ಕರಾವಳಿ

ಜೂ.17 ರವರೆಗೆ ಕರ್ನಾಟಕದಲ್ಲಿ ಭಾರೀ ಗಾಳಿ – ಮಳೆ ➤ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.14. ರಾಜ್ಯದಲ್ಲಿ ಮುಂಗಾರು ಬಿರುಸುಗೊಂಡಿರುವುದರಿಂದ ಭಾರೀ ಮಳೆಯಾಗುತ್ತಿದ್ದು, ಇದೀಗ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜೂನ್ 17 ರವರೆಗೆ ಭಾರೀ ಮಳೆ ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಭಾರೀ ಮಳೆ ಸುರಿಯಲಿರುವ ಹಿನ್ನೆಲೆಯಲ್ಲಿ ಇಂದು ರೆಡ್ ಅಲರ್ಟ್ ಹಾಗೂ ನಾಳೆಯಿಂದ ಜೂನ್ 17 ರ ವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ […]

ಜೂ.17 ರವರೆಗೆ ಕರ್ನಾಟಕದಲ್ಲಿ ಭಾರೀ ಗಾಳಿ – ಮಳೆ ➤ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಅಕ್ರಮ ಎಂಡಿಎಂಎ ಸಾಗಾಟ ➤ 3.90 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಸಹಿತ ಇಬ್ಬರ ಬಂಧನ

(ನ್ಯೂಸ್ ಕಡಬ) Newskadaba.com ಮಂಗಳೂರು, ಜೂ. 13. ನಿಷೇಧಿತ ಮಾದಕ ವಸ್ತು ಎಂಡಿಎಂಎ ಯನ್ನು ಬೆಂಗಳೂರಿನಿಂದ ಕಾಸರಗೋಡಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ ಘಟನೆ ಇಂದು ನಡೆದಿದೆ. ಬಂಧಿತರನ್ನು ಕಾಸರಗೋಡಿನ ಶಫೀಕ್‌ ಹಾಗೂ ಅಲ್ತಾಫ್‌ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಒಟ್ಟು 65 ಗ್ರಾಂ ತೂಕದ ಸುಮಾರು 3.90 ಲಕ್ಷ ರೂ. ಮೌಲ್ಯದ ಎಂಡಿಎಂ, ಸ್ವಿಫ್ಟ್‌ ಕಾರು ಹಾಗೂ ಸುಮಾರು 11 ಸಾವಿರ ಮೌಲ್ಯದ 4 ಮೊಬೈಲ್‌‌ ಸಹಿತ

ಮಂಗಳೂರು: ಅಕ್ರಮ ಎಂಡಿಎಂಎ ಸಾಗಾಟ ➤ 3.90 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಸಹಿತ ಇಬ್ಬರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಕರಾವಳಿಯಲ್ಲಿ ಮುಂದುವರಿದ ಮುಂಗಾರು ಹಿನ್ನೆಲೆ ➤ ಪ್ರಾಕೃತಿಕ ವಿಕೋಪ ಉಂಟಾದಲ್ಲಿ ಪೊಲೀಸ್ ಸಹಾಯವಾಣಿ ಸಂಪರ್ಕಿಸಲು ದ.ಕ ಜಿಲ್ಲಾ ಪೊಲೀಸ್ ಮನವಿ

(ನ್ಯೂಸ್ ಕಡಬ) Newskadaba.com ಮಂಗಳೂರು, ಜೂ. 13. ಜಿಲ್ಲೆಯಾದ್ಯಂತ ಮುಂಗಾರು ಚುರುಕುಗೊಂಡಿದ್ದು, ಕಳೆದೆರಡು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಇಂದು ಸಂಜೆಯೂ ಜೋರಾಗಿ ಮಳೆ ಸುರಿದಿದ್ದಲ್ಲದೇ ರಾತ್ರಿ ಯೂ ಮಳೆಯಾಗಲಿದೆ ಎನ್ನಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಸಣ್ಣಪುಟ್ಟ ತೊಂದರೆಯಾಗಿದೆ.‌ ಕೆಲವೆಡೆ ಮರಗಳು ಬಿದ್ದು ಅವಾಂತರ ಸೃಷ್ಟಿಸಿದೆ. ಮಳೆಯ ಬಿರುಸು ಹೆಚ್ಚಾಗಿರುವುದರಿಂದ ಮುಂದಿನ ನಾಲ್ಕು ದಿನಗಳ ಕಾಲ ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಭಾಗಗಳಾದ್ಯಂತ ಭಾರಿ

