ಕರಾವಳಿ

ಕೊಂಬಾರು: KFDCಯ 21 ಕಾರ್ಮಿಕರಿಗೆ ಕೊರೋನಾ ಪಾಸಿಟಿವ್ ➤ ಸೋಂಕಿತರು ಕೊರೋನಾ ಕೇರ್ ಸೆಂಟರ್ ಗೆ ಶಿಫ್ಟ್

(ನ್ಯೂಸ್ ಕಡಬ) newskadaba.com ಕಡಬ, ಜೂ.21. ತಾಲೂಕಿನ ಕೊಂಬಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಸಿ ಆರ್ ಸಿ ಕಾಲನಿಯಲ್ಲಿ 21 ಕೋವಿಡ್ ಪ್ರಕರಣಗಳು ಕಂಡು ಬಂದಿದ್ದು, ಇವರನ್ನು ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ನವೀನ್ ಭಂಡಾರಿ ಹಾಗೂ ಕಡಬ ತಹಶೀಲ್ದಾರರಾದ ಅನಂತ ಶಂಕರ್ ನೇತೃತ್ವದಲ್ಲಿ ಸೋಮವಾರದಂದು ಪುತ್ತೂರು ತಾಲೂಕಿನ ಬಲ್ನಾಡು ಎಂಬಲ್ಲಿರುವ ಕೋವಿಡ್ ನಿಗಾ ಸೆಂಟರಿಗೆ ಕಳುಹಿಸಿಕೊಡಲಾಯಿತು.   ಈ ಸಂದರ್ಭದಲ್ಲಿ ಕೊಂಬಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಶೀಲ ಶಿವಪ್ರಸಾದ್, […]

ಕೊಂಬಾರು: KFDCಯ 21 ಕಾರ್ಮಿಕರಿಗೆ ಕೊರೋನಾ ಪಾಸಿಟಿವ್ ➤ ಸೋಂಕಿತರು ಕೊರೋನಾ ಕೇರ್ ಸೆಂಟರ್ ಗೆ ಶಿಫ್ಟ್ Read More »

ಕರಾವಳಿ

ಬಂಟ್ವಾಳ: ತಡೆಗೋಡೆ ನಿರ್ಮಾಣದ ವೇಳೆ ಗುಡ್ಡ ಕುಸಿತ ➤ ಯುವಕನ ರಕ್ಷಣೆ

(ನ್ಯೂಸ್ ಕಡಬ) Newskadaba.com ಬಂಟ್ವಾಳ, ಜೂ. 21. ರಸ್ತೆ ಬದಿಯಲ್ಲಿರುವ ತಡೆಗೋಡೆಯ ಕಾಮಗಾರಿ ನಡೆಯುತ್ತಿದ್ದ ವೇಳೆ ಗುಡ್ಡ ಕುಸಿದ ಪರಿಣಾಮ ಯುವಕನೋರ್ವ ಮಣ್ಣಿನಡಿ ಸಿಲುಕಿ, ನಂತರ ಸ್ಥಳೀಯರ ಹರಸಾಹಸದಿಂದ ಬದುಕುಳಿದ ಘಟನೆ ನಗರದ ಕುಪ್ಪೆಪದವು ಬಳಿಯ ನೊನಾಲು ಎಂಬಲ್ಲಿ ನಡೆದಿದೆ. ಮಣ್ಣಿನಡಿಯಲ್ಲಿ ಸಿಲುಕಿದ ಯುವಕನನನ್ನು ಬಂಟ್ವಾಳ ತಾಲೂಕಿನ ಅರಳ ಗ್ರಾಮದ ರಾಜೇಶ್ ಪೂಜಾರಿ (28) ಎಂದು ಗುರುತಿಸಲಾಗಿದೆ. ನೊನಾಲು ಎಂಬಲ್ಲಿ ರಸ್ತೆಬದಿಯ ಗುಡ್ಡ ಕುಸಿಯದಂತೆ ತಡೆಗೋಡೆಯ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ಸಂದರ್ಭ ರಾಜೇಶ್ ಪೂಜಾರಿ ಹಾಗೂ

ಬಂಟ್ವಾಳ: ತಡೆಗೋಡೆ ನಿರ್ಮಾಣದ ವೇಳೆ ಗುಡ್ಡ ಕುಸಿತ ➤ ಯುವಕನ ರಕ್ಷಣೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕರಾವಳಿಗೆ ರೆಡ್‌ ಅಲರ್ಟ್‌ ➤ ಮುಂದಿನ 3-4 ದಿನ ಭಾರಿ ಮಳೆ ಮುನ್ಸೂಚನೆ!

