ಕರಾವಳಿ

ಕೊಕ್ಕಡ: ಮರ ಕಡಿಯುತ್ತಿದ್ದ ವೇಳೆ ಅವಘಡ ➤ ಮೂವರ ದುರ್ಮರಣ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ. 09. ಮನೆ ಸಮೀಪ ಮರ ತುಂಡರಿಸುತ್ತಿದ್ದ ವೇಳೆ ಮರ ಬಿದ್ದ ಪರಿಣಾಮ ಮೂವರು ಮೃತಪಟ್ಟ ಘಟನೆ ಬೆಳ್ತಂಗಡಿಯ ಪಟ್ರಮೆ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಪಟ್ರಮೆ ರಾಮಣ್ಣ ಕುಂಬಾರ ಅವರ ಪುತ್ರ ಪ್ರಶಾಂತ್ (21 ವ), ಸೇಸಪ್ಪ ಪೂಜಾರಿ ಅವರ ಪುತ್ರ ಸ್ವಸ್ತಿಕ್ (23 ವ) ಹಾಗೂ ಉಪ್ಪಿನಂಗಡಿಯ ಗಣೇಶ್ (38 ವ) ಎಂದು ಗುರುತಿಸಲಾಗಿದೆ. ಪಟ್ರಮೆ ಗ್ರಾಮದ ಅನಾರು ಬಳಿ ಕಾಯಿಲ ಸಮೀಪ ಇಂದು ಮಧ್ಯಾಹ್ನ ಧೂಪದ ಮರವೊಂದನ್ನು ಕಡಿಯುತ್ತಿದ್ದ […]

ಕೊಕ್ಕಡ: ಮರ ಕಡಿಯುತ್ತಿದ್ದ ವೇಳೆ ಅವಘಡ ➤ ಮೂವರ ದುರ್ಮರಣ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಎಡಮಂಗಲ ದಲಿತ ಮಹಿಳೆಯ ಮನೆ ಧ್ವಂಸ ಪ್ರಕರಣ ➤ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು- ಸಚಿವ ಎಸ್‌.ಅಂಗಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 09. ಎಡಮಂಗಲದ ದಲಿತ ಮಹಿಳೆಯೋರ್ವರ ಮನೆ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ಸೂಚಿಸುವುದಾಗಿ ಸಚಿವ ಎಸ್.ಅಂಗಾರ ಹೇಳಿದ್ದಾರೆ. ಬೆಂಗಳೂರಿನ ಮೊಗೇರ ಕ್ಷೇಮಾಭಿವೃದ್ದಿ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ್ ಅವರು ಸಚಿವರನ್ನು ಸೋಮವಾರದಂದು ಭೇಟಿಯಾಗಿ ಘಟನೆಯನ್ನು ಪ್ರಸ್ತಾಪಿಸಿದ ವೇಳೆ ಮಾತನಾಡಿದ ಸಚಿವರು ಈ ಘಟನೆಯ ನಿಜಾಂಶ ಏನೆಂಬುದನ್ನು ಪೊಲೀಸ್ ಇಲಾಖೆ ಸೂಕ್ತ ರೀತಿಯಲ್ಲಿ ತನಿಖೆ ಮಾಡಬೇಕು ಮತ್ತು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು

ಎಡಮಂಗಲ ದಲಿತ ಮಹಿಳೆಯ ಮನೆ ಧ್ವಂಸ ಪ್ರಕರಣ ➤ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು- ಸಚಿವ ಎಸ್‌.ಅಂಗಾರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಬಸ್ ನಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 09. ಯುವತಿಯೋರ್ವಳಿಗೆ ಬಸ್‌ ನಲ್ಲಿ ಕಿರುಕುಳ ಕೊಡುತ್ತಿದ್ದ ಆರೋಪಿಯೋರ್ವನನ್ನು ಸಾರ್ವಜನಿಕರು ರೆಡ್ ಹ್ಯಾಂಡ್ ಆಗಿ ಹಿಡಿದು ಪೋಲೀಸರಿಗೆ ಒಪ್ಪಿಸಿರುವ ಘಟನೆ ಸೋಮವಾರದಂದು ಗಡಿಪಿಲ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಪುತ್ತೂರಿನ ಬಸ್ ನಿಲ್ದಾಣದ ಬಳಿ ಅಂಗಡಿ ಹೊಂದಿರುವ ಬೆಟ್ಟಂಪಾಡಿಯ ನೌಫಲ್ ಎಂದು ಗುರುತಿಸಲಾಗಿದೆ. ಸೋಮವಾರದಂದು ಸಂಜೆ ಪುತ್ತೂರು- ಸವಣೂರು -ಆಲಂಕಾರು ಮೂಲಕ ಕಡಬಕ್ಕೆ ಹೋಗುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಖಾಸಗಿ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿಯೋರ್ವರ ಜತೆ ಈತ ಅಸಭ್ಯವಾಗಿ ವರ್ತಿಸಿದ್ದು, ಇದನ್ನು

ಪುತ್ತೂರು: ಬಸ್ ನಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ ➤ ಆರೋಪಿ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಿಆರ್.ಎಲ್ ಲಾಜಿಸ್ಟಿಕ್ ಸಂಸ್ಥೆಯ ವತಿಯಿಂದ ಧರ್ಮಸ್ಥಳಕ್ಕೆ ಎರಡು ಡಬಲ್ ಡೆಕ್ಕರ್ ಬಸ್

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಮಾ. 09. ಇಲ್ಲಿನ “ಮಂಜೂಷಾ” ವಾಹನ ಸಂಗ್ರಹಾಲಯಕ್ಕೆ ಮುಂಬೈನಲ್ಲಿರುವ ಧರ್ಮಸ್ಥಳದ ಭಕ್ತರು ಸಂಗ್ರಹಿಸಿ ಕಳುಹಿಸಿದ ಎರಡು ಡಬಲ್ ಡೆಕ್ಕರ್ ಬಸ್‌ ಗಳು ಧರ್ಮಸ್ಥಳಕ್ಕೆ ತಲುಪಿವೆ. ಮುಂಬೈನಿಂದ ಧರ್ಮಸ್ಥಳಕ್ಕೆ ಡಬಲ್ ಡೆಕ್ಕರ್ ಬಸ್‌ಗಳ ಸಾಗಾಟವನ್ನು ವಿ.ಆರ್.ಎಲ್. ಲಾಜಿಸ್ಟಿಕ್ ಸಂಸ್ಥೆಯವರು ಉಚಿತವಾಗಿ ಮಾಡಿಕೊಟ್ಟಿದ್ದು, ಧರ್ಮಾಧಿಕಾರಿ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಅವರಿಬ್ಬರಿಗೂ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದವನ್ನು ಕೋರಿ ಶುಭ ಹಾರೈಸಿದ್ದಾರೆ.

ವಿಆರ್.ಎಲ್ ಲಾಜಿಸ್ಟಿಕ್ ಸಂಸ್ಥೆಯ ವತಿಯಿಂದ ಧರ್ಮಸ್ಥಳಕ್ಕೆ ಎರಡು ಡಬಲ್ ಡೆಕ್ಕರ್ ಬಸ್ Read More »

