ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಗೆ ಮಾನ್ಯ ಡಿಜಿಪಿ ಭೇಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 04.  ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ  ದಳ ಮೇರಿಹಿಲ್ ಮಂಗಳೂರು ಕಛೇರಿಗೆ  ಡಾ|| ಅಮರ್ ಕುಮಾರ್ ಪಾಂಡೆ, ಐಪಿಎಸ್ ಆರಕ್ಷಕ ಮಹಾನಿರ್ದೇಶಕರು   ಹಾಗೂ ಗೃಹರಕ್ಷಕ ದಳದ ಮಹಾ ಸಮಾದೇಷ್ಟರು ಮತ್ತು ನಿರ್ದೇಶಕರು ಪೌರರಕ್ಷಣೆ  ಇವರು ಭೇಟಿ ನೀಡಿದರು.  ಈ ಸಂದರ್ಭದಲ್ಲಿ ಕಛೇರಿ ಕಡತಗಳನ್ನು  ಪರಿಶೀಲಿಸಿದರು. ಕಾಲಕಾಲಕ್ಕೆ  ಗೃಹರಕ್ಷಕರಿಗೆ ಸೂಕ್ತ  ತರಬೇತಿ ನೀಡಬೇಕು ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಮತ್ತು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಗೃಹರಕ್ಷಕರಿಗೆ ಹೆಚ್ಚಿನ […]

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಗೆ ಮಾನ್ಯ ಡಿಜಿಪಿ ಭೇಟಿ Read More »

ಕರಾವಳಿ, ಕರ್ನಾಟಕ

ಮಂಗಳೂರು: ಫಲ್ಗುಣಿ ನದಿಯಲ್ಲಿ ನವಜಾತ ಶಿಶುವಿನ‌ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 03, ನವಜಾತ ಶಿಶುವಿನ ಮೃತದೇಹವೊಂದು ಫಲ್ಗುಣಿ ನದಿಯಲ್ಲಿ ತೇಲುತ್ತಿದ್ದುದನ್ನು ಕಂಡ ಮೀನುಗಾರರು ಈ ಕುರಿತು ಪಣಂಬೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೀನುಗಾರಿಕೆಯಿಂದ ಮರಳುತ್ತಿದ್ದ ಮೀನುಗಾರರಿಗೆ ನದಿಯು ಸಮುದ್ರವನ್ನು ಸೇರುವ ತೋಟ ಬೆಂಗ್ರೆಯಲ್ಲಿ ಮಗುವಿನ ಮೃತದೇಹ ಕಂಡುಬಂದಿದ್ದು, ಮೃತದೇಹವನ್ನು ಮೇಲಕ್ಕೆತ್ತಿದ ಮೀನುಗಾರರು ಪಣಂಬೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಫಲ್ಗುಣಿ ನದಿಯಲ್ಲಿ ನವಜಾತ ಶಿಶುವಿನ‌ ಮೃತದೇಹ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮರ್ಧಾಳ: ಚಲಿಸುತ್ತಿದ್ದ ಡಿಯೋ ವಾಹನದ ಹಿಂಬದಿ ಚಕ್ರ ಸ್ಫೋಟ ➤ ಸವಾರ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಕಡಬ, ಜ.03. ಚಲಿಸುತ್ತಿದ್ದ ಹೋಂಡಾ ಡಿಯೋ ವಾಹನದ ಹಿಂಬದಿ ಚಕ್ರ ಸ್ಫೋಟಗೊಂಡ ಪರಿಣಾಮ ಡಿಯೋ ರಸ್ತೆಗೆಸೆಯಲ್ಪಟ್ಟು ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ಗಾಯಾಳುವನ್ನು ಕಡಬ ತಾಲೂಕಿನ ಕಳಾರ ನಿವಾಸಿ ಅಶ್ರಫ್ ಎಂದು ಗುರುತಿಸಲಾಗಿದೆ. ಅಶ್ರಫ್ ಹೋಂಡಾ ಡಿಯೋ ವಾಹನದಲ್ಲಿ ಕಡಬದಿಂದ ಮರ್ಧಾಳ ಕಡೆಗೆ ತೆಳುತ್ತಿದ್ದ ವೇಳೆ ವಾಹನದ ಹಿಂಬದಿ ಚಕ್ರ ಸ್ಫೋಟಗೊಂಡಿದೆ. ಘಟನೆಯಲ್ಲಿ

ಮರ್ಧಾಳ: ಚಲಿಸುತ್ತಿದ್ದ ಡಿಯೋ ವಾಹನದ ಹಿಂಬದಿ ಚಕ್ರ ಸ್ಫೋಟ ➤ ಸವಾರ ಅಪಾಯದಿಂದ ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ ತಾಲೂಕಿನ ವಿವಿಧೆಡೆ ಉತ್ತಮ ಮಳೆ

(ನ್ಯೂಸ್ ಕಡಬ) newskadaba.com ಕಡಬ, ಜ.03. ಕಡಬ ತಾಲೂಕಿನ ವಿವಿಧೆಡೆ ಭಾನುವಾರ ಸಂಜೆ ವೇಳೆ ಭಾರೀ ಮಳೆಯಾಗಿದ್ದು, ಕೆಲವೆಡೆ ಸಾಧಾರಣ ಮಳೆ ಸುರಿದಿದೆ. ಕಡಬದಲ್ಲಿ ಸಾಧಾರಣ ಮಳೆಯಾದರೆ, ಇಚಿಲಂಪಾಡಿ, ನೂಜಿಬಾಳ್ತಿಲ, ಬಿಳಿನೆಲೆ, ಸುಬ್ರಹ್ಮಣ್ಯ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಆಲಂಕಾರು, ಕೊಯಿಲ, ಸವಣೂರು ಭಾಗದಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದೆ.

ಕಡಬ ತಾಲೂಕಿನ ವಿವಿಧೆಡೆ ಉತ್ತಮ ಮಳೆ Read More »

ಕರಾವಳಿ

ಸುಳ್ಯ: ಮದುವೆ ದಿಬ್ಬಣಕ್ಕೆ ಹೊರಟ ಬಸ್ ಪಲ್ಟಿ ➤ ಐವರು ಮೃತ್ಯು, 20 ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 03. ಪುತ್ತೂರು ಕಡೆಯಿಂದ ಆಲೆಟ್ಟಿ ಮೂಲಕ ಪಾಣತ್ತೂರು ಕಡೆಗೆ ಮದುವೆಗೆಂದು ಹೋಗುತ್ತಿದ್ದ ದಿಬ್ಬಣದ ಖಾಸಗಿ ಬಸ್ಸೊಂದು ಕೇರಳದ ಪಾನತ್ತೂರು ಎಂಬಲ್ಲಿ ಪಲ್ಟಿಯಾದ ಘಟನೆ ನಡೆದಿದೆ. ಪಾಣತ್ತೂರು ಬಳಿಯ ಗಡಿಗುಡ್ಡೆ ಪೆರಿಯಾರಂ ಎಂಬಲ್ಲಿಗೆ ತಲುಪುತ್ತಿದ್ದಂತೆಯೇ  ಮನೆಯೊಂದರ ಮೇಲೆ ಬಸ್ ಬಿದ್ದು ಈ ದುರಂತ ಸಂಭವಿಸಿದೆನ್ನಲಾಗಿದೆ. ಇದರಲ್ಲಿ ಸುಮಾರು 60 ಮಂದಿ ಪ್ರಯಾಣಿಸುತ್ತಿದ್ದು, ದುರಂತದಲ್ಲಿ ಒಂದು ಮಗು ಸೇರಿದಂತೆ ಐವರು ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿದೆ. ಸುಮಾರು 20 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಾಂಞಂಗಾಡ್

ಸುಳ್ಯ: ಮದುವೆ ದಿಬ್ಬಣಕ್ಕೆ ಹೊರಟ ಬಸ್ ಪಲ್ಟಿ ➤ ಐವರು ಮೃತ್ಯು, 20 ಮಂದಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸದಂತೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ➤ ಎ. ಪೊನ್ನುರಾಜ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 03. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮುಂಬರುವ ದಿನಗಳಲ್ಲಿ ಜನಸಾಮಾನ್ಯರಿಗೆ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ವ್ಯವಸ್ಥಿತವಾಗಿ ಪೂರೈಕೆ ಮಾಡಲು ಕಾರ್ಯ ಪ್ರವೃತ್ತರಾಗಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎ. ಪೊನ್ನುರಾಜ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಇಂದು ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಪ್ರತಿವರ್ಷವು

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸದಂತೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ➤ ಎ. ಪೊನ್ನುರಾಜ್ Read More »

ಕರಾವಳಿ, ಕರ್ನಾಟಕ

ಕೃಷಿ ಉತ್ಪನ್ನ ಮಾರುಕಟ್ಟೆ – ಅಭಿನಂದನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 03. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯರಾಗಿರುವ ಅಶೋಕ್ ಕುಮಾರ್ ಶೆಟ್ಟಿ ಕಲ್ಲಪುತ್ತಿಗೆ, ರುಕ್ಮಯ ನಾಯ್ಕ ಎಡಪದವು, ವೇದಾವತಿ ಗಟ್ಟಿ ಕೊಣಾಜೆ ಉಳ್ಳಾಲ, ಪ್ರವೀಣ್ ಕುಮಾರ್ ಎಸ್. ಶಿರ್ತಾಡಿ ಹಾಗೂ ಚಂದ್ರಹಾಸ ಸನಿಲ್ ಅವರನ್ನು ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಸಿಕ ಸಭೆಯಲ್ಲಿ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಅಭಿನಂದಿಸಿದರು.        ಸಮಿತಿಯ ಉಪಾಧ್ಯಕ್ಷೆ ರಜನಿ

ಕೃಷಿ ಉತ್ಪನ್ನ ಮಾರುಕಟ್ಟೆ – ಅಭಿನಂದನಾ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಜ.8 ರಿಂದ 29 ರವರೆಗೆ ಜಿಲ್ಲೆಯ ವಿವಿಧೆಡೆ ಉದರ ದರ್ಶಕ ಶಸ್ತ್ರಚಿಕಿತ್ಸಾ ಶಿಬಿರ ➤ ಕಡಬದಲ್ಲಿ ಯಾವಾಗ ಗೊತ್ತೇ..?

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 03. ದ.ಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸ್ತುತ ಸಾಲಿನ  ಜನವರಿ ತಿಂಗಳಲ್ಲಿ ನಡೆಯುವ ಉದರ ದರ್ಶಕ ಶಸ್ತ್ರಚಿಕಿತ್ಸಾ ಶಿಬಿರಗಳ ವಿವರ  ಇಂತಿವೆ: ಜನವರಿ 8 ರಂದು ತಾಲೂಕು ಆಸ್ಪತ್ರೆ ಬೆಳ್ತಂಗಡಿ, ಜನವರಿ 12 ರಂದು ತಾಲೂಕು ಆಸ್ಪತ್ರೆ ಬಂಟ್ವಾಳ, 15 ರಂದು ಸಾರ್ವಜನಿಕ ಆಸ್ಪತ್ರೆ ಪುತ್ತೂರು, 22 ರಂದು ಸಾರ್ವಜನಿಕ ಆಸ್ಪತ್ರೆ ಸುಳ್ಯ ಹಾಗೂ  ಪ್ರಾಥಮಿಕ ಆರೋಗ್ಯ ಕೇಂದ್ರ ವಿಟ್ಲ, 25 ರಂದು ನಗರ

ಜ.8 ರಿಂದ 29 ರವರೆಗೆ ಜಿಲ್ಲೆಯ ವಿವಿಧೆಡೆ ಉದರ ದರ್ಶಕ ಶಸ್ತ್ರಚಿಕಿತ್ಸಾ ಶಿಬಿರ ➤ ಕಡಬದಲ್ಲಿ ಯಾವಾಗ ಗೊತ್ತೇ..? Read More »

ಕರಾವಳಿ, ಕರ್ನಾಟಕ

ವಿಟ್ಲ: ಬಾವನಿಂದಲೇ ನಾದಿನಿಯ ಅತ್ಯಾಚಾರ…! ➤ ನಗ್ನ ಫೋಟೋ ತೆಗೆದು ಬ್ಲಾಕ್ ಮೇಲ್

(ನ್ಯೂಸ್ ಕಡಬ) newskadaba.com ವಿಟ್ಲ, ಜ. 03. ನಾದಿನಿಯನ್ನೇ ಅತ್ಯಾಚಾರಗೈದ ಪ್ರಕರಣ ವಿಟ್ಲ ಪಡ್ನೂರು ಗ್ರಾಮದ ಕಡಂಬು ಬೆದ್ರಕಾಡು ಎಂಬಲ್ಲಿ ನಡೆದಿದೆ. ಮನೆಯಲ್ಲಿ ಯುವತಿ ಹಾಗೂ ಆಕೆಯ ತಾಯಿ ಇಬ್ಬರೇ ಇದ್ದ ಸಂದರ್ಭದಲ್ಲಿ ಬಶೀರ್ ಅವರ ಮನೆಗೆ ತೆರಳಿ ಅತ್ತೆಯನ್ನು ಬೈದು ಮನೆಯಿಂದ ಹೊರಗೆ ಕಳುಹಿಸಿ, ಬಲವಂತದಿಂದ ಯುವತಿಯನ್ನು ಅತ್ಯಾಚಾರಗೈದಿದ್ದಾನೆ. ಈ ಕುರಿತು ಯುವತಿಯು ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ: ಬಾವನಿಂದಲೇ ನಾದಿನಿಯ ಅತ್ಯಾಚಾರ…! ➤ ನಗ್ನ ಫೋಟೋ ತೆಗೆದು ಬ್ಲಾಕ್ ಮೇಲ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಉಡುಪಿ: ಸಮುದ್ರದಲ್ಲಿ ಮುಳುಗಿದ ನಾಲ್ವರ ರಕ್ಷಣೆ

(ನ್ಯೂಸ್ ಕಡಬ) newskadaba.com ಉಡುಪಿ, ಜ. 03. ಕಾಪು ಬೀಚ್ ನಲ್ಲಿ ಮುಳುಗುತ್ತಿದ್ದ ನಾಲ್ವರನ್ನು ರಕ್ಷಿಸಿದ ಘಟನೆ ನಡೆದಿದೆ. ಬೀಚ್ ಗೆ ತೆರಳಿದ್ದ ಮೈಸೂರು ಮೂಲದ ಪರಶಿವ, ತೇಜಸ್, ರಾಹುಲ್ ಮತ್ತು ಪವನ್ ಇವರನ್ನು ಸ್ಥಳೀಯರು ಸಮುದ್ರಕ್ಕೆ ಇಳಿಯುವುದನ್ನು ವಿರೋಧಿಸಿದರೂ, ನಿರ್ಲಕ್ಷ್ಯ ಮಾಡಿ ಆಟವಾಡಲು ಇಳಿದಿದ್ದರು. ನಂತರ ಈ ತಂಡವು ಏಕಾಏಕಿ ನೀರಿನಲ್ಲಿ ಮುಳುಗಿದ್ದು, ಇದನ್ನು ಕಂಡ ಸ್ಥಳೀಯರಾದ ಪ್ರಶಾಂತ್ ಕರ್ಕೇರ, ಪ್ರದೀಪ್ ಹಾಗೂ ಜೇಕ್ಸನ್ ಎಂಬವರು ಸಮುದ್ರಕ್ಕೆ ಇಳಿದು ಮುಳುಗುತ್ತಿದ್ದ ನಾಲ್ವರನ್ನು ರಕ್ಷಿಸಿದ್ದಾರೆ.

ಉಡುಪಿ: ಸಮುದ್ರದಲ್ಲಿ ಮುಳುಗಿದ ನಾಲ್ವರ ರಕ್ಷಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top