ಕರಾವಳಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೇವೆಗಳು ಆರಂಭ ➤ ಕ್ಷೇತ್ರಕ್ಕೆ ಹರಿದು ಬಂತು ಭಕ್ತ ಸಾಗರ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ, ಸೆ. 15. ಐದು ತಿಂಗಳ ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರ ಸೇವೆಗಳು ಆರಂಭಗೊಂಡಿದ್ದು, ಕ್ಷೇತ್ರಕ್ಕೆ ಭಕ್ತಸಾಗರವೇ ಹರಿದುಬಂತು. ಕೊವೀಡ್ 19 ಮಾರ್ಗ ಸೂಚಿಗೆ ಅನುಗುಣವಾಗಿ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಸೇರಿದಂತೆ ಇತರ ಸೇವೆಗಳನ್ನು ನಡೆಸಲು ಅವಕಾಶ ನೀಡಲಾಗಿದೆ.   ಭಕ್ತರು ದೈಹಿಕ ಅಂತರದೊಂದಿಗೆ ಸರತಿ ಸಾಲಿನಲ್ಲಿ ದೇವರ ದರ್ಶನ ಪಡೆದರು. ರಾತ್ರಿ 8 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕ್ಷೇತ್ರದ ಪ್ರಮುಖ ಸೇವೆ ಸರ್ಪಸಂಸ್ಕಾರವನ್ನು […]

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೇವೆಗಳು ಆರಂಭ ➤ ಕ್ಷೇತ್ರಕ್ಕೆ ಹರಿದು ಬಂತು ಭಕ್ತ ಸಾಗರ Read More »

ಕರಾವಳಿ, ಕರ್ನಾಟಕ

ಅನೈತಿಕ ಸಂಬಂಧ ಆರೋಪ ➤ ಪತಿ ವಿರುದ್ಧ ಪತ್ನಿಯಿಂದಲೇ ದೂರು..!!

(ನ್ಯೂಸ್ ಕಡಬ) newskadaba.com ಮುಲ್ಕಿ, ಸೆ. 15. ಸರಕಾರಿ ಹಾಸ್ಟೇಲ್ ನಲ್ಲಿ ಅಡುಗೆ ಕೆಲಸದಲ್ಲಿರುವವನ ಅಕ್ರಮ ಸಂಬಂಧದ ಬಗ್ಗೆ ಮತ್ತು ಸರಕಾರಿ ಸ್ವತ್ತುಗಳನೇ ಮಾರಾಟಕ್ಕೆ ಸಂಬಂಧಿಸಿದಂತೆ ಪಡು ಪಣಂಬೂರು ಗ್ರಾಮದ ನಿವಾಸಿ ಆತನ ಪತ್ನಿಯೇ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.   ಮುಲ್ಕಿಯಲ್ಲಿರುವ ಸರ್ಕಾರಿ ಹಾಸ್ಟೆಲ್ನಲ್ಲಿ ನೌಕರನಾಗಿರುವ ಈತ ಸರ್ಕಾರಿ ಹಾಸ್ಟೆಲ್ ಮಕ್ಕಳಿಗೆ ನೀಡಿರುವ ಹೊದಿಕೆಗಳನ್ನು ಕದ್ದೊಯ್ದು ಅಕ್ರಮ ಸಂಬಂಧ ಹೊಂದಿರುವ ಮಹಿಳೆಗೆ ನೀಡುತ್ತಿದ್ದ. ಕೆಲವನ್ನು ಮಾರಾಟ ಮಾಡಿದ್ದು ಮನೆಗೂ ತಂದಿದ್ದಾನೆ. ಇದರ ಜೊತೆಗೆ ತನಗೆ

