ಕರಾವಳಿ

ಜ. 17: ದ.ಕ ಜಿಲ್ಲಾ ಗೃಹರಕ್ಷಕ ದಳ, ಪೌರ ರಕ್ಷಣಾ ಪಡೆ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಮತ್ತು ಮಾನವ ಹಕ್ಕುಗಳ ಮಹಾಮೈತ್ರಿ ಇದರ ಸಂಯುಕ್ತ ಆಶ್ರಯದಲ್ಲಿ ‘ಪ್ರಸಾದ್ ನೇತ್ರಾಲಯ’ ಇದರ ಸಹಕಾರದೊಂದಿಗೆ ನೇತ್ರ ತಪಾಸಣಾ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 15. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರ ರಕ್ಷಣಾ ಪಡೆ  ಹಾಗೂ  ಲಯನ್ಸ್ ಕ್ಲಬ್ ಮಂಗಳೂರು ಮತ್ತು ಮಾನವ ಹಕ್ಕುಗಳ ಮಹಾಮೈತ್ರಿ (Human Rights Federation of India) ಇದರ ಸಂಯುಕ್ತ ಆಶ್ರಯದಲ್ಲಿ  ‘ಪ್ರಸಾದ್ ನೇತ್ರಾಲಯ’ ಇದರ ಸಹಕಾರದೊಂದಿಗೆ (ಜ. 17) ಭಾನುವಾರದಂದು ಗೃಹರಕ್ಷಕ ದಳ ಕಛೇರಿ, ಮೇರಿಹಿಲ್, ಮಂಗಳೂರು ಇಲ್ಲಿ  ಬೆಳಗ್ಗೆ 9.30 ರಿಂದ 1.30 ರವರೆಗೆ ನೇತ್ರ ತಪಾಸಣಾ ಶಿಬಿರ […]

ಜ. 17: ದ.ಕ ಜಿಲ್ಲಾ ಗೃಹರಕ್ಷಕ ದಳ, ಪೌರ ರಕ್ಷಣಾ ಪಡೆ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಮತ್ತು ಮಾನವ ಹಕ್ಕುಗಳ ಮಹಾಮೈತ್ರಿ ಇದರ ಸಂಯುಕ್ತ ಆಶ್ರಯದಲ್ಲಿ ‘ಪ್ರಸಾದ್ ನೇತ್ರಾಲಯ’ ಇದರ ಸಹಕಾರದೊಂದಿಗೆ ನೇತ್ರ ತಪಾಸಣಾ ಶಿಬಿರ Read More »

ಕರಾವಳಿ, ಕರ್ನಾಟಕ

ಉಳ್ಳಾಲ: ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಅಪ್ರಾಪ್ತ ಯುವಕನಿಗೆ ಸಾರ್ವಜನಿಕರಿಂದ ಧರ್ಮದೇಟು..!

(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 15. ಕಾಲೇಜಿಗೆ ತೆರಳುವ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಅಪ್ರಾಪ್ತನಿಗೆ ಸ್ಥಳೀಯರು ಹಿಡಿದು ಧರ್ಮದೇಟು ನೀಡಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡಿಕೊಟ್ಯದಲ್ಲಿ ನಡೆದಿದೆ. ಆರೋಪಿ ತೊಕ್ಕೊಟ್ಟು ಅಲೇಕಳದ ನಿವಾಸಿ 16 ವರ್ಷದ ಅಪ್ರಾಪ್ತ ಬಾಲಕನಾಗಿದ್ದು, ಈತನನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈತ ಬೆಳಗ್ಗಿನ ಹೊತ್ತಲ್ಲಿ ಸ್ಕೂಟರಿನಲ್ಲಿ ಬಂದು ಕಾಲೇಜು ಹಾಗೂ ಹೈಸ್ಕೂಲ್ ಗೆ ತೆರಳುವ ಹುಡುಗಿಯರ ಎದೆ ಹಾಗೂ ಹಿಂಬಾಗವನ್ನು ಮುಟ್ಟಿ ಪರಾರಿಯಾಗುತ್ತಿದ್ದು, ಇದಕ್ಕೆ ಹೆದರಿದ