ಕರಾವಳಿ, ಕರ್ನಾಟಕ

ಕುಕ್ಕೇ ಸುಬ್ರಹ್ಮಣ್ಯ ದೇವಾಲಯದ ಮಾಸ್ಟರ್ ಪ್ಲಾನ್ ಸಮಿತಿಗೆ ಸದಸ್ಯರ ನೇಮಕ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮಾ. 09. ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಮಾಸ್ಟರ್‌ ಪ್ಲಾನ್‌ ಕಮಿಟಿಯು ಪುನರ್‌ ರಚನೆಯಾಗಿದ್ದು, ನಾಲ್ವರು ನೂತನ ಸದಸ್ಯರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಮಾಸ್ಟರ್‌ ಪ್ಲಾನ್‌ ಸಮಿತಿಯಲ್ಲಿದ್ದ ನಾಲ್ವರ ನೇಮಕಾತಿ ರದ್ದುಗೊಳಿಸಿ, ನೂತನ ಸದಸ್ಯರಾಗಿ ಕಿಶೋರ್‌ ಕೂಜುಗೋಡು, ಡಾ.ಚಂದ್ರಶೇಖರ. ಎ, ಮನೋಜ್‌ ಎಸ್‌, ಚಂದ್ರಶೇಖರ ಟಿ ಇವರನ್ನು ತಕ್ಷಣವೇ ನೇಮಕ ಮಾಡುವಂತೆ ಧಾರ್ಮಿಕ ದತ್ತಿ ಇಲಾಖಾ ಆಯುಕ್ತರು ಆದೇಶ ನೀಡಿದ್ದರು.

ಕುಕ್ಕೇ ಸುಬ್ರಹ್ಮಣ್ಯ ದೇವಾಲಯದ ಮಾಸ್ಟರ್ ಪ್ಲಾನ್ ಸಮಿತಿಗೆ ಸದಸ್ಯರ ನೇಮಕ Read More »

ಕರಾವಳಿ, ಕರ್ನಾಟಕ

ಮಂಗಳೂರು: ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ವಶಕ್ಕೊಳಗಾದ ಸರ್ವೇಯರ್ ಜಾಮೀನು ಅರ್ಜಿ ವಜಾ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 09. ಲಂಚ ಪಡೆದು ಸಿಕ್ಕಿಬಿದ್ದ ಮಂಗಳೂರು ತಾಲೂಕು ಕಚೇರಿಯ ಸರ್ವೆಯರ್ ಗಂಗಾಧರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇದೀಗ ಕೋರ್ಟ್ ವಜಾಗೊಳಿಸಿದೆ.‌ ಮರ ಕಡಿಯುವ ವಿಚಾರಕ್ಕೆ ಸಂಬಂಧಿಸಿ ಜಾಗವನ್ನು ಅಳತೆ ಮಾಡಿ ನಕಾಶೆಯನ್ನು ನೀಡಲು ಉಳ್ಳಾಲದ ಸೊಹೈಲ್ ಎಂಬವರಿಂದ 30,000 ರೂ. ಲಂಚದ ಬೇಡಿಕೆ ಇಟ್ಟಿದ್ದು, ಬಳಿಕ ಮಾತುಕತೆ ನಡೆದು ರೂ. 20 ಸಾವಿರಕ್ಕೆ ಒಪ್ಪಿ 3,500 ರೂ. ಮುಂಗಡ ಪಡೆದಿದ್ದ. ಈ ವೇಳೆ ಸುಹೈಲ್ ರವರು ಎಸಿಬಿಗೆ ತಿಳಿಸಿದ್ದು

ಮಂಗಳೂರು: ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ವಶಕ್ಕೊಳಗಾದ ಸರ್ವೇಯರ್ ಜಾಮೀನು ಅರ್ಜಿ ವಜಾ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಎಡಮಂಗಲ: ದಲಿತ ಮಹಿಳೆಯ ಮೇಲೆ ದೌರ್ಜನ್ಯ ಹಾಗೂ ಮನೆ ಧ್ವಂಸ ಖಂಡಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಬೆಳ್ಳಾರೆ ಠಾಣಾ ಮುಂಭಾಗ ಪ್ರತಿಭಟನೆಗೆ ಸಿದ್ದತೆ ➤ ದ.ಕ ಎಸ್ಪಿ ಗೆ

