ಕರಾವಳಿ

ಸಿರಿಬಾಗಿಲು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಆ.15. ತಾಲೂಕಿನ ಸಿರಿಬಾಗಿಲು ಸರಕಾರಿ ಶಾಲೆಯಲ್ಲಿ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಕೊಂಬಾರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಕುಮಾರಪುರ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜನಾರ್ದನ ಪೆರುಂದೊಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಅನಿಲ, ಮುಖ್ಯ ಗುರುಗಳಾದ ವಿಜಯ ಕುಮಾರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.        

ಸಿರಿಬಾಗಿಲು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ Read More »

ಕರಾವಳಿ

‘ಜಯತು ಜನ್ಮಭೂಮಿ’ ದೇಶಭಕ್ತಿ ಗೀತೆ ಬಿಡುಗಡೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ.15. ಸದಾ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಯುವಶಕ್ತಿ ಕಡೇಶಿವಾಲಯ(ರಿ) ನಿರ್ಮಾಣದ ಬಹುನಿರೀಕ್ಷಿತ ದೇಶಭಕ್ತಿ ಗೀತೆ ‘ಜಯತು ಜನ್ಮಭೂಮಿ’ ಇಂದು ಯುವಶಕ್ತಿ ಕಡೇಶಿವಾಲಯ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಂಡಿದೆ. ಶೆಟ್ಟಿ ಅಜಯ್ ರಾಜ್ ಸಾಹಿತ್ಯದಲ್ಲಿ ಸಂತೋಷ್ ಬೇಂಕ್ಯ ಗಾಯನದಲ್ಲಿ ಮೂಡಿಬಂದ ಹಾಡಿಗೆ ಅಶ್ವಿನ್ ಪುತ್ತೂರು ಸಂಗೀತ ನೀಡಿದ್ದು, ಇದೀಗ ಎಲ್ಲೆಡೆ ಸದ್ದುಮಾಡುತ್ತಿದೆ. ಇಂದು ಕಡೇಶಿವಾಲಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಪಂಚಾಯತ್ ಅಭಿವೃದ್ದಿ ಅಧಿಕಾರಿ

‘ಜಯತು ಜನ್ಮಭೂಮಿ’ ದೇಶಭಕ್ತಿ ಗೀತೆ ಬಿಡುಗಡೆ Read More »

ಕರಾವಳಿ, ತಂತ್ರಜ್ಞಾನ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ➤ ಕಡಬದ ಈ ಮೆನ್ಸ್ ವೇರ್ ನಲ್ಲಿ ಉಚಿತ ಸೇವೆ

(ನ್ಯೂಸ್ ಕಡಬ) newskadaba.com ಕಡಬ, ಆ.15. ಇಲ್ಲಿನ ಪಂಜ ರಸ್ತೆಯ ಸಿ.ಎ. ಬ್ಯಾಂಕ್ ಸಂಕೀರ್ಣದಲ್ಲಿರುವ ಮೆನ್ಸ್ ಪಾರ್ಲರ್ ‘ಹೆಡ್ ಶಾಟ್’ ನಲ್ಲಿ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಉಚಿತ ಸೇವೆಯನ್ನು ಗ್ರಾಹಕರಿಗೆ ಒದಗಿಸಲಾಗಿದೆ. ಆಗಸ್ಟ್ 31ರ ವರೆಗೆ ಈ ವಿಶೇಷ ಆಫರ್ ಗಳು ಎಲ್ಲಾ ಗ್ರಾಹಕರಿಗೆ ಲಭ್ಯವಿರಲಿದ್ದು, ಹೆಚ್ಚಿನ ಮಾಹಿತಿಗಾಗಿ 7676093732 ಅಥವಾ 9980409032 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ‌.        

