ಕರಾವಳಿ

ಸುಬ್ರಹ್ಮಣ್ಯ: ಹಠಾತ್ತನೆ ಕಳಚಿ ಕಾರಿಗೆ ಅಪ್ಪಳಿಸಿದ ಚಲಿಸುತ್ತಿದ್ದ ಜೀಪಿನ ಚಕ್ರ ➤ ಕಾರಿನಲ್ಲಿದ್ದವರು ಪವಾಡ ಸದೃಶ ಪಾರು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮೇ.14. ಚಲಿಸುತ್ತಿದ್ದ ಜೀಪಿನ ಮುಂಭಾಗದ ಚಕ್ರ ಕಳಚಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರಿಗೆ ಅಪ್ಪಳಿಸಿದ ಪರಿಣಾಮ ಕಾರಿನ ಮುಂಭಾಗ ನಜ್ಜುಗುಜ್ಜಾದ ಘಟನೆ ಸುಬ್ರಹ್ಮಣ್ಯದ ಏನೆಕಲ್ಲಿನಲ್ಲಿ ಶುಕ್ರವಾರದಂದು ನಡೆದಿದೆ. ಏನೆಕಲ್ಲು ಗ್ರಾಮದ ಬಾನಡ್ಕ ನಿವಾಸಿ ಉದಯಕುಮಾರ್ ಎಂಬವರು ಚಲಾಯಿಸುತ್ತಿದ್ದ ಜೀಪು ಏನೆಕಲ್ಲು ಸಮೀಪದ ಬಾಲಾಡಿ ಎಂಬಲ್ಲಿ ತಲುಪಿದಾಗ ಜೀಪಿನ ಮುಂಭಾಗದ ಚಕ್ರವು ಕಳಚಿ ಎದುರಿನಿಂದ ಬರುತ್ತಿದ್ದ ಹೋಂಡಾ ಕಾರಿಗೆ ಅಪ್ಪಳಿಸಿದೆ. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನಗಳಲ್ಲಿದ್ದವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.   […]

ಸುಬ್ರಹ್ಮಣ್ಯ: ಹಠಾತ್ತನೆ ಕಳಚಿ ಕಾರಿಗೆ ಅಪ್ಪಳಿಸಿದ ಚಲಿಸುತ್ತಿದ್ದ ಜೀಪಿನ ಚಕ್ರ ➤ ಕಾರಿನಲ್ಲಿದ್ದವರು ಪವಾಡ ಸದೃಶ ಪಾರು Read More »

ಕರಾವಳಿ

ಮರ್ಧಾಳ: ಹಸಿವಿನಿಂದ ಕಂಗೆಟ್ಟಿದ್ದ ಮೂಕ ವ್ಯಕ್ತಿಗೆ ಪೊಲೀಸರಿಂದ ಉಪಚಾರ ➤ ಕಡಬ ಪೊಲೀಸರು ಹಾಗೂ ಗ್ರಾ.ಪಂ. ಅಧ್ಯಕ್ಷರ ಕಾರ್ಯಕ್ಕೆ ಮೆಚ್ಚುಗೆ

(ನ್ಯೂಸ್ ಕಡಬ) newskadaba.com ಕಡಬ, ಮೇ.14. ಹಸಿವಿನಿಂದ ಬಳಲಿದ್ದ ಅಪರಿಚಿತ ಮೂಕ ವ್ಯಕ್ತಿಯೋರ್ವರಿಗೆ‌ ಪೊಲೀಸರು ಹಾಗೂ ಪಂಚಾಯತ್ ಅಧ್ಯಕ್ಷರು ಆಹಾರ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಸುಬ್ರಹ್ಮಣ್ಯ ದೇವಸ್ಥಾನದ ಕಡೆಗೆ ಅಪರಿಚಿತ ವ್ಯಕ್ತಿಯೋರ್ವರು ನಡೆದುಕೊಂಡು ತೆರಳುತ್ತಿರುವುದನ್ನು ಗಮನಿಸಿದ ಕಡಬ ಠಾಣಾ ಪೊಲೀಸ್ ಚಂದನ್ ಕುಮಾರ್ ಹಾಗೂ ಹೋಮ್ ಗಾರ್ಡ್ ಪವಿತ್ ಸ್ಥಳೀಯ ನಿವಾಸಿ ಇಸ್ಮಾಯಿಲ್ ಎಂಬವರ ಮನೆಯಿಂದ ಆಹಾರ ತರಿಸಿ ನೀಡಿದ್ದಾರೆ. ಈ ವೇಳೆ ಗಸ್ತು ವಾಹನ ಹೊಯ್ಸಳದಲ್ಲಿದ್ದ ಸಿಬ್ಬಂದಿಗಳಾದ ಪ್ರಕಾಶ್ ಮತ್ತು ವಿಜಯ ಹಾಗೂ ಮರ್ಧಾಳ ಗ್ರಾಮ

