ಕರಾವಳಿ

ಕಡಬ ತಾಲೂಕಿನಲ್ಲಿ ಶಾಂತಿಯುತ ಮತದಾನ ➤ ಒಟ್ಟು 77.61 ಮತ ಚಲಾವಣೆ

(ನ್ಯೂಸ್ ಕಡಬ) newskadaba.com ಕಡಬ, ಡಿ.27. ತಾಲೂಕಿನೆಲ್ಲೆಡೆ ಗ್ರಾಮ ಪಂಚಾಯತ್ ಚುನಾವಣೆಯು ಯಶಸ್ವಿಯಾಗಿ ನಡೆದಿದ್ದು, ಶಾಂತಿಯುತ ಮತದಾನವಾಗಿದೆ. ಕಡಬ ತಾಲೂಕಿನಲ್ಲಿ ಒಟ್ಟು 91310 ಮತದಾರರಿದ್ದು, ಅದರಲ್ಲಿ 70870 (77.61 ಶೇಕಡಾ) ಮತ ಚಲಾವಣೆಯಾಗಿದೆ. ಮತದಾನದ ಬಂದೋಬಸ್ತ್ ಗಾಗಿ 1 ಕೆಎಸ್ಆರ್ಪಿ ತುಕಡಿ, 3 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸೇರಿದಂತೆ ಒಟ್ಟು 200 ಪೊಲೀಸರು ಕರ್ತವ್ಯ ನಿರ್ವಹಿಸಿದ್ದಾರೆ.

ಕಡಬ ತಾಲೂಕಿನಲ್ಲಿ ಶಾಂತಿಯುತ ಮತದಾನ ➤ ಒಟ್ಟು 77.61 ಮತ ಚಲಾವಣೆ Read More »

ಕರಾವಳಿ

ಕೇಶವಾನಂದ ಭಾರತಿ ಶ್ರೀಗಳ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ ➤ ಎಡನೀರು ಮಠದ ಪೀಠಾಧಿಪತಿ ಸಚ್ಚಿದಾನಂದ ಭಾರತಿ ಶ್ರೀ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.27: 400 ವರ್ಷಗಳ ಪುರಾತನ ಕಾಸರಗೋಡಿನ ಎಡನೀರು ಮಠದ ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಕೇಶವಾನಂದ ಭಾರತಿ ಶ್ರೀಗಳ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ಅಧ್ಯಯನ ಪೀಠ ಸ್ಥಾಪಿಸುವ ಬಹುದೊಡ್ಡ ಬಯಕೆ ಇದೆ ಎಂದು ಎಡನೀರು ಸಂಸ್ಥಾನದ ನೂತನ ಪೀಠಾಧಿಪತಿ ಸಚ್ಚಿದಾನಂದ ಭಾರತಿ ಶ್ರೀಗಳು ತಿಳಿಸಿದರು.ಅವರು ಶನಿವಾರ ಸಂಜೆ ನಗರದ ಗಣಪತಿ ಹೈಸ್ಕೂಲ್ ರಸ್ತೆಯಲ್ಲಿರುವ ಶ್ವೇತಾ ಜುವೆಲ್ಲರ್ಸ್ ಸ್ವರ್ಣಾಭರಣ ಮಳಿಗೆಗೆ ಭೇಟಿ ನೀಡಿದ ಸಂದರ್ಭ ಆಶೀರ್ವಚನ ನೀಡಿದರು. ಕೇಶವಾನಂದ ಭಾರತಿ ಶ್ರೀಗಳು ತಮ್ಮ ಕಾರ್ಯಾವೈಕರಿಯಿಂದ

ಕೇಶವಾನಂದ ಭಾರತಿ ಶ್ರೀಗಳ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ ➤ ಎಡನೀರು ಮಠದ ಪೀಠಾಧಿಪತಿ ಸಚ್ಚಿದಾನಂದ ಭಾರತಿ ಶ್ರೀ Read More »

