ಕರಾವಳಿ

ಉಡುಪಿ: ಕೆಸರಿನಲ್ಲಿ ಹೂತು ಹೋದ ಕೃಷಿ ಸಚಿವರ ಕಾರು!

(ನ್ಯೂಸ್ ಕಡಬ) newskadaba,ಉಡುಪಿ ಜೂ.26: ಉಡುಪಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಇಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹಡಿಲು ಭೂಮಿ ಕೃಷಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಮಳೆಗೆ ತೇವಗೊಂಡಿದ್ದ ಗದ್ದೆಯಲ್ಲಿ ಕೃಷಿ ಸಚಿವರ ಕಾರು ಹೂತು ಹೋದ ಘಟನೆ ನಡೆಯಿತು. ಕೆಸರಿನಿಂದ ಕಾರು ಮೇಲೆತ್ತಲು ಕೆಲ ಕಾಲ ಪರದಾಟ ಮಾಡಿದ ಪ್ರಸಂಗ ನಡೆಯಿತು. ಉಡುಪಿಯ ಕಡೆಕಾರು ಎಂಬಲ್ಲಿ ಈ ಘಟನೆ ನಡೆದಿದೆ. ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಯುವಕರು ಸಚಿವರ ಕಾರನ್ನು ಮೇಲಕ್ಕೆ ಎತ್ತಲು ಸಹಾಯ ಮಾಡಿದರು.

ಉಡುಪಿ: ಕೆಸರಿನಲ್ಲಿ ಹೂತು ಹೋದ ಕೃಷಿ ಸಚಿವರ ಕಾರು! Read More »

ಕರಾವಳಿ, ಕರ್ನಾಟಕ

ಬೆಳ್ತಂಗಡಿ : ತೋಟದ ಮನೆಯಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪ

(ನ್ಯೂಸ್ ಕಡಬ) newskadaba,ಬೆಳ್ತಂಗಡಿ ಜೂ.26:ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಅತ್ಯಾರಂಡ ನಿವಾಸಿ ಜೋಸೆಫ್ ಬರ್ಬೋಜ ಎಂಬುವವರ ಮನೆಯ ತೋಟದಲ್ಲಿ ಹುಲ್ಲು ಕೊಯ್ಯುವಾಗ ಸುಮಾರು 11 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ತಕ್ಷಣ ಮನೆಯವರು ಲಾಯಿಲ ಸ್ನೇಕ್ ಅಶೋಕ್ ಎಂಬುವವರಿಗೆ ಕರೆ ಮಾಡಿ ಕರೆಸಿ ಸುರಕ್ಷಿತವಾಗಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಬೆಳ್ತಂಗಡಿ : ತೋಟದ ಮನೆಯಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪ Read More »

ಕರಾವಳಿ

ಮಂಗಳೂರು: ವಾರಾಂತ್ಯ ಕರ್ಫ್ಯೂ ಬಿಗಿ, ಅನಗತ್ಯ ಸಂಚಾರಕ್ಕೆ ಕಡಿವಾಣ

(ನ್ಯೂಸ್ ಕಡಬ) newskadaba,ಮಂಗಳೂರು ಜೂ.26:ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಾರಾಂತ್ಯ ಕರ್ಫ್ಯೂವನ್ನು ಬಿಗಿ ಗೊಳಿಸಲಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಿಂದ ಹೊರಭಾಗದಲ್ಲಿ ಜನ ಓಡಾಟ ಕಂಡು ಬರುತ್ತಿದ್ದು, ಶೀಘ್ರದಲ್ಲಿ ಕಡಿವಾಣ ಹಾಕಲಾಗುತ್ತದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಹೇಳಿದರು ಲಾಕ್ ಡೌನ್ ಗೆ 99.9%. ಜನ ಉತ್ತಮವಾಗಿ ಸ್ಪಂದಿಸುತ್ತಿದ್ದರೂ, 1% ಜನರಿಂದ ಲಾಕ್ ಡೌನ್ ನಿಯಮಾವಳಿಗಳು ಮುಂದುವರಿಯುತ್ತಿದೆ. ಪರಿಣಾಮ ಎಲ್ಲರಿಗೂ ತೊಂದರೆಯಾಗುತ್ತಿದೆ.ಕಾನೂನಿಂದ ಮಾತ್ರ ಕೊರೊನಾ ಸೋಂಕು ನಿಯಂತ್ರಣವಾಗಿ ನಾವು ಯಥಾ ಸ್ಥಿತಿಗೆ ಬರಲು

ಮಂಗಳೂರು: ವಾರಾಂತ್ಯ ಕರ್ಫ್ಯೂ ಬಿಗಿ, ಅನಗತ್ಯ ಸಂಚಾರಕ್ಕೆ ಕಡಿವಾಣ Read More »

