ಕ್ರೈಮ್ ನ್ಯೂಸ್

ಪುತ್ತೂರು : ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಅಕ್ಕಿ ಸಹಿತ ಲಾರಿ ಪೊಲೀಸ್ ವಶಕ್ಕೆ..!!

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 21:  ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯೊಂದನ್ನು ಕಳೆದ ರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ಧಾರೆ. ದಾಖಲೆ ಪತ್ರಗಳಿಲ್ಲದೆ 9,250 ಕಿಲೋ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ಪುತ್ತೂರು ನಗರಠಾಣೆ ಪೊಲೀಸರು ಭಾನುವಾರ ರಾತ್ರಿ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.     ಮಾಣಿ-ಮೈಸೂರು ಹೆದ್ದಾರಿಯ ಪೋಳ್ಯದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಪುತ್ತೂರು ಕಡೆಯಿಂದ ಬಂದ ಕೆಎ 21 ಸಿ 4647 ನೋಂದಣಿ ಸಂಖ್ಯೆಯ ಲಾರಿಯನ್ನು ತಡೆಯಲಾಗಿತ್ತು. ಪರಿಶೀಲಿಸಿದಾಗ ಅವರ […]

ಪುತ್ತೂರು : ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಅಕ್ಕಿ ಸಹಿತ ಲಾರಿ ಪೊಲೀಸ್ ವಶಕ್ಕೆ..!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು :ಗಾಂಜಾ ನಶೆಯಲ್ಲಿದ್ದ ಇಬ್ಬರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.21: ಮುಕ್ರಂಪಾಡಿ ಬಸ್‌ ತಂಗುದಾಣದಲ್ಲಿ ಗಾಂಜಾ ನಶೆಯಲ್ಲಿದ್ದ ವೇಳೆ ಬಂಧಿತರಾಗಿರುವ ಆರೋಪಿಗಳಿಬ್ಬರನ್ನು ನ್ಯಾಯಾಲಯ ಒಂದು ದಿನದವಧಿಗೆ ಪೊಲೀಸ್‌ ಕಸ್ಟಡಿಗೆ ನೀಡಿದೆ.ಮಂಜೇಶ್ವರ ತಾಲೂಕು ಉಪ್ಪಳ ಪಪ್ಪಾಯಿತೊಟ್ಟಿಯ ರಹಿಮಾನ್‌ ಖಾನ್(44ವ.) ಹಾಗೂ ಮಂಜೇಶ್ವರ ತಾಲೂಕು ಹೊಸಂಗಡಿ ಬಜ್ಜೆಂಗಳ ಅಬ್ದುಲ್ಲಾ ರವರು ಕಳೆದ ದಿನದಂದು ಸಂಜೆ ಮುಕ್ರಂಪಾಡಿ ಬಸ್‌ ತಂಗುದಾಣದ ಬಳಿ ನಿಲ್ಲಿಸಿದ್ದ ಕಾರೊಂದರ ಬಳಿ ಗಾಂಜಾ ನಶೆಯಲ್ಲಿದ್ದು ಅನುಚಿತವಾಗಿ ವರ್ತಿಸುತ್ತಿದ್ದ ಕುರಿತು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಎಸ್‌.ಐ. ಜಂಬುರಾಜ್‌ ಮಹಾಜನ್‌

ಪುತ್ತೂರು :ಗಾಂಜಾ ನಶೆಯಲ್ಲಿದ್ದ ಇಬ್ಬರು ಪೊಲೀಸ್ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಬಹುಮಹಡಿ ಕಟ್ಟಡ ಕುಸಿತ ➤ ಎಂಟು ಮಂದಿ ಮೃತ್ಯು | 25 ಕ್ಕೂ ಅಧಿಕ ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ

(ನ್ಯೂಸ್ ಕಡಬ) newskadaba.com ಮುಂಬೈ, ಸೆ. 21. ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಕನಿಷ್ಟ 8 ಮಂದಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಭಿವಾಂಡಿಯಲ್ಲಿ ನಡೆದಿದೆ. ಘಟನೆಯಲ್ಲಿ ಇನ್ನು 25ಕ್ಕೂ ಹೆಚ್ಚು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಥಾಣೆ ಜಿಲ್ಲೆಯ ಭಿವಾಂಡಿಯಲ್ಲಿರುವ ಪಟೇಲ್ ಕಾಂಪೌಂಡ್ ಪ್ರದೇಶದಲ್ಲಿ ಸೋಮವಾರ ಮುಂಜಾನೆ 3.30ರ ಸಮಯದಲ್ಲಿ ಮೂರು ಮಹಡಿ ಕಟ್ಟಡ ಕುಸಿದು ಬಿದ್ದಿದ್ದು, ಅದರಲ್ಲಿ 8 ಮಂದಿ ಮೃತಪಟ್ಟರೆ 20 ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ ಇನ್ನೂ 25ಕ್ಕೂ

ಬಹುಮಹಡಿ ಕಟ್ಟಡ ಕುಸಿತ ➤ ಎಂಟು ಮಂದಿ ಮೃತ್ಯು | 25 ಕ್ಕೂ ಅಧಿಕ ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾರು- ಸ್ಕೂಟರ್ ನಡುವೆ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕುಂದಾಪುರ, ಸೆ. 21. ಸ್ಕೂಟರ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಾವುಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಮೃತರನ್ನು ನಾವುಂದ ನಿವಾಸಿ ಇಸ್ಮಾಯಿಲ್ (56) ಎಂದು ಗುರುತಿಸಲಾಗಿದೆ. ಮಾರುಕಟ್ಟೆಯಿಂದ ತನ್ನ ಮನೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಸ್ವಿಫ್ಟ್ ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದು, ರಸ್ತೆಗೆ ಎಸೆಯಲ್ಪಟ್ಟ ಇವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು- ಸ್ಕೂಟರ್ ನಡುವೆ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ತಾಯಿಯಿಂದಲ್ಲೇ ಮಕ್ಕಳಿಗೆ ವಿಷಪ್ರಾಶನ ➤ ಪುತ್ರಿ ಮೃತ್ಯು, ಗಂಡನ ವಿರುದ್ದ ದೂರು ದಾಖಲು.!!

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.20: ಸಂಬಂಧಿಕರ ಮನೆಯಲ್ಲಿದ್ದ ಪಡುವನ್ನೂರು ಗ್ರಾಮದ ಸಜಂಕಾಡಿ ನಿವಾಸಿ ರಘುನಾಥ ಎಂಬವರ ಪತ್ನಿ ದಿವ್ಯಶ್ರೀ (29ವ) ಎಂಬ ಮಹಿಳೆಯೊಬ್ಬರು ಜ್ಯೂಸ್‌ ನಲ್ಲಿ ವಿಷ ಬೆರೆಸಿ ಮಕ್ಕಳಿಗೆ ಕುಡಿಸಿದ ಬಳಿಕ ತಾನೂ ಸೇವಿಸಿ ಮಂಗಳೂರಿಗೆ ಸಂಬಂಧಿಕರ ಮನೆಗೆ ತೆರಳಿ ಬಳಿಕ ತಾನೂ ಆತ್ಮ ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.ಎಂಟು ವರ್ಷದ ಪುತ್ರಿ ಅನ್ವಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಚಿಕಿತ್ಸೆ ಫಲಿಸದೆ ಕಳೆದ ದಿನ ರಾತ್ರಿ ಮೃತಪಟ್ಟಿದ್ದಾರೆ.  ಇನ್ನು ಹತ್ತು ವರ್ಷದ ಪುತ್ರ

ತಾಯಿಯಿಂದಲ್ಲೇ ಮಕ್ಕಳಿಗೆ ವಿಷಪ್ರಾಶನ ➤ ಪುತ್ರಿ ಮೃತ್ಯು, ಗಂಡನ ವಿರುದ್ದ ದೂರು ದಾಖಲು.!! Read More »

