ಕರಾವಳಿ

ಟ್ರೆಕ್ಕಿಂಗ್ ಹೋಗುವವರಿಗೆ ಬಿಗ್ ಶಾಕ್ ➤ ಮಾ. 01ರಿಂದ ಕುಮಾರಪರ್ವತ ಚಾರಣಕ್ಕೆ ನಿಷೇಧ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ. 24. ಮಾರ್ಚ್ ಒಂದರಿಂದ ಮುಂದಿನ ಆದೇಶದವರೆಗೆ ಕುಮಾರಪರ್ವತ ಚಾರಣವನ್ನು ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆ ಆದೇಶಿಸಿದೆ. ಪಶ್ಚಿಮಘಟ್ಟದ ಶೋಲಾ ಅರಣ್ಯಕ್ಕೆ ಬೇಸಿಗೆ ಕಾಲದಲ್ಲಿ ಬೆಂಕಿ ತಗುಲುವ ಹಿನ್ನೆಲೆ ಹಾಗೂ ಮಳೆಗಾಲದಲ್ಲಿ ಭೂ ಕುಸಿತವಾಗುವ ಕಾರಣಕ್ಕೆ ಕುಮಾರಪರ್ವತ ಚಾರಣವನ್ನು ಮುಂದಿನ ಮಳೆಗಾಲದ ಕೊಮೆಯವರೆಗೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಕುಮಾರ ಪರ್ವತವು ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳನ್ನು ಹಂಚಿಕೊಂಡಿದೆ. ಈ ತಾಣವು ಸಮುದ್ರಮಟ್ಟದಿಂದ 1,712 ಮೀಟರ್ ಎತ್ತರದಲ್ಲಿದೆ. ಇಲ್ಲಿಂದ ಕುಕ್ಕೆ ಸುಬ್ರಹ್ಮಣ್ಯ ತಲುಪಿದರೆ […]

ಟ್ರೆಕ್ಕಿಂಗ್ ಹೋಗುವವರಿಗೆ ಬಿಗ್ ಶಾಕ್ ➤ ಮಾ. 01ರಿಂದ ಕುಮಾರಪರ್ವತ ಚಾರಣಕ್ಕೆ ನಿಷೇಧ Read More »

ಕರಾವಳಿ

ಕಡಬ: ನಾಳೆ (ಫೆ. 24) ನಡೆಯಲಿರುವ ತಾಲೂಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಸಮ್ಯಕ್ತ್ ಜೈನ್ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಫೆ. 23.‌ ತಾಲೂಕಿನ ಎರಡನೇ ಸಾಹಿತ್ಯ ಸಮ್ಮೇಳನವು ಫೆ.24 ರಂದು ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆಯಲಿದ್ದು, ಈ ಸಮ್ಮೇಳನದ ಕವಿಗೋಷ್ಠಿಗಾಗಿ ನೂಜಿಬಾಳ್ತಿಲದ ಯುವ ಸಾಹಿತಿ ಸಮ್ಯಕ್ತ್ ಜೈನ್ ರವರು ಆಯ್ಕೆಯಾಗಿದ್ದಾರೆ. ಸಾಫಿಯೆನ್ಶಿಯಾ ಬೆಥನಿ ಕಾಲೇಜು ನೆಲ್ಯಾಡಿಯಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾಭ್ಯಾಸವನ್ನು ಪಡೆಯುತ್ತಿರುವ ಇವರು ಹೊಸಂಗಡಿ ಬಸದಿ ಧರಣೇಂದ್ರ ಇಂದ್ರ ಹಾಗು ಮಂಜುಳಾ ದಂಪತಿಯ ಸುಪುತ್ರ. ಎಳೆ ವಯಸ್ಸಿನಲ್ಲಿಯೇ ಮೂರು ಸಾಹಿತ್ಯ ಕೃತಿ ಬರೆದು ಬಿಡುಗಡೆಗೊಳಿಸಿ ಸಾಹಿತ್ಯ ಕ್ಷೇತ್ರದಲ್ಲಿ ಮುಂದುವರೆಯುತ್ತಿದ್ದಾರೆ.

