ಕರಾವಳಿ

ಪುತ್ತೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ➤ ಆರೋಪಿ ಬಂಧನಕ್ಕೆ ದಲಿತ ಸಂಘಟನೆ ಆಗ್ರಹ

(ನ್ಯೂಸ್ ಕಡಬ) newskadaba.com ಪುತ್ತೂರು, ನ. 10. ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆ ಆರೋಪಿ ರಾಜ್ ಹೊಸ್ಮಠ ಅವರನ್ನು ಶೀಘ್ರವೇ ಬಂಧಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ದ.ಕ ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಆಗ್ರಹಿಸಿದ್ದಾರೆ‌. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ದೇವಳದ ಬಳಿಯಿರುವ ಸ್ವಯಂಘೋಷಿತ ಸಂಘಟನಾ ಕಛೇರಿಯಲ್ಲಿ ಇಬ್ಬರಿಗೆ ಕಿರುಕುಳ ನೀಡಿದ್ದು, ಈ ಕುರಿತು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಆರೋಪಿಯನ್ನು ಈವರೆಗೆ ಬಂಧಿಸಿಲ್ಲ. ಮುಂದಿನ ಹತ್ತು ದಿನಗಳೊಳಗೆ […]

ಪುತ್ತೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ➤ ಆರೋಪಿ ಬಂಧನಕ್ಕೆ ದಲಿತ ಸಂಘಟನೆ ಆಗ್ರಹ Read More »

ಕರಾವಳಿ, ಕರ್ನಾಟಕ

ಅರಂತೋಡು: ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ

(ನ್ಯೂಸ್ ಕಡಬ) Newskadaba.com ಅರಂತೋಡು, ನ. 10. ಅರಂತೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷರಾದ ಶೇಷಗಿರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ದ.ಕ.ಹಾಲು ಒಕ್ಕೂಟ ಸಹಾಯಕ ವ್ಯವಸ್ಥಾಪಕರಾದ ಡಾ.ಕೇಶವ ಸುಳ್ಳಿ, ದಕ್ಷಿಣ ಕನ್ನಡ ಕೆಎಮ್ಎಫ್ ವಿಸ್ತರಣಾಧಿಕಾರಿ ಕೆ.ಹರೀಶ್ ಕುಮಾರ್, ಅರಂತೋಡು ಗ್ರಾಮ ಪಂಚಾಯತ್ ಸದಸ್ಯೆ ಮಾಲಿನಿ ಉಳುವಾರು, ಭಾರತಿ ಉಳುವಾರು, ಕೃಷ್ಣಪ್ಪ ಪಾನತ್ತಿಲ, ಕಾರ್ಯದರ್ಶಿ ವಿಮಲ ಕೆ.ಎ, ಸೇರಿದಂತೆ ಹಲವರು ಉಪಸ್ಥಿತರಿದ್ದರು .

ಅರಂತೋಡು: ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ Read More »

ಕರಾವಳಿ, ಕರ್ನಾಟಕ

ಕಾಣಿಯೂರು: ಅಡಿಕೆ ಅಂಗಡಿಗೆ ನುಗ್ಗಿದ ಜೀಪು ➤ ತಪ್ಪಿದ ಅಪಾಯ

(ನ್ಯೂಸ್ ಕಡಬ) newskadaba.com ಕಡಬ, ನ. 10. ಅಡಿಕೆ ಅಂಗಡಿಯೊಂದಕ್ಕೆ ಜೀಪು ನುಗ್ಗಿದ ಘಟನೆ ತಾಲೂಕಿನ ಕಾಣಿಯೂರು ಎಂಬಲ್ಲಿ ಇಂದು ನಡೆದಿದೆ. ಕಾಣಿಯೂರಿನ ಅಡಿಕೆ ಅಂಗಡಿಯೊಂದಕ್ಕೆ ಜೀಪಿನಲ್ಲಿ ಅಡಿಕೆ ತರಲಾಗಿತ್ತು. ಬಳಿಕ ಜೀಪಿನಿಂದ ಅಡಿಕೆಯನ್ನು ಕೆಳಗಿಳಿಸಿ ಜೀಪನ್ನು ಹಿಂದಕ್ಕೆ ಚಲಾಯಿಸಿದಾಗ ನಿಯಂತ್ರಣ ತಪ್ಪಿ ಅಂಗಡಿಯ ಶಟರ್ ಗೆ ಗುದ್ದಿದೆ ಎನ್ನಲಾಗಿದೆ.

