ಕರಾವಳಿ

ಜಿಲ್ಲಾ ಮಟ್ಟದ ‘ಕೈಗಾರಿಕಾ ಸ್ಪಂದನ’ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 20. ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಹಾಗೂ ಉದ್ದಿಮೆದಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಬಗ್ಗೆ ದ.ಕ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜನವರಿ ಅಂತ್ಯಕ್ಕೆ ಜಿಲ್ಲಾ ಮಟ್ಟದ ‘ಕೈಗಾರಿಕಾ ಸ್ಪಂದನ’ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಕೈಗಾರಿಕೋದ್ಯಮಿಗಳು ತಮ್ಮ ಅಹವಾಲುಗಳು/ ಸಲಹೆಗಳು ಇದ್ದಲ್ಲಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಎಯ್ಯಾಡಿ, ಮಂಗಳೂರು ಇವರಿಗೆ ಜನವರಿ 27 ರೊಳಗೆ ಲಿಖಿತವಾಗಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ: 0824-2214021ನ್ನು […]

ಜಿಲ್ಲಾ ಮಟ್ಟದ ‘ಕೈಗಾರಿಕಾ ಸ್ಪಂದನ’ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಮಂಗಳೂರು: ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 20. ಜಿಲ್ಲೆಯಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಪ್ರತಿಶತ ನೂರರಷ್ಟು ಪೂರ್ಣಗೊಳಿಸಬೇಕು ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ   ಗುರುಮೂರ್ತಿರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಇಂದು ನಗರದ ಸರ್ಕ್ಯೂಟ್ ಹೌಸ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳ  ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ  ವತಿಯಿಂದ ಈಗಾಗಲೇ ಅನುಮೋದನೆಗೊಂಡ ಕಾಮಗಾರಿಗಳನ್ನು

ಮಂಗಳೂರು: ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆ Read More »

ಕರಾವಳಿ, ಕರ್ನಾಟಕ

ಜ. 21ಕ್ಕೆ ಟಿ.ಎಂ.ಶಾಹೀದ್ ತೆಕ್ಕಿಲ್ ರವರ ಹುಟ್ಟು ಹಬ್ಬವನ್ನು ಆಚರಿಸಲು ನಿರ್ಧಾರ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 20. ಸಾಮಾಜಿಕ,ರಾಜಕೀಯ,ಧಾರ್ಮಿಕ ಸಹಕಾರಿ ಮತ್ತು ಶೈಕ್ಷಣಿಕ, ಕ್ರೀಡೆ ಮತ್ತು ಉದ್ಯಮ  ಕ್ಷೇತ್ರದಲ್ಲಿ ಕಳೆದ 3 ದಶಕಗಳಿಂದ ಕ್ರಿಯಾಶೀಲರಾಗಿರುವ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ.ಎಂ.ಶಾಹೀದ್ ತೆಕ್ಕಿಲ್ ಇವರು ಇದೇ ಬರುವ ಜನವರಿ 21 ರಂದು 50 ವರ್ಷಕ್ಕೆ ಪಾದಾರ್ಪಣೆ ಗೈಯಲಿದ್ದು ಸುವರ್ಣ ವರ್ಷದ ಸಂಭ್ರಮದ ಅಂಗವಾಗಿ ಸಾರ್ವಜನಿಕರ ನೆಲೆಯಲ್ಲಿ ಸೇವಾ ಕಾರ್ಯಗಳೊಂದಿಗೆ ಹುಟ್ಟುಹಬ್ಬವನ್ನು ವೈವಿಧ್ಯಮವಾಗಿ ಆಚರಿಸಲು ಡಿಸೆಂಬರ್ 28 ರಂದು ಸದಾನಂದ ಮಾವಾಜಿ ಹಾಗೂ ಕೆ.ಎಂ,ಮುಸ್ತಾಫ ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ

ಜ. 21ಕ್ಕೆ ಟಿ.ಎಂ.ಶಾಹೀದ್ ತೆಕ್ಕಿಲ್ ರವರ ಹುಟ್ಟು ಹಬ್ಬವನ್ನು ಆಚರಿಸಲು ನಿರ್ಧಾರ Read More »