ಮರ್ಧಾಳ: ಹಸಿವಿನಿಂದ ಕಂಗೆಟ್ಟಿದ್ದ ಮೂಕ ವ್ಯಕ್ತಿಗೆ ಪೊಲೀಸರಿಂದ ಉಪಚಾರ ➤ ಕಡಬ ಪೊಲೀಸರು ಹಾಗೂ ಗ್ರಾ.ಪಂ. ಅಧ್ಯಕ್ಷರ ಕಾರ್ಯಕ್ಕೆ ಮೆಚ್ಚುಗೆ Read More »

ಕರಾವಳಿ

ಕಡಬ, ಪುತ್ತೂರು, ಸುಳ್ಯ ವ್ಯಾಪ್ತಿಯಲ್ಲಿ ಕೊರೋನಾ ಇಳಿಕೆ ➤ 24 ಗಂಟೆಗಳಲ್ಲಿ 158 ಮಂದಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ, ಮೇ.10. ಗ್ರಾಮೀಣ ಭಾಗದಲ್ಲಿ ಗುರುವಾರದಂದು ಕೊಂಚ ಏರಿಕೆ ಕಂಡಿದ್ದ ಕೋವಿಡ್ ಪ್ರಕರಣ, ಇಂದು ಮತ್ತೆ ಇಳಿಕೆಯಾಗಿದೆ. ಶುಕ್ರವಾರದಂದು ಕಡಬ, ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ 158 ಮಂದಿಗೆ ಕೊರೋನಾ ದೃಢಪಟ್ಟಿದೆ. ಆರೋಗ್ಯ ಇಲಾಖೆಯ ಮಾಹಿತಿಯಂತೆ ಕಡಬ ತಾಲೂಕಿನಲ್ಲಿ 45 ಪ್ರಕರಣ, ಪುತ್ತೂರು ತಾಲೂಕಿನಲ್ಲಿ 56 ಪ್ರಕರಣ ಹಾಗೂ ಸುಳ್ಯ ತಾಲೂಕಿನಲ್ಲಿ 57 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ.      

ಕಡಬ, ಪುತ್ತೂರು, ಸುಳ್ಯ ವ್ಯಾಪ್ತಿಯಲ್ಲಿ ಕೊರೋನಾ ಇಳಿಕೆ ➤ 24 ಗಂಟೆಗಳಲ್ಲಿ 158 ಮಂದಿಗೆ ಕೊರೋನಾ ಪಾಸಿಟಿವ್ Read More »

ಕರಾವಳಿ

ಅರಂತೋಡು: ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ 16ನೇ ವರ್ಷದ ಇಫ್ತಾರ್ ಕಿಟ್ ವಿತರಣೆ