75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ➤ ಕಡಬದ ಈ ಮೆನ್ಸ್ ವೇರ್ ನಲ್ಲಿ ಉಚಿತ ಸೇವೆ Read More »

ಕರಾವಳಿ

ಅರಂತೋಡು: 75 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಸಿ ವಿತರಣಾ ಕಾರ್ಯಕ್ರಮ

(ನ್ಯೂಸ್ ಕಡಬ) Newskadaba.com ಸುಳ್ಯ, ಆ. 15. ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಮತ್ತು ಸಸಿ ವಿತರಣಾ ಕಾರ್ಯಕ್ರಮವು ಅರಂತೋಡು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಧ್ವಜಾರೋಹಣವನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ ನೇರವೇರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಹರಿಣಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಅರಂತೋಡು ಪಾಪ್ಯುಲರ್ ಎಜುಕೇಷನ್ ಸೊಸೈಟಿ ಸಂಚಾಲಕರಾದ ಕೆ.ಆರ್ ಗಂಗಾಧರ್ ಮಾತನಾಡಿ ನಮ್ಮೂರಿನಲ್ಲಿ ಬಡತನ ನಿರ್ಮೂಲನೆಯಾಗಿಲ್ಲ. ಜಾತಿ

ಅರಂತೋಡು: 75 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಸಿ ವಿತರಣಾ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಕೊಣಾಜೆ ಪ್ರಾಥಮಿಕ ಶಾಲೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ

(ನ್ಯೂಸ್ ಕಡಬ) Newskadaba.com ಕೊಣಾಜೆ, ಆ. 15. ದ.ಕ.ಜಿ.ಪಂ.ಉ ಹಿರಿಯ ಪ್ರಾಥಮಿಕ ಶಾಲೆ ಕೊಣಾಜೆಯಲ್ಲಿ 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಕೊಣಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ರುಕ್ಮಿಣಿ ಧ್ವಜಾರೋಹಣ ನೇರವೇರಿಸಿದರು. ಕೊಣಾಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷರು ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಶಿವಪ್ಪ ಗೌಡ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ಗ್ರಾಮ ಪಂಚಾಯತ್ ಸದಸ್ಯರಾದ ನವೀನ ಮನೆ ಜಾಲ್, ಪಿಡಿಒ ಪದ್ಮನಾಭ ಪಿ, ಸಿ.ಎ. ಬ್ಯಾಂಕ್ ನಿರ್ದೇಶಕರಾದ ರಘುಚಂದ್ರ ಮನೆ ಜಾಲ್,

ಕೊಣಾಜೆ ಪ್ರಾಥಮಿಕ ಶಾಲೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ Read More »

ಕರಾವಳಿ, ಕರ್ನಾಟಕ

ಕಡಬ: ಪೊಲೀಸ್ ಠಾಣೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಆ. 15. 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಎಲ್ಲೆಡೆ ಆಚರಿಸಲಾಗುತ್ತಿದ್ದು, ದ.ಕ.ಜಿಲ್ಲಾಡಳಿತದ ಆದೇಶದಂತೆ ಕಡಬ ಪೊಲೀಸ್ ಠಾಣೆಯಲ್ಲೂ ಸರಳವಾಗಿ ಆಚರಿಸಲಾಯಿತು. ಠಾಣಾ ಎಸ್.ಐ ರುಕ್ಮ ನಾಯಕ್ ಧ್ವಜರೋಹಣಗೈದರು. ಈ ಸಂದರ್ಭದಲ್ಲಿ ಶಾಂತಿ ಮತ್ತು ಕಾನೂನು ಪಾಲನೆಗಾಗಿ ಹಗಳಿರುಳು ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಸೇವೆಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೇ ಹಿರಿಯ ಹೋರಾಟಗಾರರ ತ್ಯಾಗ ಬಲಿದಾನದ ಫಲವಾಗಿ ನಮಗೆ ಸ್ವಾತಂತ್ರ ಸಿಕ್ಕಿದೆ, ಇಂದು ಭಾರತಾಂಬೆಯ ಜನ್ಮದಿನ ಜನತೆಗೆ ಹೊಸ ಚೈತನ್ಯ ತರಲಿ ಎಂದು ಆಶಯ ವ್ಯಕ್ತಪಡಿಸಿದರು.