ಕರಾವಳಿ

ಕೆ.ವಿ.ಜಿ. ಸ್ಥಾಪಕರ ದಿನಾಚರಣೆ ಸಮಿತಿ ವತಿಯಿಂದ ಕುರುಂಜಿ ಪುತ್ಥಳಿಗೆ ಹಾರಾರ್ಪಣೆ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ.27: ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಸಂಸ್ಥಾಪಕ, ಶಿಕ್ಷಣ ಬ್ರಹ್ಮ ಡಾ. ಕುರುಂಜಿ ವೆಂಕಟ್ರಮಣ ಗೌಡರ 92 ನೇ ಜನ್ಮದಿನಾಚರಣೆಯನ್ನು ಸ್ಥಾಪಕರ ದಿನಾಚರಣೆ ಸಮಿತಿ ವತಿಯಿಂದ ಕೆ.ವಿ.ಜಿ. ಕ್ಯಾಂಪಸ್‌ನಲ್ಲಿರುವ ಡಾ. ಕುರುಂಜಿಯವರ ಪುತ್ಥಳಿಗೆ ಹಾರಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಹಾರಾರ್ಪಣೆ ಮಾಡಿ ಮಾತನಾಡಿ, ಡಾ. ಕುರುಂಜಿಯವರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳುವ ಮೂಲಕ ಅವರ ಸಂಸ್ಮರಣೆ ಮಾಡಿದರೆ ಹೆಚ್ಚು ಅರ್ಥಪೂರ್ಣವಾಗುತ್ತದೆ. ಪ್ರಪಂಚದಾದ್ಯಂತ

ಕೆ.ವಿ.ಜಿ. ಸ್ಥಾಪಕರ ದಿನಾಚರಣೆ ಸಮಿತಿ ವತಿಯಿಂದ ಕುರುಂಜಿ ಪುತ್ಥಳಿಗೆ ಹಾರಾರ್ಪಣೆ Read More »

ಕರಾವಳಿ

ಬಿಳಿನೆಲೆ: ಮತಗಟ್ಟೆ ಅಧಿಕಾರಿಗಳ ಎಡವಟ್ಟು ➤ ಅಭ್ಯರ್ಥಿಗಳು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ

ಕಡಬ, ಡಿ.27. ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಅಧಿಕಾರಿಗಳ ಎಡವಟ್ಟಿನಿಂದಾಗಿ ಮತದಾರರ ಪಟ್ಟಿಯಲ್ಲಿ ಕೆಲವು ಮತದಾರರ ಹೆಸರಿಲ್ಲ ಎನ್ನುವ ವಿಚಾರವು ಗೊಂದಲಕ್ಕೆ ಕಾರಣವಾಯಿತು.   ಅಭ್ಯರ್ಥಿಗಳ ಬೆಂಬಲಿಗರು ಮತಗಟ್ಟೆಯ ಆವರಣದೊಳಗೆ ಬಂದು ಮತಗಟ್ಟೆ ಅಧಿಕಾರಿಯೊಂದಿಗೆ ಮಾತಿನ ಚಕಮಕಿ ನಡೆಸಿದರು. ಸುದ್ದಿ ತಿಳಿದ ಕಡಬ ತಹಸೀಲ್ದಾರ್ ಅನಂತ ಶಂಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದರು. ವಾರ್ಡ್ ವಿಂಗಡಣೆ ಸಂದರ್ಭ ಮತ ಪಟ್ಟಿ ಪರಿಷ್ಕರಣೆ ಮಾಡಿ ಕೆಲವು ಮತದಾರರ ಹೆಸರನ್ನು ಇನ್ನೊಂದು ವಾರ್ಡ್ ಗೆ ಸೇರಿಸಲಾಗಿತ್ತು.