(ನ್ಯೂಸ್ ಕಡಬ) Newskadaba.com ಅರಂತೋಡು, ಮೇ. 12. ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ರಂಜಾನ್ ತಿಂಗಳಲ್ಲಿ ಪ್ರತಿವರ್ಷ ಸೌಹಾರ್ದ ಇಫ್ತಾರ್ ಆಚರಣೆಗಳನ್ನು ಮಾಡುತ್ತಾ ಬಂದಿದ್ದು, ಕಳೆದ ವರ್ಷದಿಂದ ಕೊರೋನಾ ರೋಗ ದೇಶದದ್ಯಾಂತ ಹರಡಿದ್ದು ಈ ಬಾರಿ 2ನೇ ಕೊರೋನಾ ಅಲೆಯಿಂದ ರಾಜ್ಯ ಸರ್ಕಾರ ಹೊರಡಿಸಿರುವ ಲೌಕ್ ಡೌನ್ ನಿಂದ ಪ್ರತಿಷ್ಠಾನದ ವತಿಯಿಂದ ಸರಳ ಕಾರ್ಯಕ್ರಮದಲ್ಲಿ ಇಫ್ತಾರ್ ಕಿಟ್ ತಯಾರಿಸಿ 74 ಮನೆಗಳಿಗೆ ವಿತರಿಸಲಾಯಿತು. ಇದರ ಸಭಾಧ್ಯಕ್ಷತೆಯನ್ನು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಮ್.ಶಹೀದ್ ತೆಕ್ಕಿಲ್ ವಹಿಸಿದರು. ಕೊರೋನಾ ನಿರ್ಮೂಲನೆಗಾಗಿ ವಿಶೇಷ

ಅರಂತೋಡು: ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ 16ನೇ ವರ್ಷದ ಇಫ್ತಾರ್ ಕಿಟ್ ವಿತರಣೆ Read More »

ಕರಾವಳಿ, ಕರ್ನಾಟಕ

ಕೊರೋನಾ ಸೋಂಕಿಗೆ ಕಡಬ ಮೂಲದ 36 ವರ್ಷದ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.12. ಕೊರೋನಾ ಸೋಂಕಿಗೆ ತುತ್ತಾಗಿ ಕಡಬ ಮೂಲದ 36 ವರ್ಷದ ಯುವಕನೋರ್ವ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ. ಮೂಲತಃ ಕಡಬ ನಿವಾಸಿಯಾಗಿದ್ದು, ಪ್ರಸ್ತುತ ಬಂಟ್ವಾಳದಲ್ಲಿ ವಾಸಿಸುತ್ತಿರುವ ಪೊಲೀಸ್ ಅಧಿಕಾರಿಯೋರ್ವರ 36 ವರ್ಷದ ಪುತ್ರನಿಗೆ ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯ ಕಾಡಿತ್ತು ಎನ್ನಲಾಗಿದೆ. ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಬುಧವಾರದಂದು ಮೃತಪಟ್ಟಿದ್ದಾರೆ‌.    

ಕೊರೋನಾ ಸೋಂಕಿಗೆ ಕಡಬ ಮೂಲದ 36 ವರ್ಷದ ಯುವಕ ಮೃತ್ಯು Read More »

ಕರಾವಳಿ

ಕಡಬ: 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಮೇ.09. ಹದಿನಾಲ್ಕು ವರ್ಷ ಪ್ರಾಯದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸಕಲೇಶಪುರ ನಿವಾಸಿ ಶೇಖರ್ ಯಾನೆ ಶೇಷಪ್ಪ ಕಂಡಿಗ ಎಂದು ಗುರುತಿಸಲಾಗಿದೆ. ಆರೋಪಿಯು ಕಡಬ ತಾಲೂಕಿನ ಆತೂರು ಸಮೀಪದ 14ರ ಹರೆಯದ ತನ್ನ ಸಂಬಂಧಿ ಬಾಲಕಿಯನ್ನು ಅತ್ಯಾಚಾರಗೈದಿದ್ದಾನೆ ಎನ್ನಲಾಗಿದೆ. ಬಾಲಕಿಯನ್ನು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಿದಾಗ ಬಾಲಕಿಯು ಏಳು ತಿಂಗಳ ಗರ್ಭಿಣಿಯಾಗಿರುವುದು ತಿಳಿದುಬಂದಿತ್ತು. ಈ ಬಗ್ಗೆ ಶಿಶು ಅಭಿವೃದ್ದಿ ಯೋಜನಾಧಿಕಾರಿಯವರು ನೀಡಿದ ದೂರಿನಂತೆ