(ನ್ಯೂಸ್ ಕಡಬ) newskadaba,ಮಂಗಳೂರು ಜೂ. 20:ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು , ಕರಾವಳಿಯಲ್ಲಿ ರೆಡ್‌ ಅಲರ್ಟ್‌ ಜತೆಗೆ ಭರ್ಜರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಆರಂಜೆ ಅಲರ್ಟ್ ಘೋಷಣೆ ಮಾಡಲಾಗಿದೆ.  ಕರಾವಳಿ ಭಾಗದ ಜಿಲ್ಲೆಗಳಲ್ಲಿ ಸೋಮವಾರದ ತನಕವೂ ಮುಳೆ ಮುಂದುವರೆಯಲಿದೆ. ಬೆಳಗಾವಿ, ಧಾರವಾಡ ಮತ್ತು ಹಾವೇರಿಯಲ್ಲಿ ಯೆಲ್ಲೊ ಅಲರ್ಟ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯಲ್ಲಿ ಗಂಟೆಗೆ 50 ಕಿ. ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ.

ಕರಾವಳಿಗೆ ರೆಡ್‌ ಅಲರ್ಟ್‌ ➤ ಮುಂದಿನ 3-4 ದಿನ ಭಾರಿ ಮಳೆ ಮುನ್ಸೂಚನೆ! Read More »

ಕರಾವಳಿ

ಪುತ್ತೂರು ಪೊಲೀಸ್ ಠಾಣೆಯಲ್ಲಿ ಎಚ್.ಡಿ. ರೇವಣ್ಣ ವಿರುದ್ಧ ದೂರು

(ನ್ಯೂಸ್ ಕಡಬ) newskadaba,ಪುತ್ತೂರು ಜೂ. 20: ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಖಾಸಗಿ ನರ್ಸಿಂಗ್ ಹೋಮ್‌ಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧ ಪುತ್ತೂರಿನ ಐಎಂಎ ಹೆರಾಸ್ಮೆಂಟ್ ಕಮಿಟಿಯ ಚೇರ್‌ಮೇನ್ ಆಗಿರುವ ಡಾ. ಗಣೇಶ್ ಪ್ರಸಾದ್ ಮುದ್ರಾಜೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಒತ್ತಾಯಿಸಿದ್ದಾರೆ.

ಪುತ್ತೂರು ಪೊಲೀಸ್ ಠಾಣೆಯಲ್ಲಿ ಎಚ್.ಡಿ. ರೇವಣ್ಣ ವಿರುದ್ಧ ದೂರು Read More »

ಕರಾವಳಿ

ಭಾರತದಲ್ಲಿಂದು 58,419 ಹೊಸ ಕೋವಿಡ್-19 ಕೇಸ್ ಪತ್ತೆ

(ನ್ಯೂಸ್ ಕಡಬ) newskadaba,ನವದೆಹಲಿ ಜೂ. 20:ಭಾರತದಲ್ಲಿ ಕೊರೋನಾ ಅಬ್ಬರದ ಇಳಿಕೆಯ ಹಾದಿ ಮುಂದುವರೆದಿದ್ದು, ದೇಶದಲ್ಲಿ ಭಾನುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 58,419 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದೇ ಅವಧಿಯಲ್ಲಿ 1576 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಶನಿವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,98,81,965ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 3,86,713ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಸಕ್ರಿಯ ಸೋಂಕಿತರ ಸಂಖ್ಯೆ 7,29,243ಕ್ಕೆ ಕುಸಿದ್ದು, 75 ದಿನಗಳ ಬಳಿಕ ದೇಶದಲ್ಲಿ ದಾಖಲಾಗಿರುವ ಅತೀ ಕನಿಷ್ಠ

ಭಾರತದಲ್ಲಿಂದು 58,419 ಹೊಸ ಕೋವಿಡ್-19 ಕೇಸ್ ಪತ್ತೆ Read More »