ಕರಾವಳಿಯಲ್ಲಿ ಮುಂದುವರಿದ ಮುಂಗಾರು ಹಿನ್ನೆಲೆ ➤ ಪ್ರಾಕೃತಿಕ ವಿಕೋಪ ಉಂಟಾದಲ್ಲಿ ಪೊಲೀಸ್ ಸಹಾಯವಾಣಿ ಸಂಪರ್ಕಿಸಲು ದ.ಕ ಜಿಲ್ಲಾ ಪೊಲೀಸ್ ಮನವಿ Read More »

ಕರಾವಳಿ, ಕರ್ನಾಟಕ

ಅರಂತೋಡು: ಭಾರೀ ಗಾಳಿ ಮಳೆಗೆ ರಸ್ತೆಗುರುಳಿದ ಬೃಹತ್ ಗಾತ್ರದ ಮರ ➤ ಸಂಚಾರ ಅಸ್ತವ್ಯಸ್ತ

(ನ್ಯೂಸ್ ಕಡಬ) Newskadaba.com ಅರಂತೋಡು, ಜೂ. 13. ಇಲ್ಲಿನ ಅಡ್ಯಡ್ಕ ಸಮೀಪ ಪಾತೊಟ್ಟಿ ಎಂಬಲ್ಲಿ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಬೃಹತ್ತಾದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಿದ್ಯುತ್ ಕಂಬಗಳಿಗೆ ಹಾನಿಯಾದ ಘಟನೆ ವರದಿಯಾಗಿದೆ. ಮರವನ್ನು ತೆರವುಗೊಳಿಸಲು ಗುರುಪ್ರಸಾದ್ ನಾರ್ಕೋಡು ರವರ 3 ಕಟ್ಟಿಂಗ್ ಮಿಷನ್ ತಂದು ಕತ್ತರಿಸಲಾಯಿತು. ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ರಾದವೇಣು ಪೆತ್ತಾಜೆ, ಭವಾನಿ ತೊಡಿಕಾನ, ರೈತ ಸಂಘದ ಮುಖಂಡ ತೀರ್ಥರಾಮ ಪರ್ನೋಜಿ, ಸೋಮಶೇಖರ ಪೈಕ, ತೊಡಿಕಾನ

ಅರಂತೋಡು: ಭಾರೀ ಗಾಳಿ ಮಳೆಗೆ ರಸ್ತೆಗುರುಳಿದ ಬೃಹತ್ ಗಾತ್ರದ ಮರ ➤ ಸಂಚಾರ ಅಸ್ತವ್ಯಸ್ತ Read More »

ಕರಾವಳಿ, ಕರ್ನಾಟಕ

ಬಿರುಸುಗೊಂಡ ಮುಂಗಾರು ➤ ಬೆಳ್ಳಾರೆ ಎಸ್ಐ ಆಂಜನೇಯ ರೆಡ್ಡಿಯವರಿಂದ ಪ್ರಕಟಣೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ.13. ಕರಾವಳಿಯಾದ್ಯಂತ ಮುಂಗಾರು ಬಿರುಸುಗೊಂಡಿದ್ದು, ವಿಪರೀತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸಿದ್ದಲ್ಲಿ ಸಾರ್ವಜನಿಕರು ತಕ್ಷಣವೇ ಠಾಣೆಯನ್ನು ಸಂಪರ್ಕಿಸುವಂತೆ ಎಸ್ಐ ಆಂಜನೇಯ ರೆಡ್ಡಿಯವರು ತಿಳಿಸಿದ್ದಾರೆ. ಠಾಣಾ ವ್ಯಾಪ್ತಿಯಲ್ಲಿ ಭೂಕುಸಿತ, ನೆರೆ, ಸೇತುವೆ ಅಥವಾ ರಸ್ತೆಗಳ ಸಂಪರ್ಕ ಸ್ಥಗಿತ ಸೇರಿದಂತೆ ಪ್ರಾಕೃತಿಕ ವಿಕೋಪಗಳು ಉಂಟಾದಲ್ಲಿ ತಕ್ಷಣವೇ 9535556173, 9448623433, 9448254065, 9449011787 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ. ಅಲ್ಲದೇ ಸಹಾಯವಾಣಿ 112 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.    