ಕರಾವಳಿ, ಕ್ರೈಮ್ ನ್ಯೂಸ್

ಸುಬ್ರಹ್ಮಣ್ಯ: ನಿಯಂತ್ರಣ ತಪ್ಪಿದ ಆಟೋರಿಕ್ಷಾ ಪಲ್ಟಿ ➤ ಆಟೋ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.20. ಚಾಲಕನ ನಿಯಂತ್ರಣ ತಪ್ಪಿದ ಆಟೋರಿಕ್ಷಾವೊಂದು ರಸ್ತೆ ಬದಿಯ ಚರಂಡಿಗೆ ಪಲ್ಟಿಯಾದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಮೃತ ರಿಕ್ಷಾ ಚಾಲಕನನ್ನು ಕೊಂಬಾರು ಗ್ರಾಮದ ಕಾಯರ್ತಡ್ಕ ನಿವಾಸಿ ಕೃಷ್ಣ ಪ್ರಸಾದ್(20) ಎಂದು ಗುರುತಿಸಲಾಗಿದೆ. ಶನಿವಾರ ತಡರಾತ್ರಿ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಏನೆಕಲ್ಲು ಸಮೀಪದ ಚಾಲಕನ ನಿಯಂತ್ರಣ ತಪ್ಪಿದ ರಿಕ್ಷಾ ಪಲ್ಟಿಯಾಗಿ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ. ಗಂಭೀರ ಗಾಯಗೊಂಡ ಕೃಷ್ಣ ಪ್ರಸಾದ್ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಈ

ಸುಬ್ರಹ್ಮಣ್ಯ: ನಿಯಂತ್ರಣ ತಪ್ಪಿದ ಆಟೋರಿಕ್ಷಾ ಪಲ್ಟಿ ➤ ಆಟೋ ಚಾಲಕ ಮೃತ್ಯು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪುತ್ತೂರು: ಗಾಂಜಾ ಸೇವಿಸಿದ್ದ ಆರೋಪ ➤ ಇಬ್ಬರು ಅರೆಸ್ಟ್

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 19. ಗಾಂಜಾ ನಶೆಯಲ್ಲಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಪುತ್ತೂರಿನ ಮುಕ್ರಂಪಾಡಿ ಎಂಬಲ್ಲಿ ನಡೆದಿದೆ. ಮುಕ್ರಂಪಾಡಿಯ ಬಸ್ ನಿಲ್ದಾಣದ ಬಳಿ ನಿಲ್ಲಿಸಲಾಗಿದ್ದ ಕಾರೊಂದರ ಬಳಿ ಯುವಕರಿಬ್ಬರು ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಎಸ್.ಐ ಜಂಬುರಾಜ್ ಮಹಾಜನ್ ಆರೋಪಿಗಳಾದ ಅಬ್ದುಲ್ಲಾ, ಮೊಹಮ್ಮದ್ ಆರಿಫ್, ರಹಿಮಾನ್ ಖಾನ್ ಸಹಿತ ಕೇರಳ ನೋಂದಣಿಯ ಕಾರೋಂದನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಇಬ್ಬರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ

ಪುತ್ತೂರು: ಗಾಂಜಾ ಸೇವಿಸಿದ್ದ ಆರೋಪ ➤ ಇಬ್ಬರು ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಂತ್ರಿಕಾರಿ ಸೇನೆಯ ಹೆಸರಿನಲ್ಲಿ ಹಣ ಪಡೆದು ವಂಚನೆ ➤ ಡಾ. ಪರಮೇಸ್ವರ, ರಾಜು ಹೊಸ್ಮಠ ವಿರುದ್ಧ ಮಹಿಳಯರಿಂದ ದೂರು ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.19:  ಕರ್ನಾಟಕ ಕ್ರಾಂತಿಕಾರಿ ಸೇನೆ ಎಂಬ ಹೆಸರಿನಲ್ಲಿ ಸದಸ್ಯತ್ವಕ್ಕಾಗಿ ಹಣ ಸಂಗ್ರಹ ಮಾಡಿರುವುದಲ್ಲದೆ ಬ್ಯಾಂಕ್ ಖಾತೆ ಹಾಗೂ ಐ ಎಫ್ ಸಿ ನಂಬರ್ ಪಡೆದಿ ವಂಚನೆ ಮಾಡಿರುವುದಾಗಿ ಆರೋಪಿಸಿ ಕರ್ನಾಟಕ ಕ್ರಾಂತಿಕಾರಿ ಸೇನೆಯ ರಾಜ್ಯಾಧ್ಯಕ್ಷ ಡಾ. ಪರಮೇಶ್ವರ ಹಾಗೂ ಕರ್ನಾಟಕ ಅಂನೇಡ್ಕರ್ ಅಪತ್ಬಾಂಧವ ಟ್ರಸ್ಟ್ ನ ಜಿಲ್ಲಾ ಮುಖಂಡ ರಾಜು ಹೊಸ್ಮಠ ವಿರುದ್ಧ ನೊಂದ ಮಹಿಳೆಯರು ಇಂದು (ಸೆ.19) ನಗರ ಠಾಣೆಗೆ ದೂರು ನೀಡಿದ್ದಾರೆ.   ದಲಿತ್ ಸೇವಾ ಸಮಿತಿ ಮೂಲಕ

