ಕ್ರೈಮ್ ನ್ಯೂಸ್

ಇನ್​ಸ್ಟಾಗ್ರಾಂನಲ್ಲಿ ಅಪ್ರಾಪ್ತೆಯರ ಅಶ್ಲೀಲ ವಿಡಿಯೋ ಅಪ್​ಲೋಡ್ ➤ ಉಡುಪಿ ಯುವಕನ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು , ಜು.28:  ವೆಬ್ ಲಿಂಕ್ ಮಾಹಿತಿ ಆಧರಿಸಿ ಉಡುಪಿಯಲ್ಲಿದ್ದ ಸೌರಭ್ ಶೆಟ್ಟಿಯನ್ನು ಸಿಐಡಿಯ ಸೈಬರ್ ಕ್ರೈಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತನಿಖೆ ವೇಳೆ ಆರೋಪಿ ಆನ್‌ಲೈನ್ ಸ್ಟೋರೇಜ್​ನಲ್ಲಿಯೂ ವಿಡಿಯೋಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ.ಬಂಧಿತ ಸೌರವ್ ಶೆಟ್ಟಿಯ ಬಗ್ಗೆ ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ ಕರ್ನಾಟಕದ ಸಿಐಡಿ‌ ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು. ಅದರಂತೆ ಸಿಐಡಿ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದರು.     ನಂತರ ಯಾವ ಯಾವ ವೆಬ್​ಸೈಟ್​ಗಳಿಗೆ ಲಿಂಕ್ ಪೋಸ್ಟ್ ಮಾಡುತ್ತಿದ್ದ ಎಂಬ […]

ಇನ್​ಸ್ಟಾಗ್ರಾಂನಲ್ಲಿ ಅಪ್ರಾಪ್ತೆಯರ ಅಶ್ಲೀಲ ವಿಡಿಯೋ ಅಪ್​ಲೋಡ್ ➤ ಉಡುಪಿ ಯುವಕನ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಿಳಿನೆಲೆ :ಅಂಗಡಿಯ ಸಮೀಪ ಶೆಡ್ ನಿರ್ಮಾಣ ➤ ಮಹಿಳೆಯ ಮೇಲೆ ಹಲ್ಲೆ ಆರೋಪ

(ನ್ಯೂಸ್ ಕಡಬ) newskadaba.com ಬಿಳಿನೆಲೆ, ಜು.27: ಭಾನುವಾರ ಕರ್ನಾಟಕದ್ಯಾಂತ ಲಾಕ್ ಡೌನ್ ಇದ್ದರೂ ಜನರು ಅಲ್ಲಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಅದರಂತೆ ಕಳೆದ ದಿನ ಲಾಕ್ ಡೌನ್ ಉಲ್ಲಂಘಿಸಿ ಬಿಳಿನೆಲೆಯಲ್ಲಿ ಕೆಲವರು ಬೀದಿಯಲ್ಲಿ ಕಿತ್ತಾಟ ಮಾಡಿದ್ದಾರೆ.   ಬಿಳಿನೆಲೆ ಪೇಟೆಯಲ್ಲಿ ಅಂಗಡಿಯೊಂದರ ಸಮೀಪ, ಇನ್ನೊಂದು ಅಂಗಡಿ ನಿರ್ಮಿಸಲು ಶೆಡ್ ನಿರ್ಮಾಣವಾಗಿದ್ದು, ಇದನ್ನ ವಿರೋಧಿಸಿದ ಅಂಗಡಿ ಮಾಲಕಿ ಹಾಗೂ ಅವರ ಪುತ್ರನ ಮೇಲೆ ಐವರು ಯುವಕರ ತಂಡವೊಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಅಂಗಡಿ ಮಾಲಕಿ ಅನ್ನಪೂರ್ಣ (ಸೀತಮ್ಮ) ಅವರು