ಕರಾವಳಿ, ಕರ್ನಾಟಕ

ಮಂಜೇಶ್ವರ: ಗಾಂಜಾ ಹಾಗೂ ಚಿನ್ನಾಭರಣ ಸೇರಿದಂತೆ ಹಲವು ಪ್ರಕರಣಗಳ ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ಮಂಜೇಶ್ವರ, ಜ. 20. ಗಾಂಜಾ ಹಾಗೂ ಚಿನ್ನಾಭರಣ ಕಳ್ಳತನ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹೊಸಂಗಡಿ ರಾಮಂತಳಿಯ ಆಬಿದ್ (22) ಎಂದು ಗುರುತಿಸಲಾಗಿದೆ. ಈತ 2019ರಲ್ಲಿ ಚಿನ್ನಾಭರಣ ವಂಚನೆ ಹಾಗೂ 2020ರಲ್ಲಿ ಗಾಂಜಾ ಸಾಗಾಟ ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಜೇಶ್ವರ: ಗಾಂಜಾ ಹಾಗೂ ಚಿನ್ನಾಭರಣ ಸೇರಿದಂತೆ ಹಲವು ಪ್ರಕರಣಗಳ ಆರೋಪಿ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಜೇಶ್ವರ: ಕಾರ್ಮಿಕನ ಮೃತದೇಹ ಬಾವಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಮಂಜೇಶ್ವರ, ಜ. 20. ಉತ್ತರಪ್ರದೇಶ ಮೂಲದ ಕಾರ್ಮಿಕನೋರ್ವನ ಮೃತದೇಹವೊಂದು ಮಂಜೇಶ್ವರ ಠಾಣಾ ವ್ಯಾಪ್ತಿಯ ಕುಂಜತ್ತೂರು ಎಂಬಲ್ಲಿ ಕೆರೆಯಲ್ಲಿ ಪತ್ತೆಯಾಗಿದೆ. ಮೃತರನ್ನು ಅನಿಲ್ ಕುಮಾರ್ ಎಂದು ಗುರುತಿಸಲಾಗಿದೆ‌. ವಿದ್ಯುತ್ ಕಂಬ ತಯಾರಿಕಾ ಘಟಕದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಇವರು ಎರಡು ದಿನಗಳಿಂದ ನಾಪತ್ತೆಯಾಗಿದ್ದರು. ಇವರ ಮೃತದೇಹವು ಕುಂಜತ್ತೂರಿನ ಅಂಬಿತ್ತಡಿ ಎಂಬಲ್ಲಿ ಖಾಸಗಿ ವ್ಯಕ್ತಿಯೋರ್ವರ ಕೆರೆಯಲ್ಲಿ ಪತ್ತೆಯಾಗಿತ್ತು. ಇವರ ತಲೆಯಲ್ಲಿ ಗಾಯಗಳಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ನೈಜ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಜೇಶ್ವರ: ಕಾರ್ಮಿಕನ ಮೃತದೇಹ ಬಾವಿಯಲ್ಲಿ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ನಾಳೆ(ಜ.21) ಸಿಟಿ ಮೆಡಿಕಲ್ಸ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಜ.20. ಬೆಳೆಯುತ್ತಿರುವ ಪಟ್ಟಣವಾದ ಕಡಬದಲ್ಲಿ ನಾಳೆ (ಜ.21) ನೂತನ ಮೆಡಿಕಲ್ ಸೆಂಟರ್ ಶುಭಾರಂಭಗೊಳ್ಳಲಿದೆ. ಕಡಬದ ಮುಖ್ಯ ರಸ್ತೆಯ ವೆರೈಟಿ ಟವರ್ಸ್ ನಲ್ಲಿ ಸಿಟಿ ಮೆಡಿಕಲ್ಸ್ ಆರಂಭಗೊಳ್ಳಲಿದ್ದು, ಶುಭಾರಂಭದ ಪ್ರಯುಕ್ತ ಪ್ರತಿ ಖರೀದಿಯ ಮೇಲೆ ವಿಶೇಷ ರಿಯಾಯಿತಿ ಇರಲಿದೆಯೆಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9880142949 ಅಥವಾ 8296042949 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಕಡಬ: ನಾಳೆ(ಜ.21) ಸಿಟಿ ಮೆಡಿಕಲ್ಸ್ ಶುಭಾರಂಭ Read More »