ಕಡಬ: 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ ➤ ಆರೋಪಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಸುಬ್ರಹ್ಮಣ್ಯ: ಅಕ್ರಮ ಬಂದೂಕು ತಯಾರಿಸಿ ಮಾರಾಟ ➤ ನೆಟ್ಟಣ ನಿವಾಸಿ ಸೇರಿದಂತೆ ನಾಲ್ವರ ಬಂಧನ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮೇ.11. ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಸುಬ್ರಹ್ಮಣ್ಯ ಪೊಲೀಸರು ನಾಲ್ಕು ಬಂದೂಕುಗಳು ಹಾಗೂ ಸಜೀವ ಗುಂಡೊಂದನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಸುಳ್ಯ ತಾಲೂಕಿನ ಛತ್ರಪ್ಪಾಡಿ ದಿವಾಕರ ಆಚಾರಿ (52), ಕಡಬ ತಾಲೂಕಿನ ನೂಚಿಲ ನಿವಾಸಿ ಕಾರ್ತಿಕ್ (25), ಕಡಬದ ನೆಟ್ಟಣ ಸಮೀಪದ ಚಿದ್ಗಲ್ ನಿವಾಸಿ ಅಶೋಕ್ (35), ಹಾಸನ ಜಿಲ್ಲೆಯ ಹನುಮಂತಪುರದ ಚಂದನ್ (32) ಎಂದು ಗುರುತಿಸಲಾಗಿದೆ. ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಛತ್ರಪ್ಪಾಡಿ ಎಂಬಲ್ಲಿ

ಸುಬ್ರಹ್ಮಣ್ಯ: ಅಕ್ರಮ ಬಂದೂಕು ತಯಾರಿಸಿ ಮಾರಾಟ ➤ ನೆಟ್ಟಣ ನಿವಾಸಿ ಸೇರಿದಂತೆ ನಾಲ್ವರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ, ಪುತ್ತೂರು, ಸುಳ್ಯ ವ್ಯಾಪ್ತಿಯಲ್ಲಿ ಕೊರೋನಾ ಇಳಿಕೆ ➤ 24 ಗಂಟೆಗಳಲ್ಲಿ 103 ಮಂದಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ, ಮೇ.11. ಗ್ರಾಮೀಣ ಭಾಗದಲ್ಲಿ ಸೋಮವಾರದಂದು ಕೊಂಚ ಏರಿಕೆ ಕಂಡಿದ್ದ ಕೋವಿಡ್ ಪ್ರಕರಣ, ಇಂದು ಮತ್ತೆ ಇಳಿಕೆಯಾಗಿದೆ. ಮಂಗಳವಾರದಂದು ಕಡಬ, ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ 103 ಮಂದಿಗೆ ಕೊರೋನಾ ದೃಢಪಟ್ಟಿದೆ. ಆರೋಗ್ಯ ಇಲಾಖೆಯ ಮಾಹಿತಿಯಂತೆ ಕಡಬ ತಾಲೂಕಿನಲ್ಲಿ 11 ಪ್ರಕರಣ, ಪುತ್ತೂರು ತಾಲೂಕಿನಲ್ಲಿ 31 ಪ್ರಕರಣ ಹಾಗೂ ಸುಳ್ಯ ತಾಲೂಕಿನಲ್ಲಿ 61 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ.      