ಬಿಳಿನೆಲೆ :ಅಂಗಡಿಯ ಸಮೀಪ ಶೆಡ್ ನಿರ್ಮಾಣ ➤ ಮಹಿಳೆಯ ಮೇಲೆ ಹಲ್ಲೆ ಆರೋಪ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಈಚರ್ ಲಾರಿ ಹಾಗೂ ಬೈಕ್ ನಡುವೆ ಢಿಕ್ಕಿ ➤ ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ: ಜು‌. 26, ಈಚರ್ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಸಹಸವಾರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಸಮೀಪದ ಮಠ ಎಂಬಲ್ಲಿ ಸಂಭವಿಸಿದೆ. ಮೃತರನ್ನು ಉಪ್ಪಿನಂಗಡಿ ನಟ್ಟಿಬೈಲು ನಿವಾಸಿ ಗಣೇಶ್(23) ಎಂದು ಗುರುತಿಸಲಾಗಿದೆ. ಪುರುಷರಕಟ್ಟೆ ನಿವಾಸಿ ನವೀನ ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರು ಬೈಕ್‌ನಲ್ಲಿ ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ಹೋಗುತ್ತಿದ್ದ ವೇಳೆ

ಈಚರ್ ಲಾರಿ ಹಾಗೂ ಬೈಕ್ ನಡುವೆ ಢಿಕ್ಕಿ ➤ ಬೈಕ್ ಸವಾರ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಆಹಾರದಲ್ಲಿ ವಿಷವುಣಿಸಿ ತಂದೆಯ ಹತ್ಯೆಗೆ ಮಕ್ಕಳ ಸಂಚು ➤ ನೀಚ ಪುತ್ರರಿಬ್ಬರ ಅರೆಷ್ಟ್

(ನ್ಯೂಸ್ ಕಡಬ) newskadaba.com ಸುಳ್ಯ,ಜು.26:  ನೀಚ ಮಕ್ಕಳಿಬ್ಬರು ತಮ್ಮ ತಂದೆಯನ್ನ ವಿಷವುಣಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ, ನಾಲ್ಕೂರು ಗ್ರಾಮದ ಅಂಜೇರಿಯಲ್ಲಿ ನಡೆದಿದೆ.  ತಂದೆ, ಹೊನ್ನಪ್ಪ ನಾಯ್ಕ ಅಂಜೇರಿ ವಿಷಯುಕ್ತ ಆಹಾರ ಸೇವಿಸಿ ಅಸ್ವಸ್ಥಗೊಂಡ ವ್ಯಕ್ತಿ. ಮಕ್ಕಳಾದ ದೇವಿಪ್ರಸಾದ್ ಮತ್ತು ಲೋಕೇಶ್ ಎಂಬಿಬ್ಬರು ತಂದೆಗೆ ವಿಷವುಣಿಸಿದ್ದು ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.     ಪುತ್ರ ಲೊಕೇಶ್ ಹೊನ್ನಪ್ಪರವರ ಮನೆ ಬಳಿಯಲ್ಲೇ ವಾಸವಿದ್ದು, ಮತ್ತೊಬ್ಬ ಪುತ್ರ ದೇವಿಪ್ರಸಾದ್ ಗುತ್ತಿಗಾರಿನಲ್ಲಿ ವಾಸವಿದ್ದಾರೆ. ಜು.23 ರ ರಾತ್ರಿ ಹೊನ್ನಪ್ಪರವರ ಮನೆಯಲ್ಲಿ