ಕರಾವಳಿ, ಕರ್ನಾಟಕ

ಮಂಗಳೂರು : ಜಿಲ್ಲಾ ಪೊಲೀಸ್ ವತಿಯಿಂದ 50 ಲಕ್ಷಕ್ಕೂ ಮಿಕ್ಕಿ ಮಾದಕ ವಸ್ತುಗಳ ನಾಶ

(ನ್ಯೂಸ್ ಕಡಬ) newskadaba,ಮಂಗಳೂರು ಜೂ.26: ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಮಂಗಳೂರು ನಗರ ಪೊಲೀಸ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳ ನಾಶಪಡಿಸುವ ಕಾರ್ಯಕ್ರಮ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಲ್ನಾಡು ಕೈಗಾರಿಕಾ ಪ್ರದೇಶದ ರಾಮ್ ಕಿ ಬಯೋ ಮೆಡಿಕಲ್ ವೆಸ್ಟ್ ಟ್ರೀಟ್ಮೆಂಟ್ ಕಂಪನಿಯಲ್ಲಿ ನಡೆಯಿತು. ಈ ಸಂದರ್ಭ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾತನಾಡಿ ಕರ್ನಾಟಕ ರಾಜ್ಯಾದ್ಯಂತ ಡಿಜಿ ಐಜಿಪಿ

ಮಂಗಳೂರು : ಜಿಲ್ಲಾ ಪೊಲೀಸ್ ವತಿಯಿಂದ 50 ಲಕ್ಷಕ್ಕೂ ಮಿಕ್ಕಿ ಮಾದಕ ವಸ್ತುಗಳ ನಾಶ Read More »

ಕರಾವಳಿ

ಮಗು ಅತ್ತಿದ್ದಕ್ಕೆ ಕಾಫಿತೋಟದಲ್ಲಿ ಹೂತು ಹಾಕಿದ ಪೋಷಕರು ➤ ಮೃತದೇಹ ಹೊರತೆಗೆದ ಅಧಿಕಾರಿಗಳು

(ನ್ಯೂಸ್ ಕಡಬ) newskadaba, ಹಾಸನ ಜೂ.26: ತಂದೆ ಹಾಗೂ ತಾಯಿ ಇಬ್ಬರು ಸೇರಿ ಸ್ವಂತ ಮಗುವನ್ನೇ ಕೊಂದು ಶವವನ್ನು ಕಾಫಿತೋಟದಲ್ಲಿ ಹೂತಿರುವ ಅನುಮಾನದ ಮೇಲೆ ಮಗುವಿನ ಮೃತದೇಹ ಹೊರತೆಗೆದು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಜಿಲ್ಲೆಯ ಆಲೂರು ತಾಲೂಕಿನ, ಕೆ.ಹೊಸಕೋಟೆ ಹೋಬಳಿಯ ಕಾಡ್ಲೂರು ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಕೂಲಿ ಕೆಲಸಕ್ಕೆಂದು ಅಸ್ಸಾಂನಿಂದ ತಾಲೂಕಿನ ಕೆ.ಹೊಸಕೋಟೆ ಹೋಬಳಿಗೆ ಆಗಮಿಸಿದ್ದ ಕೂಲಿಕಾರ್ಮಿಕರ ಕುಟುಂಬಸ್ಥರಿಂದ ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ.ಕೆಲ ದಿನಗಳ ಹಿಂದೆ ಪತಿ, ಪತ್ನಿ ನಡುವೆ ಕೌಟುಂಬಿಕ ಕಾರಣಕ್ಕೆ ಜಗಳ

ಮಗು ಅತ್ತಿದ್ದಕ್ಕೆ ಕಾಫಿತೋಟದಲ್ಲಿ ಹೂತು ಹಾಕಿದ ಪೋಷಕರು ➤ ಮೃತದೇಹ ಹೊರತೆಗೆದ ಅಧಿಕಾರಿಗಳು Read More »

ಕರಾವಳಿ

ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸೆಡ್ಡು ಹೊಡೆದ ಮೊಗ್ರ ಗ್ರಾಮಸ್ಥರು ➤ ಗ್ರಾಮಸ್ಥರ ಹಣದಿಂದಲೇ ಸಿದ್ಧವಾಯ್ತು ಸೇತುವೆ