ಕರಾವಳಿ

ಧರ್ಮಸ್ಥಳ-ಸುಬ್ರಹ್ಮಣ್ಯ ಯಾತ್ರಾರ್ಥಿಗಳು ಗುಂಡ್ಯದಿಂದ ವಾಪಸ್

(ನ್ಯೂಸ್ ಕಡಬ) newskadaba,ಸುಬ್ರಹ್ಮಣ್ಯ ಜೂ. 20: ಜಿಲ್ಲೆಯಲ್ಲಿ ಧಾರ್ಮಿಕ ಕ್ಷೇತ್ರಗಳ ಭೇಟಿಗೆ ನಿರ್ಬಂಧವಿದ್ದರೂ ಹೊರಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸುತ್ತಿರುವ ಭಕ್ತರನ್ನು ಗುಂಡ್ಯ ಚೆಕ್’ಪೋಸ್ಟ್ ನಿಂದಲೇ ವಾಪಸ್ ಕಳುಹಿಸುವ ಕಾರ್ಯ ನಡೆಯುತ್ತಿದೆ. ಅಗತ್ಯ ದಾಖಲೆಗಳನ್ನು ಹೊಂದಿದವವರನ್ನು ಮಾತ್ರ ಜಿಲ್ಲೆಯ ಒಳಬರಲು ಬಿಡಲಾಗುತ್ತಿದೆ. ಶಿರಾಡಿ ಘಾಟ್ ಮೂಲಕ ಜಿಲ್ಲೆಯ ಧರ್ಮಸ್ಥಳ ಮತ್ತು ಸುಬ್ರಮಣ್ಯ ಪುಣ್ಯಕ್ಷೇತ್ರಗಳಿಗೆ ಭಕ್ತರು ಆಗಮಿಸುತ್ತಿದ್ದಾರೆ. ನಿನ್ನೆ ಒಂದೇ ದಿನ ತೀರ್ಥಯಾತ್ರೆ ಆಗಮಿಸಿದ್ದ ಬರೋಬ್ಬರಿ 69 ವಾಹನಗಳನ್ನು ವಾಪಸ್ ಕಳುಹಿಸಲಾಗಿದೆ. ಮುಂದಿನ ಎರಡು ವಾರಗಳ ಕಾಲ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳನ್ನು ಕರೆಯಲಾಗುವುದಿಲ್ಲ.

ಧರ್ಮಸ್ಥಳ-ಸುಬ್ರಹ್ಮಣ್ಯ ಯಾತ್ರಾರ್ಥಿಗಳು ಗುಂಡ್ಯದಿಂದ ವಾಪಸ್ Read More »

ಕರಾವಳಿ

ಸುಳ್ಯ: ಸಿಬ್ಬಂದಿ ಕೊರತೆ ➤ ಕಸ ಸಂಗ್ರಹ ವಾಹನದ ಡ್ರೈವರ್ ಆದ ನ.ಪಂ. ಅಧ್ಯಕ್ಷರು

(ನ್ಯೂಸ್ ಕಡಬ) newskadaba, ಸುಳ್ಯ ಜೂ. 20: ಸುಳ್ಯ ನಗರ ಪಂಚಾಯಿತಿನ ಕಸ ಸಾಗಾಟ ವಾಹನ ಸಿಬ್ಬಂದಿ ಕ್ವಾರಂಟೈನ್ ಆಗಿದ್ದರು. ಈ ಸಂದರ್ಭ ಸುಳ್ಯ ನ.ಪಂ. ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅವರೇ ಕಸ ಸಾಗಾಟ ವಾಹನದ ಡ್ರೈವರ್ ಆಗಿ ಕಾರ್ಯ ನಿರ್ವಹಿಸಿದರು. ಇದೀಗ ಎರಡು ದಿನಗಳಿಂದ ಸುಳ್ಯ ನಗರದಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಸಿಬ್ಬಂದಿ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ವಿನಯಕುಮಾರ್ ತಾತ್ಕಾಲಿಕ ಸಿಬ್ಬಂದಿ ಹುಡುಕುವ ಬದಲು ತಾನೇ ಸ್ವತಃ ಲಭ್ಯರಿದ್ದ ಕಾರ್ಮಿಕರೊಂದಿಗೆ ಯಾವುದೇ ದೊಡ್ಡಸ್ತಿಕೆ ತೋರದೆ, ಮುಜುಗರವೂ

ಸುಳ್ಯ: ಸಿಬ್ಬಂದಿ ಕೊರತೆ ➤ ಕಸ ಸಂಗ್ರಹ ವಾಹನದ ಡ್ರೈವರ್ ಆದ ನ.ಪಂ. ಅಧ್ಯಕ್ಷರು Read More »

ಕರಾವಳಿ

ದಕ್ಷಿಣ ಕನ್ನಡದಲ್ಲಿ ತಗ್ಗಿದ ಕೋವಿಡ್ ಕೇಸ್ ➤ ಜಿಲ್ಲೆಯಲ್ಲಿಂದು 525 ಜನರಲ್ಲಿ ಕೊರೊನಾ ಸೋಂಕು ದೃಢ

(ನ್ಯೂಸ್ ಕಡಬ) newskadaba,ಮಂಗಳೂರು ಜೂ. 20: ಜಿಲ್ಲೆಯಲ್ಲಿಂದು 525 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 88,707 ಕ್ಕೆ ಏರಿಕೆಯಾಗಿದೆ. ಇನ್ನೂ ಇಂದು 583 ಜನ ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 80530 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿಂದು ಕೊರೊನಾ ಸೋಂಕಿನಿಂದ 11 ಜನ ಸಾವನ್ನಪ್ಪಿದ್ದಾರೆ ಸಂಭವಿಸಿಲ್ಲ. ಈವರೆಗೆ ಒಟ್ಟು 1048 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

