ಕ್ರೈಮ್ ನ್ಯೂಸ್

ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ➤ ಮೂವರ ದುರ್ಮರಣ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜ. 10. ಹುಂಡೈ ಕಾರು ಮತ್ತು ಇಕೋ ಸ್ಪೋರ್ಟ್ಸ್ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟ ಘಟನೆ ತರೀಕೆರೆ ತಾಲೂಕಿನ ರಂಗೇನಹಳ್ಳಿಯಲ್ಲಿ ನಡೆದಿದೆ. ಮೃತಪಟ್ಟವರನ್ನು ಅನಿಲ್ (35), ಸುಜಿತಾ (30) ಹಾಗೂ ನಾಗೇಂದ್ರ (26) ಎಂದು ಗುರುತಿಸಲಾಗಿದೆ. ಕುಂದಾಪುರದಿಂದ ಬೆಂಗಳೂರಿನ ಕಡೆ ಬರುತ್ತಿದ್ದ ಹುಂಡೈ ಕಾರು ಹಾಗೂ ಬೆಂಗಳೂರಿನಿಂದ ತೀರ್ಥಹಳ್ಳಿಗೆ ತೆರಳುತ್ತಿದ್ದ ಇಕೋ ಸ್ಪೋರ್ಟ್ಸ್ ಕಾರು ರಂಗೇನಹಳ್ಳಿ ಬಳಿ ಮುಖಾಮುಖಿ ಡಿಕ್ಕಿಯಾಗಿವೆ. ಈ ಕುರಿತು ಲಕ್ಕವಳ್ಳಿ ಪೊಲೀಸ್ […]

ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ➤ ಮೂವರ ದುರ್ಮರಣ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪುತ್ತೂರು: ಓಮ್ನಿ ಕಾರು ಪಲ್ಟಿ

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 09. ಓಮ್ನಿ ಕಾರೊಂದು ಪಲ್ಟಿಯಾದ ಘಟನೆ ಕಟ್ಟತ್ತಾರು ಎಂಬಲ್ಲಿ ಇಂದು ಮುಂಜಾನೆ ನಡೆದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಪುತ್ತೂರು: ಓಮ್ನಿ ಕಾರು ಪಲ್ಟಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ ಅವಘಡ- ಹತ್ತು ಹಸುಗೂಸುಗಳು ಮೃತ್ಯು

(ನ್ಯೂಸ್ ಕಡಬ) newskadaba.com ಮಹಾರಾಷ್ಟ್, ಜ. 09. ಮಹಾರಾಷ್ಟ್ರದ ಭಂದರಾ ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಸುಮಾರು 10 ನವಜಾತ ಶಿಶುಗಳು ಮೃತಪಟ್ಟ ಘಟನೆ ನಡೆದಿದೆ. ಆಸ್ಪತ್ರೆಯ ನವಜಾತ ಶಿಶುಗಳ ವಿಶೇಷ ಶುಶ್ರೂಷಕ ಘಟಕದಲ್ಲಿ ಈ ದುರಂತ ಸಂಭವಿಸಿದ್ದು, ಅವಘಡದಲ್ಲಿ 17 ಮಕ್ಕಳ ಪೈಕಿ ಹತ್ತು ಮಕ್ಕಳು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಈ ಮಕ್ಕಳೆಲ್ಲ 1ರಿಂದ 3 ತಿಂಗಳ ಒಳಗಿನವು ಎಂದು ವೈದ್ಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ

ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ ಅವಘಡ- ಹತ್ತು ಹಸುಗೂಸುಗಳು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೈಕಂಪಾಡಿ: ಸ್ಪ್ರಿಂಗ್ ಉತ್ಪಾದನಾ ಕೇಂದ್ರದಲ್ಲಿ ಬೆಂಕಿ ಅನಾಹುತ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 09. ಕೈಗಾರಿಕಾ ವ್ಯಾಪ್ತಿಯ ಸ್ಪ್ರಿಂಗ್ ಉತ್ಪಾದನಾ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಬೈಕಂಪಾಡಿಯಲ್ಲಿ ನಡೆದಿದೆ. ಶುಕ್ರವಾರ ಸಂಜೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ತಕ್ಷಣ ಸ್ಥಳೀಯ ಎಂ.ಸಿ.ಎಫ್ ಮತ್ತು ಕದ್ರಿಯ ಅಗ್ನಿಶಾಮಕ ಸಿಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಹರಸಾಹಸಪಟ್ಟರು. ಈ ಘಟನೆಯ ವೇಳೆ ರಾತ್ರಿ ಪಾಳಿಯ ಕಾರ್ಮಿಕರು ಕೆಲಸ ಮಾಡುತ್ತಿದ್ದು, ವಿರಾಮದ ಕಾರಣ ಕೆಲವರು ಚಹಾಕ್ಕೆಂದು ಹೊರಗೆ ತೆರಳಿದ್ದರು. ಅದೃಚ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೈಕಂಪಾಡಿ: ಸ್ಪ್ರಿಂಗ್ ಉತ್ಪಾದನಾ ಕೇಂದ್ರದಲ್ಲಿ ಬೆಂಕಿ ಅನಾಹುತ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ತೊಕ್ಕೊಟ್ಟು: ಅಕ್ರಮ ಬೀಫ್ ಸ್ಟಾಲ್ ಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 09. ಅಕ್ರಮವಾಗಿ ನಡೆಸುತ್ತಿದ್ದರೆನ್ನಲಾದ ಬೀಫ್ ಸ್ಟಾಲ್ ಗಳಿಗೆ ಕಿಡಿಗೇಡಿಗಳು ರಾತ್ರಿ ಬೆಂಕಿ ಹಚ್ಚಿದ ಘಟನೆ ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದಿದೆ. ಖಾದರ್, ಅಬ್ದುಲ್ಲ ಹಾಗೂ ಹನೀಫ್ ಎಂಬವರ ಸ್ಟಾಲ್ ಗಳಿಗೆ ಬೆಂಕಿ‌ ಹಚ್ಚಲಾಗಿದೆ. ಒಳಪೇಟೆಯ ಹಳೆ ಮಾರುಕಟ್ಟೆ ಇದ್ದ ವೇಳೆ ಈ ಮೂರು ಸ್ಟಾಲ್ ಗಳು ಕಾರ್ಯಚರಿಸುತ್ತಿದ್ದು, ಇದೀಗ ಹಳೆ ಮಾರುಕಟ್ಟೆಯ ಕಾಮಗಾರಿ ನಡೆಯುತ್ತಿದ್ದರಿಂದ ಮೂರು ಸ್ಟಾಲ್ ಗಳು ಮಾರುಕಟ್ಟೆಯ ಪಕ್ಕದ ರೈಲ್ವೇ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಡೆಸುತ್ತಿದ್ದರೆನ್ನಲಾಗಿದೆ. ಇದೀಗ

ತೊಕ್ಕೊಟ್ಟು: ಅಕ್ರಮ ಬೀಫ್ ಸ್ಟಾಲ್ ಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಕ್ಕಳಿಗೆ ಸಿಹಿತಿಂಡಿ ಹಂಚಿ ಕೆಲಕಾಲ ಮಕ್ಕಳ ಕಳ್ಳರಾದ ಯುವ ಕಾಂಗ್ರೆಸ್ ಸದಸ್ಯರು ➤ ದೇರಳಕಟ್ಟೆಯಲ್ಲಿ ನಡೆಯಿತು ಸ್ವಾರಸ್ಯಕರ ಘಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.09. ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಯುವಕರ ಗುಂಪೊಂದು ಸ್ಥಳೀಯ ಮಕ್ಕಳಿಗೆ ಸಿಹಿತಿಂಡಿ ಹಂಚಿದ್ದರಿಂದ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯ ಪ್ರಚಾರಕ್ಕೆಂದು ಮಹಮ್ಮದ್ ನಲಪಾಡ್ ಬೆಂಬಲಿಗರ ತಂಡವೊಂದು ಎರಡು ಕಾರುಗಳಲ್ಲಿ ಮಂಗಳೂರಿಗೆ ಆಗಮಿಸಿತ್ತು. ಕಾರನಲ್ಲಿದ್ದವರು ದೇರಳಕಟ್ಟೆಯ ಬೇಕರಿಯೊಂದರಲ್ಲಿ ಚಹಾ ಕುಡಿದು ಅಲ್ಲೇ ಹೊರಗಡೆ ಇದ್ದ ಮಕ್ಕಳಿಗೆ ಸಿಹಿತಿಂಡಿ ಹಂಚಿದ್ದಾರೆ ಎನ್ನಲಾಗಿದೆ. ಈ ವೇಳೆ ಅಲ್ಲಿದ್ದ ಮಗುವೊಂದು ಭಯದಿಂದ ಕಿರುಚಿದ್ದು, ತಕ್ಷಣವೇ

ಮಕ್ಕಳಿಗೆ ಸಿಹಿತಿಂಡಿ ಹಂಚಿ ಕೆಲಕಾಲ ಮಕ್ಕಳ ಕಳ್ಳರಾದ ಯುವ ಕಾಂಗ್ರೆಸ್ ಸದಸ್ಯರು ➤ ದೇರಳಕಟ್ಟೆಯಲ್ಲಿ ನಡೆಯಿತು ಸ್ವಾರಸ್ಯಕರ ಘಟನೆ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಅಕ್ರಮವಾಗಿ ಜಿಂಕೆಗಳನ್ನು ಕೊಂದು ಅಡುಗೆ ಮಾಡುತ್ತಿದ್ದ ಆರು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಮೈಸೂರು, ಜ. 08. ಜಿಂಕೆಗಳನ್ನು ಅಕ್ರಮವಾಗಿ ಕೊಂದು ಅದರ ಅಡಿಗೆ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿದ ಘಟನೆ ನಂಜನಗೂಡು ತಾಲೂಕಿನ ನಾಗಣಪುರ ಗ್ರಾಮದಲ್ಲಿ ನಡೆದಿದೆ. ಆರೋಪಿಗಳನ್ನು ವಿದ್ಯಾಸಾಗರ್, ರವೀಂದ್ರ, ಯಶೋಧರ, ಪ್ರಸನ್ನ, ಸುಜಿತ್ ಹಾಗೂ ಕುಶಾಲಪ್ಪ ಎಂದು ಗುರುತಿಸಲಾಗಿದೆ. ಆರೋಪಿಗಳು ಬಂಡೀಪುರ ಹುಲಿಧಾಮದ ಅರಣ್ಯ ಪ್ರದೇಶದಿಂದ ಬಂದೂಕಿನಿಂದ ಮೂರು ಜಿಂಕೆ ಹಾಗೂ ಒಂದು ಮೊಲವನ್ನು ಅಕ್ರಮವಾಗಿ ಕೊಂದು ತಂದು ಅಡುಗೆ ಮಾಡುತ್ತಿದ್ದ ಸಂದರ್ಭ ಇವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ವಾಹನ ಹಾಗೂ

