ಕರಾವಳಿ

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧೀನದಲ್ಲಿದ್ದ 7 ಗ್ರಾಮಗಳು ಕಡಬ ಬ್ಲಾಕ್ ಕಾಂಗ್ರೆಸ್ ಗೆ ಹಸ್ತಾಂತರ

(ನ್ಯೂಸ್ ಕಡಬ) newskadaba.com ಸುಳ್ಯ, ಅ. 30. ನೂತನವಾಗಿ ರಚನೆಯಾದ ಕಡಬ  ತಾಲೂಕಿಗೆ ಸುಳ್ಯ ತಾಲೂಕಿನಲ್ಲಿದ್ದ 7 ಗ್ರಾಮಗಳಾದ ಐನೆಕಿದು, ಸುಬ್ರಹ್ಮಣ್ಯ, ಏನೆಕಲ್ಲು, ಬಳ್ಪ, ಕೇನ್ಯ, ಎಡಮಂಗಲ ಮತ್ತು ಎಣ್ಮೂರು  ಗ್ರಾಮಗಳು ಸರಕಾರದ ಆಡಳಿತಾತ್ಮಕವಾಗಿ ಸೇರ್ಪಡೆಗೊಂಡಿದೆ. ಇದರಿಂದಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿದ್ದ ಈ ಗ್ರಾಮಗಳನ್ನು ಕಡಬ  ಬ್ಲಾಕ್ ಕಾಂಗ್ರೆಸ್  ವ್ಯಾಪ್ತಿಗೆ ಹಸ್ತಾಂತರಿಸುವ ಕಾರ್ಯಕ್ರಮವು ಏನೆಕಲ್ಲು ಗೌರವ್ ವಾರ್ಡನ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ಯವರ ನೇತೃತ್ವದಲ್ಲಿ ನಡೆದ […]

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧೀನದಲ್ಲಿದ್ದ 7 ಗ್ರಾಮಗಳು ಕಡಬ ಬ್ಲಾಕ್ ಕಾಂಗ್ರೆಸ್ ಗೆ ಹಸ್ತಾಂತರ Read More »

ಕರಾವಳಿ, ಕರ್ನಾಟಕ

ಜಾಲ್ಸೂರು: ಶ್ರೀ ಸುಬ್ರಾಯ ಅನಂತ ಕಾಮತ್ ಗೇರುಬೀಜ ಕಾರ್ಖಾನೆಯು 48ನೇ ವರ್ಷಕ್ಕೆ ಪಾದಾರ್ಪಣೆ

(ನ್ಯೂಸ್ ಕಡಬ) newskadaba.com ವಿನೋಬಾನಗರ, ಆ. 30: ಜಾಲ್ಸೂರು ಗ್ರಾಮದ ವಿನೋಬನಗರದಲ್ಲಿರುವ ಶ್ರೀ ಸುಬ್ರಾಯ ಅನಂತ ಕಾಮತ್‌ ಮತ್ತು ಮಕ್ಕಳು ನಡೆಸುತ್ತಿರುವ ಗೇರುಬೀಜ ಕಾರ್ಖಾನೆಯು ಯಶಸ್ವಿಯಾಗಿ 47 ವರ್ಷಗಳನ್ನು ಪೂರೈಸಿ, 48 ವರ್ಷಕ್ಕೆ ಪಾದಾರ್ಪಣೆಗೊಂಡಿದೆ. ಇಲ್ಲಿ ಎಲ್ಲಾ ತರಹದ ಉತ್ತಮ ಗುಣಮಟ್ಟದ ಗೋಡಂಬಿ ಹಾಗೂ ವಿವಿಧ ಬಗೆಯ ಡ್ರೈಪ್ರೂಟ್ಸ್‌ ಗಳು ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.    

ಜಾಲ್ಸೂರು: ಶ್ರೀ ಸುಬ್ರಾಯ ಅನಂತ ಕಾಮತ್ ಗೇರುಬೀಜ ಕಾರ್ಖಾನೆಯು 48ನೇ ವರ್ಷಕ್ಕೆ ಪಾದಾರ್ಪಣೆ Read More »

