ಕರಾವಳಿ

ಪುತ್ತೂರು : ಮೈಕ್ರೋ ಫೈನಾನ್ಸ್ ಗಳ ವಿರುದ್ದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.01: ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಮರುಪಾವತಿ ನೆಪದಲ್ಲಿ ಮಹಿಳೆಯರಿಗೆ ದೌರ್ಜನ್ಯ ನಡೆಸುವ ಘಟನೆಗಳು ಹೆಚ್ಚಾಗುತ್ತಿದ್ದು, ಇದನ್ನು ಖಂಡಿಸಿ ಋಣ ಮುಕ್ತ ಹೋರಾಟ ಸಮಿತಿ ವತಿಯಿಂದ ಪುತ್ತೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.   ಪ್ರತಿಭಟನಾ ವೇಳೆ,ಕೊರೊನಾ ಹಿನ್ನಲೆಯಲ್ಲಿ ಜನರ ಕೆಲಸಕ್ಕೇ ತೊಂದರೆಯಾಗಿರುವ ಕಾರಣ ಸಾಲ ಪಡೆದ ಹಣವನ್ನು ಮರುಪಾವತಿ ಮಾಡಲಾಗದೆ ಸಂಕಷ್ಟಕ್ಕೀಡಾಗಿದ್ದಾರೆ. ಈ ಸಂದರ್ಭದಲ್ಲೂ ಮೈಕ್ರೋ ಫೈನಾನ್ಸ್ ಕಂಪನಿಗಳ ಸಿಬ್ಬಂದಿಗಳು ಸಾಲ ಮರುಪಾವತಿಗೆ ಒತ್ತಡ ಹೇರುತ್ತಿದ್ದಾರೆ. ಸರಕಾರ ಕೂಡಲೇ ಈ ಬಗ್ಗೆ ಸೂಕ್ತ […]

ಪುತ್ತೂರು : ಮೈಕ್ರೋ ಫೈನಾನ್ಸ್ ಗಳ ವಿರುದ್ದ ಪ್ರತಿಭಟನೆ Read More »

ಕರಾವಳಿ, ಕರ್ನಾಟಕ

ಸ್ಕೂಟಿ ಸ್ಕಿಡ್ – ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 01. ಸವಾರನ ನಿಯಂತ್ರಣ ಕಳೆದುಕೊಂಡು ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಪುತ್ತೂರು ತಾಲೂಕಿನ ಹೊರವಲಯದ ಈಶ್ವರಮಂಗಲ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಮೋಹಿತ್ ಗೌಡ (19 ವ ) ಎಂದು ಗುರುತಿಸಲಾಗಿದೆ. ಈಶ್ವರಮಂಗಲ ಸಮೀಪದ ಬೆಳ್ಳಿಚಡವು ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೇನಾಲದಿಂದ ಈಶ್ವರಮಂಗಿಲವನ್ನು ಸಂಪರ್ಕಿಸುವ ರಸ್ತೆಯಲ್ಲಿ ಮೋಹಿತ್ ಚಲಾಯಿಸುತ್ತಿದ್ದ ಡಿಯೋ ಸ್ಕಿಡ್ ಆಗಿ ಉರುಳಿ ಬಿದ್ದಿದ್ದು, ತಲೆ ರಸ್ತೆಗೆ ಅಪ್ಪಳಿಸಿದ ಕಾರಣ ತಲೆಗೆ

ಸ್ಕೂಟಿ ಸ್ಕಿಡ್ – ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕರ್ನಾಟಕ

ಬಿದ್ದು ಸಿಕ್ಕಿದ ಚಿನ್ನವನ್ನು ಮಾಲಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪ್ರಭಾಕರ್

