ಕರಾವಳಿ

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತನಿಖಾ ದಳದಿಂದ ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.22: ರಾಷ್ರ್ಟೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಆಹಾರ ಸುರಕ್ಷತಾ ಇಲಾಖೆ ಮತ್ತು ಊರ್ವಸ್ಟೋರ್ ಪೊಲೀಸ್ ಠಾಣೆ ಅಧಿಕಾರಿಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತನಿಖಾ ದಳ ನಗರದಲ್ಲಿ ಕಾರ್ಯಾಚರಣೆ ನಡೆಸಿತು. ಕಾರ್ಯಾಚರಣೆಯಲ್ಲಿ ಆಹಾರ ಸುರಕ್ಷತಾಧಿಕಾರಿ ರಾಜು, ಸಿಪಿಸಿ ಬಸವರಾಜು, ಜಿಲ್ಲಾ ಸಲಹೆಗಾರ ಡಾ.ಹನುಮಂತರಾಯಪ್ಪ, ಆಪ್ತ ಸಮಾಲೋಚಕ ವಿಜಯ್ ಕುಮಾರ್, ವಿದ್ಯಾ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು.  

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತನಿಖಾ ದಳದಿಂದ ಕಾರ್ಯಾಚರಣೆ Read More »

ಕರಾವಳಿ

ಮಂಗಳೂರು: ಚುನಾವಣಾ ವೇಳೆ ಶಾಲೆಯಲ್ಲಿ ಬೆಳಕಿಲ್ಲದೆ ಪರದಾಡಿದ ಚುನಾವಣಾ ಸಿಬ್ಬಂದಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.22. ಇಂದು ನಡೆಯುತ್ತಿರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬೆಳಕಿಲ್ಲದೆ  ಚುನಾವಣಾ ಸಿಬ್ಬಂದಿ ಪರದಾಡಿದ ಘಟನೆ ಮಂಗಳೂರು ತಾಲೂಕಿನ ಕುತ್ತಾರು ಶಾಲೆಯಲ್ಲಿ ನಡೆದಿದೆ. ಬೆಳಗ್ಗೆ ಸುಮಾರು 4.30 ರಿಂದ ಪವರ್ ಕಟ್ ಆಗಿದ್ದ ಪರಿಣಾಮ ಕ್ಯಾಂಡಲ್ ಮತ್ತು ಮೊಬೈಲ್ ಟಾರ್ಚ್‌ ಗಳನ್ನು ಹೊತ್ತಿಸುವ ಮೂಲಕ ಮೂಲಕ ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾ ಬೆಳಕಿಲ್ಲದೆ ಚುನಾವಣಾ ಸಿಬ್ಬಂದಿ ಪರದಾಡುತ್ತಿದ್ದಾರೆ.

ಮಂಗಳೂರು: ಚುನಾವಣಾ ವೇಳೆ ಶಾಲೆಯಲ್ಲಿ ಬೆಳಕಿಲ್ಲದೆ ಪರದಾಡಿದ ಚುನಾವಣಾ ಸಿಬ್ಬಂದಿ Read More »

ಕರಾವಳಿ, ಕರ್ನಾಟಕ

ಟಿಪ್ಪರ್‌ ಡಿಕ್ಕಿಯಾಗಿ RSS‌‌ ಹಿರಿಯ ಕಾರ್ಯಕರ್ತನ ಮೃತ್ಯು ಪ್ರಕರಣ ➤ ಪರಾರಿಯಾಗಿದ್ದ ಟಿಪ್ಪರ್‌ ಚಾಲಕನ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.22: ಡಿ.15ರ ಮಂಗಳವಾರ ಮುಂಜಾನೆ ಮಾಣಿ-ಮೈಸೂರು ರಸ್ತೆಯ ಕಬಕ ಸಮೀಪದ ಪೋಳ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಹಿರಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ವೆಂಕಟರಮಣ ಹೊಳ್ಳ ಅವರ ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಟಿಪ್ಪರ್‌ ಚಾಲಕನನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮರಳು ಲೋಡ್‌‌‌ಗಾಗಿ ಚರಣ್‌ ಮಂಗಳೂರು ಕಡೆ ತೆರಳುತ್ತಿದ್ದ ಸಂದರ್ಭ ಪೋಳ್ಯ ಸಮೀಪ ಟಿಪ್ಪರ್‌-ಬೈಕ್‌‌ ಮಧ್ಯೆ ಅಪಘಾತ ಸಂಭವಿಸಿತ್ತು. ಘಟನೆ ನಡೆದ ನಂತರ ಚಾಲಕ ಟಿಪ್ಪರ್‌ನೊಂದಿಗೆ ಪರಾರಿಯಾಗಿದ್ದ. ಪ್ರಾರಂಭದಲ್ಲಿ