ಬಿಳಿನೆಲೆ: ಮತಗಟ್ಟೆ ಅಧಿಕಾರಿಗಳ ಎಡವಟ್ಟು ➤ ಅಭ್ಯರ್ಥಿಗಳು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ Read More »

ಕರಾವಳಿ

ಕಡಬ ತಾಲೂಕಿನಲ್ಲಿ 49 ಶೇಕಡಾ ಮತದಾನ

(ನ್ಯೂಸ್ ಕಡಬ) newskadaba.com ಕಡಬ, ಡಿ.27. ತಾಲ್ಲೂಕಿನೆಲ್ಲೆಡೆ ಬಿರುಸಿನ ಮತದಾನವಾಗಿದ್ದು, ಇದುವರೆಗೆ 49% ಮತ ಚಲಾವಣೆಯಾಗಿದೆ. ಕೆಲವು ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾದರೆ, ಇನ್ನು ಕೆಲವೆಡೆ ಮತದಾರರು ಸರತಿ ಸಾಲಿನಲ್ಲಿ ನಿಂತು ಕಾಯುವುದು ಕಂಡುಬಂತು. ಇನ್ನು ಬಿಳಿನೆಲೆ ಮತಗಟ್ಟೆಯಲ್ಲಿ 94 ವರ್ಷದ ನಾರಾಯಣ ನಾಯರ್ ರವರು ವಾಕರ್ ಮೂಲಕ ಆಗಮಿಸಿ ಮತ ಚಲಾಯಿಸಿದರು.

ಕಡಬ ತಾಲೂಕಿನಲ್ಲಿ 49 ಶೇಕಡಾ ಮತದಾನ Read More »

ಕರಾವಳಿ

ಪುತ್ತೂರು : ವಿದ್ಯುತ್ ಆಘಾತಕ್ಕೆ ಕೇಬಲ್ ಆಪರೇಟರ್ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.27: ಬಿಎಸ್ಸೆನ್ನೆಲ್ ಕೇಬಲ್ ಅಳವಡಿಕೆಗಾಗಿ ವಿದ್ಯುತ್ ಕಂಬ ಏರಿದ್ದ ಕೇಬಲ್ ಆಪರೇಟರ್ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಇಂದು (ರವಿವಾರ) ನಡೆದಿದೆ. ಕೇಬಲ್ ಆಪರೇಟರ್ ಆರ್ಲಪದವು ನಿವಾಸಿ ಪದ್ಮನಾಭ ಪಾಣಾಜೆ(44) ಮೃತಪಟ್ಟವರು.ಪುತ್ತೂರು ನಗರದ ಕೋರ್ಟ್ ರಸ್ತೆಯ ಮೀನು ಮಾರುಕಟ್ಟೆ ಬಳಿಯ ವಿದ್ಯುತ್ ಕಂಬಕ್ಕೆ ಹತ್ತಿದ ವೇಳೆ ಈ ದುರ್ಘಟನೆ ಸಂಭವಿಸಿದೆ.ಪದ್ಮನಾಭ ಅವರು ಬಿಎಸ್ಸೆನ್ನೆಲ್ ಗುತ್ತಿಗೆದಾರ ಸಂಸ್ಥೆ ಶ್ರೀ ಅಸೋಸಿಯೇಟೆಡ್‌ನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು. ಇಂದು ಬೆಳಗ್ಗೆ ಕೆಲಸ

ಪುತ್ತೂರು : ವಿದ್ಯುತ್ ಆಘಾತಕ್ಕೆ ಕೇಬಲ್ ಆಪರೇಟರ್ ಮೃತ್ಯು Read More »

ಕರಾವಳಿ

ಬೆಳ್ಳಾರೆ :ಚಿಕ್ಕಪ್ಪನ‌ ಮಗಳನ್ನೇ ಅತ್ಯಾಚಾರಗೈದ ಪ್ರಕರಣ ➤ ಬಿಜೆಪಿ ಬೆಂಬಲಿತ ಗ್ರಾಪಂ ಅಭ್ಯರ್ಥಿ ಅರೆಷ್ಟ್