(ನ್ಯೂಸ್ ಕಡಬ) newskadaba.com ಮಂಗಳೂರು, ಅ.01:  ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಸಿಕ್ಕಿದ ಒಂದು ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಬಂಗಾರದ ಗಟ್ಟಿಯನ್ನು ಮಂಗಳೂರಿನ ಯುವಕನೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಪ್ರಭಾಕರ್ ಪ್ರಭು ಎಂಬುವರು ಮಂಗಳೂರಿನ ಅಡ್ಯಾರ್ ನ ಸಹ್ಯಾದ್ರಿ ಕಾಲೇಜಿನ ಬಳಿ ವಾಹನದಲ್ಲಿಬರುತ್ತಿದ್ದಾಗ ಒಂದು ಪರ್ಸ್ ಸಿಕ್ಕಿರುವ ಬಗ್ಗೆ ಅವರು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಂತ್ ಅವರ ಬಳಿ ತಿಳಿಸಿದ್ದರು. ಶಾಸಕ ವೇದವ್ಯಾಸ ಕಾಂತ್ ಅವರ ಸಲಹೆಯಂತೆ ಮಹಾಲಕ್ಷ್ಮಿ ಜ್ಯುವೆಲ್ಲರ್ಸ್ ಮಾಲೀಕರಾಗಿರುವ ರವೀಂದ್ರ ನಿಕ್ಕಂ ಅವರಲ್ಲಿ

ಬಿದ್ದು ಸಿಕ್ಕಿದ ಚಿನ್ನವನ್ನು ಮಾಲಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪ್ರಭಾಕರ್ Read More »

ಕರಾವಳಿ

ಬೆಳ್ಳಾರೆ: ನಿವೃತ್ತ ಎ.ಎಸ್.ಐ ಮಧು ಟಿ. ಯವರಿಗೆ ಬೀಳ್ಕೊಡುಗೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಅ.01: ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಎ.ಎಸ್.ಐ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಮಧು ಟಿ. ಯವರಿಗೆ ಸನ್ಮಾನ ಮತ್ತು ಬೀಳ್ಕೊಡುಗೆ ಕಾರ್ಯಕ್ರಮವು ಕಳೆದ ದಿನದಂದು ದೇವಿ ಹೈಟ್ಸ್‌ ನ ಅನುಗ್ರಹ ಸಭಾಭವನದಲ್ಲಿ ನಡೆಯಿತು. ಬೆಳ್ಳಾರೆ ಠಾಣೆಯಲ್ಲಿ ಎ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋಹನ್‌ ಉಳುವಾರು ರವರಿಗೆ ಸುಬ್ರಹ್ಮಣ್ಯ ಠಾಣೆಗೆ ವರ್ಗಾವಣೆಯಾಗಿದ್ದು ಇವರನ್ನು ಅಭಿನಂದಿಸಲಾಯಿತು. ಸುಳ್ಯದ ಸರ್ಕಲ್‌ ಇನ್ಸ್ ಪೆಕ್ಟರ್‌ ನವೀನ್‌ ಚಂದ್ರ ಜೋಗಿಯವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಳ್ಳಾರೆ ಪೊಲೀಸ್‌

ಬೆಳ್ಳಾರೆ: ನಿವೃತ್ತ ಎ.ಎಸ್.ಐ ಮಧು ಟಿ. ಯವರಿಗೆ ಬೀಳ್ಕೊಡುಗೆ Read More »

ಕರಾವಳಿ

ಬೈಕ್ ‌- ಸ್ಕೂಟಿ ಮುಖಾಮುಖಿ ಡಿಕ್ಕಿ ➤ ಸವಾರರು ಪ್ರಾಣಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಅಯ್ಯನಕಟ್ಟೆ, ಅ.01:  ಕಳಂಜ ಗ್ರಾಮದ ಅಯ್ಯನಕಟ್ಟೆ ಸೇತುವೆಯ ತಿರುವಿನ ಬಳಿ ಮಾರಪ್ಪ ಮೂಲ್ಯ ಎಂಬವರ ಬೈಕ್‌ ಮತ್ತು ಕುಶಾಲಪ್ಪ ಗೌಡ ಎಂಬವರ ಸ್ಕೂಟಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಇಂದು  ನಡೆದಿದೆ. ಸ್ಕೂಟಿ ಸವಾರರ ಮೊನಕಾಲಿಗೆ ಗಾಯವಾಗಿದ್ದರಿಂದ ಘಟನಾ ಸ್ಥಳದಲ್ಲಿದ್ದ ಎ.ಕೆ ಅಶ್ರಫ್‌ ರವರು ಗಾಯಾಳುವನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗಿ  ಚಿಕಿತ್ಸೆ ಕೊಡಿಸಿದರು. ಎರಡೂ ವಾಹನಗಳು ಜಖಂಗೊಂಡು ಸವಾರರು ಸಣ್ಣ ಪ್ರಮಾಣದ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ. ಸವಾರರಿಬ್ಬರು ಹೊರ ರೋಗಿಗಳಾಗಿ