ಟಿಪ್ಪರ್‌ ಡಿಕ್ಕಿಯಾಗಿ RSS‌‌ ಹಿರಿಯ ಕಾರ್ಯಕರ್ತನ ಮೃತ್ಯು ಪ್ರಕರಣ ➤ ಪರಾರಿಯಾಗಿದ್ದ ಟಿಪ್ಪರ್‌ ಚಾಲಕನ ಬಂಧನ Read More »

ಕರಾವಳಿ

ಬಂಟ್ವಾಳ: ಎಸ್ ಐಗಳು, ಸಿಬ್ಬಂದಿ ಮೇಲೆಯೇ ಕಾರು ಹಾಯಿಸಿದ ಪ್ರಕರಣ ➤ ಇಬ್ಬರಿಗೆ ಜೈಲು ಶಿಕ್ಷೆ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.22: ಎರಡೂವರೆ ವರ್ಷಗಳ ಹಿಂದೆ ಬಂಟ್ವಾಳದ ಮಣಿಹಳ್ಳದಲ್ಲಿ ಮಧ್ಯರಾತ್ರಿ ಪೊಲೀಸ್ ಸಿಬ್ಬಂದಿ ಮೇಲೆ ಕಾರು ಚಲಾಯಿಸಿದ್ದು ಹಾಗೂ ಹಲ್ಲೆ ನಡೆಸಲು ಬಂದ ಪ್ರಕರಣಕ್ಕೆ ಸಂಬಂಧಿಸಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಸೋಮವಾರ ತೀರ್ಪು ನೀಡಿದ್ದು, ಆರೋಪಿಗಳಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ತಲಾ 3 ಸಾವಿರ ರೂ. ದಂಡ ವಿಧಿಸಿದ್ದಾರೆ. ಮಾರಿಪಳ್ಳ ನಿವಾಸಿ ಸದ್ದಾಂ ಹುಸೈನ್, ಕುಪ್ಪೆಪದವು ನಿವಾಸಿ ಮಹಮ್ಮದ್ ಇರ್ಷಾದ್ ಶಿಕ್ಷೆಗೊಳಪಟ್ಟವರು. ಮತ್ತೋರ್ವ ಆರೋಪಿ ಮಹಮ್ಮದ್

ಬಂಟ್ವಾಳ: ಎಸ್ ಐಗಳು, ಸಿಬ್ಬಂದಿ ಮೇಲೆಯೇ ಕಾರು ಹಾಯಿಸಿದ ಪ್ರಕರಣ ➤ ಇಬ್ಬರಿಗೆ ಜೈಲು ಶಿಕ್ಷೆ ಪ್ರಕಟ Read More »

ಕರಾವಳಿ

ಸುರತ್ಕಲ್: ತಾನೇ ಬೀಸಿದ ಬಲೆಗೆ ಸಿಲುಕಿ ಮೀನುಗಾರ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.22:  ತಾನೇ ಬೀಸಿದ ಬಲೆಗೆ ಸಿಲುಕಿ ಮೀನುಗಾರನೋರ್ವ ಸಾವನ್ನಪ್ಪಿದ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆ ಕೊಪ್ಲ ಸಮುದ್ರದಲ್ಲಿ ಸೋಮವಾರ ನಡೆದಿದೆ. ಲೋಕೇಶ್ ಕೋಟ್ಯಾನ್(40) ಬಲೆಗೆ ಸಿಲುಕಿ ಮೃತ ದುರ್ದೈವಿ. ಲೋಕೇಶ್ ಸಮುದ್ರ ದಡದಲ್ಲಿ ಸುರಕ್ಷತೆಯ ರಬ್ಬರ್ ಟ್ಯೂಬ್ ಹಾಕಿ ಈಜಿ ಬಲೆ ಬಿಡುತ್ತಿದ್ದರು. ಈ ವೇಳೆ ಬೃಹತ್ ತೆರೆ ಬಂದು ಆಕಸ್ಮಿಕವಾಗಿ ಬಲೆಯು ಲೋಕೇಶ್‌ ಅವರ ಕಾಲಿಗೆ ಸಿಲುಕಿಕೊಂಡಿತ್ತು. ತಕ್ಷಣವೇ ಬಲೆ ಬಿಡಿಸಲು ಯತ್ನಿಸಿದಾಗ ಟ್ಯೂಬ್ ಜಾರಿ ಈ

ಸುರತ್ಕಲ್: ತಾನೇ ಬೀಸಿದ ಬಲೆಗೆ ಸಿಲುಕಿ ಮೀನುಗಾರ ಮೃತ್ಯು Read More »