ಕರಾವಳಿ, ಕರ್ನಾಟಕ

ಮಂಗಳೂರಿನಲ್ಲಿ ಭೀಕರ ಅಪಘಾತ – ವಿದ್ಯಾರ್ಥಿಗಳು ಪವಾಡ ಸದೃಶವಾಗಿ ಪಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 30: ನಗರದ ಪಂಪ್‌ವೆಲ್ ಫ್ಲೈಓವರ್‌ನಲ್ಲಿ ಕಳೆದ ದಿನ ರಾತ್ರಿ ನಡೆದ ಭೀಕರ ಅಪಘಾತದಿಂದ ಕಾರಿನಲ್ಲಿದ್ದ ವಿದ್ಯಾರ್ಥಿಗಳು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಅಪಘಾತದಲ್ಲಿ ನಡೆದ ಕಾರು ಕೇರಳ ನೋಂದಣಿ ಮಾರುತಿ ಎ-ಸ್ಟಾರ್ ಕಾರು ಆಗಿದ್ದು, ಅದು ಫ್ಲೈಓವರ್‌ನಲ್ಲಿ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಫ್ಲೈ ಓವರ್‌ನ ರಕ್ಷಣಾತ್ಮಕ ಸೈಡ್‌ವಾಲ್ ಕಾರು ಕೆಳಗೆ ಬೀಳದಂತೆ ತಡೆದಿದೆ. ಮೂವರು ಕಾಸರಗೋಡಿನ ವಿದ್ಯಾರ್ಥಿಗಳು, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಓರ್ವ ಸ್ನೇಹಿತನನ್ನು ಬಿಟ್ಟು ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ

ಮಂಗಳೂರಿನಲ್ಲಿ ಭೀಕರ ಅಪಘಾತ – ವಿದ್ಯಾರ್ಥಿಗಳು ಪವಾಡ ಸದೃಶವಾಗಿ ಪಾರು Read More »

ಕರಾವಳಿ, ಕರ್ನಾಟಕ

ಕಡಬ: ಗೃಹರಕ್ಷಕ ದಳದ ಮಾಜಿ ಘಟಕಾಧಿಕಾರಿ ಗೊಪಾಲ್ ರವರಿಗೆ ಬೀಳ್ಕೂಡುಗೆ ➤ ಗೋಪಾಲ್ ರವರ ಸೇವೆಯನ್ನು ಗೃಹರಕ್ಷಕದಳ ಇಲಾಖೆ ಸ್ಮರಿಸುತ್ತದೆ ಡಾ||ಚೂಂತಾರು

(ನ್ಯೂಸ್ ಕಡಬ) newskadaba.com ಕಡಬ, ಆ. 30. ಗೃಹರಕ್ಷಕದಳ ಘಟಕದ ವತಿಯಿಂದ ದಿನಾಂಕ ಇಂದು  ಇಲ್ಲಿನ ಕಡಬ ಘಟಕಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಠರಾದ ಡಾ||ಮುರಲೀ ಮೋಹನ್ ಚೂಂತಾರುರವರು ಭೇಟಿ ನೀಡಿ, ಇದೇ ತಿಂಗಳ 26 ರಂದು ನಿವೃತ್ತಿ ಹೊಂದಿದ ಕಡಬದ ಮಾಜಿ ಘಟಕಾಧಿಕಾರಿ ಗೊಪಾಲ್ ರವರನ್ನು ಘಟಕದ ವತಿಯಿಂದ ಕಡಬ ಮಾದರಿ ಶಾಲಾ ಆವರಣದಲ್ಲಿ ಎಲ್ಲಾ ಗೃಹರಕ್ಷಕರ ಸಮ್ಮುಖದಲ್ಲಿ ಸಮಾದೇಷ್ಠರು ಫಲ, ಪುಷ್ಪ ನೀಡಿ ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಸಮಾದೇಷ್ಠರು ಗೊಪಾಲ್ ರವರ ಸೇವೆಯನ್ನು

ಕಡಬ: ಗೃಹರಕ್ಷಕ ದಳದ ಮಾಜಿ ಘಟಕಾಧಿಕಾರಿ ಗೊಪಾಲ್ ರವರಿಗೆ ಬೀಳ್ಕೂಡುಗೆ ➤ ಗೋಪಾಲ್ ರವರ ಸೇವೆಯನ್ನು ಗೃಹರಕ್ಷಕದಳ ಇಲಾಖೆ ಸ್ಮರಿಸುತ್ತದೆ ಡಾ||ಚೂಂತಾರು Read More »

ಕರಾವಳಿ, ಕರ್ನಾಟಕ

ಕಡಬ, ಪುತ್ತೂರಿನಲ್ಲಿ ಇಂದು 27 ಮಂದಿಗೆ ಕೊರೋನ ಪಾಸಿಟಿವ್ ದೃಢ

(ನ್ಯೂಸ್ ಕಡಬ) newskadaba.com ಕಡಬ. ಆ,30:  ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು (ರವಿವಾರ) ಒಟ್ಟು 27 ಮಂದಿಗೆ ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಉಭಯ ತಾಲೂಕುಗಳಲ್ಲಿ ಈ ತನಕ ಒಟ್ಟು 672 ಕೊರೋನ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕಡಬ ತಾಲೂಕಿನ ರಾಮಕುಂಜ ಗ್ರಾಮದ ನಿವಾಸಿಗಳಾದ 27 ವರ್ಷದ ಮಹಿಳೆ ಮತ್ತು 3 ವರ್ಷದ ಹೆಣ್ಣು ಮಗು, ಕೊಣಾಳು ಗ್ರಾಮದ ನಿವಾಸಿಗಳಾದ 45 ವರ್ಷದ ಪುರುಷ ಮತ್ತು 40 ವರ್ಷದ ಮಹಿಳೆ ಹಾಗೂ ನೂಜಿಬಾಳ್ತಿಲ ಗ್ರಾಮದ 21