ಕಡಬ: ನಾಳೆ (ಫೆ. 24) ನಡೆಯಲಿರುವ ತಾಲೂಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಸಮ್ಯಕ್ತ್ ಜೈನ್ ಆಯ್ಕೆ Read More »

ಕರಾವಳಿ, ಕರ್ನಾಟಕ

ಪುತ್ತೂರು: ಟಿಪ್ಪರ್ ಹಾಗೂ ಸಿಹಿತಿಂಡಿ ಸಾಗಾಟದ ಓಮ್ನಿ ನಡುವೆ ಢಿಕ್ಕಿ ➤ ಪ್ರಯಾಣಿಕರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.23. ಮಾರುತಿ ಓಮ್ನಿ ಕಾರು ಹಾಗೂ ಟಿಪ್ಪರ್ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಪುತ್ತೂರಿನ ಮುಕ್ರಂಪಾಡಿಯಲ್ಲಿ ಮಂಗಳವಾರದಂದು ನಡೆದಿದೆ. ಪುತ್ತೂರಿನಿಂದ ಮುಕ್ರಂಪಾಡಿ ಕಡೆಗೆ ಬರುತ್ತಿದ್ದ ಟಿಪ್ಪರ್ ಹಾಗೂ ಸಿಹಿತಿಂಡಿ ಸಾಗಾಟದ ಓಮ್ನಿ ಕಾಎಉ ನಡುವೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓಮ್ನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಪುತ್ತೂರು: ಟಿಪ್ಪರ್ ಹಾಗೂ ಸಿಹಿತಿಂಡಿ ಸಾಗಾಟದ ಓಮ್ನಿ ನಡುವೆ ಢಿಕ್ಕಿ ➤ ಪ್ರಯಾಣಿಕರು ಅಪಾಯದಿಂದ ಪಾರು Read More »

ಕರಾವಳಿ

ಕಡಬ: ಕೋಟೆಸಾರು ಹೊಳೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ ➤ ಸ್ವತಃ ನೀರಿಗಿಳಿದು ಮೃತದೇಹ ಮೇಲಕ್ಕೆತ್ತಿದ ಕಡಬ ಎಸ್ಐ ರುಕ್ಮನಾಯ್ಕ್

(ನ್ಯೂಸ್ ಕಡಬ) newskadaba.com ಕಡಬ, ಫೆ.23. ಠಾಣಾ ವ್ಯಾಪ್ತಿಯ ಬಿಳಿನೆಲೆ ಗ್ರಾಮದ ಕೈಕಂಬ ಸಮೀಪದ ಕೋಟೆಸಾರು ಹೊಳೆಯಲ್ಲಿ ಸುಮಾರು 65 ರಿಂದ 70 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಮೃತದೇಹವೊಂದು ಮಂಗಳವಾರದಂದು ಪತ್ತೆಯಾಗಿದೆ.   ಮಂಗಳವಾರದಂದು ಕೈಕಂಬದ ಕೋಟೆಸಾರು ಹೊಳೆಯಲ್ಲಿ ಅಪರಿಚಿತ ಮಹಿಳೆಯೋರ್ವರ ಮೃತದೇಹ ಕಂಡು ಬಂದಿದೆ. ಮೃತದೇಹದ ಸಮೀಪ ಮೃತರು ಧರಿಸಿದ ಚಪ್ಪಲ್ ಹಾಗೂ ಕೈಯಲ್ಲಿ ಕನ್ನಡಕ ಇದ್ದು, ಮೃತರು ಇಂದು ಬೆಳಿಗ್ಗೆ ಯಾವುದೋ ಕಾರಣಕ್ಕಾಗಿ ಹೊಳೆಗೆ ಇಳಿದ ವೇಳೆ ಕಾಲು ಜಾರಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.

ಕಡಬ: ಕೋಟೆಸಾರು ಹೊಳೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ ➤ ಸ್ವತಃ ನೀರಿಗಿಳಿದು ಮೃತದೇಹ ಮೇಲಕ್ಕೆತ್ತಿದ ಕಡಬ ಎಸ್ಐ ರುಕ್ಮನಾಯ್ಕ್ Read More »

ಕರಾವಳಿ

ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಬಸ್ ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ➤ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಬಸ್ ಚಾಲಕ, ನಿರ್ವಾಹಕ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.23. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೋರ್ವನನ್ನು ಬಸ್ ಚಾಲಕ ಮತ್ತು ನಿರ್ವಾಹಕ ಸೇರಿ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಮಂಗಳವಾರದಂದು ಉಪ್ಪಿನಂಗಡಿಯಲ್ಲಿ ನಡೆದಿದೆ. ಪೊಲೀಸರ ವಶದಲ್ಲಿರುವ ಯುವಕನನ್ನು ಚಿಕ್ಕಮಗಳೂರು ನಿವಾಸಿ ಮುಹಮ್ಮದ್ ಸೈಫುಲ್ಲಾ ಎಂದು ಗುರುತಿಸಲಾಗಿದೆ. ಆರೋಪಿಯು ಮಂಗಳವಾರ ಬೆಳಗ್ಗೆ ಧರ್ಮಸ್ಥಳದಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ವಿದ್ಯಾರ್ಥಿನಿಯ ಮೈ ಮುಟ್ಟಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿನಿಯು ಬಸ್ ಚಾಲಕ, ನಿರ್ವಾಹಕರಲ್ಲಿ ಈ ವಿಚಾರ ತಿಳಿಸಿದ್ದು, ತಕ್ಷಣವೇ

ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಬಸ್ ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ➤ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಬಸ್ ಚಾಲಕ, ನಿರ್ವಾಹಕ Read More »

ಕರಾವಳಿ

ಎಡಮಂಗಲ ಪ್ರೌಢಶಾಲೆಗೆ ಸಹಕಾರಿ ಸಂಘದಿಂದ ಇನ್ವರ್ಟರ್ ಕೊಡುಗೆ

(ನ್ಯೂಸ್ ಕಡಬ) newskadaba.com ಎಡಮಂಗಲ, ಫೆ. 23. ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಎಡಮಂಗಲ ಇದರ ವತಿಯಿಂದ ಎಡಮಂಗಲದ ಸರಕಾರಿ ಪ್ರೌಢ ಶಾಲೆಗೆ 2 ಕೆ.ವಿ. ಇನ್ವರ್ಟರ್ ಒಂದನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ, ನಿರ್ದೇಶಕರಾದ ಅವಿನಾಶ್ ದೇವರಮಜಲು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ್ ಡಿ. ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ರಾಮಚಂದ್ರ, ಉಪಾಧ್ಯಾಯರಾದ ಪದ್ಮನಾಭ ಹಾಗೂ ರಮೇಶ್ ಮೊದಲಾದವರು ಉಪಸ್ಥಿತರಿದ್ದರು.

ಎಡಮಂಗಲ ಪ್ರೌಢಶಾಲೆಗೆ ಸಹಕಾರಿ ಸಂಘದಿಂದ ಇನ್ವರ್ಟರ್ ಕೊಡುಗೆ Read More »

ಕರಾವಳಿ, ಕರ್ನಾಟಕ

ಕಡಬ: ಶ್ರೀಕಂಠಸ್ವಾಮಿ ಶ್ರೀಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಮುತ್ತುಕುಮಾರ್ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಫೆ. 23. ಶ್ರೀಕಂಠಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಜಿಲ್ಲಾ ಧಾರ್ಮಿಕ ಪರಿಷತ್ ಸೂಚನೆಯಂತೆ 9 ಮಂದಿ ಸದಸ್ಯರನ್ನು ನೇಮಿಸಲಾಗಿದೆ. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಹೊಟೇಲ್ ಉದ್ಯಮಿ ಮುತ್ತು ಕುಮಾರ್ ಹಾಗೂ ಕಾರ್ಯದರ್ಶಿಯಾಗಿ ಗಂಗಾಧರ ಕಡಬ ಅವರು ಆಯ್ಕೆಯಾಗಿದ್ದಾರೆ. ಸಮಿತಿಗೆ ದೇವಸ್ಥಾನದ ಪ್ರಧಾನ ಅರ್ಚಕ ಕೇಶವ ಬೈಪಾಡಿತ್ತಾಯ, ಮುತ್ತು ಕುಮಾರ್, ಶ್ರೀಮತಿ ಕೆ.ಜಿ. ಶಾಂತಿ ಭಟ್, ವಿಜಯ ಕುಮಾರಿ.ಪಿ, ರಾಮಚಂದ್ರ.ಕೆ, ಪ್ರಸಾದ್ ಗೌಡ.ಕೆ, ಮೋನಪ್ಪ ಗೌಡ ನಾಡೋಳಿ, ಪುರುಷೋತ್ತಮ ಕೆ.ಎಸ್.