ಬಿರುಸುಗೊಂಡ ಮುಂಗಾರು ➤ ಬೆಳ್ಳಾರೆ ಎಸ್ಐ ಆಂಜನೇಯ ರೆಡ್ಡಿಯವರಿಂದ ಪ್ರಕಟಣೆ Read More »

ಕರಾವಳಿ

ಕಾರ್ಪೊರೇಟ್ ಕುಲಗಳ ತಾಳಕ್ಕೆ ತಕ್ಕ ಕುಣಿಯುವ ಸರಕಾರದಿಂದಾಗಿ ಉಡುಪಿ ಜಿಲ್ಲೆಗೆ ಒಲಿಯದ ಸರಕಾರಿ ವೈದ್ಯಕೀಯ ಕಾಲೇಜು…! ➤ ಜಿಲ್ಲಾ ಕಾರ್ಯದರ್ಶಿ, ಕ್ಯಾಂಪಸ್ ಫ್ರಂಟ್ ಉಡುಪಿ

(ನ್ಯೂಸ್ ಕಡಬ) Newskadaba.com ಉಡುಪಿ, ಜೂ. 13. ಹಲವು ವರ್ಷಗಳಿಂದ ಉಡುಪಿ ಜಿಲ್ಲೆಯ ಜನರ ಬೇಡಿಕೆಯಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಇನ್ನೂ ಕೂಡಾ ಸ್ಥಾಪನೆಗೊಂಡಿಲ್ಲ. ಜಿಲ್ಲೆಯ ಬಡ ವಿದ್ಯಾರ್ಥಿಗಳು ಇಲ್ಲಿಯ ಖಾಸಗಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯುವುದು ಅಸಾಧ್ಯದ ಮಾತು. ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದ ಕಾರಣ ಹಲವು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ನೇರ ಹೊಣೆ ಸರ್ಕಾರವೇ ಆಗಿರುತ್ತದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಉಡುಪಿ ಜಿಲ್ಲಾ ಸಮಿತಿ

ಕಾರ್ಪೊರೇಟ್ ಕುಲಗಳ ತಾಳಕ್ಕೆ ತಕ್ಕ ಕುಣಿಯುವ ಸರಕಾರದಿಂದಾಗಿ ಉಡುಪಿ ಜಿಲ್ಲೆಗೆ ಒಲಿಯದ ಸರಕಾರಿ ವೈದ್ಯಕೀಯ ಕಾಲೇಜು…! ➤ ಜಿಲ್ಲಾ ಕಾರ್ಯದರ್ಶಿ, ಕ್ಯಾಂಪಸ್ ಫ್ರಂಟ್ ಉಡುಪಿ Read More »

ಕರಾವಳಿ, ಕರ್ನಾಟಕ

ಕೊರೋನಾ ಸೋಂಕಿಗೆ ನಲುಗಿದ ಸುಳ್ಯ ತಾಲೂಕು ➤ 5 ಗ್ರಾಮಗಳು ಸೀಲ್ ಡೌನ್

(ನ್ಯೂಸ್ ಕಡಬ) newskadaba.com ಕಡಬ, ಜೂ.13. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾದ ಗ್ರಾಮಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ. ಕಡಬ ತಾಲೂಕಿನ ಸುಬ್ರಹ್ಮಣ್ಯ ಹಾಗೂ ಸವಣೂರು ಗ್ರಾಮಗಳಲ್ಲಿ ಸೋಂಕು ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಅದರಂತೆ ಸುಳ್ಯ ತಾಲೂಕಿನ ಐವರ್ನಾಡು, ಅಮರ ಮುಡ್ನೂರು, ಕೊಲ್ಲಮೊಗ್ರು, ಗುತ್ತಿಗಾರು ಹಾಗೂ ಅರಂತೋಡು ಗ್ರಾಮಗಳನ್ನು ಸಂಪೂರ್ಣ ಸೀಲ್ ಡೌನ್