ಕಡಬ: ಪೊಲೀಸ್ ಠಾಣೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ Read More »

ಕರಾವಳಿ, ಕರ್ನಾಟಕ

ಬೆಳ್ತಂಗಡಿ: 75 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಂಜಯ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ

(ನ್ಯೂಸ್ ಕಡಬ) Newskadaba.com ಬೆಳ್ತಂಗಡಿ, ಆ. 15. 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಂಜಯ್ ಗ್ಲೋಬಲ್ ಫೌಂಡೇಶನ್ ವತಿಯಿಂದ 5ನೇ ವರ್ಷದ ಸ್ವಾತಂತ್ರ್ಯೋತ್ಸವದ ದ್ವಜಾರೋಹಣ ಕಾರ್ಯಕ್ರಮವು ಬೆಳ್ತಂಗಡಿ, ಸಂಜಯ ನಗರ ಜಂಕ್ಷನ್ ಬಳಿ ನಡೆಯಿತು. ಸಂಜಯ್ ಗ್ಲೋಬಲ್ ಫೌಂಡೇಶನ್ ಅಧ್ಯಕ್ಷರಾದ ಹನೀಫ್ ವರ್ಷಾ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ದಾರುಸ್ಸಲಾಮ್ ಎಜುಕೇಶನ್ ಸಂಸ್ಥೆಯ ಪ್ರಾಧ್ಯಾಪಕರಾದ ಅಬ್ದುಲ್ ಸಮದ್ ಭಾಗವಹಿಸಿ ಸಂದೇಶ ಭಾಷಣ ಮಾಡಿದರು.   ಈ ಸಂದರ್ಭದಲ್ಲಿ 2021ನೇ ಸಾಲಿನ ದ್ವಿತೀಯ SSLC ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುವ ಬೆಳ್ತಂಗಡಿಯ

ಬೆಳ್ತಂಗಡಿ: 75 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಂಜಯ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಎಸ್ಕೆಎಸ್ಸೆಸ್ಸೆಫ್ ಸುಳ್ಯ ಟೌನ್ ವತಿಯಿಂದ 75 ನೇ ಸ್ವಾತಂತ್ರ್ಯದಿನ ಆಚರಣೆ

(ನ್ಯೂಸ್ ಕಡಬ) Newskadaba.com ಸುಳ್ಯ, ಆ. 15. ಎಸ್ಕೆಎಸ್ಸೆಸ್ಸೆಫ್ ಸುಳ್ಯ ಟೌನ್ ಸಮಿತಿ ವತಿಯಿಂದ 75 ನೇ ಸ್ವಾತಂತ್ರೋತ್ಸವವನ್ನು ಸುನ್ನೀ ಮಹಲ್ ಮುಂಭಾಗದಲ್ಲಿ ಆಚರಿಸಲಾಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ರಝಾಕ್ ಕರಾವಳಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ರಿಝ್ವಾನ್ ದ್ವಜಾರೋಹಣಗೈದು ಮಾತನಾಡಿದರು. ಬದ್ರಿಯಾ ಜುಮಾ ಮಸೀದಿ ಅರಂಬೂರು ಖತೀಬರಾದ ಮೂಸಾ ಮಕ್ದೂಮಿ ಸ್ವಾತಂತ್ರ್ಯ ಸಂದೇಶ ಭಾಷಣ ನಡೆಸಿದರು.   ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಮದ್ರಸ ಮ್ಯಾನೇಜ್‌ಮೆಂಟ್ ಕೋಶಾಧಿಕಾರಿ ಹಾಜಿ ಎಸ್.ಎ

ಎಸ್ಕೆಎಸ್ಸೆಸ್ಸೆಫ್ ಸುಳ್ಯ ಟೌನ್ ವತಿಯಿಂದ 75 ನೇ ಸ್ವಾತಂತ್ರ್ಯದಿನ ಆಚರಣೆ Read More »

