ಕರಾವಳಿ

ಮಂಗಳೂರು: ಯುವಕನ ಮೇಲೆ ತಲ್ವಾರ್ ದಾಳಿ ➤ ಯುವಕ ಗಂಭೀರ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 23. ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಯುವಕನೊಬ್ಬನ ಮೇಲೆ ತಲ್ವಾರ್ ದಾಳಿ ನಡೆಸಿದ ಪರಿಣಾಮ ಯುವಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಲ್ಲಿನ ಯೂನಿಟಿ ಆಸ್ಪತ್ರೆಯ ಎದುರುಗಡೆ ನಡೆದಿದೆ. ಗಾಯಾಳುವನ್ನು ನೌಶಾದ್ (30) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೋಲಿಸ್ ಅಧಿಕಾರಿಗಳ ಸಹಿತ ಕದ್ರಿ ಪೋಲೀಸ್ ಠಾಣಾ ಇನ್ಸ್‌ಪೆಕ್ಟರ್ ಸವಿತೃ ತೇಜ್ ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.

ಮಂಗಳೂರು: ಯುವಕನ ಮೇಲೆ ತಲ್ವಾರ್ ದಾಳಿ ➤ ಯುವಕ ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 5 ಮಂದಿಯಲ್ಲಿ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಕಡಬ ನ. 23: ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯಂತೆ 5 ಮಂದಿಯಲ್ಲಿ ಕೋವಿಡ್ 19 ದೃಢಪಟ್ಟಿದೆ.     ಕಡಬ ತಾಲೂಕಿನ ನೆಲ್ಯಾಡಿಯ 30 ವರ್ಷದ ಮಹಿಳೆ, 19 ವರ್ಷದ ಯುವಕರೊಬ್ಬರಲ್ಲಿ ಕೊರೋನಾ ದೃಢಪಟ್ಟಿದೆ. ಇನ್ನು ಪುತ್ತೂರು ತಾಲೂಕಿನಲ್ಲಿ ದರ್ಬೆಯ 46 ವರ್ಷದ ವ್ಯಕ್ತಿ, ಪುತ್ತೂರು ಕಬಕದ 60 ವರ್ಷದ ಮಹಿಳೆ, ಹಾಗೂ ಭವಾನಿಶಂಕರ ದೇವಸ್ಥಾನ ರಸ್ತೆಯ ನಿವಾಸಿ 53 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಪತ್ತೆಯಾಗಿದೆ.  

ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 5 ಮಂದಿಯಲ್ಲಿ ಕೊರೋನಾ ದೃಢ Read More »

ಕರಾವಳಿ

ವಿ.ವಿ ಕಾಲೇಜು ಮಂಗಳೂರು ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಧಿ ವಿಸ್ತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 23: ವಿ.ವಿ ಕಾಲೇಜು ಮಂಗಳೂರು ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಧಿ ವಿಸ್ತರಣೆಯಾಗಿದೆ.   ಪ್ರಸ್ತುತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು, ಸಂಧ್ಯಾಕಾಲೇಜು, ಮಂಗಳೂರು, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಾಪ್ಪ ಕಾಲೇಜು, ಮಡಿಕೇರಿ, ಸ್ನಾತಕೋತ್ತರ ಕೇಂದ್ರ ಚಿಕ್ಕ ಅಳುವಾರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜಿತ ಕಾಲೇಜುಗಳು (ಸರಕಾರಿ ಕೋಟದ ಸೀಟುಗಳಿಗೆ) ಮತ್ತು ಸರಕಾರಿ ಕಾಲೇಜುಗಳು ನಡೆಸಲ್ಪಡುವ ವಿವಿಧ ಸ್ನಾತಕೋತ್ತರ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕಾಲೇಜುಗಳ ಪ್ರವೇಶಾತಿಗೆ

ವಿ.ವಿ ಕಾಲೇಜು ಮಂಗಳೂರು ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಧಿ ವಿಸ್ತರಣೆ Read More »