ಬೈಕ್ ‌- ಸ್ಕೂಟಿ ಮುಖಾಮುಖಿ ಡಿಕ್ಕಿ ➤ ಸವಾರರು ಪ್ರಾಣಪಾಯದಿಂದ ಪಾರು Read More »

ಕರಾವಳಿ

ಬಂಟ್ವಾಳದಲ್ಲಿ ಅಪ್ರಾಪ್ತನ ಕಿರುಕುಳಕ್ಕೆ ಬೇಸತ್ತ ಯುವತಿಯರು ➤ ಅಷ್ಟಕ್ಕೂ ಆತ ಮಾಡಿದ್ದೇನು ಗೊತ್ತೇ.!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ. 01. ದಾರಿಯಲ್ಲಿ ನಡೆದುಕೊಂಡು ಹೋಗುವ ಬಾಲಕಿಯರಿಗೆ ಹಾಗೂ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ಅಪ್ರಾಪ್ತ ಬಾಲಕನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಲಕಿಯರಿಗೆ ಹಾಗೂ ಯುವತಿಯರಿಗೆ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯವೆಸಗಿದ ಆರೋಪದಡಿಯಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಅಪ್ರಾಪ್ತ ಬಾಲಕ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಿಸಿ ಬಾಲಕನ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ .ಠಾಣಾ ಎಸ್ ಐ ಪ್ರಸನ್ನ ನೇತೃತ್ವದ ತಂಡ ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ

ಬಂಟ್ವಾಳದಲ್ಲಿ ಅಪ್ರಾಪ್ತನ ಕಿರುಕುಳಕ್ಕೆ ಬೇಸತ್ತ ಯುವತಿಯರು ➤ ಅಷ್ಟಕ್ಕೂ ಆತ ಮಾಡಿದ್ದೇನು ಗೊತ್ತೇ.! Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು: ಹರಳಿಂಡಿ ಸಾಗಾಟದ ಲಾರಿ ಪಲ್ಟಿ

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 01. ಹರಳಿಂಡಿ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಪುತ್ತೂರು- ವಿಟ್ಲ ರಸ್ತೆಯ ಪೆಲತ್ತಿಂಜ ಎಂಬಲ್ಲಿ ನಡೆದಿದೆ. ಪುತ್ತೂರಿನಿಂದ ವಿಟ್ಲ ಕಡೆಗೆ ಲಾರಿಯಲ್ಲಿ ಹರಳಿಂಡಿ ಸಾಗಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಲಾರಿಯಲ್ಲಿದ್ದವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ವಿಟ್ಲ ಠಾಣಾ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪುತ್ತೂರು: ಹರಳಿಂಡಿ ಸಾಗಾಟದ ಲಾರಿ ಪಲ್ಟಿ Read More »

ಕರಾವಳಿ, ಕರ್ನಾಟಕ

ಪುತ್ತೂರು: ಅಳಕೆ ಮಜಲು ಬಳಿ ಲಾರಿ ಪಲ್ಟಿ

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 01. ಪುತ್ತೂರು ವಿಟ್ಲ ರಸ್ತೆಯ ಅಳಕೆ ಮಜಲು ಎಂಬಲ್ಲಿ ಲಾರಿ ಪಲ್ಟಿಯಾದ ಘಟನೆ ಬುಧವಾರ ಸಂಜೆ ನಡೆದಿದೆ.   ಪುತ್ತೂರಿನಿಂದ ವಿಟ್ಲ ಕಡೆಗೆ ಹರಳಿನ ಹಿಂಡಿ ಲೋಡನ್ನು ತುಂಬಿಸಿಕೊಂಡು ಬರುತ್ತಿರುವಾಗ ಅಳಕೆ ಮಜಲಿನ ಪೆಲತ್ತಿಂಜ ಎಂಬಲ್ಲಿ ಲಾರಿ ಪಲ್ಟಿಯಾಗಿದೆ.  ಘಟನೆಯಲ್ಲಿ ಲಾರಿ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಗಿದ್ದಾರೆ. ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಉಂಟಾಗಿತ್ತು, ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.  

