ಕರಾವಳಿ

ಉಡುಪಿ: ಬೈಕ್ ನಲ್ಲಿ ತೆರಳುತ್ತಿದ್ದ ತಾಯಿ -ಮಗನಿಗೆ ಪೊಲೀಸರಿಂದ ಹಲ್ಲೆ ➤ ಮಾನವ ಹಕ್ಕುಗಳ ಆಯೋಗಕ್ಕೆ ದೂರು

(ನ್ಯೂಸ್ ಕಡಬ) newskadaba.com ಉಡುಪಿ, ಜ. 27. ಬೈಕಿನಲ್ಲಿ ತೆರಳುತ್ತಿದ್ದ ತಾಯಿ ಹಾಗೂ ಮಗನನ್ನು ತಪಾಸಣೆ ನೆಪದಲ್ಲಿ ಥಳಿಸಿದ ಅಮಾನವೀಯ ಘಟನೆ ಇಲ್ಲಿನ ಕೋಟ ಎಂಬಲ್ಲಿ ನಡೆದಿದೆ. ಪ್ರಶಾಂತ್ ಎಂಬವರು, ಕೋಟ ಮೂರು ಕೈ ರಸ್ತೆಯಲ್ಲಿ ಸಾಯ್ಬರ ಕಟ್ಟೆಗೆಂದು ತಾಯಿ ಶಾರದಾ ಅವರನ್ನು ತನ್ನು ಬೈಕ್ ನಲ್ಲಿ ಕೂರಿಸಿಕೊಂಡು ತೆರಳುತ್ತಿದ್ದ ವೇಳೆ ಕರ್ತವ್ಯದಲ್ಲಿದ್ದ ಕೋಟ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಂತೋಷ್ ಬಿ.ಪಿ. ಮತ್ತು ಸ್ಟೇಶನ್ ಎಸ್ ಬಿ ರಾಜು ಎಂಬವರು ತಪಾಸಣೆಯ ನೆಪದಲ್ಲಿ ಪ್ರಶಾಂತ್ ಅವರ […]

ಉಡುಪಿ: ಬೈಕ್ ನಲ್ಲಿ ತೆರಳುತ್ತಿದ್ದ ತಾಯಿ -ಮಗನಿಗೆ ಪೊಲೀಸರಿಂದ ಹಲ್ಲೆ ➤ ಮಾನವ ಹಕ್ಕುಗಳ ಆಯೋಗಕ್ಕೆ ದೂರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಉಡುಪಿ: ಒಂಟಿ ಮಹಿಳೆಯರಿದ್ದ ಮನೆಯ ಕಳ್ಳತನಕ್ಕೆ ಯತ್ನ ➤ ಇಬ್ಬರ ಬಂಧನ, ಓರ್ವ ಪರಾರಿ

(ನ್ಯೂಸ್ ಕಡಬ) newskadaba.com ಉಡುಪಿ, ಜ. 27. ಒಂಟಿ ಮಹಿಳೆಯರಿದ್ದ ಮನೆಗೆ ಕನ್ನ ಹಾಕುತ್ತಿದ್ದ ಮೂವರಲ್ಲಿ ಇಬ್ಬರನ್ನು ಬಂಧಿಸಿದ ಘಟನೆ ಬ್ರಹ್ಮಾವರ ಬಳಿಯ ಶಿರಿಯಾ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಸುರೇಶ್, ಬೆಂಗಳೂರು ಮೂಲದ ರಾಕೇಶ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ನಂದೀಶ್ ಎಂಬಾತ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇವರು ಒಂಟಿ ಮಹಿಳೆಯರಿದ್ದ ಮನೆಗೆ ಬಂದು ವಸ್ತುಗಳನ್ನು ದೋಚುತ್ತಿದ್ದರು. ಇದನ್ನು ಪ್ರಶ್ನಿಸಿದ ಸ್ಥಳಿಯರಿಗೆ ಚೂರಿ ತೋರಿಸಿ ಬೆದರಿಕೆ ಹಾಕಿ ಪರಾರಿಯಾಗಿದ್ದರು. ಈ ಕುರಿತು ಬ್ರಹ್ಮಾವರ ಠಾಣೆಗೆ ದೂರು ನೀಡಲಾಗಿದ್ದು, ಸ್ಥಳೀಯರು