ಕರಾವಳಿ

ಪ್ರಾಣಿ ದಯಾ ಸಂಘ ರಚನೆ ➤ ಪದಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು ನ. 23: ದಕ್ಷಿಣ ಕನ್ನಡ ಜಿಲ್ಲಾ ಪ್ರಾಣಿ ದಯಾ ಸಂಘದ ರಚನೆ ಮಾಡಲು ಸರ್ಕಾರೇತರ ಪದಾಧಿಕಾರಿಗಳ ಹುದ್ದೆಗಳಿಗೆ ಜಿಲ್ಲೆಯಲ್ಲಿನ ಪ್ರಾಣಿ ಪ್ರಿಯರು, ಪ್ರಾಣಿಗಳ ರಕ್ಷಣೆಯಲ್ಲಿ ತೊಡಗಿಕೊಂಡವರು, ಗೋಶಾಲೆ ನಡೆಸುತ್ತಿರುವವರು ಮತ್ತು ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಾಣಿ ಕಲ್ಯಾಣದಲ್ಲಿ ಆಸಕ್ತಿ ಉಳ್ಳವರು ಉಪ ನಿರ್ದೇಶಕರು, ಪಶುಪಾಲನಾ ಇಲಾಖೆ, ದ.ಕ., ಮಂಗಳೂರು ಕಛೇರಿಯಿಂದ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ನವೆಂಬರ್ 26 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 0824-2492337 ನ್ನು ಸಂಪರ್ಕಿಸುವಂತೆ ಪಶುಪಾಲನಾ ಇಲಾಖೆಯ

ಪ್ರಾಣಿ ದಯಾ ಸಂಘ ರಚನೆ ➤ ಪದಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ Read More »

ಕರಾವಳಿ

ಸವಣೂರು: ಹಿಂಸಾತ್ಮಕವಾಗಿ ಗೋ ಸಾಗಾಟ ➤ ವಾಹನ ಸಹಿತ 2 ಗೋವುಗಳು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಸವಣೂರು ನ. 23: ಕಳೆದ ದಿನ ರಾತ್ರಿ ಸವಣೂರಿನಲ್ಲಿ ಮಹೀಂದ್ರ ವಾಹನದಲ್ಲಿ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದಾಗ ಬೆಳ್ಳಾರೆ ಪೊಲೀಸರು ವಾಹನವನ್ನು ತಡೆದು ನಿಲ್ಲಿಸಿ ವಾಹನ ಸಹಿತ ಎರಡು ದನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.     ಯಾವುದೇ ಪರವಾನಿಗೆ ಇಲ್ಲದೇ ದನ ಸಾಗಾಟ ಮಾಡುತ್ತಿದ್ದ ಕೃಷ್ಣ ಭಟ್ ಪಿ. ಮೊಟ್ಟೆತ್ತಡ್ಕ ಹಾಗೂ ಶಿವಪ್ರಸಾದ್ ಎಂಬವರು ಕಾಂಚನದಿಂದ ದನವನ್ನು ಖರೀದಿಸಿ ಪುರುಷರಕಟ್ಟೆಗೆ ಒಂದೇ ವಾಹನದಲ್ಲಿ ಎರಡು ದೊಡ್ಡ ದನಗಳನ್ನು ಸಾಗಿಸುತ್ತಿದ್ದುದ್ದನ್ನು

ಸವಣೂರು: ಹಿಂಸಾತ್ಮಕವಾಗಿ ಗೋ ಸಾಗಾಟ ➤ ವಾಹನ ಸಹಿತ 2 ಗೋವುಗಳು ಪೊಲೀಸರ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಸಸಿಹಿತ್ಲು : ಸರ್ಫಿಂಗ್ ಬೀಚ್ ಬಳಿ ವ್ಯಕ್ತಿಯ ಶವ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 23: ಹಳೆಯಂಗಡಿ ಸಮೀಪದ ಸಸಿಹಿತ್ಲು ಸರ್ಫಿಂಗ್ ಬೀಚ್ ಬಳಿ ವ್ಯಕ್ತಿಯೋರ್ವರ ಶವ ಪತ್ತೆಯಾಗಿದೆ.   ಸುಮಾರು 65ರ ಹರೆಯದ ಗಂಡಸಿನ ಶವ ಸಸಿಹಿತ್ಲು ಎಂಡ್ ಪಾಯಿಂಟ್ ಮುಂಡ ಬೀಚ್ ಬಳಿ ಸಮುದ್ರದಲ್ಲಿ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಕೂಡಲೇ ಸ್ಥಳಕ್ಕೆ ಧಾವಿಸಿ ದೋಣಿ ಮುಖಾಂತರ ಶವವನ್ನು ಸಮುದ್ರತೀರಕ್ಕೆ ತಂದಿದ್ದಾರೆ. ಇಂದು (ಸೋಮವಾರ) ಬೆಳಗಿನ ಜಾವ ವ್ಯಕ್ತಿ ಮೃತಪಟ್ಟಿರಬಹುದು ಎಂದು ಸ್ಥಳೀಯ ಪಂಚಾಯತ್ ಸದಸ್ಯ ಚಂದ್ರಕುಮಾರ್ ತಿಳಿಸಿದ್ದಾರೆ. ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ

ಸಸಿಹಿತ್ಲು : ಸರ್ಫಿಂಗ್ ಬೀಚ್ ಬಳಿ ವ್ಯಕ್ತಿಯ ಶವ ಪತ್ತೆ Read More »

ಕರಾವಳಿ

ಮೊಟ್ಟೆತ್ತಡ್ಕ: ಪೌರ ಕಾರ್ಮಿಕರಿಗೆ ಹಲ್ಲೆ ➤ ಹಲ್ಲೆ ಮಾಡಿದ ವ್ಯಕ್ತಿ ಖಾಕಿ ಬಲೆಗೆ

(ನ್ಯೂಸ್ ಕಡಬ) newskadaba.com ಮೊಟ್ಟೆತ್ತಡ್ಕ ನ. 23: ಸ್ವಚ್ಚತೆಯ ದೃಷ್ಟಿಯಿಂದ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಕೊಡಬೇಕೆಂದು ಹೇಳಿದರೂ ಕೆಲವೊಂದು ಮನೆಯವರು ಹಸಿ ಕಸ ಒಣ ಕಸವನ್ನು ವಿಂಗಡಣೆ ಮಾಡದೆ ಕೊಡುತ್ತಿದ್ದರು. ಈ ಕುರಿತು ಪೌರ ಕಾರ್ಮಿಕರು ವಿಚಾರಿಸಿದಾಗ ಅವರ ಮೇಲೆ ಹಲ್ಲೆಯನ್ನು ನಡೆಸಿದ ಅಮಾನವೀಯ ಘಟನೆ ಮೊಟ್ಟೆತ್ತಡ್ಕದಲ್ಲಿ ನಡೆದಿದೆ.     ಇಂದು ಮೊಟ್ಟೆತ್ತಡ್ಕ ಜನತಾ ಕಾಲೋನಿಯಲ್ಲಿ ಮನೆಯೊಂದರ ಎದುರು ಇರಿಸಿದ್ದ ಕಸವನ್ನು ವಿಂಗಡಣೆ ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಮೇಲಾಧಿಕಾರಿಗಳ ಸೂಚನೆಯಂತೆ ಕಸವನ್ನು ವಿಲೇವಾರಿ ಮಾಡುವುದಿಲ್ಲ

ಮೊಟ್ಟೆತ್ತಡ್ಕ: ಪೌರ ಕಾರ್ಮಿಕರಿಗೆ ಹಲ್ಲೆ ➤ ಹಲ್ಲೆ ಮಾಡಿದ ವ್ಯಕ್ತಿ ಖಾಕಿ ಬಲೆಗೆ Read More »

ಕರಾವಳಿ, ಕ್ರೈಮ್ ನ್ಯೂಸ್

ಡಿಸೆಂಬರ್‌ವರೆಗೆ ಶಾಲೆ ಇಲ್ಲ ➤ ಸಿಎಂ ಬಿಎಸ್‍ವೈ ಅಧಿಕೃತ ಘೋಷಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು ನ. 23: ಡಿಸೆಂಬರ್‌ವರೆಗೆ ಶಾಲೆ ಇಲ್ಲ. ಡಿಸೆಂಬರ್ ಕೊನೆಯಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಶಾಲಾ-ಕಾಲೇಜು ಪ್ರಾರಂಭ ಕುರಿತು ಇಂದು ಸಿಎಂ ನೇತೃತ್ವದಲ್ಲಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ತಜ್ಞರ ಅಭಿಪ್ರಾಯಗಳನ್ನು ಪಡೆಯಲಾಗಿದ್ದು, ಸದ್ಯಕ್ಕೆ ಶಾಲೆ ಪ್ರಾರಂಭ ಬೇಡ ಎಂದು ನಿರ್ಧರಿಸಲಾಯಿತು. ಈ ಹಿನ್ನೆಲೆಯಲ್ಲಿ ಡಿಸೆಂಬರ್ ಅಂತ್ಯದವರೆಗೂ ಶಾಲೆ ಪ್ರಾರಂಭ ಮಾಡಲಾಗುವುದಿಲ್ಲ ಎಂದು ಸಿಎಂ ಅಧಿಕೃತವಾಗಿ ಘೋಷಿಸಿದ್ದಾರೆ. ಸಭೆ