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಡಿ.27: ತನ್ನ ಚಿಕ್ಕಪ್ಪನ ಅಪ್ರಾಪ್ತ ಮಗಳನ್ನು ಅತ್ಯಾಚಾರ ಎಸಗಿದ ಆರೋಪದಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಯೋರ್ವನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕಲ್ಮಡ್ಕ ಗ್ರಾಮದ ವಾರ್ಡ್–1ರಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹುಕ್ರಪ್ಪ ಯಾನೆ ನಾರಾಯಣ ಪುಚ್ಚಮ ಎಂದು ಪೊಲೀಸ್ ಮೂಲಗಳು ಮಾಹಿತಿ‌ ನೀಡಿದೆ.ಆರೋಪಿ ತನ್ನ ಚಿಕ್ಕಪ್ಪನ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದು, ದೂರಿನನ್ವಯ ಪೊಲೀಸರು ಆರೋಪಿಯನ್ನು ಚುನಾವಣೆಯ

ಬೆಳ್ಳಾರೆ :ಚಿಕ್ಕಪ್ಪನ‌ ಮಗಳನ್ನೇ ಅತ್ಯಾಚಾರಗೈದ ಪ್ರಕರಣ ➤ ಬಿಜೆಪಿ ಬೆಂಬಲಿತ ಗ್ರಾಪಂ ಅಭ್ಯರ್ಥಿ ಅರೆಷ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಡಿವೈಎಫ್‌ಐ ಕಾರ್ಯಕರ್ತನ ಕೊಲೆ ಖಂಡಿಸಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.27: ಡಿವೈಎಫ್‌ಐ ಕಾರ್ಯಕರ್ತ ಅಬ್ದುಲ್ ರಹ್ಮಾನ್‌ ಅವರ ಕೊಲೆ ಖಂಡಿಸಿ ಡಿವೈಎಫ್‌ಐ ಕೊಡ್ಲಮೊಗರು ಗ್ರಾಮ ಸಮಿತಿ ನೇತೃತ್ವದಲ್ಲಿ ಬಾಕ್ರಬೈಲ್‌ ಪೇಟೆಯಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾತನಾಡಿದ ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯ, ಸಿಪಿಎಂ ಮುಖಂಡ ಮೊಯ್ದಿನ್ ಕುಂಞಿ ತಲಕ್ಕಿ, ಕೇರಳದ ಎಲ್‌ಡಿಎಫ್ ಸರಕಾರದ ಸಾಧನೆಯನ್ನು ದೇಶ- ವಿದೇಶಗಳಲ್ಲಿ ಕೊಂಡಾಡುವ ಈ ಸಂದರ್ಭ ಹತಾಶೆಗೊಂಡಿರುವ ಮುಸ್ಲಿಂ ಲೀಗ್, ಅಮಾಯಕ ಮುಸ್ಲಿಂ ಯುವಕರನ್ನೇ ಟಾರ್ಗೆಟ್ ಮಾಡಿ ಕೊಲೆ ರಾಜಕೀಯ ನಡೆಸಿರುವುದು ಖಂಡನೀಯ ಎಂದರು.ಸಿಪಿಎಂ

ಡಿವೈಎಫ್‌ಐ ಕಾರ್ಯಕರ್ತನ ಕೊಲೆ ಖಂಡಿಸಿ ಪ್ರತಿಭಟನೆ Read More »

