ಕರಾವಳಿ

ಬೆಳ್ತಂಗಡಿ :ಏಣಿಯಿಂದ ಕಾಲುಜಾರಿ ಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ.08:  ಮನೆಯ ಮಹಡಿ ಹತ್ತುವ ವೇಳೆ ಏಣಿಯಿಂದ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಗಾಯಗೊಂಡಿದ್ದ ಸುಲೇಮಾನ್ (34) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ. ಘಟನೆ ಭಾನುವಾರ ನಡೆದಿದ್ದು, ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ಮೃತಪಟ್ಟಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರಿಯರರನ್ನು ಅಗಲಿದ್ದಾರೆ.  

ಬೆಳ್ತಂಗಡಿ :ಏಣಿಯಿಂದ ಕಾಲುಜಾರಿ ಬಿದ್ದು ಮೃತ್ಯು Read More »

ಕರಾವಳಿ

ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ವರ್ಗಾವಣೆ ಆದೇಶಕ್ಕೆ ತಡೆ ➤ ಆಡಳಿತಾತ್ಮಕ ನ್ಯಾಯ ಮಂಡಳಿಯಿಂದ ಮಧ್ಯಂತರ ಆದೇಶ

(ನ್ಯೂಸ್ ಕಡಬ) newskadaba.com ಕಡಬ, ಡಿ.07. ಕಡಬ ತಾಲ್ಲೂಕು ಕಚೇರಿಯಲ್ಲಿ ಕಂದಾಯ ನಿರೀಕ್ಷಕರಾಗಿ ಕರ್ತವ್ಯದಲ್ಲಿದ್ದ ಅವಿನ್ ರಂಗತ್ತಮಲೆ ಅವರ ವರ್ಗಾವಣೆ ಆದೇಶಕ್ಕೆ ಬೆಂಗಳೂರಿನ ಆಡಳಿತಾತ್ಮಕ ನ್ಯಾಯ ಮಂಡಳಿಯು ತಡೆ ನೀಡಿದೆ. ಕಡಬ ತಾಲೂಕು ಕಂದಾಯ ನಿರೀಕ್ಷಕರಾಗಿ ಗೋಪಾಲ ಕೆ. ಎಂಬವರನ್ನು ಬಂಟ್ವಾಳದಿಂದ ಕಡಬಕ್ಕೆ ವರ್ಗಾಯಿಸಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ನವೆಂಬರ್ 21ರಂದು ಆದೇಶವನ್ನು ಹೊರಡಿಸಿದ್ದರು. ಸದರಿ ಆದೇಶದ ವಿರುದ್ಧ ಅವಿನ್ ರಂಗತ್ತಮಲೆಯವರು ಅವಧಿಗೆ ಮುನ್ನ ಹಾಗೂ ಬೇರೆ ಯಾವುದೇ ಕೆಲಸದ ಜಾಗವನ್ನು ತೋರಿಸದೆ ವರ್ಗಾವಣೆ

ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ವರ್ಗಾವಣೆ ಆದೇಶಕ್ಕೆ ತಡೆ ➤ ಆಡಳಿತಾತ್ಮಕ ನ್ಯಾಯ ಮಂಡಳಿಯಿಂದ ಮಧ್ಯಂತರ ಆದೇಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆಲಂಕಾರು: MRPL ಹೈಕ್ಯೂ ಪೆಟ್ರೋಲ್ ಬಂಕ್ ರತ್ನಶ್ರೀ ಎಂಟರ್‌ಪ್ರೈಸಸ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಡಿ.07. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಆರ್‌ಪಿಎಲ್‌ನವರ ಪ್ರಥಮ ಡೀಲರ್ ಔಟ್‌ಲೆಟ್ ಆಗಿರುವ ಎಂಆರ್‌ಪಿಎಲ್ ಹೆಚ್‌ಐಕ್ಯು(ಹೈ ಕ್ವಾಲಿಟಿ) ಪೆಟ್ರೋಲ್ ಪಂಪ್ ರತ್ನಶ್ರೀ ಎಂಟರ್‌ಪ್ರೈಸಸ್ ಸೋಮವಾರದಂದು ಆಲಂಕಾರಿನಲ್ಲಿ ಶುಭಾರಂಭಗೊಂಡಿತು. ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು, ಗಿಡಕ್ಕೆ ನೀರು ಹಾಕುವ ಮೂಲಕ ಕಚೇರಿ ಉದ್ಘಾಟಿಸಿ ಬಳಿಕ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಎಂಆರ್‌ಪಿಎಲ್‌ನ ಮಾರ್ಕೆಟಿಂಗ್ ವಿಭಾಗದ ಗ್ರೂಪ್ ಜನರಲ್ ಮ್ಯಾನೇಜರ್ ಹೆಚ್.ಸಿ.ಸತ್ಯನಾರಾಯಣರವರು ಉದ್ಘಾಟಿಸಿದರು. ಮಾಲಕ ರಾಧಾಕೃಷ್ಣ ಕೆ.ಎಸ್. ರವರು,