ಉಡುಪಿ: ಒಂಟಿ ಮಹಿಳೆಯರಿದ್ದ ಮನೆಯ ಕಳ್ಳತನಕ್ಕೆ ಯತ್ನ ➤ ಇಬ್ಬರ ಬಂಧನ, ಓರ್ವ ಪರಾರಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಳ್ಳಾಲ: ಆಸ್ಪತ್ರೆಗೆ ತಪಾಸಣೆಗೆಂದು ಬಂದ ಕಾಮುಕನಿಂದ ನರ್ಸ್ ಗೆ ಕಿರುಕುಳ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 27. ಇಲ್ಲಿನ ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ತಪಾಸಣೆಗೆಂದು ಬಂದಿದ್ದ ವ್ಯಕ್ತಿಯೋರ್ವ ತಪಾಸಣೆ ನಡೆಸುತ್ತಿದ್ದ ನರ್ಸ್ ಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಬಂಧಿಸಿದ ಘಟನೆ ಇಂದು ನಡೆದಿದೆ. ಬಂಧಿತ ಆರೋಪಿಯನ್ನು ಕೆ.ಸಿ. ರೋಡ್ ಕಾಟುಂಗುರ ಗುಡ್ಡೆ ನಿವಾಸಿ ಇಬ್ರಾಹಿಂ ಖಲೀಲ್ (27) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಕೋಟೆಕಾರಿನ ಆರೋಗ್ಯ ಕೇಂದ್ರಕ್ಕೆ ಬಂದಿದ್ದ ಆರೋಪಿಯು ತಪಾಸಣೆ ನಡೆಸುತ್ತಿದ್ದ ನರ್ಸ್ ಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಕುರಿತು

ಉಳ್ಳಾಲ: ಆಸ್ಪತ್ರೆಗೆ ತಪಾಸಣೆಗೆಂದು ಬಂದ ಕಾಮುಕನಿಂದ ನರ್ಸ್ ಗೆ ಕಿರುಕುಳ ➤ ಆರೋಪಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನೂಜಿಬೈಲ್ ದೈವಸ್ಥಾನಕ್ಕೆ ಸಚಿವ ಎಸ್.ಅಂಗಾರ ಬೇಟಿ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜ. 27. ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನಕ್ಕೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ರವಿವಾರ ರಾತ್ರಿ ಬೇಟಿ ನೀಡಿದರು. ಪ್ರಥಮ ಬಾರಿಗೆ ಬೇಟಿ ನೀಡಿದ ಸಚಿವರನ್ನು ಕ್ಷೇತ್ರಕ್ಕೆ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. ಬೇಟಿ ನೀಡಿದ ಸಚಿವರು ಹರಕೆಯ ರಂಗಪೂಜೆಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ವೈಧಿಕ ವಿಧಾನ ನೆರವೇರಿಸಿ,  ಸಚಿವರನ್ನು  ಹಾರೈಸಿದರು. ಅರ್ಚಕ ಕೃಷ್ಣ ಹೆಬ್ಬಾರ್

ನೂಜಿಬೈಲ್ ದೈವಸ್ಥಾನಕ್ಕೆ ಸಚಿವ ಎಸ್.ಅಂಗಾರ ಬೇಟಿ Read More »

ಕರಾವಳಿ, ಕರ್ನಾಟಕ

ರೂರಲ್ ಮಿರರ್ ಪ್ರಕಾಶನದ ಮುಸ್ಸಂಜೆಯ ಹೊಂಗಿರಣ ಪುಸ್ತಕ ಬಿಡುಗಡೆ ➤ ಸ್ವಾವಲಂಬಿ ಆರ್ಥಿಕತೆಯೇ ಗಾಂಧಿ ಚಿಂತನೆಯ ಆರ್ಥಿಕತೆ- ಅರವಿಂದ್ ಚೊಕ್ಕಾಡಿ