ಕಡಬ, ಪುತ್ತೂರು, ಸುಳ್ಯ ವ್ಯಾಪ್ತಿಯಲ್ಲಿ ಕೊರೋನಾ ಇಳಿಕೆ ➤ 24 ಗಂಟೆಗಳಲ್ಲಿ 103 ಮಂದಿಗೆ ಕೊರೋನಾ ಪಾಸಿಟಿವ್ Read More »

ಕರಾವಳಿ

ಕಡಬ ತಾಲೂಕಿನಲ್ಲಿ ಕೊರೋನಾ ಸೋಂಕಿಗೆ ನಾಲ್ಕನೆಯ ಜೀವ ಬಲಿ ➤ ಮರ್ಧಾಳದ 67 ವರ್ಷದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಮೇ.10. ಕೊರೋನಾ ಎರಡನೇ ಅಲೆಗೆ ಕಡಬ ತಾಲೂಕಿನಲ್ಲಿ ಸೋಮವಾರ ರಾತ್ರಿ ನಾಲ್ಕನೇ ಜೀವ ಬಲಿಯಾಗಿದೆ. ಕಡಬ ತಾಲೂಕಿನ ಮರ್ಧಾಳ ಸಮೀಪದ 102 ನೆಕ್ಕಿಲಾಡಿ ಗ್ರಾಮದ ಕುಂಜತ್ತೋಡಿ ನಿವಾಸಿ 67 ವರ್ಷದ ವ್ಯಕ್ತಿಯೋರ್ವರು ಸೋಮವಾರದಂದು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಕಡಬದ ಮಿಲ್ ಒಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರನ್ನು ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಮಂಗಳೂರಿನ ವೆನ್ಲಾಕ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ‌. ಕೊರೋನಾ ಎರಡನೇ

ಕಡಬ ತಾಲೂಕಿನಲ್ಲಿ ಕೊರೋನಾ ಸೋಂಕಿಗೆ ನಾಲ್ಕನೆಯ ಜೀವ ಬಲಿ ➤ ಮರ್ಧಾಳದ 67 ವರ್ಷದ ವ್ಯಕ್ತಿ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಲಾಕ್‍ಡೌನ್ ವಿಚಾರದಲ್ಲಿ ರಾಜ್ಯದ ಮಾರ್ಗಸೂಚಿ ಪಾಲಿಸಿ | ಜಿಲ್ಲೆಗೆ ಪ್ರತ್ಯೇಕ ಮಾರ್ಗಸೂಚಿ ಬೇಡ ➤ ಜಿಲ್ಲಾಡಳಿತಕ್ಕೆ ಮಾಜಿ ಸಚಿವ ರಮಾನಾಥ ರೈ ಸಲಹೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.10. ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ರಾಜ್ಯ ಸರಕಾರದ ಮಾರ್ಗಸೂಚಿಯನ್ನು ಜಾರಿ ಮಾಡಬೇಕೆ ಹೊರತು ಪ್ರತ್ಯೇಕ ನಿಯಮಗಳನ್ನು ತಂದು ಜನರನ್ನು ಗೊಂದಲಕ್ಕೆ ದೂಡಬೇಡಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಜಿಲ್ಲಾಡಳಿತಕ್ಕೆ ಸಲಹೆ ಮಾಡಿದ್ದಾರೆ. ಕೊರೋನಾ ಜನರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಜನರು ಈಗಾಗಲೇ ಮಾನಸಿಕ ತುಮುಲದಲ್ಲಿ ಇದ್ದಾರೆ. ನಮ್ಮ ಜಿಲ್ಲೆಗೆ ಪ್ರತ್ಯೇಕ ನಿಯಮಗಳನ್ನು ಮಾಡುವುದರಿಂದ ಜನರಿಗೆ ಇನ್ನಷ್ಟು ತೊಂದರೆ ಆಗುತ್ತದೆ.

ಲಾಕ್‍ಡೌನ್ ವಿಚಾರದಲ್ಲಿ ರಾಜ್ಯದ ಮಾರ್ಗಸೂಚಿ ಪಾಲಿಸಿ | ಜಿಲ್ಲೆಗೆ ಪ್ರತ್ಯೇಕ ಮಾರ್ಗಸೂಚಿ ಬೇಡ ➤ ಜಿಲ್ಲಾಡಳಿತಕ್ಕೆ ಮಾಜಿ ಸಚಿವ ರಮಾನಾಥ ರೈ ಸಲಹೆ Read More »

ಕರಾವಳಿ
Scroll to Top