ಕಾಂತ್ರಿಕಾರಿ ಸೇನೆಯ ಹೆಸರಿನಲ್ಲಿ ಹಣ ಪಡೆದು ವಂಚನೆ ➤ ಡಾ. ಪರಮೇಸ್ವರ, ರಾಜು ಹೊಸ್ಮಠ ವಿರುದ್ಧ ಮಹಿಳಯರಿಂದ ದೂರು ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕುಂದಾಪುರ: ಗಾಂಜಾ ಸಾಗಟ , 4 ಆರೋಪಿಗಳ ಅರೆಸ್ಟ್

(ನ್ಯೂಸ್ ಕಡಬ) newskadaba.com ಕುಂದಾಪುರ, ಸೆ.19: ಭಟ್ಕಳದಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಇನ್ಸುಲೇಟರ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಭೀಮಾಶಂಕರ್ ಎಸ್. ನೇತೃತ್ವದ ಗಂಗೊಳ್ಳಿ ಪೊಲೀಸರ ತಂಡ ನಾಲ್ವರು ಆರೋಪಿಗಳನ್ನು ಮರವಂತೆಯ ಬಳಿ ಕಳೆದ ದಿನ ರಾತ್ರಿ  ಕಾರ್ಯಾಚರಣೆ ಮಾಡಿ ಬಂಧಿಸಿದ್ದು, ವಾಹನ ಸಹಿತ 14.45 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಆರೋಪಿಗಳಾದ ಮಂಗಳೂರು ಹರೆಕಾಳದ ನಿವಾಸಿಗಳಾದ ಮಹಮ್ಮದ್ ಸಾಕೀರ್(24), ಮಹಮ್ಮದ್ ಜಾಫರ್ (32), ಬಂದೂರು ಕಿರಿಮಂಜೇಶ್ವರದ ಅಲಾಜ್

ಕುಂದಾಪುರ: ಗಾಂಜಾ ಸಾಗಟ , 4 ಆರೋಪಿಗಳ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ರಾಗಿಣಿ-ಸಂಜನಾಗೆ ಇನ್ನೆರಡು ದಿನ ಜೈಲೇ ಫಿಕ್ಸ್​​

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.19:  ಸ್ಯಾಂಡಲ್​ವುಡ್ ಡ್ರಗ್ಸ್​ ಲಿಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್​ ಸೋಮವಾರಕ್ಕೆ ಮುಂದೂಡಿದೆ.     ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಪಬ್ಲಿಕ್ ಪ್ರಾಸಿಕ್ಯೂಟರ್​ ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿ, ವಿಚಾರಣೆಯನ್ನು ಸೆಪ್ಟೆಂಬರ್ 21ಕ್ಕೆ ಎನ್​ಡಿಪಿಎಸ್​​ ಕೋರ್ಟ್​​ ಮುಂದೂಡಿದೆ.ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಇಂದು ಒಟ್ಟು ಐದು ಆರೋಪಿಗಳ ಜಾಮೀನಿನ ವಿಚಾರಣೆ ಇತ್ತು. ಇದರಲ್ಲಿ ಕೆಲವರು ಜೈಲಿನಲ್ಲಿದ್ದರೆ ಇನ್ನೂ

ರಾಗಿಣಿ-ಸಂಜನಾಗೆ ಇನ್ನೆರಡು ದಿನ ಜೈಲೇ ಫಿಕ್ಸ್​​ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top