ಕ್ರೈಮ್ ನ್ಯೂಸ್

ಬೈಕ್- ಸ್ಕೂಟರ್ ಢಿಕ್ಕಿ: ಓರ್ವ ಮೃತ್ಯು..!

(ನ್ಯೂಸ್ ಕಡಬ)newskadaba.com ಕಾಸರಗೋಡು, ಅ. 09. ಬೈಕ್ ಮತ್ತು ಸ್ಕೂಟರ್ ನಡುವೆ ಉಂಟಾದ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಮೈಲಾಟಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಪೊಯಿನಾಚಿಯ ಮಣಿಕಂಠ (24) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಮೈಲಾಟಿಯ ಪ್ರಜ್ವಲ್ (23) ಗಾಯಗೊಂಡಿದ್ದು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಕಲದ ಜ್ಯೂಸ್ ಅಂಗಡಿಯಲ್ಲಿ ಕೆಲಸ ಮುಗಿಸಿ ಮಣಿಕಂಠ ತೆರಳುತ್ತಿದ್ದ ಸ್ಕೂಟರ್ ಮತ್ತು ಎದುರಿನಿಂದ ಬರುತ್ತಿದ್ದ ಬೈಕ್ ನಡುವೆ ಅಪಘಾತ ನಡೆದಿದೆ ಎನ್ನಲಾಗಿದೆ.   […]

ಬೈಕ್- ಸ್ಕೂಟರ್ ಢಿಕ್ಕಿ: ಓರ್ವ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್
crime, arrest, suspected

ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ಮೂವರು ಆರೋಪಿಗಳು ಅರೆಸ್ಟ್..!

(ನ್ಯೂಸ್ ಕಡಬ)newskadaba.com ಮಂಗಳೂರು, ಅ. 09. ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ ಅವರ ಸಹೋದರ, ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಮಂಗಳವಾರ ಮೂವರನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳನ್ನು (ಎ1) ಆಯೇಷಾ ಅಲಿಯಾಸ್ ರೆಹಮತ್, ಆಕೆಯ ಪತಿ ಶೋಯೆಬ್ (ಎ5) ಮತ್ತು ಸಿರಾಜ್ ಎಂದು ಗುರುತಿಸಲಾಗಿದೆ. ಅಲಿ ನಾಪತ್ತೆಯಾದ ನಂತರ ರೆಹಮತ್ ಕೇರಳಕ್ಕೆ ಪರಾರಿಯಾಗಿದ್ದರು ಎನ್ನಲಾಗಿದೆ. ಆಕೆಯನ್ನು ಬಂಟ್ವಾಳದ ಕಲ್ಲಡ್ಕ ಬಳಿ ಪೊಲೀಸರು ಬಂಧಿಸಿದ್ದಾರೆ.

ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ಮೂವರು ಆರೋಪಿಗಳು ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್

​ಕಾರು- ಬೈಕ್ ಢಿಕ್ಕಿ; ಸವಾರ ಮೃತ್ಯು..!

(ನ್ಯೂಸ್ ಕಡಬ)newskadaba.com ಉಡುಪಿ, ಅ. 08. ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಅ.7 ಸೋಮವಾರ ರಾತ್ರಿ 10.30ರ ಸುಮಾರಿಗೆ ಉಡುಪಿ ಎಂಜಿಎಂ ಕಾಲೇಜು ಎದುರಿನ ಡೈವರ್ಶನ್ ಪಾಯಿಂಟ್‌ನಲ್ಲಿ ನಡೆದಿದೆ. ಮೃತರನ್ನು ಹಿರಿಯಡ್ಕ ನಿವಾಸಿ, ತೆಂಕನಿಡಿಯೂರು ಕಾಲೇಜಿನ ಪದವಿ ವಿದ್ಯಾರ್ಥಿ ವೀರಜ್(18) ಎಂದು ಗುರುತಿಸಲಾಗಿದೆ. ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿ -169ಎ ರಸ್ತೆಯ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಎಂಜಿಎಂ ಕಾಲೇಜು ಎದುರು ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಹಾದು ಹೋಗಿರುವ ಏಕಮುಖ