ಆಲಂಕಾರು: MRPL ಹೈಕ್ಯೂ ಪೆಟ್ರೋಲ್ ಬಂಕ್ ರತ್ನಶ್ರೀ ಎಂಟರ್‌ಪ್ರೈಸಸ್ ಶುಭಾರಂಭ Read More »

ಕರಾವಳಿ

‘ಗುಡ್ಡೆದ ಭೂತ’ ಖ್ಯಾತಿಯ ನಟ, ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ವಿಧಿವಶ

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 07: ಪ್ರಸಿದ್ಧ ಗುಡ್ಡೆದ ಭೂತ ಧಾರಾವಾಹಿ ನಟ, ಹಿರಿಯ ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ (79 ) ಇಂದು ಮಧ್ಯಾಹ್ನ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.   ರಂಗ ನಿರ್ದೇಶಕರಾಗಿ, ಕಥೆಗಾರ, ಕವಿಯಾಗಿ, ನಟರಾಗಿದ್ದ ಅವರು ಉಡುಪಿಯ ಸಮೂಹ ಸಂಸ್ಥೆ ಸಂಸ್ಥಾಪಕರಾಗಿ,ನಾಟಕ, ನೃತ್ಯ ರೂಪಕ ಮೂಲಕ ರಾಜ್ಯಾದ್ಯಂತ ಜನಮನ್ನಣೆ ಗಳಿಸಿದ್ದರು. ನಾಡಿನಾದ್ಯಂತ 50 ಕ್ಕೂ ಹೆಚ್ಚು ನಾಟಕಗಳಿಗೆ ನಿರ್ದೇಶನ ಮಾಡಿದ ಹೆಗ್ಗಳಿಕೆ ಹೊಂದಿರುವ ಉದ್ಯಾವರ ಮಾಧವಾಚಾರ್ಯರು ರಾಜ್ಯೋತ್ಸವ, ರಂಗ ವಿಶಾರದ ಪ್ರಶಸ್ತಿಗೆ

‘ಗುಡ್ಡೆದ ಭೂತ’ ಖ್ಯಾತಿಯ ನಟ, ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ವಿಧಿವಶ Read More »

ಕರಾವಳಿ

ಕೊವೀಡ್ ಗೆ ಬಲಿಯಾದ ಕಿರುತೆರೆ ನಟಿ.!

(ನ್ಯೂಸ್ ಕಡಬ) newskadaba.com ಮುಂಬೈ, ಡಿ. 07: ಕೊರೊನಾದಿಂದ ಬಳಲುತ್ತಿದ್ದ ಕಿರುತೆರೆ ನಟಿ ದಿವ್ಯಾ ಭಟ್ನಾಗರ್ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಯೇ ರಿಶ್ತಾ ಕ್ಯಾ ಕೆಹಲಾತಾ ಹೈ, ಉಡಾನ್, ಜೀತ್ ಗಯಿ ತೋ ಪಿಯಾ ಮೋ ಸೇರಿದಂತೆ ಹಲವು ಧಾರಾವಾಹಿಗಳು ಹಾಗೂ ಕೆಲವು ಸಿನಿಮಾಗಳಲ್ಲಿ ದಿವ್ಯಾ ನಟಿಸಿದ್ದರು.ನಟಿ ಶಿಲ್ಪಾ ಶಿರೋಡ್ಕರ್ ಇನ್ಸ್ಟಾಗ್ರಾಮ್ ಮೂಲಕ ಸಂತಾಪ ಸೂಚಿಸಿದ್ದು, ಭಟ್ನಾಗರ್ ಅವರು ನನ್ನ ಪ್ರೀತಿಯ ಗೆಳತಿಯಾಗಿದ್ದಳು, ಆಕೆಯ ನಿಧನದಿಂದ ನನಗೆ ತುಂಬಾ ದುಃಖವಾಗಿದೆ ಎಂದು ಬರೆದಿದ್ದಾರೆ. ನಟಿ ದೇವಲೋನಾ ಸೇರಿದಂತೆ

ಕೊವೀಡ್ ಗೆ ಬಲಿಯಾದ ಕಿರುತೆರೆ ನಟಿ.! Read More »