ಅನೈತಿಕ ಸಂಬಂಧ ಆರೋಪ ➤ ಪತಿ ವಿರುದ್ಧ ಪತ್ನಿಯಿಂದಲೇ ದೂರು..!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಮಾನಸಿಕ ಅಸ್ವಸ್ಥನಿಗೆ ಕಾರು ಢಿಕ್ಕಿ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 15. ಮಾನಸಿಕ ಅಸ್ವಸ್ಥರೋರ್ವರಿಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾದ ಘಟನೆ ನರಿಮೊಗರು ಎಂಬಲ್ಲಿ ನಡೆದಿದೆ. ಪುತ್ತೂರು ಕಡೆಯಿಂದ ಕಾಣಿಯೂರು ಕಡೆಗೆ ತೆರಳುತ್ತಿದ್ದ ಕಾರೊಂದು ನರಿಮೊಗರು ಸಮೀಪ ರಸ್ತೆ ಬದಿಯಲ್ಲಿ ನಡೆಯುತ್ತಿದ್ದ ಮಾನಸಿಕ ಅಸ್ವಸ್ಥರೋರ್ವರಿಗೆ ಢಿಕ್ಕಿ ಹೊಡೆದಿದ್ದು, ಈ ರಭಸಕ್ಕೆ ರಸ್ತೆಗೆಸೆಯಲ್ಪಟ್ಟು ಇವರ ತಲೆಗೆ ಹಾಗೂ ದೇಹದ ಇತರ ಭಾಗಗಳಿಗೆ ಗಾಯಗಳಾಗಿವೆ ಎನ್ನಲಾಗಿದೆ. ಈ ವ್ಯಕ್ತಿಯು ಹಲವಾರು ವರ್ಷಗಳಿಂದ ನರಿಮೊಗರು ಭಾಗದಲ್ಲಿ ತಿರುಗಾಡುತ್ತಿದ್ದು, ಯಾರಿಗೂ ತೊಂದರೆ ನೀಡದೇ ತನ್ನ ಪಾಡಿಗೆ

ಪುತ್ತೂರು: ಮಾನಸಿಕ ಅಸ್ವಸ್ಥನಿಗೆ ಕಾರು ಢಿಕ್ಕಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಹಾಡಹಗಲೇ ಅಂಗಡಿಯಿಂದ ಒಂದು ಲಕ್ಷ ರೂ. ನಗದು ಕಳವು

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 15. ಹಾಡಹಗಲೇ ಅಂಗಡಿಯಿಂದ ಒಂದು ಲಕ್ಷ ರೂ. ನಗದು ಕಳವುಗೈದ ಘಟನೆ ತಿಂಗಳಾಡಿಯಲ್ಲಿ ನಡೆದಿದೆ. ತಿಂಗಳಾಡಿಯ ಅಬ್ದುಲ್ಲ ಎಂಬವರ ಮಗ ಸಿಯಾಬುದ್ದೀನ್ ಅವರು ತಿಂಗಳಾಡಿಯಲ್ಲಿ ರಬ್ಬರ್, ತೆಂಗಿನಕಾಯಿ, ಬಾಳೆಗೊನೆ ವ್ಯಾಪಾರ ನಡೆಸುತ್ತಿದ್ದು ಸೋಮವಾರ ಬೆಳಗ್ಗೆ 1.40 ಲಕ್ಷ ರೂ. ನಗದಿನೊಂದಿಗೆ ಬಂದಿದ್ದು, ಇದರ ಪೈಕಿ 40 ಸಾವಿರವನ್ನು ಅಂಗಡಿಯ ಮೇಜಿನ ಡ್ರಾವರ್ ನಲ್ಲಿಟ್ಟು, ಉಳಿದ ಒಂದು ಲಕ್ಷ ರೂ. ವನ್ನು ಕಪ್ಪು ಬಣ್ಣದ ಬ್ಯಾಗ್ ನಲ್ಲಿ ಪ್ರತ್ಯೇಕವಾಗಿ ಅದೇ ಡ್ರಾವರ್