ಕರಾವಳಿ

ಧರ್ಮಸ್ಥಳ :ಸರ್ಕಾರಿ ಬಸ್ ಹಾಗೂ ರಿಕ್ಷಾ ಚಾಲಕರ ನಡುವೆ ಹೊಡೆದಾಟ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.27:  ಸರ್ಕಾರಿ ಬಸ್ ಹಾಗೂ ರಿಕ್ಷಾ ಚಾಲಕರ ನಡುವೆ ನಡೆದ ವಾಗ್ವಾದ‌ ನಡೆದು ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ. ಧರ್ಮಸ್ಥಳದ ಹೊಸ ಬಸ್ ಸ್ಟ್ಯಾಂಡ್ ವಠಾರದಲ್ಲಿ ಈ ಘಟನೆ ನಡೆದಿದೆ.   ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಂದಿದ್ದ ಬಸ್ಸು ನಿಲ್ಲಿಸಿದ ಜಾಗಕ್ಕೆ ಸಂಬಂಧಿಸಿದಂತೆ ಸರಕಾರಿ ಬಸ್ ಚಾಲಕರು ಮತ್ತು ರಿಕ್ಷಾ ಚಾಲಕರ ಮದ್ಯೆ ವಾಗ್ವಾದ ನಡೆದಿತ್ತು. ವಾಗ್ವಾದ ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಟವಾಗಿದೆ .ಆ ನಂತರ ಸರಕಾರಿ

ಧರ್ಮಸ್ಥಳ :ಸರ್ಕಾರಿ ಬಸ್ ಹಾಗೂ ರಿಕ್ಷಾ ಚಾಲಕರ ನಡುವೆ ಹೊಡೆದಾಟ Read More »

ಕರಾವಳಿ

ಪುತ್ತೂರು: ಚುನಾವಣಾಧಿಕಾರಿಯಿಂದ ಮತಗಟ್ಟೆಗಳ ಭೇಟಿ ➤ ಅಭ್ಯರ್ಥಿಗಳ ಚಿಹ್ನೆ ಇರುವ ಪತ್ರ ಹಂಚಿಕೆ ಪತ್ತೆ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.27:ಇಲ್ಲಿನ ಹಂಟ್ಯಾರು ಶಾಲಾ ಮತಗಟ್ಟೆಯ ವಠಾರದಲ್ಲಿ ಅಭ್ಯರ್ಥಿಗಳ ಚಿಹ್ನೆಯ‌ ಪತ್ರ ಹಂಚುತ್ತಿರುವುದು ಪತ್ತೆಯಾಗಿದೆ. ಚುನಾವಣಾಧಿಕಾರಿ ಡಾ.ಯತೀಶ್ ಉಳ್ಳಾಲ್ ಗ್ರಾಮ ಪಂಚಾಯತ್ ಚುನಾವಣೆಯ ಮತಗಟ್ಟೆಗಳನ್ನು ಭೇಟಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾಗ ಮತದಾರರೊಬ್ಬರ ಕೈಯಲ್ಲಿದ್ದ ಚೀಟಿ ನೋಡಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಚೀಟಿಯ ಬಗ್ಗೆವ್ಯಕ್ತಿಯನ್ನು ವಿಚಾರಿಸಿ ಬೂತ್ ಗೆ ದಾಳಿ ಮಾಡಿದಾಗ ಟೇಬಲ್ ನ ಅಡಿಯಲ್ಲಿ ಪಕ್ಷದ ಚಿಹ್ನೆ ಇರುವ ಅಭ್ಯರ್ಥಿಯ ಚೀಟಿನ ಒಂದು ಕಟ್ಟು ಪತ್ತೆಯಾಗಿದೆ.ಈ ಸಂಬಂಧ ಕಾನೂನು ಕ್ರಮ ಜರಗಿಸುವಂತೆ

ಪುತ್ತೂರು: ಚುನಾವಣಾಧಿಕಾರಿಯಿಂದ ಮತಗಟ್ಟೆಗಳ ಭೇಟಿ ➤ ಅಭ್ಯರ್ಥಿಗಳ ಚಿಹ್ನೆ ಇರುವ ಪತ್ರ ಹಂಚಿಕೆ ಪತ್ತೆ Read More »

ಕರಾವಳಿ
Scroll to Top