ಕಾಣಿಯೂರು: ಅಡಿಕೆ ಅಂಗಡಿಗೆ ನುಗ್ಗಿದ ಜೀಪು ➤ ತಪ್ಪಿದ ಅಪಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ: ಟ್ರಾಕ್ಟರ್ ಹಾಗೂ ಬೈಕ್ ನಡುವೆ ಢಿಕ್ಕಿ ➤ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ. 10. ಟ್ರಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ಹಳೇಗೇಟು ಎಂಬಲ್ಲಿ ಇಂದು ನಡೆದಿದೆ. ಗಾಯಗೊಂಡವರನ್ನು ಕಾಣಿಯೂರು ಬೆಂಗಾಯ ನಿವಾಸಿ ಭುವನೇಶ್ ಎಂದು ಗುರುತಿಸಲಾಗಿದೆ. ಕಡಬ ಕಡೆಯಿಂದ ಬರುತ್ತಿದ್ದ ಟ್ರಾಕ್ಟರ್ ವಿರುದ್ದ ದಿಕ್ಕಿನಿಂದ ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಪ್ಪಿನಂಗಡಿ: ಟ್ರಾಕ್ಟರ್ ಹಾಗೂ ಬೈಕ್ ನಡುವೆ ಢಿಕ್ಕಿ ➤ ಸವಾರ ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪುತ್ತೂರು: ಕೊಟ್ಟ ಸಾಲ ಕೇಳಿದ ಕ್ಲೀನರ್ ➤ ಅರ್ಧದಲ್ಲೇ ಇಳಿಸಿಹೋದ ಚಾಲಕ..!

(ನ್ಯೂಸ್ ಕಡಬ) newskadaba.com ಪುತ್ತೂರು, ನ. 10. ಸಾಲವಾಗಿ ಕೊಟ್ಟಿದ್ದ ಹಣವನ್ನು ವಾಪಾಸು ಕೇಳಿದನೆಂದು ಲಾರಿ ಕ್ಲೀನರ್ ನನ್ನು ಚಾಲಕ ಅರ್ಧದಲ್ಲೇ ಬಿಟ್ಟು ಹೋದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಲಾರಿ ಕ್ಲೀನರ್ ಗೌರಿಬಿದನೂರಿನ ಸತೀಶ್ ಅರ್ಧ ದಾರಿಯಲ್ಲಿ ಬಾಕಿಯಾದ ವ್ಯಕ್ತಿ. ಬೆಂಗಳೂರಿನಿಂದ ಕ್ಯಾಪ್ಸಿಕಂ ಮೆಣಸನ್ನು ತುಂಬಿಕೊಂಡು ಬಂದಿದ್ದ ವಿಟ್ಲ ತಲುಪುತ್ತಿದ್ದಂತೆಯೇ ಸಾಲವಾಗಿ ನೀಡಿದ್ದ 8 ಸಾವಿರ ಹಣವನ್ನು ವಾಪಾಸು ಕೊಡುವಂತೆ ಕ್ಲೀನರ್ ಚಾಲಕನಿಗೆ ಕೇಳಿದ್ದ. ಇದರಿಂದ ಸಿಟ್ಟಿಗೆದ್ದ ಚಾಲಕನ ಆತನನ್ನು ಗದರಿಸಿ ಆತನಲ್ಲಿದ್ದ ಮೊಬೈಲ್ ಹಾಗೂ ಪರ್ಸ್