ಪುತ್ತೂರು: ಹಾಡಹಗಲೇ ಅಂಗಡಿಯಿಂದ ಒಂದು ಲಕ್ಷ ರೂ. ನಗದು ಕಳವು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಶ್ರೀ ಕ್ಷೇತ್ರ ಪಣೋಲಿಬೈಲು ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ರಶ್ಮಿ ಎಸ್. ಆರ್ ನೇಮಕ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.15: ತುಳುನಾಡಿನ ಪ್ರಸಿದ್ಧ ಐತಿಹಾಸಿಕ ಹಿನ್ನೆಲೆಯುಳ್ಳ ಕಾರಣಿಕದ ಶ್ರೀ ಕ್ಷೇತ್ರ ಪಣೋಲಿಬೈಲು ಕಲ್ಲುರ್ಟಿ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್ ಅವರನ್ನು ನೇಮಕ ಮಾಡಲಾಗಿದೆ.     ಬಂಟ್ವಾಳ ವ್ಯಾಪ್ತಿಯಲ್ಲಿ ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರು ಪಡೆದಿದ್ದ ರಶ್ಮಿ ಎಸ್. ಆರ್ ರವರ ಸಾಧನೆ ಅಮೋಘ.  ಜನರ ಮೆಚ್ಚುಗೆಗೆ ಪಾತ್ರವಾಗಿರುವ ತಹಶೀಲ್ದಾರ್ ರಶ್ಮಿ ಎಸ್. ಆರ್ ಅವರನ್ನು ಧಾರ್ಮಿಕ ದತ್ತಿ ಇಲಾಖೆ ನೇಮಕ ಮಾಡಿ ಆದೇಶ ನೀಡಿದೆ.

ಶ್ರೀ ಕ್ಷೇತ್ರ ಪಣೋಲಿಬೈಲು ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ರಶ್ಮಿ ಎಸ್. ಆರ್ ನೇಮಕ Read More »

ಕರಾವಳಿ, ಕರ್ನಾಟಕ

ಎಸ್ಸೆಸ್ಸೆಲ್ಸಿ ಸಾಧಕರಿಗೆ, ಕೊರೋನಾ ವಾರಿಯರ್ಸ್‌ ಗೆ ತಾ.ಪಂ. ಸದಸ್ಯೆ ಕೆ.ಟಿ. ವಲ್ಸಮ್ಮರಿಂದ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಸೆ. 15. ತಾಲೂಕು ಪಂಚಾಯತ್ ಸದಸ್ಯರಾದ ಕೆ.ಟಿ. ವಲ್ಸಮ್ಮ ಇವರ ನೇತೃತ್ವದಲ್ಲಿ SSLC ಸಾಧಕರಿಗೆ ಹಾಗೂ ಕೊರೋನಾ ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯರಾದ ಸರ್ವೋತ್ತಮ ಗೌಡ, ಶಾಲಾ ಅಧ್ಯಕ್ಷರಾದ ಶಾಂತರಾಮ ಕುಡಾಲ, ಮುಖ್ಯ ಶಿಕ್ಷಕಿ ಶಾಂತಿ ಹಾಗೂ ಶಾಲೆಯ ಶಿಕ್ಷಕರಾದ ಗಿರೀಶ್ ಸ್ವಾಗತವನ್ನು ಮಾಡಿ, ಕಾರ್ಯಕ್ರಮವನ್ನು ಶಿಕ್ಷಕಿ ಜ್ಯೋತಿರವರು ನಿರೂಪಿಸಿದರು. ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಮಾಧವ, ವರ್ಗೀಸ್ ಅಬ್ರಹಾಂ, ಯಮುನಾ, ಅಂಗನವಾಡಿ ಮುಖ್ಯ ಶಿಕ್ಷಕಿ

ಎಸ್ಸೆಸ್ಸೆಲ್ಸಿ ಸಾಧಕರಿಗೆ, ಕೊರೋನಾ ವಾರಿಯರ್ಸ್‌ ಗೆ ತಾ.ಪಂ. ಸದಸ್ಯೆ ಕೆ.ಟಿ. ವಲ್ಸಮ್ಮರಿಂದ ಸನ್ಮಾನ Read More »

ಕರಾವಳಿ, ಕರ್ನಾಟಕ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಚೇತರಿಕೆ ➤ಎಸ್‌ಪಿಬಿ ಪುತ್ರ ಚರಣ್ ರಿಂದ ಸಂದೇಶ ರವಾನೆ