ಕರಾವಳಿ, ಕರ್ನಾಟಕ

ಅರಂತೋಡು: ಸ್ವಾತಂತ್ರ್ಯ ದಿನಾಚರಣೆ ಹಾಗೂ ನಿವೃತ್ತ ಸೈನಿಕ ಫಸೀಲು ರವರಿಗೆ ಸನ್ಮಾನ

(ನ್ಯೂಸ್ ಕಡಬ) Newskadaba.com ಅರಂತೋಡು, ಆ. 15. ಅನ್ವ‍ಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೆಶನ್ ಹಾಗೂ ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇದರ ಜಂಟಿ ಆಶ್ರಯದಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ನಿವೃತ್ತ ಸೈನಿಕ ಫಸೀಲುರವರಿಗೆ ಸನ್ಮಾನ ಕಾರ್ಯಕ್ರಮವು ಆ.15ರಂದು ಅರಂತೋಡು ಮದರಸ ಸಭಾಂಗಣದಲ್ಲಿ ನಡೆಯಿತು.   ಇದರ ಅಧ್ಯಕ್ಷತೆಯನ್ನು ಬದ್ರಿಯಾ ಜುಮ್ಮಾಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ ವಹಿಸಿದ್ದರು. ನಿವೃತ್ತ ಸೈನಿಕ ಫಸೀಲುರವರನ್ನು ಸ್ಥಳೀಯ ಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸ್ಹಾಖ್ ಬಾಖವಿ

ಅರಂತೋಡು: ಸ್ವಾತಂತ್ರ್ಯ ದಿನಾಚರಣೆ ಹಾಗೂ ನಿವೃತ್ತ ಸೈನಿಕ ಫಸೀಲು ರವರಿಗೆ ಸನ್ಮಾನ Read More »

ಕರಾವಳಿ, ಕರ್ನಾಟಕ

ಕಡಬ: ಬಾಲಕಿಯ ಅತ್ಯಾಚಾರ ಯತ್ನ ಪ್ರಕರಣ ಪೂರ್ವಯೋಜಿತ ➤ ವಾಡ್ಯಪ್ಪ ಗೌಡ ಎರ್ಮಾಯಿಲ್ ಆರೋಪ

ಕಡಬ, ಆ.14. ಬಿಳಿನೆಲೆ ಕಿದು ಸಮೀಪದ ಹಾಲುಮಡ್ಡಿಯ ತೋಟದಲ್ಲಿ ವಿದ್ಯಾರ್ಥಿನಿಯನ್ನು ಅತ್ಯಾಚಾರ ಹಾಗೂ ಕಿಡ್ನಾಪ್‌ಗೆ ಯತ್ನ ಮಾಡಿರುವ ಪ್ರಕರಣವು ಪೂರ್ವ ಯೋಜಿತವಾಗಿದ್ದು, ಪೊಲೀಸರು ಕೂಡಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಆರೋಪಿಯನ್ನು ರಕ್ಷಿಸುವ ಯತ್ನ ನಡೆಸಿದ್ದರು ಎಂದು ಬಿಳಿನೆಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್ ಆರೋಪಿಸಿದ್ದಾರೆ. ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪ್ರಕರಣದ ಆರೋಪಿಯ ಬಗ್ಗೆ ಸ್ಪಷ್ಟ ಮಾಹಿತಿಯಿದ್ದರೂ ಪೊಲೀಸರು ಪ್ರಕರಣ ದಾಖಲಿಸಲು ಮೀನಾಮೇಷ ನಡೆಸಿ ಊರವರು ಒತ್ತಡ ಹಾಕಿದ ಬಳಿಕವೇ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು

ಕಡಬ: ಬಾಲಕಿಯ ಅತ್ಯಾಚಾರ ಯತ್ನ ಪ್ರಕರಣ ಪೂರ್ವಯೋಜಿತ ➤ ವಾಡ್ಯಪ್ಪ ಗೌಡ ಎರ್ಮಾಯಿಲ್ ಆರೋಪ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top