ಡಿಸೆಂಬರ್‌ವರೆಗೆ ಶಾಲೆ ಇಲ್ಲ ➤ ಸಿಎಂ ಬಿಎಸ್‍ವೈ ಅಧಿಕೃತ ಘೋಷಣೆ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಜೋ ಬಿಡೆನ್ ಪತ್ನಿಯ ನೀತಿ ನಿರ್ದೇಶಕಿ “ಮಾಲಾ ಅಡಿಗ” ಕುಂದಾಪುರ ಮೂಲದವರು

(ನ್ಯೂಸ್ ಕಡಬ) newskadaba.com ಉಡುಪಿ ನ. 23: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್‌ ಅವರ ಪತ್ನಿ ಜಿಲ್ ಬಿಡೆನ್‌ ನೀತಿ ನಿರ್ದೇಶಕರಾಗಿ ಭಾರತ ಮೂಲದ ಮಾಲಾ ಅಡಿಗ (47) ನೇಮಕ ಗೊಂಡಿದ್ದಾರೆ.ಮಾಲಾ ಅಡಿಗ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ಕಕ್ಕುಂಜೆ ಅಡಿಗ ಕುಟುಂಬಕ್ಕೆ ಸೇರಿದ್ದಾರೆ.   ಮಾಲಾ ಅಡಿಗರ ಪತಿ ಚಾರ್ಲ್ಸ್‌ ಬೀರೋ ಕೂಡಾ ವಕೀಲರಾಗಿದ್ದು, 15 ರ ಹರೆಯದ ಮಗಳಿದ್ದಾಳೆ. ಅಮೆರಿಕದಲ್ಲೇ ಹುಟ್ಟಿ ಬೆಳೆದಿರುವ ಮಾಲಾ ಅಡಿಗ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡು ಅಮೆರಿಕದ

ಜೋ ಬಿಡೆನ್ ಪತ್ನಿಯ ನೀತಿ ನಿರ್ದೇಶಕಿ “ಮಾಲಾ ಅಡಿಗ” ಕುಂದಾಪುರ ಮೂಲದವರು Read More »

ಕರಾವಳಿ, ರಾಷ್ಟ್ರೀಯ ನ್ಯೂಸ್

ಡಿ.10ರಿಂದ ಮಂಗಳೂರು-ಮೈಸೂರು ವಿಮಾನ ಸೇವೆ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು ನ. 23: ಮಂಗಳೂರಿನಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ವಿಮಾನಯಾನ ಸೇವೆ ಒದಗಿಸುವ ಬಹುದಿನಗಳ ಬೇಡಿಕೆ ನೆರವೇರುವ ಕಾಲ ಹತ್ತಿರವಾಗಿದೆ. ಏರ್‌ ಇಂಡಿಯಾದ ಅಲಯನ್ಸ್‌ ವಿಮಾನಯಾನ ಸಂಸ್ಥೆ ವತಿಯಿಂದ ಡಿ.10ರಿಂದ ಮಂಗಳೂರು-ಮೈಸೂರು ನಡುವೆ ವಿಮಾನ ಸೇವೆ ಆರಂಭವಾಗಲಿದೆ.   ಪ್ರತಿ ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಮಾತ್ರ ಈ ವಿಮಾನ ಸೇವೆ ಲಭ್ಯವಿರಲಿದೆ. ಮೈಸೂರಿನಿಂದ ಬೆಳಗ್ಗೆ 11.15ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 12.15ಕ್ಕೆ ಮಂಗಳೂರು ತಲುಪಲಿದೆ. ಮಂಗಳೂರಿನಿಂದ ಮಧ್ಯಾಹ್ನ 12.40ಕ್ಕೆ ಹೊರಡುವ ವಿಮಾನ

ಡಿ.10ರಿಂದ ಮಂಗಳೂರು-ಮೈಸೂರು ವಿಮಾನ ಸೇವೆ ಆರಂಭ Read More »

ಕರಾವಳಿ
Scroll to Top