ಕರಾವಳಿ

ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡುವಂತೆ ಒತ್ತಾಯ ➤ ಬಿಲ್ಲವ ಬ್ರಿಗೇಡ್ ವತಿಯಿಂದ ಕಾಲ್ನಡಿಗೆಯಲ್ಲಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 07: ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಬೇಕೆಂದು ಆಗ್ರಹಿಸಿ ಬಿಲ್ಲವ ಬ್ರಿಗೇಡ್ ವತಿಯಿಂದ ನಡೆದ ಬೃಹತ್ ಬೈಕ್ ರ್ಯಾಲಿಗೆ ಪೊಲೀಸರು ತಡೆ ಒಡ್ಡಿದ ಘಟನೆ ನಡೆದಿದೆ. ಬೈಕ್ ರ್ಯಾಲಿ ಇಲ್ಲದೇ ಕಾಲ್ನಡಿಗೆಯಲ್ಲೇ ಬಿಲ್ಲವ ಬ್ರಿಗೇಡ್ ಮರವೂರಿನಿಂದ ಕೆಂಜಾರಿನವರೆಗೆ ಘೋಷಣೆ ಕೂಗುತ್ತಾ ಸಾಗಿತು.   ಇದೇ ವೇಳೆ ಕೋಟಿ ಚೆನ್ನಯರ ಹೆಸರಿಡದಿದ್ದರೆ ಹೋರಾಟ ನಿಲ್ಲದು. ತುಳುನಾಡಿನ ಮಹಾಪುರುಷರಾದ ಕೋಟಿ ಚೆನ್ನಯರ ಹೆಸರಿಡಬೇಕು. ರಾಜ್ಯ ಸರ್ಕಾರಕ್ಕೆ ತಲುಪಿಸಿದ ಮನವಿ ಪತ್ರ ಮೂಲೆ ಗುಂಪಾಗಿದೆ. ನಮ್ಮದು

ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡುವಂತೆ ಒತ್ತಾಯ ➤ ಬಿಲ್ಲವ ಬ್ರಿಗೇಡ್ ವತಿಯಿಂದ ಕಾಲ್ನಡಿಗೆಯಲ್ಲಿ ಪ್ರತಿಭಟನೆ Read More »

ಕರಾವಳಿ

ದ.ಕ :ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ➤ ಇಂದಿನಿಂದ ನಾಮ ಪತ್ರ ಸಲ್ಲಿಕೆ, ಇವಿಎಂ ಬಳಕೆಯಿಲ್ಲ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 07: ದಕ್ಷಿಣ ಕನ್ನಡ ಜಿಲ್ಲೆಯ 220 ಗ್ರಾಮ ಪಂಚಾಯತ್ ಗಳ 3,222 ಸ್ಥಾನಗಳಿಗೆ ಎರಡು ಹಂತದಲ್ಲಿ ನಡೆಯುವ ಚುನಾವಣೆಗೆ ಸಿದ್ಧತೆ ನಡೆದಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಮೊದಲ ಹಂತದಲ್ಲಿ 106 ಮತ್ತು ಎರಡನೇ ಹಂತದಲ್ಲಿ 114 ಗ್ರಾ.ಪಂ.ಗಳಿಗೆ ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ 5,12,808 ಪುರುಷರು ಮತ್ತು 5,26,288 ಮಹಿಳೆಯರ ಸಹಿತ ಒಟ್ಟು 10,39,096 ಮತದಾರರು ಮತದಾನ ಮಾಡಲು ಅರ್ಹತೆ ಹೊಂದಿದ್ದಾರೆ

ದ.ಕ :ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ➤ ಇಂದಿನಿಂದ ನಾಮ ಪತ್ರ ಸಲ್ಲಿಕೆ, ಇವಿಎಂ ಬಳಕೆಯಿಲ್ಲ Read More »

