ಕ್ರೈಮ್ ನ್ಯೂಸ್

ತೊಕ್ಕೊಟ್ಟು :ಬೈಕ್ – ಆ್ಯಕ್ಟಿವಾ ನಡುವೆ ನಸುಕಿನ ಜಾವ ಭೀಕರ ಅಪಘಾತ ➤ಬೈಕ್ ಸವಾರ ಸ್ಥಳದಲ್ಲಿಯೇ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.26: ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚೆಂಬುಗುಡ್ಡೆ ಬಳಿ ಇಂದು (ಶನಿವಾರ) ನಸುಕಿನ ಜಾವ ನಡೆದಿದೆ. ಸಂತೋಷನಗರ ನಿವಾಸಿ ಸಂದೇಶ್ ಕೆರೆಬೈಲ್ (38) ಸಾವನ್ನಪ್ಪಿದವರು. ಸುಮಾರು 3 ಗಂಟೆಯ ವೇಳೆ ಈ ಅಪಘಾತ ನಡೆದಿದ್ದು, ಸಂದೇಶ್ ಅವರು ಕೊಲ್ಯ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮನೆಗೆ ವಾಪಸ್ಸಾಗುತ್ತಿದ್ದರು.ಅಪಘಾತದ ಪರಿಣಾಮ ಸಂದೇಶ್ ರಸ್ತೆಗುರುಳಿ ಬಿದ್ದಿದ್ದು, ತಲೆಗೆ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಮಂಗಳೂರಿನ […]

ತೊಕ್ಕೊಟ್ಟು :ಬೈಕ್ – ಆ್ಯಕ್ಟಿವಾ ನಡುವೆ ನಸುಕಿನ ಜಾವ ಭೀಕರ ಅಪಘಾತ ➤ಬೈಕ್ ಸವಾರ ಸ್ಥಳದಲ್ಲಿಯೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ನಾವುಂದ :ಸರ್ಕಲ್ ಇನ್ಸ್ ಪೆಕ್ಟರ್ ರವರ ಮಿಂಚಿನ ಕಾರ್ಯಾಚರಣೆ ➤13 ಗೋವು ರಕ್ಷಣೆ,ಓರ್ವ ಗೋಕಳ್ಳನ ಬಂಧನ

(ನ್ಯೂಸ್ ಕಡಬ) newskadaba.com ಉಡುಪಿ, ಡಿ.26: ಬೈಂದೂರು ತಾಲೂಕಿನ ನಾವುಂದದಲ್ಲಿ ಗೋ ಕಳ್ಳನೊಬ್ಬನನ್ನು ಬಂಧಿಸಿ, 13 ಗೋವುಗಳನ್ನು ರಕ್ಷಿಸಲಾಗಿದೆ. ಬೈಂದೂರು ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಕಾಯ್ಕಿಣಿ ಮಿಂಚಿನ ಕಾರ್ಯಾಚರಣೆ ಮೂಲಕ 13 ಗೋವು ರಕ್ಷಣೆ ಮಾಡುವಲ್ಲಿ ಸಫಲರಾಗಿದ್ದಾರೆ. ನಾವುಂದದಿಂದ ಜಲೀಲ್ ಎಂಬ ಗೋ ಕಳ್ಳನ ಗ್ಯಾಂಗ್, ಇನ್ಸು ಲೇಟರ್ ನಲ್ಲಿ ಹಲವು ದಿನಗಳಿಂದ ಅಕ್ರಮವಾಗಿ ಗೋ ಕಳ್ಳ ಸಾಗಣೆ ಮಾಡುತ್ತಿರುವ ಬಗ್ಗೆ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಮಾಹಿತಿ ಇತ್ತು.. ಒಂದು ತಿಂಗಳ ನಿರಂತರ ಈ ಬಗ್ಗೆ