(ನ್ಯೂಸ್ ಕಡಬ) newskadaba.com ಚೆನ್ನೈ, ಸೆ. 15. ಕೊವೀಡ್ 19 ವೈರಸ್ ಗೆ ತುತ್ತಾಗಿ, ಕಳೆದ ಹಲವು ದಿನಗಳಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಪಂಚಭಾಷಾ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರ ಆರೋಗ್ಯ ಕುರಿತಂತೆ ಎಸ್‌ಪಿಬಿ ಪುತ್ರ ಚರಣ್ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.   ತಂದೆಯವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಎಲ್ಲಾ ತರಹದ ಚಿಕಿತ್ಸೆಗೆ ತಂದೆ ಸ್ಪಂದಿಸುತ್ತಿದ್ದಾರೆ. ಅವರಿಗೆ ಫಿಸಿಯೋಥೆರಪಿ ಮಾಡಲಾಗುತ್ತಿದೆ. ಇನ್ನು ಅವರಿಗೆ ಆಹಾರವನ್ನು

ಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಚೇತರಿಕೆ ➤ಎಸ್‌ಪಿಬಿ ಪುತ್ರ ಚರಣ್ ರಿಂದ ಸಂದೇಶ ರವಾನೆ Read More »

ಕರಾವಳಿ

ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ಎಸ್ಕೆಎಸ್ಸೆಸ್ಸೆಫ್ ವಿಖಾಯ ಬಳಗದ ವತಿಯಿಂದ ಪ್ಲಾಸ್ಮಾ ರಕ್ತ ಸಂಗ್ರಹ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 14. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ಪ್ಲಾಸ್ಮಾ ದಾನಿಗಳ ಮಾದರಿ ರಕ್ತ ಸಂಗ್ರಹ ಇಂದು ಕೈಕಂಬದಲ್ಲಿ ನಡೆಯಿತು. ವಿಖಾಯ ತಂಡದ ರಕ್ತದಾನ ಶಿಬಿರದಲ್ಲಿ ಈ ಕಾರ್ಯವನ್ನು ಮಾಡಲಾಯಿತು. ಹದಿನಾಲ್ಕು ಜನರ ರಕ್ತವನ್ನು ಪರೀಕ್ಷೆಗೆ ಒಳಪಡಿಸಿದಾಗ ಹನ್ನೆರಡು ಜನರ ರಕ್ತವನ್ನು ಪ್ಲಾಸ್ಮಾ ದಾನಕ್ಕಾಗಿ ಪಡೆಯಬಹುದು ಎಂದು ತಿಳಿಸಲಾಯಿತು. SKSSF ವಿಖಾಯ ರಕ್ತದಾನಿ ಬಳಗದ ವತಿಯಿಂದ ಜಿಲ್ಲೆಯಲ್ಲಿ ರಕ್ತದಾನ ಅಭಿಯಾನ ನಡೆಯುತ್ತಿದ್ದು ಸುಮಾರು 2500 ಯುನಿಟ್ ರಕ್ತ ಸಂಗ್ರಹದ ಗುರಿ ಹೊಂದಲಾಗಿದೆ.

ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ಎಸ್ಕೆಎಸ್ಸೆಸ್ಸೆಫ್ ವಿಖಾಯ ಬಳಗದ ವತಿಯಿಂದ ಪ್ಲಾಸ್ಮಾ ರಕ್ತ ಸಂಗ್ರಹ Read More »