ಕರಾವಳಿ, ಕರ್ನಾಟಕ

ಮಂಗಳೂರು :ವ್ಯಕ್ತಿಯ ಶಸ್ತ್ರ ಚಿಕಿತ್ಸೆಗಾಗಿ ಮಧ್ಯರಾತ್ರಿ 1 ಗಂಟೆಗೆ ಯುವಕರಿಂದ ರಕ್ತದಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 07: ಮಧ್ಯರಾತ್ರಿ ಒಂದು ಗಂಟೆ ಗೆ ರಕ್ತದಾನಮಾಡುವ ಮೂಲಕ ಯುವಕರ ತಂಡವೊಂದು ಮಾನವೀಯತೆ ಮೆರೆದಿದ್ದಾರೆ. ಈ ಮೂಲಕ ಓರ್ವ ವ್ಯಕ್ತಿಯ ಶಸ್ತ್ರ ಚಿಕಿತ್ಸೆ ಗೆ ನೆರವಾಗಿದ್ದಾರೆ.   ನಗರದ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರಿಗೆ ತುರ್ತು ರಕ್ತದ ಅವಶ್ಯಕತೆ ಇದ್ದಾಗ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಸದಸ್ಯರು ಮಧ್ಯರಾತ್ರಿ 1 ಗಂಟೆಗೆ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಯದುನಂದನ್ ಎಂಬವರಿಗೆ ತುರ್ತು ರಕ್ತದ ಅಗತ್ಯವಿತ್ತು. ಈ ವಿಷಯ

ಮಂಗಳೂರು :ವ್ಯಕ್ತಿಯ ಶಸ್ತ್ರ ಚಿಕಿತ್ಸೆಗಾಗಿ ಮಧ್ಯರಾತ್ರಿ 1 ಗಂಟೆಗೆ ಯುವಕರಿಂದ ರಕ್ತದಾನ Read More »

ಕರಾವಳಿ

ಗೃಹರಕ್ಷಕರ ಸೇವೆ ಶ್ಲಾಘನೀಯ ➤ ಡಾ|| ರಾಜೇಂದ್ರ ಕೆ.ವಿ.

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 07: ದಕ್ಷಿಣ ಕನ್ನಡ ಜಿಲ್ಲಾ ಗೃಹಕ್ಷಕ ದಳ ಕಛೇರಿಯಲ್ಲಿ 58ನೇ ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆ ಡಿ. 06ರ ರವಿವಾರ ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾ ಕಚೇರಿ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ|| ರಾಜೇಂದ್ರ ಕೆ.ವಿ.(I.A.S.) ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಬೆಳ್ಳಾರೆ ಪ್ರಭಾರ ಘಟಕಾಧಿಕಾರಿ ವಸಂತ ಗೃಹರಕ್ಷಕರಿಗೆ ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು. ನಂತರ ಗೃಹರಕ್ಷಕರನ್ನು

ಗೃಹರಕ್ಷಕರ ಸೇವೆ ಶ್ಲಾಘನೀಯ ➤ ಡಾ|| ರಾಜೇಂದ್ರ ಕೆ.ವಿ. Read More »

ಕರಾವಳಿ, ಕರ್ನಾಟಕ

ಉಡುಪಿ :ಸ್ವಚ್ಛತಾ ಸೇವಾ ಕೈಂಕರ್ಯದಲ್ಲಿ ಮಂಗಳಮುಖಿಯರ ಸಾಥ್

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 07: ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ ಮಂಗಳಮುಖಿಯರು ಗಿಡ ನೆಟ್ಟು, ಸ್ವಚ್ಛತಾ ಸ್ವಚ್ಛತಾ ಸೇವಾ ಕೈಂಕರ್ಯದಲ್ಲಿ ಕೈಜೋಡಿಸಿದ್ದಾರೆ.ಹೀಗೆ ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಂಡವರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು. ಪಂಚವರ್ಣ ಯುವಕ ಮಂಡಲದ ವಾರದ ಸ್ವಚ್ಛತಾ ಕಾರ್ಯಕ್ರಮ ಇದು. 63ನೇ ವಾರದ ಸ್ವಚ್ಛತಾ ಕಾರ್ಯಕ್ರಮವನ್ನು ಭಿನ್ನವಾಗಿ ಆಯೋಜಿಸಲಾಗಿತ್ತು. ಪ್ರತಿ ಭಾನುವಾರ ಪಂಚವರ್ಣ ಯುವಕ ಮಂಡಲ ಸ್ವಚ್ಛತಾ ಕಾರ್ಯಕ್ರಮ ನಡೆಸುತ್ತಿದೆ. ಸ್ಥಳೀಯ ಸಂಘಟನೆಗಳೊಂದಿಗೆ ಕೋಟದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ಮಾರ್ಗದರ್ಶನದಲ್ಲಿ ನಿನ್ನೆ ಮಂಗಳಮುಖಿಯರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸುವ

ಉಡುಪಿ :ಸ್ವಚ್ಛತಾ ಸೇವಾ ಕೈಂಕರ್ಯದಲ್ಲಿ ಮಂಗಳಮುಖಿಯರ ಸಾಥ್ Read More »

ಕರಾವಳಿ
Scroll to Top