(ನ್ಯೂಸ್ ಕಡಬ) newskadaba.com ಗುತ್ತಿಗಾರು, ಜ. 27. ಸಮಾಜದಲ್ಲಿ ಸಂಕಷ್ಟದ ಸಮಯ ಬಂದಾಗ ಗಾಂಧಿಯನ್ ಆರ್ಥಿಕತೆ ಸಮಾಜವನ್ನು ರಕ್ಷಣೆ ಮಾಡುತ್ತದೆ. ಇದಕ್ಕೆ ಉದಾಹರಣೆ ಕೊರೋನಾ. ಕೊರೋನಾದ ಸಂಕಷ್ಟದ ಸಮಯದಲ್ಲಿ ಈ ಗಾಂಧಿಯನ್‌ ಆರ್ಥಿಕತೆ ಸಮುದಾಯಗಳನ್ನು ರಕ್ಷಿಸಿಕೊಳ್ಳುತ್ತಾ ಸಾಗಿದೆ. ಗಾಂಧಿಯನ್ ಆರ್ಥಿಕತೆ ಎನ್ನುವುದು ಸ್ವಾವಲಂಬಿ ಆರ್ಥಿಕತೆ. ಇದುವೇ ಗಾಂಧಿ ಚಿಂತನೆಯ ಆರ್ಥಿಕತೆ ಎಂದು ಸಾಹಿತಿ, ಶಿಕ್ಷಕ ಅರವಿಂದ ಚೊಕ್ಕಾಡಿ ಹೇಳಿದರು. ಅವರು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಮಂಗಳವಾರ ರೂರಲ್‌

ರೂರಲ್ ಮಿರರ್ ಪ್ರಕಾಶನದ ಮುಸ್ಸಂಜೆಯ ಹೊಂಗಿರಣ ಪುಸ್ತಕ ಬಿಡುಗಡೆ ➤ ಸ್ವಾವಲಂಬಿ ಆರ್ಥಿಕತೆಯೇ ಗಾಂಧಿ ಚಿಂತನೆಯ ಆರ್ಥಿಕತೆ- ಅರವಿಂದ್ ಚೊಕ್ಕಾಡಿ Read More »

ಕರಾವಳಿ, ಕರ್ನಾಟಕ

ಮಂಗಳೂರು: ಶಕ್ತಿಶಾಲೆಯಲ್ಲಿ ಗಣರಾಜ್ಯೋತ್ಸವದ ಆಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 27. ನಾವು ನಮ್ಮ ಮನಸ್ಸನ್ನು ರೂಪಿಸಿಕೊಂಡು ಮುಂದುವರಿಸಿದರೆ  ನಮಗೆ ಏನೂ ಅಸಾಧ್ಯವಲ್ಲ. ಯಾವುದೇ ಗಡಿ ಯಾವುದೇ ಭಾಷೆಗಳು ನಮ್ಮ ಸಂಪೂರ್ಣ ಸಾಮಥ್ರ್ಯವನ್ನು ತಲುಪುತ್ತದೆ.ನಾವು ನಮ್ಮ ಮನಸ್ಸನ್ನು ರೂಪಿಸಿಕೊಂಡರೆ ಮತ್ತು ಇಚ್ಛಾಶಕ್ತಿ ಹೊಂದಿದ್ದರೆ ನಾವು ನಮ್ಮ ಕನಸುಗಳನ್ನು ಸಾಧಿಸಬಹುದು ಎಂದು 72ನೇ ಗಣರಾಜ್ಯೋತ್ಸವ ದಿನಾಚರಣೆಯ ಮುಖ್ಯ ಅತಿಥಿಯಾಗಿ ಶಕ್ತಿ ಶಿಕ್ಷಣ ಟ್ರಸ್ಟ್‍ನ ಕಾರ್ಯದರ್ಶಿ ಶ್ರೀ ಸಂಜೀತ್ ನಾೈಕ್ ಹೇಳಿದರು.. ಅವರು ರಾಷ್ಟ್ರ ಧ್ವಜಾರೋಹಣಗೈದು ಮಾತನಾಡಿದ ಇವರು ಉನ್ನತ ಕಂಪೆನಿಗಳಲ್ಲಿ ಪ್ರತಿಷ್ಠಿತ ಸ್ಥಾನಗಳಿಗೆ ಮುಖ್ಯಸ್ಥರಾಗಿರುವ