ದಕ್ಷಿಣ ಕನ್ನಡದಲ್ಲಿ ತಗ್ಗಿದ ಕೋವಿಡ್ ಕೇಸ್ ➤ ಜಿಲ್ಲೆಯಲ್ಲಿಂದು 525 ಜನರಲ್ಲಿ ಕೊರೊನಾ ಸೋಂಕು ದೃಢ Read More »

ಕರಾವಳಿ

ದ. ಕನ್ನಡದಲ್ಲಿ ಜು.5ರವರೆಗೆ ಲಾಕ್‍ಡೌನ್ ವಿಸ್ತರಣೆ ➤ ಡಿಸಿ ಆದೇಶ

(ನ್ಯೂಸ್ ಕಡಬ) newskadaba,ಮಂಗಳೂರು ಜೂ. 20:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 5ರವರೆಗೂ ಲಾಕ್‍ಡೌನ್ ವಿಸ್ತರಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಆದೇಶಿಸಿದ್ದಾರೆ. ದ.ಕ ಜಿಲ್ಲೆಯಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 1ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ಅನ್‍ಲಾಕ್ 1.0 ಭಾಗವಾಗಿ ಅಗತ್ಯವಸ್ತುಗಳ ಖರೀದಿಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಆಹಾರ, ದಿನಸಿ, ಹಣ್ಣು-ತರಕಾರಿ, ಮೀನು-ಮಾಂಸ, ಬೀದಿಬದಿ ವ್ಯಾಪಾರ ಮತ್ತು ಮದ್ಯ ಪಾರ್ಸಲ್ ಗಷ್ಟೇ ಮಧ್ಯಾಹ್ನ 1ರವರೆಗೆ ಅವಕಾಶ ನೀಡಲಾಗಿದೆ. ಜೊತೆಗೆ ನಿರ್ಮಾಣ ಚಟುವಟಿಕೆ ಮತ್ತು ಸ್ಟೀಲ್, ಸಿಮೆಂಟ್ ಅಂಗಡಿಗಳಿಗೆ ಅನುಮತಿ

ದ. ಕನ್ನಡದಲ್ಲಿ ಜು.5ರವರೆಗೆ ಲಾಕ್‍ಡೌನ್ ವಿಸ್ತರಣೆ ➤ ಡಿಸಿ ಆದೇಶ Read More »

ಕರಾವಳಿ, ಕರ್ನಾಟಕ

ಮಂಗಳೂರಿನಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅದ್ದೂರಿ ಮದುವೆ ➤ ಪಾಲಿಕೆ ಅಧಿಕಾರಿಗಳಿಂದ ದಾಳಿ

(ನ್ಯೂಸ್ ಕಡಬ) newskadaba,ಮಂಗಳೂರು ಜೂ. 20: ಲಾಕ್‌ಡೌನ್ ನಿಯಮ ಉಲ್ಲಂಘಿಸಿ ನಗರದ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಅದ್ದೂರಿಯಾಗಿ ಮದುವೆ ನಡೆಯುತ್ತಿತ್ತು. ಸ್ಥಳಕ್ಕೆ ಮಂಗಳೂರು ಮಹಾನಗರ ಪಾಲಿಕೆ ( ಮನಪಾ) ಸಹಾಯಕ ಆಯುಕ್ತ ಮತ್ತು ಕಂದಾಯ ಇಲಾಖೆಯ ಉಪ ಆಯುಕ್ತ ಜಂಟಿ ದಾಳಿ ನಡೆಸಿ ಮದುವೆ ನಿಲ್ಲಿಸಿದ್ದಾರೆ. ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯ, ಎಕ್ಕೂರಿನ ಭಾಸ್ಕರಚಂದ್ರ ಶೆಟ್ಟಿಯವರ ಪುತ್ರಿಯ ವಿವಾಹ ಸೇರಿದಂತೆ ನಾಲ್ಕು ಜೋಡಿಗಳ ಮದುವೆಯನ್ನು ಏರ್ಪಡಿಸಲಾಗಿತ್ತು. ಮದುವೆ ಹಿನ್ನೆಲೆ ದೇವಸ್ಥಾನದ ಮುಂಭಾಗದಲ್ಲಿ 40ಕ್ಕೂ ಹೆಚ್ಚು

ಮಂಗಳೂರಿನಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅದ್ದೂರಿ ಮದುವೆ ➤ ಪಾಲಿಕೆ ಅಧಿಕಾರಿಗಳಿಂದ ದಾಳಿ Read More »

ಕರಾವಳಿ
Scroll to Top