ಯಕ್ಷಗಾನ ಕಲೆಯನ್ನು ಅವಮಾನ ಮಾಡಿದ ದಿಗ್ವಿಜಯ್ ಚಾನೆಲ್ ನಿರೂಪಕ ರಕ್ಷಿತ್ ಶೆಟ್ಟಿ ➤ ಕ್ಷಮೆ ಕೇಳಲು ಪಟ್ಟು ಹಿಡಿದ ಕಲಾಭಿಮಾನಿಗಳು
(ನ್ಯೂಸ್ ಕಡಬ) newskadaba.com ಮಂಗಳೂರು, ನ. 27. ಮಂಗಳೂರಿನ ಹೆಸರಾಂತ ವೆನ್ ಲಾಕ್ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ನಡೆಸಿದಂತಹ ರಾಸಲೀಲೆಯ ವೀಡಿಯೋ ಹಾಗೂ ಫೋಟೊಗಳು ಸಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದಂತೆಯೇ ಹಲವು ಮಾಧ್ಯಮಗಳು ಈ ಕುರಿತು ವರದಿ ಮಾಡಿದ್ದವು. ಇದೇ ಸಂದರ್ಭದಲ್ಲಿ ದಿಗ್ವಿಜಯ ನ್ಯೂಸ್ ಚ್ಯಾನೆಲ್ ವಾಹಿನಿಯ ನಿರೂಪಕ ರಕ್ಷಿತ್ ಶೆಟ್ಟಿ ರಾಸಲೀಲೆಯನ್ನು ಯಕ್ಷಗಾನಕ್ಕೆ ಹೋಲಿಸಿದ ಘಟನೆ ವರದಿಯಾಗಿದೆ. ಇದು ಯಕ್ಷಗಾನ ಕಲಾವಿದರ ಕುಟುಂಬಕ್ಕೆ ಮತ್ತು ಹಿಂದೂ ಸಂಪ್ರದಾಯಕ್ಕೆ ನೋವುಂಟು ಮಾಡಿದ್ದು, ರೊಚ್ಚಿಗೆದ್ದಿದ್ದಾರೆ. ಕರಾವಳಿಯ ಬಹುದೊಡ್ಡ ಸಂಸ್ಕೃತಿ ಮತ್ತು ಹಲವು […]