(ನ್ಯೂಸ್ ಕಡಬ) newskadaba.com ಕಡಬ, ಮಾ. 09. ತಾಲೂಕಿನ ಎಡಮಂಗಲದ ದಲಿತ ಮಹಿಳೆಯೋರ್ವರ ಮೇಲೆ ಸ್ಥಳೀಯ ನಿವಾಸಿ ರವಿ ಶೆಟ್ಟಿ ಮತ್ತು ಅವರ ಪತ್ನಿ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಜಾತಿನಿಂದನೆ ಮತ್ತು ಕೊಲೆ ಬೆದರಿಕೆಯೊಡ್ಡಿ ದಲಿತ ಮಹಿಳೆಯು ವಾಸಿಸುತ್ತಿದ್ದ ಮನೆಯನ್ನು ಧ್ವಂಸಗೊಳಿಸಿದ್ದು, ಇದನ್ನು ಖಂಡಿಸಿದ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಠಾಜೆ ಅವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಮಹಿಳೆಗೆ ನ್ಯಾಯ ದೊರಕಿಸಿಕೊಡುವಂತೆ ದೂರು ನೀಡಿದ್ದರು. ಮಹಿಳೆಯ ದೂರನ್ನು ಸ್ವೀಕರಿಸಿ ಎಫ್.ಐ.ಆರ್ ಕೂಡಾ ಮಾಡಲಾಗಿತ್ತಾದರೂ ಘಟನೆ ಕಳೆದು

ಎಡಮಂಗಲ: ದಲಿತ ಮಹಿಳೆಯ ಮೇಲೆ ದೌರ್ಜನ್ಯ ಹಾಗೂ ಮನೆ ಧ್ವಂಸ ಖಂಡಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಬೆಳ್ಳಾರೆ ಠಾಣಾ ಮುಂಭಾಗ ಪ್ರತಿಭಟನೆಗೆ ಸಿದ್ದತೆ ➤ ದ.ಕ ಎಸ್ಪಿ ಗೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಲಿಯುಲ್ಲಾಹಿ ದರ್ಗಾ ಶರೀಫ್ ಪೇರಡ್ಕ ಉರೂಸ್ ಸಮಾರಂಭ ಮತ್ತು ಸರ್ವಧರ್ಮ ಸಮ್ಮೇಳನ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 09. ಮುಹಿಯುದ್ದೀನ್ ಜುಮ್ಮಾ ಮಸೀದಿ ಪೇರಡ್ಕದಲ್ಲಿ ಜಾತಿಮತ ಭೇದವಿಲ್ಲದೆ ಸರ್ವರಿಂದಲೂ ಗೌರವಿಸುತ್ತಿರುವ ಆಶಾಕೇಂದ್ರವಾದ ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮ ಹಾಗೂ ಸರ್ವಧರ್ಮ ಸಮ್ಮೇಳನವು ಮಾರ್ಚ್‌ 7 ರಂದು ಪೇರಡ್ಕ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆಯಿತು. ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಮ್.ಶಹೀದ್ ತೆಕ್ಕಿಲ್, ಪೇರಡ್ಕ ಪ್ರದೇಶದಲ್ಲಿ ತೆಕ್ಕಿಲ್ ಮಹಮ್ಮದ್ ಹಾಜಿಯವರ ಕಾಲದಿಂದಲೇ ಈ ಪ್ರದೇಶದ ಹಿಂದೂ ಸಹೋದರರು ದರ್ಗಾಕ್ಕೆ ಭೇಟಿ

ವಲಿಯುಲ್ಲಾಹಿ ದರ್ಗಾ ಶರೀಫ್ ಪೇರಡ್ಕ ಉರೂಸ್ ಸಮಾರಂಭ ಮತ್ತು ಸರ್ವಧರ್ಮ ಸಮ್ಮೇಳನ Read More »

ಕರಾವಳಿ, ಕರ್ನಾಟಕ

ಮರ್ಧಾಳ ನೆಕ್ಕಿತ್ತಡ್ಕ ಮಖಾಂ ಉರೂಸ್ ಗೆ ಚಾಲನೆ ➤ ಇಂದಿನಿಂದ ಮಾರ್ಚ್ 11 ರ ವರೆಗೆ ಉರೂಸ್ ಸಮಾರಂಭ