​ಕಾರು- ಬೈಕ್ ಢಿಕ್ಕಿ; ಸವಾರ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

​ಎ ಕೆ ಸಮೂಹ ಸಂಸ್ಥೆಯ ಅಧ್ಯಕ್ಷ ಎ ಕೆ ಅಹ್ಮದ್ ನಿಧನ

(ನ್ಯೂಸ್ ಕಡಬ)newskadaba.com ಮಂಗಳೂರು, ಅ. 08. ಪ್ರತಿಷ್ಠಿತ ಎ ಕೆ ಸಮೂಹ ಸಂಸ್ಥೆಗಳ ಸ್ಥಾಪಕ ಎ ಕೆ ಅಹ್ಮದ್ ಅವರು ಮಂಗಳವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹೈಲ್ಯಾಂಡ್ ನ ಇಹ್ಸಾನ್ ಮಸೀದಿಯ ಸ್ಥಾಪಕಾಧ್ಯಕ್ಷರಾಗಿದ್ದ ಅವರು ಸಾಮಾಜಿಕ, ಧಾರ್ಮಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು. ಸರಳ ಸಜ್ಜನ ವ್ಯಕ್ತಿತ್ವದ ಪರೋಪಕಾರಿ ಮನೋಭಾವದವರಾಗಿದ್ದರು. ಎ ಕೆ ಗ್ರೂಪ್ ಅನ್ನು ಪ್ರಾರಂಭಿಸಿ ಯಶಸ್ಸಿನ ಉತ್ತುಂಗಕ್ಕೆ ಒಯ್ದು ಪ್ರತಿಷ್ಠಿತ ಬ್ರ್ಯಾಂಡ್ ಆಗಿ ಪರಿವರ್ತಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.  

​ಎ ಕೆ ಸಮೂಹ ಸಂಸ್ಥೆಯ ಅಧ್ಯಕ್ಷ ಎ ಕೆ ಅಹ್ಮದ್ ನಿಧನ Read More »

ಕರಾವಳಿ, ಕ್ರೈಮ್ ನ್ಯೂಸ್
crime, arrest, suspected

ಅಕ್ರಮ ಮರ ಸಾಗಾಟ ಆರೋಪ: 4 ಮಂದಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಪುತ್ತೂರು, ಅ. 08. ಅರಣ್ಯ ವಿಭಾಗ ವ್ಯಾಪ್ತಿಯ ಕಲೆಂಜಿಮಲೆ ರಕ್ಷಿತಾರಣ್ಯದಿಂದ ಅಕ್ರಮವಾಗಿ ದೂಪದ ಮರದಿಂದ ಸಂಗ್ರಹಿಸಲಾದ ಹಾಲುಮಡ್ಡಿ ಶೇಖರಿಸಿ ಸಾಗಾಟ ಮಾಡುತ್ತಿದ್ದ 4 ಮಂದಿಯನ್ನು ಸೋಮವಾರ ಪುತ್ತೂರು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಸಾಗಾಟ ನಡೆಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪಾಟ್ರಕೋಡಿ ಬಾಯಬೆ ನಿವಾಸಿ ಉಮ್ಮರ್ ಫಾರೂಕ್ (44), ಪಾಟ್ರಕೋಡಿ ನಿವಾಸಿಗಳಾದ ಆಲಿ ಹೈದರ್ ಎಂ.ಕೆ(24), ಹಸೈನಾರ್(30) ಮತ್ತು ತಾಳಿಪಡ್ಪು ನಿವಾಸಿ ಉಮ್ಮರ್

ಅಕ್ರಮ ಮರ ಸಾಗಾಟ ಆರೋಪ: 4 ಮಂದಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಭಾರೀ ಮಳೆಗೆ 2 ಕಿ.ಮೀ. ಕೊಚ್ಚಿ ಹೋದ 91ರ ವೃದ್ಧೆ..!