ಕಡಬ: ಶ್ರೀಕಂಠಸ್ವಾಮಿ ಶ್ರೀಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಮುತ್ತುಕುಮಾರ್ ಆಯ್ಕೆ Read More »

ಕರಾವಳಿ, ಕರ್ನಾಟಕ

?ಬೆಳ್ತಂಗಡಿ: ವ್ಯಕ್ತಿಗೆ ಚೂರಿಯಿಂದ ಇರಿತ ➤ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ನೆರಿಯ, ಫೆ. 23. ವ್ಯಕ್ತಿಯೋರ್ವರಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದ ಘಟನೆ ಫೆ.21ರಂದು ನೆರಿಯ ಕಾಡುರಾತ್ರಿ ಎಂಬಲ್ಲಿ ನಡೆದಿದೆ. ಚೂರಿ ಇರಿತಕ್ಕೊಳಗಾದವರನ್ನು ನೆರಿಯ ಗ್ರಾಮದ ಮಾಥ್ಯೂ ಎನ್.ಟಿ ಎಂದು ಗುರುತಿಸಲಾಗಿದೆ. ಇವರು ತನ್ನ ಪುತ್ರ ಮಿಥುನ್ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ದ್ವಿಚಕ್ರ ವಾಹನದಲ್ಲಿ ಬಂದ ಪರಿಚಿತರೇ ಆದ ಸೋಜೋ ಹಾಗೂ ಅವರ ತಮ್ಮ ಜೋಬಿನ್ ಎಂಬವರು ಮಿಥುನ್ ರವರನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಚೂರಿಯಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಇದನ್ನು

?ಬೆಳ್ತಂಗಡಿ: ವ್ಯಕ್ತಿಗೆ ಚೂರಿಯಿಂದ ಇರಿತ ➤ ಗಂಭೀರ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

? ಉಪ್ಪಿನಂಗಡಿ: ಅರಣ್ಯ ವೀಕ್ಷಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ. 23. ಅರಣ್ಯ ಇಲಾಖಾ ಸಿಬ್ಬಂದಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಆತ್ಮಹತ್ಯೆಗೈದವರನ್ನು ಪುತ್ತೂರು ಉರ್ಲಾಂಡಿ ನಿವಾಸಿ ಜನಾರ್ದನ್ ಎನ್ (36) ಎಂದು ಗುರುತಿಸಲಾಗಿದೆ. ಇವರು ಕಳೆದ ಹತ್ತು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪ್ರಸ್ತುತ ಉಪ್ಪಿನಂಗಡಿ ವಲಯ ಅರಣ್ಯ ಇಲಾಖಾ ವ್ಯಾಪ್ತಿಯಲ್ಲಿ ಅರಣ್ಯ ವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಕುಡಿತದ ಚಟ ಹೊಂದಿದ್ದು, ಆದಿತ್ಯವಾರದಂದು ರಾತ್ರಿ ಉಪ್ಪಿನಂಗಡಿ ಕೆಂಪಿ ಮಜಲು ಎಂಬಲ್ಲಿನ ಅರಣ್ಯ ಇಲಾಖೆಯ

? ಉಪ್ಪಿನಂಗಡಿ: ಅರಣ್ಯ ವೀಕ್ಷಕ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಳ್ಳಾಲ: ಅಕ್ರಮ ಮರಳು ಸಾಗಿಸುತ್ತಿದ್ದ ಟಿಪ್ಪರ್ ಪಲ್ಟಿ ➤ ಮಹಿಳೆ ಪಾರು

(ನ್ಯೂಸ್ ಕಡಬ) newskadaba.com ಉಳ್ಳಾಲ, ಫೆ. 22. ಅಕ್ರಮ ಮರಳು ಸಾಗಿಸುತ್ತಿದ್ದ ಟಿಪ್ಪರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಜಾಗದ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ದೇವಸ್ಥಾನದಿಂದ ಹೊರಬರುತ್ತಿದ್ದ ಮಹಿಳೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ತಲಪಾಡಿ ದೇವಿಪುರ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ನಡೆದಿದೆ. ತಲಪಾಡಿಯ ವಿಜಯಾ ಬ್ಯಾಂಕ್ ಬಳಿಯಿರುವ ನದಿಯಿಂದ ಪ್ರತೀನಿತ್ಯವೂ ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿದ್ದು, ಸೋಮವಾರ ಮಧ್ಯಾಹ್ನದ ವೇಳೆಗೆ ಮುಖ್ಯ ರಸ್ತೆ ತಪ್ಪಿಸಿ ತಲಪಾಡಿಯ ಒಳ ರಸ್ತೆಯ ಮೂಲಕ

ಉಳ್ಳಾಲ: ಅಕ್ರಮ ಮರಳು ಸಾಗಿಸುತ್ತಿದ್ದ ಟಿಪ್ಪರ್ ಪಲ್ಟಿ ➤ ಮಹಿಳೆ ಪಾರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top