ಮಂಗಳೂರು: ಶಕ್ತಿಶಾಲೆಯಲ್ಲಿ ಗಣರಾಜ್ಯೋತ್ಸವದ ಆಚರಣೆ Read More »

ಕರಾವಳಿ, ಕರ್ನಾಟಕ

ಮಂಗಳೂರು: ಕಟ್ಟಡದಿಂದ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 27. ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ಸಮೀಪದ ಕಟ್ಟಡವೊಂದರಿಂದ ಆಯತಪ್ಪಿ ಬಿದ್ದ ಸೆಕ್ಯುರಿಟಿ ಗಾರ್ಡ್ ಓರ್ವರು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರನ್ನು ಕುತ್ತಾರಿನ‌ ಸತೀಶ್(38) ಎಂದು ಗುರುತಿಸಲಾಗಿದೆ. ಇವರು ಲಿಫ್ಟ್ ಚೆಕ್ ಮಾಡಲೆಂದು ತೆರಳಿದ್ದ ವೇಳೆ ಆಯತಪ್ಪಿ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಕಟ್ಟಡದಿಂದ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ ಕಾಲೇಜಿನ ಹಳೆ ವಿದ್ಯಾರ್ಥಿ ಈಗ ಬೆಂಗಳೂರಿನಲ್ಲಿ ಸಬ್ ಇನ್ಸ್‌ಪೆಕ್ಟರ್

(ನ್ಯೂಸ್ ಕಡಬ) newskadaba.com ಗುತ್ತಿಗಾರು, ಜ. 27. ಪಿ.ಎಸ್.ಐ ನೇರ ನೇಮಕಾತಿಯಲ್ಲಿ ಆಯ್ಕೆಗೊಂಡಿದ್ದ ಗುತ್ತಿಗಾರಿನ ಪ್ರದೀಪ್ ಗೌಡ ಕೊಲ್ಯ ಬೆಂಗಳೂರು ಜೆ.ಪಿ.ನಗರದ ಪುಟ್ಟೇನಹಳ್ಳಿ ಠಾಣೆಯಲ್ಲಿ ಎಸ್.ಐ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರು ಗುತ್ತಿಗಾರಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪಡೆದು, ಪಿಯುಸಿ ಶಿಕ್ಷಣವನ್ನು ಕಡಬ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದ್ದು, ಪದವಿ ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಡೆದಿದ್ದರು. ಇಂಗ್ಲಿಷ್‌ ನಲ್ಲಿ ಸ್ನಾತಕೋತ್ತರ ಪದವಿಯನ್ನು ಮೈಸೂರು ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಪಡೆದಿದ್ದರು. 2008ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಇವರು 2014ರ

ಕಡಬ ಕಾಲೇಜಿನ ಹಳೆ ವಿದ್ಯಾರ್ಥಿ ಈಗ ಬೆಂಗಳೂರಿನಲ್ಲಿ ಸಬ್ ಇನ್ಸ್‌ಪೆಕ್ಟರ್ Read More »