ಅಕ್ರಮವಾಗಿ ಜಿಂಕೆಗಳನ್ನು ಕೊಂದು ಅಡುಗೆ ಮಾಡುತ್ತಿದ್ದ ಆರು ಮಂದಿಯ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉ.ಪ್ರದೇಶದಲ್ಲಿ ಭೀಕರ ಅತ್ಯಾಚಾರ ➤ ಅತ್ಯಾಚಾರವೆಸಗಿ ಟೆರೇಸ್ ನಿಂದ ತಳ್ಳಿ ಹಾಕಿದ ವಿಕೃತ ಕಾಮಿ..!

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಜ. 08. ಉತ್ತರಪ್ರದೇಶದಲ್ಲಿ ಮಹಿಳೆಯ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿದ್ದು, ಮೊರದಾಬಾದ್ ಜಿಲ್ಲೆಯಲ್ಲಿ 19 ವರ್ಷದ ಯುವತಿಯೊಬ್ಬಳನ್ನು ಅತ್ಯಾಚಾರಗೈದ ಪಾಪಿಯೋರ್ವ ಟೆರೇಸ್ ನಿಂದ ಆಕೆಯನ್ನು ತಳ್ಳಿ ಹಾಕಿ ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಈ ಕುರಿತು ಯುವತಿಯ ತಂದೆ ದೂರು ನೀಡಿದ್ದು, ಟೆರೇಸ್ ಮೂಲಕ ಮಗಳ ಕೋಣೆಗೆ ನುಗ್ಗಿ ಗನ್ ಹಿಡಿದು ಹೆದರಿಸಿ ಅತ್ಯಾಚಾರ ಎಸಗಿದ್ದು, ಈಕೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಕೆಯನ್ನು ಟೆರೇಸ್ ನಿಂದ ತಳ್ಳಿ ಹಾಕಿ ದುಷ್ಕರ್ಮಿ ಪರಾರಿಯಾಗಿದ್ದಾನೆ. ಯುವತಿಯ

ಉ.ಪ್ರದೇಶದಲ್ಲಿ ಭೀಕರ ಅತ್ಯಾಚಾರ ➤ ಅತ್ಯಾಚಾರವೆಸಗಿ ಟೆರೇಸ್ ನಿಂದ ತಳ್ಳಿ ಹಾಕಿದ ವಿಕೃತ ಕಾಮಿ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಟ್ಲ: ಮೂವರು ಪಾರಿವಾಳ ಕಳ್ಳರ ಬಂಧನ

(ನ್ಯೂಸ್ ಕಡಬ) newskadaba.com ವಿಟ್ಲ, ಜ. 08. ಸುಮಾರು 20 ಸಾವಿರ ಮೌಲ್ಯದ ನಲ್ವತ್ತು ಪಾರಿವಾಳಗಳನ್ನು ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಬಂದಿಸುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಮಹಮ್ಮದ್ ನಾಸಿರ್ (24) ರಿಝ್ವಾನ್ (19) ಹಾಗೂ ಅಮ್ಟೂರು ಮೂಲದ ಅಫೀಝ್ (18) ಎಂದು ಗುರುತಿಸಲಾಗಿದೆ. ಒಕ್ಕೆತ್ತೂರಿನ ಸುಲೈಮಾನ್ ಎಂಬವರ ಪಾರಿವಾಳ ಗಮನಿಸಿದ ಇವರು ಕಳ್ಳತನಕ್ಕೆ ಮುಂದಾಗಿದ್ದಾರೆ. ಈ ಕುರಿತು ತನಿಖೆ ನಡೆಸಿದ ಪೊಲೀಸರು 22 ಪಾರಿವಾಳಗಳ ಜೊತೆಗೆ ಕೃತ್ಯಕ್ಕೆ ಬಳಸಿದ ರಿಕ್ಷಾವನ್ನು ವಶಕ್ಕೆ ಪಡೆದಿದ್ದಾರೆ.  

ವಿಟ್ಲ: ಮೂವರು ಪಾರಿವಾಳ ಕಳ್ಳರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ಹೆಂಡತಿಯನ್ನೇ ಕೊಲೆಗೈದ ಭೂಪ..!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 08. ಪತಿಯೋರ್ವ ಹೆಂಡತಿಯನ್ನೇ ