ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನ್ ಪರ ಘೋಷಣೆಯನ್ನು ಖಂಡಿಸಿ ಬೆಳ್ತಂಗಡಿಯಲ್ಲಿ ಸಿ.ಎಪ್.ಐ ವತಿಯಿಂದ ಪ್ರತಿಭಟನೆ
(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 06. ಇತ್ತೀಚೆಗೆ ಉಜಿರೆಯಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವದ ನಡುವೆ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಘಟನೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ಸಮಿತಿ ವತಿಯಿಂದ ಬೆಳ್ತಂಗಡಿಯಲ್ಲಿ ಪ್ರತಿಭಟಿಸಲಾಯಿತು. ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ಸಮಿತಿ ಸದಸ್ಯ ಇಮ್ರಾನ್ ಪಾಂಡವರಕಲ್ಲು ಸಂದೇಶ ಭಾಷಣ ನೀಡುವುದರ ಮೂಲಕ ದೇಶದ್ರೋಹಿಗಳನ್ನು ಬಂದಿಸಲು ಒತ್ತಾಯಿಸಿದರು. ಪ್ರತಿಭಟನೆಕಾರರು ಬಿಜೆಪಿ ವಿರುದ್ಧ ಆಕ್ರೋಶದೊಂದಿಗೆ ದಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು. […]