ಕರಾವಳಿ

ಬೋಟನ್ನು ವಶಕ್ಕೆ ಪಡೆದ ಪೊಲೀಸರ ಅಪಹರಣ ➤ ಸಿನಿಮಾ ಶೈಲಿಯಲ್ಲಿ ಎಸ್ಕೇಪ್ ಆದ ಮಂಗಳೂರಿನ ಮೀನುಗಾರರು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.22. ಸೂಕ್ತ ದಾಖಲೆಗಳಿಲ್ಲದೆ ಮಂಜೇಶ್ವರ ಸರಹದ್ದಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟನ್ನು ವಶಕ್ಕೆ ಪಡೆದ ಕೇರಳದ ಇಬ್ಬರು ಪೊಲೀಸರನ್ನೇ ಮಂಗಳೂರಿನ ಮೀನುಗಾರರ ತಂಡವೊಂದು ಅಪಹರಿಸಿದ ಘಟನೆ ಸೋಮವಾರದಂದು ಮಂಗಳೂರಿನಲ್ಲಿ ನಡೆದಿದೆ. ಕುಂಬಳೆಯ ಕರಾವಳಿ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಕೆ.ವಿ. ರಾಜೀವ್ ಕುಮಾರ್ ನೇತೃತ್ವದ ತಂಡವು ಸೋಮವಾರ ತಪಾಸಣೆ ನಡೆಸುತ್ತಿದ್ದ ಸಂದರ್ಭ ಮಂಜೇಶ್ವರ ಸಮುದ್ರದಲ್ಲಿ ಕರ್ನಾಟಕ ನೋಂದಣಿಯ ಬೋಟ್ ಕಂಡುಬಂದಿದ್ದು, ಈ ವೇಳೆ ಅದರ ದಾಖಲೆಗಳನ್ನು ಪರಿಶೀಲಿಸಿದಾಗ ಸಂಶಯ ಉಂಟಾದ ಹಿನ್ನೆಲೆಯಲ್ಲಿ ಕೇರಳ ಪೊಲೀಸರು

ಬೋಟನ್ನು ವಶಕ್ಕೆ ಪಡೆದ ಪೊಲೀಸರ ಅಪಹರಣ ➤ ಸಿನಿಮಾ ಶೈಲಿಯಲ್ಲಿ ಎಸ್ಕೇಪ್ ಆದ ಮಂಗಳೂರಿನ ಮೀನುಗಾರರು Read More »

ಕರಾವಳಿ

ಮಂಗಳೂರು: ಯುವ ಸಬಲೀಕರಣ ನಿಗಮ‌ ಸ್ಥಾಪಿಸಲು ‘ಯುವ ಮುನ್ನಡೆ’ಯಿಂದ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.21: ಯುವ ಸಬಲೀಕರಣ ನಿಗಮ ಸ್ಥಾಪನೆ, ಯುವಜನ ಹಕ್ಕು ಹಾಗೂ ಯುವಜನ ಆಯೋಗ ಜಾರಿಗೊಳಿಸುವಂತೆ ನಗರದ ಯುವ ಮುನ್ನಡೆಯ ಯುವಿಗಳು ಜಿಲ್ಲಾಧಿಕಾರಿ ಸೇರಿದಂತೆ ಸಂಸದ, ಸಚಿವ ಹಾಗೂ ಶಾಸಕರಿಗೆ ಮನವಿ‌ ಸಲ್ಲಿಸಿದರು. ಯುವ ಮುನ್ನಡೆ ತಂಡವು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿಯವರ ಕಚೇರಿಗಳಿಗೆ ಭೇಟಿ ನೀಡಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ,

ಮಂಗಳೂರು: ಯುವ ಸಬಲೀಕರಣ ನಿಗಮ‌ ಸ್ಥಾಪಿಸಲು ‘ಯುವ ಮುನ್ನಡೆ’ಯಿಂದ ಮನವಿ Read More »