ಕೊರೋನಾ ಸೋಂಕಿಗೆ ನಲುಗಿದ ಸುಳ್ಯ ತಾಲೂಕು ➤ 5 ಗ್ರಾಮಗಳು ಸೀಲ್ ಡೌನ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸ್ಫೋಟ ➤ ಕಡಬ ತಾಲೂಕಿನ 2 ಗ್ರಾಮಗಳು ಸಂಪೂರ್ಣ ಸೀಲ್ ಡೌನ್

(ನ್ಯೂಸ್ ಕಡಬ) newskadaba.com ಕಡಬ, ಜೂ.13. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾದ ಗ್ರಾಮಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ. ಕಡಬ ತಾಲೂಕಿನ ಸುಬ್ರಹ್ಮಣ್ಯ ಹಾಗೂ ಸವಣೂರು ಗ್ರಾಮಗಳಲ್ಲಿ ಸೋಂಕು ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಅದರಂತೆ ಸುಳ್ಯ ತಾಲೂಕಿನ ಐವರ್ನಾಡು, ಅಮರ ಮುಡ್ನೂರು, ಕೊಲ್ಲಮೊಗ್ರು, ಗುತ್ತಿಗಾರು ಹಾಗೂ ಅರಂತೋಡು ಗ್ರಾಮಗಳನ್ನು ಸಂಪೂರ್ಣ ಸೀಲ್ ಡೌನ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸ್ಫೋಟ ➤ ಕಡಬ ತಾಲೂಕಿನ 2 ಗ್ರಾಮಗಳು ಸಂಪೂರ್ಣ ಸೀಲ್ ಡೌನ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ನೆಲ್ಯಾಡಿ: ಕಾರು – ಗ್ಯಾಸ್‌ ಟ್ಯಾಂಕರ್ ನಡುವೆ ಢಿಕ್ಕಿ ➤ ಚಾಲಕ ಅಪಾಯದಿಂದ ಪಾರು*

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ.13. ಕಾರು ಹಾಗೂ ಟ್ಯಾಂಕರ್ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಎಂಜಿರ ಎಂಬಲ್ಲಿ ಭಾನುವಾರದಂದು ನಡೆದಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಹಾಗೂ ವಿರುದ್ಧ ದಿಕ್ಕಿನಿಂದ ಆಗಮಿಸುತ್ತಿದ್ದ ಮಾರುತಿ ಸುಝುಕಿ ಎರ್ಟಿಗಾ ಕಾರು ನಡುವೆ ಎಂಜಿರ ಸಮೀಪ ಮುಖಾಮುಖಿ ಢಿಕ್ಕಿಯಾಗಿದೆ. ಘಟನೆಯಲ್ಲಿ ಕಾರಿನ ಮುಂಭಾಗಕ್ಕೆ ಹಾನಿಯಾಗಿದ್ದು, ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.      

ನೆಲ್ಯಾಡಿ: ಕಾರು – ಗ್ಯಾಸ್‌ ಟ್ಯಾಂಕರ್ ನಡುವೆ ಢಿಕ್ಕಿ ➤ ಚಾಲಕ ಅಪಾಯದಿಂದ ಪಾರು* Read More »

ಕರಾವಳಿ, ಕ್ರೈಮ್ ನ್ಯೂಸ್

ಶಿರಾಡಿ: ಅನಿಲ ಸಾಗಾಟದ ಟ್ಯಾಂಕರ್ ಪಲ್ಟಿ ➤ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ.10. ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್‌ ಸಾಗಾಟದ ಟ್ಯಾಂಕರ್ ರಸ್ತೆಗಡ್ಡಲಾಗಿ ಮಗುಚಿ ಬಿದ್ದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಶಿರಾಡಿಯ ಕೊಡ್ಯಕಲ್ ಎಂಬಲ್ಲಿ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಘಟನೆಯಲ್ಲಿ ಟ್ಯಾಂಕರ್ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪುತ್ತೂರು ಅಗ್ನಿ ಶಾಮಕ ದಳದ ಸಿಬ್ಬಂದಿ, ಉಪ್ಪಿನಂಗಡಿ ಎಸ್ಐ ಕುಮಾರ್ ಕಾಂಬ್ಳೆ ಸಿಬ್ಬಂದಿಗಳು ಭೇಟಿ

ಶಿರಾಡಿ: ಅನಿಲ ಸಾಗಾಟದ ಟ್ಯಾಂಕರ್ ಪಲ್ಟಿ ➤ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top