಬೊಲೇರೋ – ಪಿಕಪ್ ನಡುವೆ ಮುಖಾಮುಖಿ ಢಿಕ್ಕಿ ➤ ಓರ್ವ ಗಂಭೀರ, ಬೊಲೇರೋ ಇಂಜಿನ್ ಬೆಂಕಿಗಾಹುತಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ತೆಕ್ಕಾರು: ಮನೆಯ ಹಿಂಬದಿಯ ಗೋಡೆ ಕುಸಿತ ➤ ಅಪಾಯದಂಚಿನಲ್ಲಿ ಮನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ.09, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತೆಕ್ಕಾರಿನಲ್ಲಿ ಮನೆಯೊಂದರ ಸಮೀಪದ ಗುಡ್ಡವೊಂದು ಕುಸಿದಿದೆ. ಭಾನುವಾರದಂದು ತೆಕ್ಕಾರು ನಿವಾಸಿ ಸಿದ್ದೀಕ್ ಎಂಬವರ ಮನೆಯ ಅಂಗಳದಿಂದ ಗುಡ್ಡ ಜರಿದು, ಕೆಳಗಡೆಯಿದ್ದ ಅಕ್ಬರ್ ಎಂಬವರ ಮನೆಯ ಗೋಡೆಗೆ ಬಿದ್ದಿದೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ತೆಕ್ಕಾರು ಎಸ್ಸೆಸ್ಸೆಫ್ ಮತ್ತು ಎಸ್ ವೈಎಸ್ ಶಾಖಾ ಸದಸ್ಯರು ತುರ್ತು ಕಾರ್ಯಚರಣೆ ನಡೆಸಿ ಅಗತ್ಯ ವಸ್ತುಗಳ ಸ್ಥಳಾಂತರಿಸಿದರು. ಇನ್ನು ಗುಡ್ಡ ಕುಸಿಯುತ್ತಲೇ ಇದ್ದು, ಸಿದ್ದೀಕ್ ರವರ ಮನೆ ಅಪಾಯದಂಚಿನಲ್ಲಿದೆ.

ತೆಕ್ಕಾರು: ಮನೆಯ ಹಿಂಬದಿಯ ಗೋಡೆ ಕುಸಿತ ➤ ಅಪಾಯದಂಚಿನಲ್ಲಿ ಮನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top