ಕರಾವಳಿ

ಕಡಬ :ಬಲ್ಯ-ದೇರಾಜೆ 2ನೇ ವಾರ್ಡ್ ಸಂಪಡ್ಕ ಕಾಲೊನಿ ನಿವಾಸಿಗಳಿಂದ ಚುನಾವಣೆ ಬಹಿಷ್ಕಾರ

(ನ್ಯೂಸ್ ಕಡಬ) newskadaba.com ಕಡಬ, ಡಿ.21: ಇಲ್ಲಿನ ಬಲ್ಯ ಗ್ರಾಮದ ದೇರಾಜೆ 2ನೇ ವಾರ್ಡಿನ ಸಂಪಡ್ಕ ಪ.ಜಾತಿ ಕಾಲೊನಿ ನಿವಾಸಿಗಳು ತಮ್ಮೂರಿನ ನಾನಾ ಬೇಡಿಕೆಗಳನ್ನು ಈಡೇರಿಸದಿದ್ದರೆ ಪಂಚಾಯತ್ ಚುನಾವಣೆ ಬಹಿಸ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಕಾಲೊನಿಯ ಸುಮಾರು 15 ಕುಟುಂಬಗಳು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ತಮ್ಮ ಕಾಲೊನಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡದಿರುವುದು, ಸಾರ್ವಜನಿಕ ರಸ್ತೆ ಹದಗೆಟ್ಟಿರುವುದು, ಶೌಚಾಲಯ ಪಾಳು ಬಿದ್ದರೂ ಸರಿಪಡಿಸದೆ ಇರುವುದು, ಪರಿಶಿಷ್ಟ ಜಾತಿಯವರ ರುದ್ರಭೂಮಿ ಅಭಿವೃದ್ದಿ ಮಾಡದಿರುವುದು, ಕಾಲೊನಿ ಹೆಸರಿನಲ್ಲಿ ಬೇರೆಡೆ ಸೌಲಭ್ಯಗಳನ್ನು ಒದಗಿಸುವುದು

ಕಡಬ :ಬಲ್ಯ-ದೇರಾಜೆ 2ನೇ ವಾರ್ಡ್ ಸಂಪಡ್ಕ ಕಾಲೊನಿ ನಿವಾಸಿಗಳಿಂದ ಚುನಾವಣೆ ಬಹಿಷ್ಕಾರ Read More »

ಕರಾವಳಿ

ಇಂದು 10ನೇ ವರ್ಷದ ಪ್ರತಿಷ್ಠಾ ವರ್ಧಂತ್ಯತ್ಸವ ➤ ನೂಜಿ ಶ್ರೀ ಉಳ್ಳಾಲ್ತಿ ದೈವಸ್ಥಾನ; ಹಸಿರು ಕಾಣಿಕೆ ಸಮರ್ಪಣೆ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಡಿ.21:ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ 10ನೇ ವರ್ಷದ ವರ್ಧಂತ್ಯುತ್ಸವ ಡಿ.22ರಂದು ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜರುಗಲಿದೆ. ಆ ಪ್ರಯುಕ್ತ ಸೋಮವಾರ ಉಳ್ಳಾಲ್ತಿ ಅಮ್ಮನವರ ಸನ್ನಿಧಿಗೆ ಹಸಿರು ಕಾಣಿಕೆ ಸಮರ್ಪಿಸಲಾಯಿತು.   ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಪ್ರಸಾದ ವಿತರಿಸಲಾಯಿತು. ಅರ್ಚಕ ಕೃಷ್ಣ ಹೆಬ್ಬಾರ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಮೃತ್ಯುಂಜಯ ಬೀಡೆ ಕೆರೆತೋಟ, ಉತ್ಸವ ಸಮಿತಿ ಅಧ್ಯಕ್ಷ

ಇಂದು 10ನೇ ವರ್ಷದ ಪ್ರತಿಷ್ಠಾ ವರ್ಧಂತ್ಯತ್ಸವ ➤ ನೂಜಿ ಶ್ರೀ ಉಳ್ಳಾಲ್ತಿ ದೈವಸ್ಥಾನ; ಹಸಿರು ಕಾಣಿಕೆ ಸಮರ್ಪಣೆ Read More »

ಕರಾವಳಿ

ಸುಳ್ಯ :ಬಸ್‌ನಲ್ಲೇ ಹೃದಯಾಘಾತದಿಂದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಅರಂತೋಡು, ಡಿ.21: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃಪಟ್ಟ ಘಟನೆ ಸುಳ್ಯದಲ್ಲಿ ನಡೆದಿದೆ.   ಮೃತ ವ್ಯಕ್ತಿಯನ್ನು ಅರಂತೋಡು ಗ್ರಾಮದ ಕಟ್ಟೆಕೋಡಿ ನಿವಾಸಿ ಚೌಕರ್ (60 ವರ್ಷ) ಎಂದು ಗುರುತಿಸಲಾಗಿದೆ ಕುಶಾಲ ನಗರದಿಂದ ಕೆಎಸ್‌ಆರ್ಟಿಸಿ ಬಸ್ಸಿನಲ್ಲಿ ಹೊರಟಿದ್ದ ಅವರು ಸುಳ್ಯಕ್ಕೆ ತಲುಪುವ ವೇಳೆಯಲ್ಲಿ ಬಸ್ಸಿನಲ್ಲಿ ಕುಳಿತ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು.  

ಸುಳ್ಯ :ಬಸ್‌ನಲ್ಲೇ ಹೃದಯಾಘಾತದಿಂದ ವ್ಯಕ್ತಿ ಮೃತ್ಯು Read More »

ಕರಾವಳಿ
Scroll to Top