ಪುತ್ತೂರು: ಅಳಕೆ ಮಜಲು ಬಳಿ ಲಾರಿ ಪಲ್ಟಿ Read More »

ಕರಾವಳಿ, ಕರ್ನಾಟಕ

ಹೊಸ್ಮಠ ಸೇತುವೆಯಿಂದ ಹಾರಿ ವ್ಯಕ್ತಿಯ ಹುಚ್ಚಾಟ ➤ ನದಿಯಲ್ಲೇ ನಿಂತು ಪೊಲೀಸರ ಕಾಲನ್ನು ಎಳೆದ ಭೂಪ. ಮುಂದೇನಾಯ್ತು ಗೊತ್ತೇ..೧೧???

(ನ್ಯೂಸ್ ಕಡಬ) newskadaba.com ಕಡಬ, ಸೆ.30: ಕಡಬ ತಾಲೂಕಿನ ಹೊಸ್ಮಠ ಸೇತುವೆಯ ಬಳಿ ವ್ಯಕ್ತಿಯೋರ್ವ ಹುಚ್ಚಾಟ ಮೆರೆದಿದ್ದಾನೆ. ಮೊದಲು ತಾನೂ ನದಿಗೆ ಹಾರಿ ಈಜಾಡುತ್ತಾ ಕಾಲ ಕಳೆದಿದ್ದಾನೆ. ಆದರೆ, ಇದನ್ನು ಗಮನಿಸಿದ ಸ್ಥಳೀಯರು, ಆತ ನದಿಗೆ ಬಿದ್ದಿದ್ದಾನೆ ಎಂದು ಆತನ ಸಹಾಯಕ್ಕೆ ಧಾವಿಸಿದ್ದಾರೆ. ಆದರೆ ಆತ ಮಾಡಿದ್ದೇ ಬೇರೆ.!?? ಆತನ ಸಹಾಯಕ್ಕೆ ಧಾವಿಸಿದ ಸ್ಥಳೀಯರನ್ನು ಆತ ನೀರಿಗೆ ಎಳೆದು ಹಾಕಿ ಹುಚ್ಚಾಟ ಮೆರೆದಿದ್ದಾನೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಧಾವಿಸಿ ಪ್ರಶ್ನಿಸುತ್ತಿದ್ದಾಗಲೇ ಆತ

ಹೊಸ್ಮಠ ಸೇತುವೆಯಿಂದ ಹಾರಿ ವ್ಯಕ್ತಿಯ ಹುಚ್ಚಾಟ ➤ ನದಿಯಲ್ಲೇ ನಿಂತು ಪೊಲೀಸರ ಕಾಲನ್ನು ಎಳೆದ ಭೂಪ. ಮುಂದೇನಾಯ್ತು ಗೊತ್ತೇ..೧೧??? Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಅ. 02 ರಂದು ವಿಖಾಯ ರಕ್ತದಾನ ಅಭಿಯಾನ ಸಮಾರೋಪ ಸಮಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 30. ಎಸ್ ಕೆಎಸ್ಎಸ್ ಎಫ್ ವಿಖಾಯ ರಕ್ತದಾನಿ ಬಳಗದ ವತಿಯಿಂದ ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ರಕ್ತದಾನ ಶಿಬಿರ ಅಭಿಯಾನದ ಸಮಾರೋಪ ಸಮಾರಂಭವು ಆಕ್ಟೋಬರ್ 2 ಗಾಂಧಿ ಜಯಂತಿಯಂದು ಮಂಗಳೂರಿನ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಜರುಗಲಿದೆ ಎಂದು ದ.ಕ ಜಿಲ್ಲಾ ಎಸ್್ಕೆ್ಕೆಎಸ್ಸೆಸ್ಸೆಫ್ ವಿಖಾಯ ಸಮಿತಿ ತಿಳಿಸಿದೆ. ಬೆಳಿಗ್ಗೆ 9 ಗಂಟೆಗೆ ಪ್ಲಾಸ್ಮಾ ಹಾಗೂ ರಕ್ತದಾನಿಗಳ ಸಂಗಮ ನಡೆಯಲಿದ್ದು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಹಾಗೂ ಯೇನೆಪೊಯ ಬ್ಲಡ್ ಬ್ಯಾಂಕ್ ಸಹಭಾಗಿತ್ವದಲ್ಲಿ ರಕ್ತದಾನ

ಮಂಗಳೂರು: ಅ. 02 ರಂದು ವಿಖಾಯ ರಕ್ತದಾನ ಅಭಿಯಾನ ಸಮಾರೋಪ ಸಮಾರಂಭ Read More »

ಕರಾವಳಿ, ಕರ್ನಾಟಕ
Scroll to Top