ಕಡಬ, ಪುತ್ತೂರಿನಲ್ಲಿ ಇಂದು 27 ಮಂದಿಗೆ ಕೊರೋನ ಪಾಸಿಟಿವ್ ದೃಢ Read More »

ಕರಾವಳಿ, ಕರ್ನಾಟಕ

ಅಕ್ರಮ ಕಸಾಯಿ ಖಾನೆ ಮೇಲೆ ಭಜರಂಗದಳ ಕಾರ್ಯಕರ್ತರ ದಾಳಿ ➤ ನಾಲ್ವರ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ. 30. ತಾಲೂಕಿನ ಬಂಗಾಡಿಯ ಓಟೆದಕಜೆ ಮನೆಯೊಂದರಲ್ಲಿ ದನದ ಮಾಂಸ ಮಾಡುತ್ತಿದ್ದ ಖಚಿತವಾದ ಮಾಹಿತಿ ಪಡೆದು ದಾಳಿ ನಡೆಸಿದ ಭಜರಂಗದಳ ಕಾರ್ಯಕರ್ತರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಸುನಿಲ್, ವರ್ಗೀಸ್, ವಿನೋದ್, ಕೆ.ಡಿ. ಜೋಸೆಫ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು 40 ರಿಂದ 50 ಕೆ.ಜಿ ಮಾಂಸ ಹಾಗೂ ಒಂದು ಜೀಪ್ ಅನ್ನು ವಶಪಡಿಸಿಕೋಡು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಲಾಗಿದೆ.  ಈ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು

ಅಕ್ರಮ ಕಸಾಯಿ ಖಾನೆ ಮೇಲೆ ಭಜರಂಗದಳ ಕಾರ್ಯಕರ್ತರ ದಾಳಿ ➤ ನಾಲ್ವರ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಡಿಕೆ ಪತ್ರಿಕೆ ಪ್ರಕಾಶಕ ಶ್ರೀನಿವಾಸ್ ಆಚಾರ್ ವಿಧಿವಶ

(ನ್ಯೂಸ್ ಕಡಬ) newskadaba.com ಮಂಗಳೂರು ಆ,30: ಅಡಿಕೆ ಪತ್ರಿಕೆ ಪ್ರಕಾಶಕ, ಪತ್ರಿಕೆಯನ್ನು ನಡೆಸುತ್ತಿದ್ದ ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸಿ ಆಚಾರ್ ಕಳೆದ ದಿನ ಬೆಳಿಗ್ಗೆ ನಿಧನರಾಗಿದ್ದಾರೆ.   ಕಳೆದ ಮೂರು ದಶಕಗಳಿಂದ ಬೇರೆ ಬೇರೆ ಪದಾಧಿಕಾರಿಯಾಗಿದ್ದು, ಅವರು ಅಡಿಕೆ ಕೃಷಿ ಸಮುದಾಯದ ಹಿತಾಸಕ್ತಿ ರಕ್ಷಣೆಯಾಗಿ ಅಡಿಕೆ ಪತ್ರಿಕೆಯ ನಿರ್ವಾಹಣೆಗಾಗಿ ತಮ್ಮ ಗಣನೀಯ ಕೊಡುಗೆ ನೀಡಿದ್ದರು. ಮೃತರು ಪತ್ನಿ , ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು

ಅಡಿಕೆ ಪತ್ರಿಕೆ ಪ್ರಕಾಶಕ ಶ್ರೀನಿವಾಸ್ ಆಚಾರ್ ವಿಧಿವಶ Read More »

ಕರಾವಳಿ, ಕರ್ನಾಟಕ

ಸೆ. 19- ಇ-ಲೋಕ್ ಅದಾಲತ್ – ಪ್ರಕರಣಗಳ ಇತ್ಯರ್ಥಕ್ಕೆ ಅವಕಾಶ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 29. ಕೊವೀಡ್ – 19 ಹಿನ್ನೆಲೆಯಲ್ಲಿ ನ್ಯಾಯಾಲದಲ್ಲಿ ಯಾವುದೇ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರತೀ  ತಾಲೂಕು ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ಸೆಪ್ಪೆಂಬರ್ 19 ರಂದು ಬಾಕಿ ಇರುವ ಪ್ರಕರಣಗಳನ್ನು ಇ–ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಲಾಗುವುದು ಎಂದು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಅವರು ತಿಳಿಸಿದ್ದಾರೆ.   ಅವರು ಶುಕ್ರವಾರ ದ.ಕ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ವಿಡಿಯೋ ಕಾನ್ಪರೆನ್ಸ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ನ್ಯಾಯಾಲದಲ್ಲಿ ಬಾಕಿ