ನಾವುಂದ :ಸರ್ಕಲ್ ಇನ್ಸ್ ಪೆಕ್ಟರ್ ರವರ ಮಿಂಚಿನ ಕಾರ್ಯಾಚರಣೆ ➤13 ಗೋವು ರಕ್ಷಣೆ,ಓರ್ವ ಗೋಕಳ್ಳನ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಶಾಸಕ ಖಾದರ್ ಕಾರು ಹಿಂಬಾಲಿಸಿದಾತನ ಬಂಧಿಸಿ ಬಿಡುಗಡೆ.!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.25: ಶಾಸಕ ಯು.ಟಿ. ಖಾದರ್ ಪ್ರಯಾಣಿಸುತ್ತಿದ್ದ ಕಾರನ್ನು ಅಪರಿಚಿತರು ಹಿಂಬಾಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದಾರೆ. ಬೋಳೂರು ನಿವಾಸಿ ಅನೀಸ್ ಪೂಜಾರಿ (28) ವಿಚಾರಣೆಗೊಳಗಾಗಿ ಬಿಡುಗಡೆಯಾದ ಯುವಕ. ಈತ ಬೋಳೂರು ವಾರ್ಡ್‌ನ ಕಾಂಗ್ರೆಸ್‌ನ ಕಾರ್ಯಕರ್ತೆಯೊಬ್ಬರ ಮಗ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಆತನಿಂದ‌ಮುಚ್ಚಳಿಗೆ ಬರೆಸಿ ಬಿಡುಗಡೆ ಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.ಶಾಸಕ ಯು.ಟಿ. ಖಾದರ್ ಬುಧವಾರ ಸಂಜೆ ದೇರಳಕಟ್ಟೆಯಲ್ಲಿ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ತೆರಳಲು ಮಂಗಳೂರು ವಿಮಾನ

ಶಾಸಕ ಖಾದರ್ ಕಾರು ಹಿಂಬಾಲಿಸಿದಾತನ ಬಂಧಿಸಿ ಬಿಡುಗಡೆ.! Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು :ಮದುವೆ ಪ್ರಪೋಸ್, ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.25: ಸಾಮಾಜಿಕ ಜಾಲತಾಣ ಫೇಸ್ ಬುಕ್ನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸುವುದಲ್ಲದೆ, ಮದುವೆ ಪ್ರಸ್ತಾಪ, ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಕುರುಬನಹಳ್ಳಿ ನಿವಾಸಿ ಪರಮೇಶ್ವರಪ್ಪ ರಂಗಪ್ಪ (23) ಬಂಧಿತ ಆರೋಪಿ. ಮ್ಯಾಟ್ರೊಮೊನಿಯಲ್ ನಲ್ಲಿ ಆರೋಪಿಯು ತಾನು ಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ಎಂಬುದಾಗಿ ಬಿಂಬಿಸಿದ್ದ.ಈತ 20 ನಕಲಿ ಖಾತೆ ಸೃಷ್ಟಿಸಿ ಸರ್ಕಾರಿ ಇಲಾಖೆಗಳ ಉತ್ತಮ ದರ್ಜೆಯ

ಮಂಗಳೂರು :ಮದುವೆ ಪ್ರಪೋಸ್, ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಶಾಲೆಗೆಂದು ತೆರಳಿದ ಹೈಸ್ಕೂಲ್ ವಿದ್ಯಾರ್ಥಿನಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಡಿ.25. ಶಾಲೆಗೆಂದು ತೆರಳಿದ್ದ ಹೈಸ್ಕೂಲ್ ವಿದ್ಯಾರ್ಥಿನಿಯೋರ್ವಳು ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ಮರ್ಧಾಳದಿಂದ ವರದಿಯಾಗಿದೆ. ನಾಪತ್ತೆಯಾದ ವಿದ್ಯಾರ್ಥಿನಿಯನ್ನು ಐತ್ತೂರು ಗ್ರಾಮದ ಬೆತ್ತೋಡಿ ಸಿ.ಆರ್.ಸಿ ಕಾಲನಿಯ ನಿವಾಸಿ ಜಗದೀಶ ಎಂಬವರ ಪುತ್ರಿ ನರ್ಮದಾ ಬಿ.ಜೆ (16) ಎಂದು ಗುರುತಿಸಲಾಗಿದೆ. ಮರ್ದಾಳದ ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಈಕೆ ಬುಧವಾರದಂದು ಶಾಲೆಗೆಂದು ತೆರಳಿದ್ದು, ಮನೆಗೆ ಬಾರದ ಹಿನ್ನೆಲೆಯಲ್ಲಿ ಅಧ್ಯಾಪಕರಲ್ಲಿ ವಿಚಾರಿಸಿದಾಗ ಶಾಲೆಗೆ ರಜೆ ಇರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಡಬ ಠಾಣೆಗೆ ದೂರು

