ಕಡಬ: ಹಾಲಿಗೆಂದು ತೆರಳಿದ ಯುವತಿ ನಾಪತ್ತೆ
(ನ್ಯೂಸ್ ಕಡಬ) newskadaba.com ಕಡಬ, ನ. 27. ಬಾಲಕಿಯೋರ್ವಳು ಮನೆಗೆ ಹಾಲು ತರಲೆಂದು ಪೇಟೆಗೆ ಹೋಗಿದ್ದ ಬಳಿಕ ಮನೆಗೆ ಬಾರದೇ ನಾಪತ್ತೆಯಾದ ಘಟನೆ ಬಿಳಿನೆಲೆಯಲ್ಲಿ ನಡೆದಿದೆ. ನಾಪತ್ತೆಯಾದ ಬಾಲಕಿಯನ್ನು ಬಿಳಿನೆಲೆ ಗ್ರಾಮದ ಮದೆಪರ್ಲ ನಿವಾಸಿ ಬೋಜಪ್ಪ ಗೌಡ ಎಂಬವರ ಪುತ್ರಿ ಶುಭಲತಾ (16) ಎಂದು ಗುರುತಿಸಲಾಗಿದೆ. ಇವರು ಎಂದಿನಂತೆ ಬಿಳಿನೆಲೆ ಪೇಟೆಗೆ ಹಾಲು ತರಲೆಂದು ಹೋಗಿದ್ದು, ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಇವರ ತಂದೆಯು ನೀಡಿದ ದೂರಿನಂತೆ ಕಡಬ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ: ಹಾಲಿಗೆಂದು ತೆರಳಿದ ಯುವತಿ ನಾಪತ್ತೆ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್