ಉಳ್ಳಾಲ: ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಅಪ್ರಾಪ್ತ ಯುವಕನಿಗೆ ಸಾರ್ವಜನಿಕರಿಂದ ಧರ್ಮದೇಟು..! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಒಳ ಉಡುಪಿನಲ್ಲಿ 2 ಕೆ.ಜಿ ಅಕ್ರಮ ಚಿನ್ನ ಸಾಗಾಟ ➤ ಇಬ್ಬರು ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 15. ಒಳುಡುಪಿನಲ್ಲಿಟ್ಟು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪಿಗಳಿಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ. ಆರೋಪಿಗಳನ್ನು ಕಾಸರಗೋಡಿನ ಫೈಝಲ್ ತೊಟ್ಟಿ ಮೇಲ್ಪರಂಬ(37) ಹಾಗೂ ಮೊಹಮ್ಮದ್ ಶುಹೈಬ್(31) ಎಂದು ಗುರುತಿಸಲಾಗಿದೆ. ಇವರಿಬ್ಬರು ಶಾರ್ಜಾದಿಂದ ಮಂಗಳೂರಿಗೆ ಬಂದಿಳಿದಿದ್ದು, ಸಂಶಯದ ಮೇರೆಗೆ ಇವರನ್ನು ತಪಾಸಣೆ ನಡೆಸಿದಾಗ ಒಳ ಉಡುಪಿನಲ್ಲಿ 24 ಕ್ಯಾರೆಟ್ ನ 2.154 ಕೆ.ಜಿ ಚಿನ್ನ ಪತ್ತೆಯಾಗಿದೆ. ಇದೀಗ ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ, 1.09 ಕೋ.ರೂ

ಮಂಗಳೂರು: ಒಳ ಉಡುಪಿನಲ್ಲಿ 2 ಕೆ.ಜಿ ಅಕ್ರಮ ಚಿನ್ನ ಸಾಗಾಟ ➤ ಇಬ್ಬರು ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸುಳ್ಯ: 1490 ಕೋವಿಡ್ ಲಸಿಕೆ ಪೂರೈಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 15. ಕೊರೋನಾ ವಿರೋಧಿ ಲಸಿಕಾ ವಿತರಣೆ ಎಲ್ಲೆಡೆ ಆರಂಭವಾಗಿದ್ದು, ಸುಳ್ಯದ ತಾಲೂಕು ಕೇಂದ್ರಕ್ಕೂ 1490 ಲಸಿಕೆಗಳು ಬಂದು ತಲುಪಿವೆ. ಈಗಾಗಲೇ ಸುಳ್ಯದಲ್ಲಿ ಲಸಿಕೆ ಪಡೆಯುವವರ ಪಟ್ಟಿ ಸಿದ್ದಪಡಿಸಿದ್ದು, ಸರಕಾರಿ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರು, ಸಿಬ್ಬಂದಿಗಳು, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಸಿಬ್ಬಂದಿಗಳಿಗೆ ಸೇರಿ 100 ಮಂದಿಗೆ ವಿತರಣೆಯಾಗಲಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ತಿಳಿಸಿದ್ದಾರೆ. ತಾಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗಳು ಸೇರಿ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ

ಸುಳ್ಯ: 1490 ಕೋವಿಡ್ ಲಸಿಕೆ ಪೂರೈಕೆ Read More »

ಕರಾವಳಿ, ಕರ್ನಾಟಕ

ಉಡುಪಿ: ಹಾವು ಕಡಿದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಶಂಕರನಾರಾಯಣ, ಜ. 15. ಹಾವು ಕಚ್ಚಿದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕುಂದಾಪುರದ ಹೆಂಗವಳ್ಳಿಯಲ್ಲಿ ನಡೆದಿದೆ. ಮೃತರನ್ನು ಮುಹಮ್ಮದ್ ಆಲಂ ಎಂದು ಗುರುತಿಸಲಾಗಿದೆ‌. ಹೆಂಗವಳ್ಳಿ ನಿವಾಸಿಯೋರ್ವರ ಮನೆ ಸಮೀಪ ಹಾವನ್ನು ಹಿಡಿಯುತ್ತಿದ್ದ ವೇಳೆ ಹಾವು ಕಚ್ಚಿದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆನ್ನಲಾಗಿದೆ.

ಉಡುಪಿ: ಹಾವು ಕಡಿದು ವ್ಯಕ್ತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ನೂತನ ಸಚಿವ ಎಸ್.ಅಂಗಾರಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 15. ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಅಂಗಾರ ಅವರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು. ಮೇಯರ್ ದಿವಾಕರ್ ಪಾಂಡೇಶ್ವರ, ಶಾಸಕರಾದ ರಾಜೇಶ್ ನಾಯಕ್, ಉಮಾನಾಥ್ ಕೋಟ್ಯಾನ್, ಸಂಜೀವ ಮಠಂದೂರು, ಡಾ. ಭರತ್ ಶೆಟ್ಟಿ ಮೊದಲಾದವರು ಬರಮಾಡಿಕೊಂಡರು.