ಕರಾವಳಿ, ಕರ್ನಾಟಕ

ಮಂಗಳೂರು: ಪ್ರಜಾಪ್ರಭುತ್ವದ ಆಶಯಗಳನ್ನು ಗೌರವಿಸಿ ➤ ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 27. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದಿ ರಾಷ್ಟ್ರವಾಗಿದ್ದು, ಸಮಾನತೆ ಸಾಮಾಜಿಕ  ನ್ಯಾಯ ಮತ್ತು ಸ್ವತಂತ್ರತೆ ಎಂಬ ಮೂರು ತತ್ವಗಳ  ಭದ್ರ ಅಡಿಪಾಯವನ್ನು ಹೊಂದಿದೆ. ಈ ಸಂವಿಧಾನದ ಮೂಲ ಆಶಯಗಳಿಗೆ  ಧಕ್ಕೆ ಬರದಂತೆ  ನಾವೆಲ್ಲ ಕೆಲಸ ಮಾಡಿ ದೇಶದ ಪ್ರಗತಿಗೆ ಕಟಿಬದ್ಧರಾಗಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಪ್ರಜೆಗಳಿಂದ, ಪ್ರಜೆಗಳಿಗೋಸ್ಕರ, ಪ್ರಜೆಗಳೇ ನಡೆಸುವ ಈ ಸಾಂವಿಧಾನಿಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ಈ ದಿನ ನಾವೆಲ್ಲ ನಮ್ಮ ತಪ್ಪು ಒಪ್ಪುಗಳನ್ನು ವಿಮರ್ಶಿಸಿ  ಸಿಂಹಾವಲೋಕನ ಮಾಡಿ, ದೇಶಕ್ಕಾಗಿ

ಮಂಗಳೂರು: ಪ್ರಜಾಪ್ರಭುತ್ವದ ಆಶಯಗಳನ್ನು ಗೌರವಿಸಿ ➤ ಡಾ|| ಚೂಂತಾರು Read More »

ಕರಾವಳಿ, ಕರ್ನಾಟಕ

ಮಂಗಳೂರು: ರೈತರ ಹೋರಾಟ ಬೆಂಬಲಿಸಿ ಕ್ಯಾಂಪಸ್ ಫ್ರಂಟ್ ಜಾಥಾ- ಗಣರಾಜ್ಯೋತ್ಸವ ಆಚರಣೆ ➤ ‘ಫ್ಯಾಸಿಸ್ಟ್ ದುರಾಡಳಿತ ದೇಶವನ್ನು ನುಂಗುತ್ತಿದೆ’ – ಅರ್ಫೀದ್ ಅಡ್ಕಾರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 27. ದೇಶದಾದ್ಯಂತ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾವೂರು ಏರಿಯಾದ ವತಿಯಿಂದ ಜೋಕಟ್ಟೆಯಿಂದ ಕೆ.ಬಿ.ಎಸ್ ತನಕ ಜಾಥಾ ಹಾಗೂ ಕೆ.ಬಿ.ಎಸ್ ಜಂಕ್ಷನ್‌ ನಲ್ಲಿ ಗಣರಾಜ್ಯೋತ್ಸವದ ಭಾಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಏರಿಯಾ ಅಧ್ಯಕ್ಷ ಝಿಯಾದ್ ಜೋಕಟ್ಟೆ ಜಾಥಾಕ್ಕೆ ಚಾಲನೆ ನೀಡಿ ಧ್ವಜಾರೋಹಣಗೈದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಉಪಾಧ್ಯಕ್ಷರಾದ ಅರ್ಫೀದ್ ಅಡ್ಕಾರ್ ಮಾತನಾಡಿ, ಇಂದು ದೇಶ ಕಂಡರಿಯದ ರೈತರ

ಮಂಗಳೂರು: ರೈತರ ಹೋರಾಟ ಬೆಂಬಲಿಸಿ ಕ್ಯಾಂಪಸ್ ಫ್ರಂಟ್ ಜಾಥಾ- ಗಣರಾಜ್ಯೋತ್ಸವ ಆಚರಣೆ ➤ ‘ಫ್ಯಾಸಿಸ್ಟ್ ದುರಾಡಳಿತ ದೇಶವನ್ನು ನುಂಗುತ್ತಿದೆ’ – ಅರ್ಫೀದ್ ಅಡ್ಕಾರ್ Read More »

ಕರಾವಳಿ, ಕರ್ನಾಟಕ
Scroll to Top