(ನ್ಯೂಸ್ ಕಡಬ) newskadaba,ಸುಬ್ರಹ್ಮಣ್ಯ ಜೂ.26: ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಎಂಬ ಪುಟ್ಟ ಹಳ್ಳಿಯಲ್ಲಿ ಜನರೇ ಸುಮಾರು 1 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕಾಲು ಸಂಕವನ್ನು ಗುರುವಾರದಿಂದ ಜನರ ಬಳಕೆಗೆ ಲಭ್ಯವಾಗಿದೆ. ಕಮಿಲ, ಏರಣಗುಡ್ಡೆ, ಮಲ್ಕಜೆ, ಬಳ್ಳಕ್ಕ ಗ್ರಾಮಸ್ಥರಿಗೆ ಸರಿಯಾದ ಸಂಪರ್ಕ ವ್ಯವಸ್ಥೆ ಇರಲಿಲ್ಲ. ಜನಪ್ರತಿನಿಧಿಗಳ ಮೂಲಕ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ, ‘ಜನರಿಂದ ಜನರಿಗಾಗಿ ಜನರೇ ಗ್ರಾಮ ಸೇತು’ ಎಂಬ ಹೆಸರಿನಲ್ಲಿ ಗ್ರಾಮಸ್ಥರೇ ಕಾಲು ಸಂಕ ನಿರ್ಮಿಸಿದ್ದಾರೆ. ತೂಗುಸೇತುವೆಗಳ ತಜ್ಞ ಸುಳ್ಯದ ಗಿರೀಶ್ ಭಾರದ್ವಾಜ್ ಅವರ

ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸೆಡ್ಡು ಹೊಡೆದ ಮೊಗ್ರ ಗ್ರಾಮಸ್ಥರು ➤ ಗ್ರಾಮಸ್ಥರ ಹಣದಿಂದಲೇ ಸಿದ್ಧವಾಯ್ತು ಸೇತುವೆ Read More »

ಕರಾವಳಿ, ಕರ್ನಾಟಕ

ರಾಜ್ಯದಲ್ಲಿ ಡೆಲ್ಟಾ ಪ್ಲಸ್ ವೈರಸ್ ನಿಯಂತ್ರಣದಲ್ಲಿದೆ ➤ ಸಿಎಂ ಯಡಿಯೂರಪ್ಪ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.26: ರಾಜ್ಯದಲ್ಲಿ ಪ್ರಸ್ತುತ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರಿ ವೈರಸ್ ನಿಯಂತ್ರಣದಲ್ಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಹೇಳಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸಚಿವರು ಹಾಗು ಅಧಿಕಾರಿಗಳ ಜೊತೆ ಕೋವಿಡ್-19 ರ ರೂಪಾಂತರಿ ಡೆಲ್ಟಾ ಬಗ್ಗೆ ರಾಜ್ಯದಲ್ಲಿರುವ ಪ್ರಸ್ತುತ ಇರುವ ಪರಿಸ್ಥಿತಿ ಯ ಬಗ್ಗೆ ಪರಾಮರ್ಶೆ ಸಭೆ ನಡೆಸಿದರು. ಸಭೆಯಲ್ಲಿ ರಾಜ್ಯದಲ್ಲಿ ಡೆಲ್ಟಾ ವೈರಸ್ ಸಧ್ಯಕ್ಕೆ ಹತೋಟಿಯಲ್ಲಿದ್ದು, ವೈರಸ್ ಬಗ್ಗೆ ತೀವ್ರ ನಿಗಾ ಇಡುವಂತೆಯೂ

ರಾಜ್ಯದಲ್ಲಿ ಡೆಲ್ಟಾ ಪ್ಲಸ್ ವೈರಸ್ ನಿಯಂತ್ರಣದಲ್ಲಿದೆ ➤ ಸಿಎಂ ಯಡಿಯೂರಪ್ಪ Read More »

ಕರಾವಳಿ

ಕಡಬ: ಕೊರೋನಾ ಲಸಿಕಾ ಅಭಿಯಾನ ➤ ಜೂ.28ರಂದು ಶಿಕ್ಷಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ

(ನ್ಯೂಸ್ ಕಡಬ) newskadaba.com ಕಡಬ, ಜೂ.26. ಸೋಮವಾರ (ಜೂ.28) ಕಡಬ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಕೊರೋನಾ ಲಸಿಕೆ ಕೋವಿಶೀಲ್ಡ್ ದೊರೆಯಲಿದೆ. ಶಿಕ್ಷಕರಿಗೆ 200 ಡೋಸ್ ಮತ್ತು ಡಿಗ್ರೀ ಮೇಲ್ಪಟ್ಟ ಅಥವಾ ತತ್ಸಮಾನ ವಿದ್ಯಾಭ್ಯಾಸಗೈಯುತ್ತಿರುವ ಕಾಲೇಜು ವಿದ್ಯಾರ್ಥಿಗಳಿಗೆ 100 ಡೋಸ್ ಲಸಿಕೆ ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ಲಭ್ಯವಿರಲಿದೆ. ಲಸಿಕೆ ತೆಗೆದುಕೊಳ್ಳಲು ಆಗಮಿಸುವವರು ಕಡ್ಡಾಯವಾಗಿ ಶಿಕ್ಷಣ ಸಂಸ್ಥೆಯ ಐಡಿ ಕಾರ್ಡ್ ತರುವಂತೆ ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|