ಮಂಗಳೂರು: ನೂತನ ಸಚಿವ ಎಸ್.ಅಂಗಾರಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ Read More »

ಕರಾವಳಿ, ಕರ್ನಾಟಕ

ನಾಳೆ (ಜ.16) ಕೊರೋನಾ ಲಸಿಕೆ ವಿತರಣೆಗೆ ಚಾಲನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 15. ದೇಶದಾದ್ಯಂತ ನಾಳೆಯಿಂದ ಕೊರೋನಾ ಲಸಿಕೆ ಅಭಿಯಾನ ಆರಂಭವಾಗಲಿದ್ದು, ಈ ಕುರಿತು ಕೇಂದ್ರ ಸರಕಾರ ಕೊರೋನಾ ಲಸಿಕಾ ಮಾರ್ಗಸೂಚಿಯನ್ನು ಹೊರಡಿಸಿದೆ. ಮಾರ್ಗಸೂಚಿಗಳು ಈ ರೀತಿಯಾಗಿದೆ:- ಗರ್ಭಿಣಿ, ಬಾಣಂತಿಯರಿಗೆ ಲಸಿಕೆ ನೀಡುವಂತಿಲ್ಲ, ಹೈ ಬಿಪಿ, ಉಸಿರಾಟದ ತೊಂದರೆ ಇರುವವರ ಮೇಲೆ ನಿಗಾ ಇಡಲಾಗುತ್ತೆ, ಮೊದಲ ಬಾರಿ ಪಡೆದ ಲಸಿಕೆಯನ್ನೇ ಮತ್ತೊಂದು ಬಾರಿ ತೆಗೆದುಕೊಳ್ಳುವಂತದ್ದು, ಉದಾಹರಣೆಗೆ ಮೊದಲ ಬಾರಿ ಕೋವಾಕ್ಸಿನ್‌ ಲಸಿಕೆ ಸ್ವೀಕರಿಸಿದ್ದಲ್ಲಿ 2ನೇ ಬಾರಿಯೂ ಅದೇ ಕಂಪನಿಯ ಡೋಸ್‌ ತೆಗೆದುಕೊಳ್ಳಬೇಕು, ಮಕ್ಕಳಿಗೆ

ನಾಳೆ (ಜ.16) ಕೊರೋನಾ ಲಸಿಕೆ ವಿತರಣೆಗೆ ಚಾಲನೆ Read More »

ಕರಾವಳಿ

ಕಬಕದಲ್ಲಿ ಚಿನ್ನಾಭರಣ ಕಳ್ಳತನ ➤ 24 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 15. ಕಬಕದ ಮನೆಯೊಂದರಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ 24 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಕಬಕ ವಿದ್ಯಾಪುರ ನಿವಾಸಿ ಸಂಸೀರ್(23) ಹಾಗೂ ಮುಬಾರಕ್ (26) ಎಂದು ಗುರುತಿಸಲಾಗಿದೆ. ಉರಿಮಜಲು ನಿವಾಸಿ ಮೊಹಮ್ಮದ್ ನೌಫಲ್ ಅವರ ಪತ್ನಿ ರಝೀನ ಎಂಬವರು ಜ. 7 ರಂದು ಕಬಕದ ತನ್ನ ತಂದೆ ಮನೆಗೆ ಬಂದಿದ್ದು, ಚಿನ್ನವನ್ನು ಬೀರುವಿನಲ್ಲಿಟ್ಟಿದ್ದರು. ಆದರೆ ಜ. 10ರಂದು ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ನಗರ

ಕಬಕದಲ್ಲಿ ಚಿನ್ನಾಭರಣ ಕಳ್ಳತನ ➤ 24 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸಿದ ಪೊಲೀಸರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ಅಕ್ರಮ ಮರಳುಗಾರಿಕೆ ➤ ಅನಧಿಕೃತ ರಸ್ತೆಗಳನ್ನು ಮುಚ್ಚಿಸಿ ಕಡಬ ಎಸ್.ಐ ರುಕ್ಮ ನಾಯಕ್ ಅವರಿಂದ ಖಡಕ್ ವಾರ್ನಿಂಗ್