(ನ್ಯೂಸ್ ಕಡಬ) newskadaba.com ಕಡಬ, ಮಾ.08. ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿರುವ ಇತಿಹಾಸ ಪ್ರಸಿದ್ಧ ನೆಕ್ಕಿತ್ತಡ್ಕ ಮಖಾಂ ಉರೂಸ್ ಕಾರ್ಯಕ್ರಮವು ಇಂದಿನಿಂದ ಆರಂಭಗೊಂಡು ಮಾರ್ಚ್ 11 ರ ವರೆಗೆ ನಡೆಯಲಿದೆ. ಇಂದು (ಮಾರ್ಚ್ 08) ನೆಕ್ಕಿತ್ತಡ್ಕ ದರ್ಗಾ ವಠಾರದಲ್ಲಿ ಉರೂಸ್ ಸಮಿತಿಯ ಅಧ್ಯಕ್ಷರಾದ ಸಾದಿಕ್ ಕೋಡಿಕಂಡ ಧ್ವಜಾರೋಹಣಗೈಯುವ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಪಟ್ಟೆ, ಶಾಹುಲ್ ಹಮೀದ್

ಮರ್ಧಾಳ ನೆಕ್ಕಿತ್ತಡ್ಕ ಮಖಾಂ ಉರೂಸ್ ಗೆ ಚಾಲನೆ ➤ ಇಂದಿನಿಂದ ಮಾರ್ಚ್ 11 ರ ವರೆಗೆ ಉರೂಸ್ ಸಮಾರಂಭ Read More »

ಕರಾವಳಿ

‘ಹೆಡ್ ಶಾಟ್’ ಮೆನ್ಸ್ ಪಾರ್ಲರ್ ಶುಭಾರಂಭ ➤ ಹೇರ್ ಕಟ್ಟಿಂಗ್ ಮಾಡಿಸಿ, ಕ್ಯಾಶ್ ಬ್ಯಾಕ್ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಮಾ.06. ಯುವ ಜನತೆ ಸ್ವ ಉದ್ಯೋಗ ಮಾಡುವುದರಿಂದ ಆರ್ಥಿಕವಾಗಿ ಸದೃಢವಾಗಬಲ್ಲರು. ಯಾವುದೇ ಕ್ಲಿಷ್ಟಕರ ಸಂದರ್ಭದಲ್ಲಿಯೂ ಎದೆಗುಂದದೆ ಮುನ್ನಡೆದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ್ ಎನ್.ಕೆ. ಹೇಳಿದರು. ಅವರು ಕಡಬದ ಪಂಜ ರಸ್ತೆಯ ಯೋಗಕ್ಷೇಮ ಸಂಕೀರ್ಣದಲ್ಲಿ ಶುಭಾರಂಭಗೊಂಡ ‘ಹೆಡ್ ಶಾಟ್’ ಸುಸಜ್ಜಿತ ಮೆನ್ಸ್ ಪಾರ್ಲರನ್ನು ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಶ್ರೀಹರಿ ಸ್ವೀಟ್ಸ್ ನ ಕಿಶನ್ ಕುಮಾರ್, ಹರಿಪ್ರಸಾದ್ ರೈ ಬೆದ್ರಾಜೆ ಮೊದಲಾದವರು

‘ಹೆಡ್ ಶಾಟ್’ ಮೆನ್ಸ್ ಪಾರ್ಲರ್ ಶುಭಾರಂಭ ➤ ಹೇರ್ ಕಟ್ಟಿಂಗ್ ಮಾಡಿಸಿ, ಕ್ಯಾಶ್ ಬ್ಯಾಕ್ ಆಫರ್ Read More »

ಕರಾವಳಿ
Scroll to Top