ಪುತ್ತೂರು: ಕೊಟ್ಟ ಸಾಲ ಕೇಳಿದ ಕ್ಲೀನರ್ ➤ ಅರ್ಧದಲ್ಲೇ ಇಳಿಸಿಹೋದ ಚಾಲಕ..! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು: ಸ್ಕೂಟರ್ – ಲಾರಿ ನಡುವೆ ಢಿಕ್ಕಿ ➤ ಗಾಯಗೊಂಡಿದ್ದ ಸಹಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ನ. 10. ಲಾರಿ ಮತ್ತು ಸ್ಕೂಟರ್ ನಡುವೆ ಮಂಗಳವಾರದಂದು ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸಹಸವಾರ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ವಸಂತ ರೈ ಬಳ್ಳಮಜಲು ಎಂದು ಗುರುತಿಸಲಾಗಿದೆ. ಇವರು ಎಂದಿನಂತೆ ತಮ್ಮ ಕೆಲಸ ಮುಗಿಸಿಕೊಂಡು ಕುರಿಯ ನಿವಾಸಿ ನಾರಾಯಣ ಬಳ್ಳಮಜಲು ಎಂಬವರೊಂದಿಗೆ ತೆರಳುತ್ತಿದ್ದ ವೇಳೆ ಸ್ಕೂಟರ್ ಹಾಗೂ ದಿಕ್ಕಿನಿಂದ ಬರುತ್ತಿದ್ದ ಲಾರಿ ನಡುವೆ ಢಿಕ್ಕಿ ಸಂಭವಿಸಿತ್ತು. ಢಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರರಿಬ್ಬರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಇಬ್ಬರನ್ನೂ ಪುತ್ತೂರಿನ ಆಸ್ಪತ್ರೆಗೆ

ಪುತ್ತೂರು: ಸ್ಕೂಟರ್ – ಲಾರಿ ನಡುವೆ ಢಿಕ್ಕಿ ➤ ಗಾಯಗೊಂಡಿದ್ದ ಸಹಸವಾರ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಾರಿಂಜ ದೇವಸ್ಥಾನ ಅಪವಿತ್ರಗೊಳಿಸಿದ ಹಿನ್ನೆಲೆ ➤ ಪೊಲೀಸರಿಂದ ಎಚ್ಚರಿಕೆ ಬ್ಯಾನರ್ ಅಳವಡಿಕೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 10. ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಪರಿಸರದಲ್ಲಿ ದೇವಾಲಯದ ಪವಿತ್ರತೆಗೆ ಧಕ್ಕೆ ತರುವಂತಹ ಕೃತ್ಯವನ್ನು ಮಾಡಿದರೆ ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ಈ ಬಗ್ಗೆ ಎಚ್ಚರಿಕೆಯ ಬ್ಯಾನರ್ ಒಂದನ್ನು ಪೊಲೀಸರು ದೇವಾಲಯದ ಆಸುಪಾಸಿನಲ್ಲಿ ಅಳವಡಿಸಿದ್ದಾರೆ. ದೇವಸ್ಥಾನಗಳನ್ನು ಅಪವಿತ್ರಗೊಳಿಸುವಂತಹ ನೀಚ ಚಟುವಟಿಕೆಗಳು ಕಂಡು ಬಂದಲ್ಲಿ ತುರ್ತು ಸ್ಪಂದನಾ ಸೇವೆ ನಂಬರ್ (ERSS): 112, ಪುಂಜಾಲಕಟ್ಟೆ ಪೊಲೀಸ್ ಠಾಣೆ 08256-279375, 8277986411 ಈ ದೂರವಾಣಿ ಸಂಖ್ಯೆಗೆ ಕರೆ

ಕಾರಿಂಜ ದೇವಸ್ಥಾನ ಅಪವಿತ್ರಗೊಳಿಸಿದ ಹಿನ್ನೆಲೆ ➤ ಪೊಲೀಸರಿಂದ ಎಚ್ಚರಿಕೆ ಬ್ಯಾನರ್ ಅಳವಡಿಕೆ Read More »

ಕರಾವಳಿ, ಕರ್ನಾಟಕ

ರಾಮಕುಂಜ: ಮುಖ್ಯಶಿಕ್ಷಕರ ಕೊಠಡಿಯ ಬೀಗ ಮುರಿದ ಕಳ್ಳರು…!