ಸೆ. 19- ಇ-ಲೋಕ್ ಅದಾಲತ್ – ಪ್ರಕರಣಗಳ ಇತ್ಯರ್ಥಕ್ಕೆ ಅವಕಾಶ Read More »

ಕರಾವಳಿ, ಕರ್ನಾಟಕ

ಅಕ್ರಮ ಗಾಂಜಾ ಸಾಗಾಟ ➤ ಅರೋಪಿಗಳ ಹೆಡೆಮುರಿ ಕಟ್ಟಿದ ಸಿಸಿಬಿ ಪೊಲೀಸರು

(ನ್ಯೂಸ್ ಕಡಬ) newskadaba.com ಮಂಗಳೂರು. ಆ,30:  ಪಿಕಪ್ ವಾಹನದಲ್ಲಿ 132 ಕೆ,ಜಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸಿ ,ಕಾರನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ನಗರದ ಪಂಪ್ ವಲ್ ಬಳಿಯ ತಾರೆತೋಟ ಎಂಬಲ್ಲಿ ನಡೆದಿದೆ.   ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿ ಗ್ರಾಮದ ಉಪ್ಪಳ ನಿವಾಸಿ ಕಲಂದರ್ ಮಹಮ್ಮದ್ ಶಾ(35) ಹಾಗೂ ಕುಂಜತ್ತೂರು ಗ್ರಾಮ ಉದ್ಯಾವರ ನಿವಾಸಿ ಮೊಯ್ದೀನ್ ಅನ್ಸಾರ್ (27) ಬಂಧಿತ ಆರೋಪಿಗಳು ಈ ಆರೋಪಿಗಳು ಮಂಗಳೂರು ಹಾಗೂ ಕಾಸರಗೋಡು ಜಿಲ್ಲೆಗಳಿಗೆ ಬೃಹತ್ ಪ್ರಮಾಣದಲ್ಲಿ

ಅಕ್ರಮ ಗಾಂಜಾ ಸಾಗಾಟ ➤ ಅರೋಪಿಗಳ ಹೆಡೆಮುರಿ ಕಟ್ಟಿದ ಸಿಸಿಬಿ ಪೊಲೀಸರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೊಕ್ಕಡ: ರಾ. ಹೆದ್ದಾರಿಯಲ್ಲಿ ಆನೆಗಳ ಹಿಂಡು ಸಂಚಾರ! ಸ್ಥಳೀಯರಿಗೆ ಆತಂಕ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 30: ಕಾಡಾನೆಗಳ ಹಾವಳಿ ಯಿಂದ ಕೃಷಿಕರ ನಿತ್ಯ ತೊಂದರೆ ಅನುಭವಿಸುತ್ತಿದ್ದರೆ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಆನೆಗಳು ಹಿಂಡು ಹಿಂಡಾಗಿ ಸಾಗುವ ಮೂಲಕ ವಾಹನ ಸವಾರರಲ್ಲಿ ಭೀತಿ ಮೂಡಿಸುತ್ತಿವೆ.   ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ದಿನಗಳಿಂದೀಚೆಗೆ ಪ್ರತಿದಿನ ನಸುಕಿನಲ್ಲಿ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಕಡೆಯಿಂದ ಕೌಕ್ರಾಡಿಯತ್ತ ಸಾಗುವ ನಾಲ್ಕು ಆನೆಗಳ ಹಿಂಡು ಸಂಜೆಯ ವೇಳೆಗೆ ಅದೇ ದಾರಿಯಿಂದ ಮರಳುತ್ತಿವೆ. ಇತ್ತ ಭೂತಲಡ್ಕ, ಹೊನ್ನೆಜಾಲು ಮೊದಲಾದ ಗ್ರಾಮಗಳ ಇಬ್ರಾಹಿಂ,

ಕೊಕ್ಕಡ: ರಾ. ಹೆದ್ದಾರಿಯಲ್ಲಿ ಆನೆಗಳ ಹಿಂಡು ಸಂಚಾರ! ಸ್ಥಳೀಯರಿಗೆ ಆತಂಕ Read More »

ಕರಾವಳಿ, ಕರ್ನಾಟಕ
Scroll to Top