(ನ್ಯೂಸ್ ಕಡಬ) newskadaba.com ಕಡಬ, ಜ. 15. ತಾಲೂಕಿನ ಇಚಿಲಂಪಾಡಿ ಸೇತುವೆ ಸಮೀಪದಿಂದ ಹಗಲು ರಾತ್ರಿಯೆನ್ನದೆ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಇದಕ್ಕೆ ಇದೀಗ ಕಡಬ ಠಾಣಾ ಎಸ್.ಐ ರುಕ್ಮ ನಾಯಕ್ ಬ್ರೇಕ್ ಹಾಕಿದ್ದಾರೆ. ಕಳೆದ ಒಂದು ತಿಂಗಳಿನಿಂದ ರಾಜಾರೋಷವಾಗಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದರೂ ಗ್ರಾ.ಪಂ ಅಧಿಕಾರಿಗಳಾಗಲಿ, ಕಂದಾಯ ಇಲಾಖೆಯಾಗಲಿ ತಡೆಯುವಲ್ಲಿ ಸಫಲವಾಗಿಲ್ಲ. ಮರಳು ಸಾಗಾಟಗಾರರು ಪೊಲೀಸರ ಹೆಸರು ದುರ್ಬಳಕೆ ಮಾಡಿಕೊಂಡು ವಾಹನಗಳಲ್ಲಿ ನಿರಂತರ ಮರಳು ಸಾಗಾಟದಲ್ಲಿ ನಿರತರಾಗಿದ್ದರು. ಈ ವಿಚಾರ ಸಾರ್ವಜನಿಕರ ಮೂಲಕ ಪೊಲೀಸ್

ಕಡಬ: ಅಕ್ರಮ ಮರಳುಗಾರಿಕೆ ➤ ಅನಧಿಕೃತ ರಸ್ತೆಗಳನ್ನು ಮುಚ್ಚಿಸಿ ಕಡಬ ಎಸ್.ಐ ರುಕ್ಮ ನಾಯಕ್ ಅವರಿಂದ ಖಡಕ್ ವಾರ್ನಿಂಗ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಿಳಿಯಾರು ಸೇತುವೆ ಬಳಿ ಸತ್ತ ಕುರಿಯನ್ನು ಬಿಸಾಕಿದ ಕಿಡಿಗೇಡಿಗಳು

(ನ್ಯೂಸ್ ಕಡಬ) newskadaba.com ಬಿಳಿಯಾರು, ಜ. 15. ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ವಾರದ ಐದು ದಿನವು ಎಸ್.ಎಲ್.ಆರ್.ಎಮ್ ತಂಡವು ಸ್ವಚ್ಛತೆಯನ್ನು ಮಾಡುತ್ತಾ ಬಂದಿದ್ದರೂ, ಇತ್ತೀಚಿನ ದಿನಗಳಲ್ಲಿ ತರಕಾರಿ ಸಾಗಾಟಗಾರರು ಕೋಳಿ ಸಾಗಾಟಗಾರರು ಜನರ ವಾಸವಿಲ್ಲದ ಸ್ಠಳಗಳಲ್ಲಿ ಕೊಳೆತ ವಸ್ತುವನ್ನು ಬಿಸಾಡುವುದು ಅಭ್ಯಾಸವಾಗಿ ಬಿಟ್ಟಿದೆ. ಅರಂತೋಡು ಕುಲ್ಚಾರ್ ಸೇತುವೆಯ ಬಳಿ ದುರ್ನಾತ ಬೀರುವ ಕಟ್ಟೊಂದು ಪತ್ತೆಯಾಗಿದೆ. ಪಂಚಾಯತ್ ಸದಸ್ಯ ಪುಷ್ಪಾಧರ್ ಎಂಬವರ ಗಮನಕ್ಕೆ ತಂದು ಅವರು ಸ್ಥಳೀಯರೊಂದಿಗೆ ತೆರಳಿ ಗ್ರಾಮ ಪಂಚಾಯತ್ ಪಿಡಿಓ ಮುಖಾಂತರ ಸುಳ್ಯ ಪೋಲಿಸರಿಗೆ

ಬಿಳಿಯಾರು ಸೇತುವೆ ಬಳಿ ಸತ್ತ ಕುರಿಯನ್ನು ಬಿಸಾಕಿದ ಕಿಡಿಗೇಡಿಗಳು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top