ಆಹಾರದಲ್ಲಿ ವಿಷವುಣಿಸಿ ತಂದೆಯ ಹತ್ಯೆಗೆ ಮಕ್ಕಳ ಸಂಚು ➤ ನೀಚ ಪುತ್ರರಿಬ್ಬರ ಅರೆಷ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೇ ಕೊಲೆಗೈದ ಪಾಪಿ ➤ ಮೃತದೇಹವನ್ನು ಸುಡಲೆತ್ನಿಸಿದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಕಾಪು, ಜು.25, ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೇ ಹತ್ಯೆಗೈದು ಮೃತದೇಹವನ್ನು ಮನೆಯಂಗಳದಲ್ಲಿ ಸುಡಲು ಯತ್ನಿಸಿದ ಘಟನೆ ಶಿರ್ವ ಠಾಣಾ ವ್ಯಾಪ್ತಿಯ ಪುಂಚಲಕಾಡು ಎಂಬಲ್ಲಿ ನಡೆದಿದೆ. ಮೃತರನ್ನು ಎರ್ಮಾಳ್ ನಿವಾಸಿ ಹೇಮಂತ್ ಪೂಜಾರಿ(45) ಎಂದು ತಿಳಿದು ಬಂದಿದೆ. ಆತನ ಸ್ನೇಹಿತನಾದ ಅಲ್ಬನ್ ಡಿಸೋಜ (50)ಕೊಲೆ ಆರೋಪಿ. ಕೊಲೆ ನಡೆದ ವಿಚಾರ ಶುಕ್ರವಾರ ಸಂಜೆಯ ವೇಳೆ ಬೆಳಕಿಗೆ ಬಂದಿದೆ. ಹೇಮಂತ್ ಮತ್ತು ಅಲ್ಬನ್ ಡಿಸೋಜ ಸ್ನೇಹಿತರಾಗಿದ್ದರು. ಶುಕ್ರವಾರ ಬೆಳಗ್ಗೆ ಕಾಪುವಿನ ಬಾರ್‌ ನಲ್ಲಿ ಮದ್ಯ ಸೇವಿಸಿ ಪುಂಚಲಕಾಡಿನಲ್ಲಿರುವ

ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೇ ಕೊಲೆಗೈದ ಪಾಪಿ ➤ ಮೃತದೇಹವನ್ನು ಸುಡಲೆತ್ನಿಸಿದ ಆರೋಪಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ವಿವಾಹಿತ ಮಹಿಳೆಯೊಂದಿಗೆ ಯುವಕನ ಚೆಲ್ಲಾಟ ➤ ಸಿಕ್ಕಿ ಬಿದ್ದ ಯುವಕನಿಗೆ ಸ್ಥಳೀಯರಿಂದ ಗೂಸಾ

(ನ್ಯೂಸ್ ಕಡಬ) newskadaba.com ಸುಳ್ಯ, ಜು.24:  ಸುಳ್ಯದ ಯುವಕನೋರ್ವ ಆಲೆಟ್ಟಿ ಗ್ರಾಮದ ವಿವಾಹಿತ ಮಹಿಳೆಯೊಂದಿಗೆ ಚೆಲ್ಲಾಟವಾಡಲು ಹೋಗಿ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದ ಘಟನೆ ಇಂದು ನಡೆದಿದೆ.   ಆಲೆಟ್ಟಿ ಗ್ರಾಮದ ಅರಂಬೂರು ಪರಿಸರದಲ್ಲಿ ವಾಸವಿದ್ದ ವಿವಾಹಿತ ಮಹಿಳೆಯೊಂದಿಗೆ ಚೆಲ್ಲಾಟವಾಡಲು ಮಹಿಳೆಯ ಮನೆಗೆ ಹೋಗಿ ಸ್ಥಳೀಯ ಯುವಕರ ಕೈಗೆ ಸಿಕ್ಕಿ ಬಿದ್ದು ಒದೆ ತಿಂದಿದ್ದಾನೆ. ಸುಳ್ಯದಲ್ಲಿ ಆಟೋ ಚಾಲಕನಾಗಿರುವ ಯುವಕ ಗಣೇಶ್ ಎಂಬಾತ ಮಹಿಳೆಯ ಮನೆಗೆ ಮಧ್ಯಾಹ್ನದ ಹೊತ್ತಿಗೆ ಯಾರು ಇಲ್ಲದ ಸಂದರ್ಭದಲ್ಲಿ ತೆರಳಿ ಮಹಿಳೆಯೊಂದಿಗೆ ಚೆಲ್ಲಾಟವಾಡುವುದನ್ನ