ಕಡಬ: ಶಾಲೆಗೆಂದು ತೆರಳಿದ ಹೈಸ್ಕೂಲ್ ವಿದ್ಯಾರ್ಥಿನಿ ನಾಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಳ್ತಂಗಡಿ :ಮುಂಜಾನೆ ಅಡಿಕೆ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24:ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದಲ್ಲಿ ಇಂದು (ಗುರುವಾರ) ಮುಂಜಾನೆ ಓರ್ವ ಕಳ್ಳನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.ಮಚ್ಚಿನ ಗ್ರಾಮದ ಪುಂಚಪಾದೆ ಎಂಬಲ್ಲಿ 50 ಕೆ.ಜಿ. (14) ಗೋಣಿ ಅಡಿಕೆ ಸಹಿತ ಇಬ್ಬರು ಆರೋಪಿಗಳನ್ನು ಸ್ಥಳೀಯರಾದ ಕರಾಟೆ ಕಿಟ್ಟ ಎಂಬುವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಒಂದೂವರೆ ತಿಂಗಳುಗಳಿಂದ ಪಿಲಿಗೂಡು, ದೇವರುಪಲಿಕೆ ಆಸುಪಾಸಿನಲ್ಲಿ ಅಡಿಕೆ ಕಳ್ಳ ಸಾಗಾಣಿಕೆ ನಡೆಯುತ್ತಿದ್ದು, ಕಳ್ಳರ ಪತ್ತೆಗಾಗಿ ಸ್ಥಳೀಯರೇ ಕಾರ್ಯಾಚರಣೆಗೆ ಇಳಿದಿದ್ದರು. ಚುನಾವಣೆ ಸಮಯವಾದ್ದರಿಂದ ಕೃಷಿಕರ ಬಂದೂಕು

ಬೆಳ್ತಂಗಡಿ :ಮುಂಜಾನೆ ಅಡಿಕೆ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಸರಗೋಡು : ಡಿವೈಎಫ್‍ಐ ಕಾರ್ಯಕರ್ತನ ಬರ್ಬರ ಹತ್ಯೆ ➤ ದಾಳಿ ನಡೆಸಿದವರಲ್ಲಿ ಓರ್ವ ಆರೋಪಿಗೂ ಗಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24:ಉಪ್ಪಳದ ಸೋಂಕಾಲು ಎಂಬಲ್ಲಿ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಇರಿದು ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಕಳೆದ ದಿನ ರಾತ್ರಿ ಸುಮಾರು 11 ಘಂಟೆಯ ವೇಳೆಗೆ ನಡೆದಿದೆ.ಮೃತರನ್ನು ಅಬ್ದುಲ್ ರಹ್ಮಾನ್ (29) ಎಂದು ಗುರುತಿಸಲಾಗಿದೆ. ದಾಳಿಯ ವೇಳೆ ಓರ್ವ ಆರೋಪಿಗೂ ಗಾಯಗಳಾಗಿದ್ದು, ಆತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಆರೋಪಿಯನ್ನು ಇರ್ಷಾದ್ (26) ಎಂದು ಗುರುತಿಸಲಾಗಿದೆ.ಕಲ್ಲೂರಾವಿ ನಿವಾಸಿ ರಹ್ಮಾನ್ ಬೈಕ್ ನಲ್ಲಿ ಸ್ನೇಹಿತನ ಜೊತೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ. ಕಲ್ಲೂರಾವಿ-ಹಳೆಕಡಪ್ಪುರ ಬಳಿ,

ಕಾಸರಗೋಡು : ಡಿವೈಎಫ್‍ಐ ಕಾರ್ಯಕರ್ತನ ಬರ್ಬರ ಹತ್ಯೆ ➤ ದಾಳಿ ನಡೆಸಿದವರಲ್ಲಿ ಓರ್ವ ಆರೋಪಿಗೂ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಶಾಸಕ ಯು.ಟಿ.ಖಾದರ್ ಹತ್ಯೆಗೆ ನಡೆಯಿತಾ ಸ್ಕೆಚ್..⁉️ ➤ ಶಾಸಕರ ಕಾರನ್ನು ಹಿಂಬಾಲಿಸಿದ ಅಪರಿಚಿತರು..‼️