(ನ್ಯೂಸ್ ಕಡಬ) newskadaba.com ರಾಮಕುಂಜ, ನ. 10. ಸರಕಾರಿ‌ ಹಿರಿಯ ಪ್ರಾಥಮಿಕ ಶಾಲೆ ರಾಮಕುಂಜದಲ್ಲಿ ಮುಖ್ಯ ಶಿಕ್ಷಕರ ಕೊಠಡಿಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ. ಮುಖ್ಯ ಶಿಕ್ಷಕರು ಶಾಲೆಗೆ ಬಂದು ಕೊಠಡಿಯ ಬೀಗ ತೆಗೆಯಲು ಮುಂದಾದಾಗ ಕಳ್ಳತನ ವಿಫಲ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ರಾಮಕುಂಜ: ಮುಖ್ಯಶಿಕ್ಷಕರ ಕೊಠಡಿಯ ಬೀಗ ಮುರಿದ ಕಳ್ಳರು…! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ದಿನಸಿ ಅಂಗಡಿಯಲ್ಲಿ ಅಕ್ರಮ ಮದ್ಯ ದಾಸ್ತಾನು ➤ 13 ಸಾವಿರ ರೂ. ಮೌಲ್ಯದ ಮದ್ಯ ವಶಕ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ, ನ. 10. ದಿನಸಿ ಅಂಗಡಿಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಅಂಗಡಿಯ ಶೆಡ್ ನಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಮದ್ಯವನ್ನು ವಶಕ್ಕೆ ಪಡೆದ ಘಟನೆ ತಾಲೂಕಿನ ಅಲೆಟ್ಟಿ ಗ್ರಾಮದ ಬಡ್ಡಡ್ಕ ಎಂಬಲ್ಲ ನಡೆದಿದೆ. ಅಲೆಟ್ಟಿ ಗ್ರಾಮದ ಬಡ್ಡಡ್ಕದ ಭುವನೇಶ್ವರ ಎಂಬವರಿಗೆ ಸೇರಿದ ಅಂಗಡಿಯೊಂದರಲ್ಲಿ ಮದ್ಯ ಪತ್ತೆಯಾಗಿದ್ದು, ಅಬಕಾರಿ ಪೊಲೀಸರು ದಾಳಿ ಮಾಡಿ ತಪಾಸಣೆ ನಡೆಸಿದಾಗ ನಾಲ್ಕು ಪೆಟ್ಟಿಗೆಗಳಲ್ಲಿ ಮೈಸೂರು ಲೆನ್ಸರ್ ವಿಸ್ಕಿ ಒಟ್ಟು 42 ಪ್ಯಾಕೆಟ್, ವರ್ಜಿನಲ್ ಚಾಯ್ಸ್ ವಿಸ್ಕಿ 48 ಟೆಟ್ರಾ

ಸುಳ್ಯ: ದಿನಸಿ ಅಂಗಡಿಯಲ್ಲಿ ಅಕ್ರಮ ಮದ್ಯ ದಾಸ್ತಾನು ➤ 13 ಸಾವಿರ ರೂ. ಮೌಲ್ಯದ ಮದ್ಯ ವಶಕ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನೆಲ್ಯಾಡಿ: ಕಳ್ಳರ ಕೈಚಳಕ ➤ ಎಂಟಕ್ಕೂ ಅಧಿಕ ಅಂಗಡಿಗಳ ಒಳ ನುಗ್ಗಿದ ಕಳ್ಳರು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ.10. ಇಲ್ಲಿನ ಪೇಟೆಯಲ್ಲಿರುವ ಹಲವು ಅಂಗಡಿಗಳಲ್ಲಿ ತಮ್ಮ ಕೈಚಳಕ ತೋರಿಸಿರುವ ಕಳ್ಳರು ನಗದು ಸಹಿತ ಕೆಲವು ವಸ್ತುಗಳನ್ನು ಕಳವುಗೈದಿದ್ದಾರೆ. ಪೇಟೆಯಲ್ಲಿರುವ ಫ್ಯಾನ್ಸಿ, ಮೆಡಿಕಲ್ ಸೇರಿದಂತೆ ಎಂಟಕ್ಕೂ ಅಧಿಕ ಅಂಗಡಿಗಳ ಒಳ ನುಗ್ಗಿರುವ ಕಳ್ಳರು ತಮ್ಮ ಕೈಚಳಕವನ್ನು ತೋರಿದ್ದಾರೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.    

ನೆಲ್ಯಾಡಿ: ಕಳ್ಳರ ಕೈಚಳಕ ➤ ಎಂಟಕ್ಕೂ ಅಧಿಕ ಅಂಗಡಿಗಳ ಒಳ ನುಗ್ಗಿದ ಕಳ್ಳರು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top