ವಿವಾಹಿತ ಮಹಿಳೆಯೊಂದಿಗೆ ಯುವಕನ ಚೆಲ್ಲಾಟ ➤ ಸಿಕ್ಕಿ ಬಿದ್ದ ಯುವಕನಿಗೆ ಸ್ಥಳೀಯರಿಂದ ಗೂಸಾ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೋವಿಡ್ ಸೋಂಕಿಗೆ ಹೆದರಿದ ವೃದ್ದ ➤ ಕೋವಿಡ್ ಆಸ್ಪತ್ರೆಯಲ್ಲೆ ನೇಣಿಗೆ ಶರಣು.

(ನ್ಯೂಸ್ ಕಡಬ) newskadaba.com ಮಂಡ್ಯ, ಜು.23:  ಕೊರೋನಾಗೆ ಹೆದರಿ ಕೋವಿಡ್ ಸೋಂಕಿತನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿಂದು ನಡೆದಿದೆ. ಕೋವಿಡ್-19 ಸೋಂಕಿಗೆ ಒಳಗಾಗಿದ್ದ 55 ವರ್ಷದ ವ್ಯಕ್ತಿ ಬುಧವಾರ ರಾತ್ರಿ ಕೋವಿಡ್ ಆಸ್ಪತ್ರೆಯಲ್ಲಿ ನೇಣು ಹಾಕಿಕೊಂಡಿದ್ದಾರೆ.     ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಪಿ. ಮಂಚೇಗೌಡ ಈ ಕುರಿತು ಪ್ರತಿಕ್ರಿಯಿಸಿ, ಮಳವಳ್ಳಿ ತಾಲ್ಲೂಕಿನ ಕಂದೇಗಾಲ ಗ್ರಾಮದ ವ್ಯಕ್ತಿ ಕಿಡ್ನಿ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಇದರಿಂದ

ಕೋವಿಡ್ ಸೋಂಕಿಗೆ ಹೆದರಿದ ವೃದ್ದ ➤ ಕೋವಿಡ್ ಆಸ್ಪತ್ರೆಯಲ್ಲೆ ನೇಣಿಗೆ ಶರಣು. Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ – ಮೂವರು ಆರೋಪಿಗಳು ಅರೆಷ್ಟ್

( ನ್ಯೂಸ್ ಕಡಬ)  newskadaba.com ಪಡುಬಿದ್ರೆ  ಜುಲೈ ,23: ತೆಂಕ ಎರ್ಮಾಳ್ ಎಂಬಲ್ಲಿನ ನಡೆಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ಇಂದು ಬೆಳಿಗ್ಗೆ ಪೊಲೀಸರು ದಾಳಿ ನಡೆಸಿದ್ದು, ಮೂವರು ಆರೋಪಿಗಳನ್ನ  ಬಂಧಿಸಿದ್ದಾರೆ.     ಮುಖ್ಯ ಆರೋಪಿ  ಕಮಲ್ ಸಾಹೇಬ್ ತಪ್ಪಿಸಿಕೊಂಡಿದ್ದು, ಆತನ ಅಳಿಯ ನಾಸಿರ್, ಮೊಮ್ಮಗ ಜಮೀರ್ ಮತ್ತು ಇನ್ನೋರ್ವ ಸದ್ದಾಂ ನನ್ನು ಪೊಲೀಸರು ಬಂಧಿಸಿದ್ದಾರೆ.ಈ ಆರೋಪಿಗಳು ಯಾವುದೇ ಪರವಾನಗಿ ಇಲ್ಲದೆ ಮನೆಯಲ್ಲಿಯೇ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದರು. ಖಚಿತ ಮಾಹಿತಿ ಪಡೆದು  ಪಡುಬಿದ್ರಿ ಪೊಲೀಸರು ದಾಳಿ ನಡೆಸಿದ್ದು, ಮೂವರನ್ನು

ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ – ಮೂವರು ಆರೋಪಿಗಳು ಅರೆಷ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕುಂದಾಪುರ : ಹಟ್ಟಿಯಲ್ಲಿದ್ದ ದನ ಕದ್ದೋಯ್ದ ಕಳ್ಳರು

(ನ್ಯೂಸ್ ಕಡಬ) newskadaba.com ಕುಂದಾಪುರ, ಜು.23:  ಹಟ್ಟಿಯಲ್ಲಿದ್ದ ಎರಡು ದನಗಳನ್ನು ಹಿಂಸಾತ್ಮಾಕವಾಗಿ ಇನ್ನೋವಾ ಕಾರಲ್ಲಿ ಕದ್ದೋಯ್ದ ಘಟನೆ ಕುಂದಾಪುರ ತಾಲೂಕು ಚಿತ್ತೂರು ಗ್ರಾಮದ ಸುರಕುಂದ ಎಂಬಲ್ಲಿ ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ನಡೆದಿದ್ದು ಆರೋಪಿಗಳು ಪರಾರಿಯಾಗಿದ್ದಾರೆ. ಮಂಗಳವಾರ ಮುಂಜಾನೆ ಆರೋಪಿಗಳಾದ ಉನ್ನಿ ಮೊಹಿನ್‌ ಮತ್ತು ಅವರ ಇಬ್ಬರು ಮಕ್ಕಳು ಇನೋವಾ ಕಾರಿನಲ್ಲಿ ಹಾಗೂ ಮೋಟಾರು ಸೈಕಲಿನಲ್ಲಿ ಬಂದಿದ್ದು ದೂರುದಾರರ ಕೊಟ್ಟಿಗೆಯಲ್ಲಿದ್ದ ಎರಡು ದನಗಳನ್ನು ತಮ್ಮ ಕಾರಿನಲ್ಲಿ ಹಿಂಸಾಸ್ಮಾಕವಾಗಿ ತುಂಬಿಸಿ ಕದ್ದೊಯುತ್ತಿದ್ದಾಗ ಎಚ್ಚರಗೊಂಡ ಮನೆಯವರು ಇದನ್ನು ನೋಡಿ

ಕುಂದಾಪುರ : ಹಟ್ಟಿಯಲ್ಲಿದ್ದ ದನ ಕದ್ದೋಯ್ದ ಕಳ್ಳರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಸಂಚಾರಿ ಪೊಲೀಸ್ ಠಾಣಾ ಹೆಡ್ ಕಾನ್ಸ್‌ಟೇಬಲ್ ಉಮೇಶ್ ಮುಪ್ಪೇರ್ಯ ನಿಧನ

(ನ್ಯೂಸ್ ಕಡಬ) newskadaba.com ಜು‌23, ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಪ್ಪೇರ್ಯ ಗ್ರಾಮದ ಉಮೆಶ್ (47) ಅಸೌಖ್ಯದಿಂದ ಮೃತಪಟ್ಟಿದ್ದಾರೆ. ಅನಾರೋಗ್ಯದ ಕಾರಣದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ನಿಧನರಾಗಿದ್ದಾರೆ. ಇವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲೂ ತನ್ನ ಸೇವೆಯನ್ನು ಸಲ್ಲಿಸಿದ್ದಾರೆ.

ಪುತ್ತೂರು: ಸಂಚಾರಿ ಪೊಲೀಸ್ ಠಾಣಾ ಹೆಡ್ ಕಾನ್ಸ್‌ಟೇಬಲ್ ಉಮೇಶ್ ಮುಪ್ಪೇರ್ಯ ನಿಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top