ಕಡಬ: ಕೊರೋನಾ ಲಸಿಕಾ ಅಭಿಯಾನ ➤ ಜೂ.28ರಂದು ಶಿಕ್ಷಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ Read More »

ಕರಾವಳಿ

ರಾತ್ರೋರಾತ್ರಿ ಅಕ್ರಮ ಮರಳುಗಾರಿಕಾ ಸ್ಥಳಕ್ಕೆ ದಾಳಿ ನಡೆಸಿದ ತಹಶೀಲ್ದಾರ್ ➤ ಆರೋಪಿಗಳು ಪರಾರಿ

(ನ್ಯೂಸ್ ಕಡಬ) Newskadaba.com ಬಂಟ್ವಾಳ, ಜೂ. 26. ಶುಕ್ರವಾರ ಮಧ್ಯರಾತ್ರಿಯಲ್ಲಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಮಧ್ಯರಾತ್ರಿಯಲ್ಲಿಯೇ ಅರಣ್ಯಾಧಿಕಾರಿಗಳ ಜೊತೆ ದಾಳಿ ನಡೆಸಿದ ತಹಶೀಲ್ದಾರ್ ಮರಳುಗಾರಿಕೆಗೆ ಬಳಸಲಾದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಪಾಣೆಮಂಗಳೂರಿನಲ್ಲಿ ನಡೆದಿದೆ. ಜಿಲ್ಲಾಡಳಿತದ ಆದೇಶದ ಪ್ರಕಾರ ಸುರಕ್ಷತಾ ದೃಷ್ಟಿಯಿಂದ ಸೇತುವೆಯ ಸಮೀಪ ಇಲಾಖೆ ನಿಗದಿಗೊಳಿಸಿದ ದೂರದವರೆಗೆ ಮರಳುಗಾರಿಕೆ ನಡೆಸಬಾರದು, ಆದರೂ ಪಾಣೆಮಂಗಳೂರಿನ ಹಳೆ ಸೇತುವೆಯಿಂದ ಅಕ್ರಮವಾಗಿ ರಾತ್ರಿ ವೇಳೆಯಲ್ಲಿ ಮೆಷಿನ್ ಬಳಸಿ ಮರಳು ತೆಗೆಯುವುದರ ಕುರಿತು ದೊರೆತ ಖಚಿತ ಮಾಹಿತಿಯ

ರಾತ್ರೋರಾತ್ರಿ ಅಕ್ರಮ ಮರಳುಗಾರಿಕಾ ಸ್ಥಳಕ್ಕೆ ದಾಳಿ ನಡೆಸಿದ ತಹಶೀಲ್ದಾರ್ ➤ ಆರೋಪಿಗಳು ಪರಾರಿ Read More »

ಕರಾವಳಿ, ಕರ್ನಾಟಕ

ಕಡಬ: ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿದ ಹಲವು ವಾಹನಗಳು ಸೀಝ್ ➤ ಅನಗತ್ಯ ರಸ್ತೆಗಿಳಿಯದಂತೆ ಎಸ್ಐ ರುಕ್ಮನಾಯ್ಕ್ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಜೂ.25. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು, ಈ ವೇಳೆ ಕರ್ಫ್ಯೂ ಉಲ್ಲಂಘಿಸಿದ ವಾಹನ ಚಾಲಕರಿಗೆ ಕಡಬ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಶುಕ್ರವಾರ ಸಂಜೆಯಿಂದ ಅನಗತ್ಯವಾಗಿ ರಸ್ತೆಗಿಳಿದ ವಾಹನಗಳನ್ನು ಸೀಝ್ ಮಾಡಿ ದಂಡ ವಿಧಿಸಲಾಗಿದೆ. ಠಾಣಾ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳನ್ನು ಸೀಝ್ ಮಾಡಲಾಗುವುದು ಎಂದು ಕಡಬ ಠಾಣಾ ಎಸ್ ರುಕ್ಮನಾಯ್ಕ್ ಮನವಿ ಮಾಡಿದ್ದಾರೆ.      

ಕಡಬ: ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿದ ಹಲವು ವಾಹನಗಳು ಸೀಝ್ ➤ ಅನಗತ್ಯ ರಸ್ತೆಗಿಳಿಯದಂತೆ ಎಸ್ಐ ರುಕ್ಮನಾಯ್ಕ್ ಮನವಿ Read More »

ಕರಾವಳಿ
Scroll to Top