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23. ಶಾಸಕ ಯು.ಟಿ.ಖಾದರ್ ಪ್ರಯಾಣಿಸುತ್ತಿದ್ದ ಕಾರನ್ನು ಅಪರಿಚಿತ ಬೈಕೊಂದು ಹಿಂಬಾಲಿಸಿದ ಘಟನೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶಾಸಕ ಯು.ಟಿ.ಖಾದರ್ ರವರು ದೇರಳಕಟ್ಟೆಯಲ್ಲಿ ನಡೆದ ಕಾರ್ಯಕ್ರಮವೊಂದನ್ನು ಮುಗಿಸಿ ಬುಧವಾರ ರಾತ್ರಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ನಡುವೆ ದೇರಳಕಟ್ಟೆಯಿಂದ ಬೈಕೊಂದರಲ್ಲಿ ಇಬ್ಬರು ಅಪರಿಚಿತರು ಶಾಸಕರ ಕಾರನ್ನು ಅನುಮಾನಾಸ್ಪದವಾಗಿ ಹಿಂಬಾಲಿಸಿಕೊಂಡು ಬರುತ್ತಿರುವುದು ಗಮನಕ್ಕೆ ಬಂದಿದೆ ಎನ್ನಲಾಗಿದೆ. ನಂತೂರು ತಲುಪುವ ವೇಳೆ ಶಾಸಕರ ಎಸ್ಕಾರ್ಟ್ ವಾಹನವು ಬೈಕ್ ಸವಾರರನ್ನು ತಡೆದಿದ್ದು, ಈ

ಶಾಸಕ ಯು.ಟಿ.ಖಾದರ್ ಹತ್ಯೆಗೆ ನಡೆಯಿತಾ ಸ್ಕೆಚ್..⁉️ ➤ ಶಾಸಕರ ಕಾರನ್ನು ಹಿಂಬಾಲಿಸಿದ ಅಪರಿಚಿತರು..‼️ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿಯ ಕೊಕ್ಕಡದಲ್ಲಿ ನಡೆದ ದರೋಡೆ ಪ್ರಕರಣ ➤ ತನಿಖೆ ಎರಡು ತಂಡ ರಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23:  ಬೆಳ್ತಂಗಡಿಯ ಕೊಕ್ಕಡದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ದರೋಡೆಕೋರರ ಪತ್ತೆಗೆ 2ತಂಡಗಳನ್ನು ರಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಹೇಳಿದ್ದಾರೆ .   ಮಂಗಳೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಇದು ಏಳರಿಂದ ಎಂಡು ಮಂದಿ ಮುಸುಕುಧಾರಿಗಳು ನಡೆಸಿರುವ ಕೃತ್ಯವಾಗಿದ್ದು ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದರು . ದರೋಡೆ ಸಂದರ್ಭ ಚೂರಿ ಇರಿತಕ್ಕೊಳಗಾದ ಗೀತಾ ಶೆಟ್ಟಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಪ್ಪಿನಂಗಡಿ ಠಾಣಾ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ

ಬೆಳ್ತಂಗಡಿಯ ಕೊಕ್ಕಡದಲ್ಲಿ ನಡೆದ ದರೋಡೆ ಪ್ರಕರಣ ➤ ತನಿಖೆ ಎರಡು ತಂಡ ರಚನೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕೊಣಾಜೆ: ಮತದಾನದ ವೇಳೆ ಕಾಂಗ್ರೆಸ್ ಹಾಗೂ ಎಸ್ಡಿಪಿಐ ನಡುವೆ ಘರ್ಷಣೆ ➤ ಪೊಲೀಸರಿಂದ ಲಘು ಲಾಠಿ ಚಾರ್ಜ್

(ನ್ಯೂಸ್ ಕಡಬ) newskadaba.com ಕೊಣಾಜೆ, ಡಿ. 22. ಇಲ್ಲಿನ ಹರೇಕಳ ಮತಗಟ್ಟೆಯಲ್ಲಿ ಎಸ್ಡಿಪಿಐ ಮತ್ರು ಕಾಂಗ್ರೆಸ್ ಕಾರ್ಯಕರ್ತರ ನಡುವರ ಘರ್ಷಣೆ ನಡೆದಿದ್ದು, ಈ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತನೋರ್ವ ಪದೇ ಪದೇ ಮತಗಟ್ಟೆಯೊಳಗೆ ಹೋಗುವುದನ್ನು ಎಸ್ಡಿಪಿಐ ಕಾರ್ಯಕರ್ತರು ಆಕ್ಷೇಪಿಸಿದ್ದು, ಈ ವೇಳೆ ಉಭಯ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಝಕರಿಯಾ ಮಲಾರ್ ಎಂಬವರಿಗೆ ಎಸ್ಡಿಪಿಐ ಕಾರ್ಯಕರ್ತರು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಲಘು ಲಾಠಿ

ಕೊಣಾಜೆ: ಮತದಾನದ ವೇಳೆ ಕಾಂಗ್ರೆಸ್ ಹಾಗೂ ಎಸ್ಡಿಪಿಐ ನಡುವೆ ಘರ್ಷಣೆ ➤ ಪೊಲೀಸರಿಂದ ಲಘು ಲಾಠಿ ಚಾರ್ಜ್ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top