(ನ್ಯೂಸ್ ಕಡಬ)newskadaba.com ಉಡುಪಿ, ಅ. 08. ಜಿಲ್ಲೆಯ ಹೆಬ್ರಿ ತಾಲೂಕು ಕಬ್ಬಿನಾಲೆ ವ್ಯಾಪ್ತಿಯ ಬಲ್ಲಾಡಿ ಗುಮ್ಮಗುಂಡಿ ತೋಡು ಹಾಗೂ ಕೆಲಕಿಲ ನದಿಯಲ್ಲಿ ಭಾನುವಾರ ಉಂಟಾದ ಭಾರಿ ಪ್ರವಾಹದಲ್ಲಿ ವೃದ್ದೆಯೊಬ್ಬಳು ಕೊಚ್ಚಿ ಹೋಗಿದ್ದು, ಆಕೆಯ ಮೃತದೇಹ ಸುಮಾರು ಎರಡು ಕಿ.ಮೀ. ದೂರದ ಬಲ್ಲಾಡಿಯ ಅರ್ಧನಾರೀಶ್ವರ ದೇವಸ್ಥಾನದ ಬಳಿ ಸೋಮವಾರ ಪತ್ತೆಯಾಗಿದೆ. ಮೃತರನ್ನು ಬಲ್ಲಾಡಿ ಬೆಂಡುಗುಡ್ಡೆಯ ಚಂದ್ರು ಗೌಡ್ತಿ (91) ಎಂದು ಗುರುತಿಸಲಾಗಿದೆ. ಬಲ್ಲಾಡಿ ಗುಡ್ಡ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ 2.30ಕ್ಕೆ ಗಾಳಿ, ಗುಡುಗು ಸಹಿತ ಭಾರಿ ಮಳೆ ಸುರಿದಿತ್ತು.

ಭಾರೀ ಮಳೆಗೆ 2 ಕಿ.ಮೀ. ಕೊಚ್ಚಿ ಹೋದ 91ರ ವೃದ್ಧೆ..! Read More »

ಕರಾವಳಿ, ಕ್ರೈಮ್ ನ್ಯೂಸ್

KSRTC ಬಸ್- ಬೈಕ್ ಢಿಕ್ಕಿ: ಒಂದೇ ಕುಟುಂಬದ ನಾಲ್ವರು ಮೃತ್ಯು

(ನ್ಯೂಸ್ ಕಡಬ)newskadaba.com ಬೀದರ್, ಅ. 08. KSRTC ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು ಭೀಕರ ಅಪಘಾತ ಸಂಭವಿಸಿದೆ. ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಗಣೇಶಪುರ ಗ್ರಾಮದವರಾಗಿದ್ದಾರೆ. ಬೈಕ್‌ನಲ್ಲಿ ಜಮೀನಿನ ಕೆಲಸ‌ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಹೈದ್ರಾಬಾದ್‌ನಿಂದ ಬೀದರ್ ಕಡೆಗೆ ಬರುತ್ತಿದ್ದ ಸಾರಿಗೆ ಬಸ್‌ಗೆ ಡಿಕ್ಕಿಯಾಗಿದೆ. ಮೃತರನ್ನು ಗಣೇಶಪುರದ ಸಿದ್ದರಾಮಪ್ಪ (71), ಅವರ ಪುತ್ರಿ ರೇಣುಕಾ (36), ಅಳಿಯ ಜಗನ್ನಾಥ್ (41) ಮತ್ತು ಮೊಮ್ಮಗ ವಿನಯ್ ಕುಮಾರ್

KSRTC ಬಸ್- ಬೈಕ್ ಢಿಕ್ಕಿ: ಒಂದೇ ಕುಟುಂಬದ ನಾಲ್ವರು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆಟೋರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದ ಕಾರಣ ಮನನೊಂದು ಚಾಲಕ ಆತ್ಮಹತ್ಯೆಗೆ ಶರಣು..!

(ನ್ಯೂಸ್ ಕಡಬ)newskadaba.com ಕಾಸರಗೋಡು, ಅ. 08. ನಾಲ್ಕು ದಿನಗಳ ಹಿಂದೆ ತಾನು ಓಡಿಸುತ್ತಿದ್ದ ಆಟೋರಿಕ್ಷಾವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಹಿನ್ನಲೆಯಲ್ಲಿ ಮನನೊಂದು ಚಾಲಕ ವಾಸಸ್ಥಳದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡು ನಗರದಲ್ಲಿ ನಡೆದಿದೆ. ಮೃತಪಟ್ಟವರನ್ನು ಕರ್ನಾಟಕ ಮೂಲದ ಅಬ್ದುಲ್ ಸತ್ತಾರ್ ( 55) ಎಂದು ಗುರುತಿಸಲಾಗಿದೆ. ಕಾಸರಗೋಡು ರೈಲ್ವೆ ನಿಲ್ದಾಣ ರಸ್ತೆಯ ಬಾಡಿಗೆ ಕ್ವಾಟರ್ಸ್ ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಸೋಮವಾರ ಸಂಜೆ ಪತ್ತೆಯಾಗಿದ್ದಾರೆ. ಸಾಲ ಪಡೆದು ಆಟೋರಿಕ್ಷಾ ಖರೀದಿಸಿದ್ದು , ಬಿಟ್ಟುಕೊಡುವಂತೆ ಹಲವು ಬಾರಿ

ಆಟೋರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದ ಕಾರಣ ಮನನೊಂದು ಚಾಲಕ ಆತ್ಮಹತ್ಯೆಗೆ ಶರಣು..! Read More »

ಕರಾವಳಿ, ಕ್ರೈಮ್ ನ್ಯೂಸ್

ವಾರಂಟ್ ಆರೋಪಿ ಪರಾರಿ: ಆರೋಪಿಯ ಮಾಹಿತಿ ಕೋರಿ ಪೊಲೀಸರ ಮನವಿ

(ನ್ಯೂಸ್ ಕಡಬ)newskadaba.com  ಸುಳ್ಯ, ಅ. 07. ಪ್ರಕರಣವೊಂದರ ವಾರಂಟ್ ಆರೋಪಿಯೋರ್ವ ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ಆಸ್ಪತ್ರೆಯಿಂದಲೇ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಾರಿಯಾಗಿರುವ ಆರೋಪಿ ಎಲ್ಲಾದರೂ ಕಂಡುಬಂದಲ್ಲಿ ಪೊಲೀಸರಿಗೆ ತಕ್ಷಣ ಮಾಹಿತಿ ನೀಡುವಂತೆ ಪೊಲೀಸರು ಫೋಟೋ ಸಹಿತ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸುಳ್ಯದ ಕಲ್ಲುಗುಂಡಿ ಎಂಬಲ್ಲಿ ಕೆಲವು ವರ್ಷಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯಾಗಿದ್ದ ತಮಿಳುನಾಡಿನ ಕೋಳಿ ಕರಣ್ ಎಂಬಾತ ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆತನನ್ನು ಅ. 5ರಂದು ಪೊಲೀಸರು ಬಂಧಿಸಿ ಸುಳ್ಯದ ಕೋರ್ಟ್ ಗೆ

ವಾರಂಟ್ ಆರೋಪಿ ಪರಾರಿ: ಆರೋಪಿಯ ಮಾಹಿತಿ ಕೋರಿ ಪೊಲೀಸರ ಮನವಿ Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು: ದ್ವಿತೀಯ ಬಿಎಸ್ಸಿ ಪದವಿ ವಿದ್ಯಾರ್ಥಿ ಮನೋಜ್ ನಾಪತ್ತೆ- ಪೋಲಿಸರಿಗೆ ದೂರು

(ನ್ಯೂಸ್ ಕಡಬ)newskadaba.com ಪುತ್ತೂರು, ಅ. 07. ಸ್ನೇಹಿತನ ಮನೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟ ಯುವಕ ಕಾಣೆಯಾಗಿರುವುದಾಗಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ನೆಹರು ನಗರದ ಗಣೇಶ್ ಬಾಗ್ ನ ಲಕ್ಷ್ಮೀ ಪ್ರಸಾದ್ ಕಂಪೌಂಡ್ ನಿವಾಸಿ ದಿ.ಕೇಶವ ಮೂರ್ತಿ ಎಂಬುವರ ಪುತ್ರ 20 ವರ್ಷ ಪ್ರಾಯದ ಮನೋಜ್ ಕೆ. ಕಾಣೆಯಾದ ಯುವಕನಾಗಿದ್ದಾನೆ. ಪುತ್ತೂರಿನ ಸಂತ ಫಲೋಮಿನಾ ಕಾಲೇಜಿನಲ್ಲಿ 2ನೆ ವರ್ಷದ ಬಿಎಸ್ಸಿ ಪದವಿಗೆ ಕಲಿಯುತ್ತಿದ್ದ ಮನೋಜ್ ಅ.5ರಂದು ಬೆಳಿಗ್ಗೆ ಸ್ನೇಹಿತನ ಮನೆಗೆ ಹೋಗಿ

ಪುತ್ತೂರು: ದ್ವಿತೀಯ ಬಿಎಸ್ಸಿ ಪದವಿ ವಿದ್ಯಾರ್ಥಿ ಮನೋಜ್ ನಾಪತ್ತೆ- ಪೋಲಿಸರಿಗೆ ದೂರು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top