ಕರಾವಳಿ

ಸುಳ್ಯ: ರೈತಪರ ಸಂಘಟನೆಗಳ ವತಿಯಿಂದ ಉಪವಾಸ ಧರಣಿ ಸತ್ಯಾಗ್ರಹ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 20. ರೈತ, ಕಾರ್ಮಿಕ, ದಲಿತ ಹಾಗೂ ಜನಪರ ಚಳವಳಿಗಳ ಒಕ್ಕೂಟ ಇದರ ಆಶ್ರಯದಲ್ಲಿ ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ತಾಲೂಕು ಮಟ್ಟದ ಒಂದು ದಿನದ ಉಪವಾಸ ಧರಣಿ ಸತ್ಯಾಗ್ರಹ ಇಂದು ಖಾಸಗಿ ನಿಲ್ದಾಣದ ಬಳಿ ನಡೆಯಿತು. ಈ ಸತ್ಯಾಗ್ರಹದ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಲೋಲಜಾಕ್ಷ ಬೂತಕಲ್ಲು, ರೈತ ಸಂಘದ ಉಪಾಧ್ಯಕ್ಷ ತೀರ್ಥರಾಮ ಉಳುವಾರು, ರೈತ ಮುಖಂಡ ಮಂಜುನಾಥ್ ಮಡ್ತಿಲ, ವಕೀಲರ ಸಂಘದ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಮಜಿಗುಂಡಿ,

ಸುಳ್ಯ: ರೈತಪರ ಸಂಘಟನೆಗಳ ವತಿಯಿಂದ ಉಪವಾಸ ಧರಣಿ ಸತ್ಯಾಗ್ರಹ Read More »

ಕರಾವಳಿ, ಕರ್ನಾಟಕ

ಉಳ್ಳಾಲದ ಘಟನೆಯ ಬೆನ್ನಿಗೇ ಕೊಣಾಜೆಯಲ್ಲೂ ವಿಕೃತಿ ಮೆರೆದ ದುಷ್ಕರ್ಮಿಗಳು ➤ ಭಜನಾಮಂದಿರದಲ್ಲಿ ಮಲಮೂತ್ರ ಮಾಡಿ ದುಷ್ಕೃತ್ಯ

(ನ್ಯೂಸ್ ಕಡಬ) newskadaba.com ಕೊಣಾಜೆ, ಜ. 20. ಉಳ್ಳಾಲದ ಕೊರಗಜ್ಜನ ಕಟ್ಟೆಯಲ್ಲಿ ವಿಕೃತಿ ಮೆರೆದ ಬೆನ್ನಲ್ಲೇ ಕೊಣಾಜೆಯಲ್ಲೂ ಇದೇ ತರದ ಹಿಂದೂ ಧರ್ಮದ ಭಾವನೆಗೆ ಧಕ್ಕೆ ತರುವ ಕೃತ್ಯ ನಡೆದಿದೆ. ಕೊಣಾಜೆ ವಿವಿಯ ಆಡಳಿತ ಸೌಧ ಕಟ್ಟಡದ ಬಳಿಯಿರುವ ಪರಂಡೆ ಪೂರ್ಣಗಿರಿ, ಮುಲಾರ ಗೋಪಾಲಕೃಷ್ಣ ಭಜನಾ ಮಂದಿರದ ಅಂಗಣದಲ್ಲಿ ಕಿಡಿಗೇಡಿಗಳು ಮಲ-ಮೂತ್ರ ವಿಸರ್ಜನೆಗೈದು ವಿಕೃತಿ ಮೆರೆದಿದ್ದಾರೆ. ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕ ಈ ಕೃತ್ಯ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. ಈ ಘಟನೆಯ ಕುರಿತು ಕೊಣಾಜೆ ಠಾಣೆಗೆ ದೂರು ನೀಡಲಾಗಿದ್ದು,