ಕರಾವಳಿ, ಕರ್ನಾಟಕ

ಮಂಗಳೂರು ವಿ.ವಿ ಪದವಿ ಪರೀಕ್ಷೆ ಹಿನ್ನೆಲೆ ➤ ಧರ್ಮಸ್ಥಳ- ಕಲ್ಲುಗುಡ್ಡೆ- ಸುಬ್ರಹ್ಮಣ್ಯ ಬಸ್ ಮರು ಪ್ರಾರಂಭಿಸುವಂತೆ ಉಸ್ತುವಾರಿ ಸಚಿವರಿಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಸೆ. 14. ಮುಂದಿನ ದಿನಗಳಲ್ಲಿ ನಡೆಯಲಿರುವ ಮಂಗಳೂರು ವಿ.ವಿ. ಪದವಿ ವಿದ್ಯಾರ್ಥಿಗಳ ಪರೀಕ್ಷೆಗೆ ಅನುಕೂಲವಾಗುವಂತೆ ಧರ್ಮಸ್ಥಳ- ಇಚ್ಲಂಪಾಡಿ- ಕಲ್ಲುಗುಡ್ಡೆ- ಸುಬ್ರಹ್ಮಣ್ಯ ಇದರ ಮಧ್ಯೆ ಕೆಎಸ್ಸಾರ್ಟಿಸಿ ಬಸ್‍ ಅನ್ನು ಮರು ಪ್ರಾರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ನೂಜಿಬಾಳ್ತಿಲಕ್ಕೆ ಬಂದಿದ್ದ ಸಚಿವರಿಗೆ, ನೂಜಿಬಾಳ್ತಿಲ ನೂಜಿಬೈಲ್ ತೆಗ್‍ರ್‍ ತುಳುಕೂಟೋ ಸಂಚಾಲಕ ಉಮೇಶ್ ಶೆಟ್ಟಿ ಸಾಯಿರಾಮ್ ಅವರು ಮನವಿ ಸಲ್ಲಿಸಿದರು. ಪದವಿ ವಿದ್ಯಾರ್ಥಿಗಳ ಪರೀಕ್ಷೆಯು ಸೆಪ್ಟೆಂಬರ್ 16ರಿಂದ ಪ್ರಾರಂಭವಾಗಲಿದ್ದು,

ಮಂಗಳೂರು ವಿ.ವಿ ಪದವಿ ಪರೀಕ್ಷೆ ಹಿನ್ನೆಲೆ ➤ ಧರ್ಮಸ್ಥಳ- ಕಲ್ಲುಗುಡ್ಡೆ- ಸುಬ್ರಹ್ಮಣ್ಯ ಬಸ್ ಮರು ಪ್ರಾರಂಭಿಸುವಂತೆ ಉಸ್ತುವಾರಿ ಸಚಿವರಿಗೆ ಮನವಿ Read More »

ಕರಾವಳಿ, ಕರ್ನಾಟಕ

ಹೊಸ್ಮಠ: ಸೇತುವೆಯ ಮೇಲೆ ತ್ಯಾಜ್ಯ ಎಸೆದ ಕಿಡಿಗೇಡಿಗಳು

(ನ್ಯೂಸ್ ಕಡಬ) newskadaba.com ಕಡಬ, ಸೆ. 14. ಹೊಸ್ಮಠ ಸೇತುವೆಯ ಮೇಲೆಯೇ ಯಾರೋ ಕಿಡಿಗೇಡಿಗಳು ತ್ಯಾಜ್ಯಗಳನ್ನು ಎಸೆದು ಹೋಗಿರುವುದು ಕಂಡು ಬಂದಿದೆ. ಇದರಿಂದಾಗಿ ವಾಹನಗಳಲ್ಲಿ ಸಂಚರಿಸುವವರು ಹಾಗೂ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕೋಳಿ ಮುಂತಾದವುಗಳ ತ್ಯಾಜ್ಯವಾಗಿದ್ದು, ಯಾವುದೋ ಕಿಡಿಗೇಡಿಗಳು ಸೇತುವೆಯ ಮೇಲೆಯೇ ಎಸೆದಿದ್ದಾರೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿ ವರ್ಗದವರು ಇತ್ತ ಕಡೆ ಗಮನ ಹರಿಸಬೇಕಾಗಿದೆ.  

ಹೊಸ್ಮಠ: ಸೇತುವೆಯ ಮೇಲೆ ತ್ಯಾಜ್ಯ ಎಸೆದ ಕಿಡಿಗೇಡಿಗಳು Read More »

ಕರಾವಳಿ
Scroll to Top