ಉಳ್ಳಾಲದ ಘಟನೆಯ ಬೆನ್ನಿಗೇ ಕೊಣಾಜೆಯಲ್ಲೂ ವಿಕೃತಿ ಮೆರೆದ ದುಷ್ಕರ್ಮಿಗಳು ➤ ಭಜನಾಮಂದಿರದಲ್ಲಿ ಮಲಮೂತ್ರ ಮಾಡಿ ದುಷ್ಕೃತ್ಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬೆಳಂದೂರು: ನೂತನ ವಿದ್ಯುತ್ ಪರಿವರ್ತಕ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಾಣಿಯೂರು, ಜ. 20. ಮಿಪಾಲು, ಅಬೀರ ಹಾಗೂ ಪಾತಾಜೆ ನಿವಾಸಿಗಳ ಹಲವು ವರ್ಷಗಳಿಂದ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದು, ಇದರ ನಿವಾರಣೆಗೆಂದು ರಚನೆಗೊಂಡ ಎರಡನೇ ವಿದ್ಯುತ್ ಪರಿವರ್ತಕಕ್ಕೆ ಕೊಡಿಮಾರು ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಉದಯ ರೈ ಮಿಪಾಲಿನಲ್ಲಿ ಚಾಲನೆ ನೀಡಿದರು. ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಜಯಂತ ಅಬೀರ, ಶಿವಪ್ರಸಾದ್ ಆಳ್ವ, ಪ್ರಸನ್ನ ರೈ, ಗುತ್ತುಮನೆ ಸೀತಾರಾಮ ರೈ ಪವರ್ ಮ್ಯಾನ್ ಸಂತೋಷ್ ಹಾಗೂ ಶಿವಾನಂದ ಮೊದಲಾದವರು ಉಪಸ್ಥಿತರಿದ್ದರು.

ಬೆಳಂದೂರು: ನೂತನ ವಿದ್ಯುತ್ ಪರಿವರ್ತಕ ಉದ್ಘಾಟನೆ Read More »

ಕರಾವಳಿ, ಕರ್ನಾಟಕ

ಪ್ರತೀ ತಾಲೂಕಿನಲ್ಲಿ ಗೋಶಾಲೆ ತೆರೆಯುವಂತೆ ಕ್ರಮ ➤ ಸಚಿವ ಪ್ರಭು ವಿ. ಚೌಹ್ಹಾನ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 20. ಪ್ರತೀ ತಾಲೂಕಿನಲ್ಲಿ ಸರಕಾರಿ ಗೋಶಾಲೆ ತೆರೆಯುವಂತೆ ಹಾಗೂ ಗೋರಕ್ಷಕರ ಮೇಲೆ ದಾಖಲಾದ ಪ್ರಕರಣವನ್ನು ಹಿಂಪಡೆಯುವಂತೆ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಪಶು ಸಂಗೋಪನಾ ಸಚಿವ ಪ್ರಭು ವಿ ಚೌಹ್ಹಾನ್ ತಿಳಿಸಿದ್ದಾರೆ. ಗೋ ರಕ್ಷಕರು ಗೋ ಸಾಗಾಟಗಾರರನ್ನು ತಡೆದ ಸಂದರ್ಭ ಇವರ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದವು. ಅವುಗಳನ್ನು ಹಿಂದಕ್ಕೆ ಪಡೆಯುವಂತೆ ಸಾಕಷ್ಟು ಮನವಿಗಳು ಬಂದಿದೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು

ಪ್ರತೀ ತಾಲೂಕಿನಲ್ಲಿ ಗೋಶಾಲೆ ತೆರೆಯುವಂತೆ ಕ್ರಮ ➤ ಸಚಿವ ಪ್ರಭು ವಿ. ಚೌಹ್ಹಾನ್ Read More »

ಕರಾವಳಿ, ಕರ್ನಾಟಕ
Scroll to Top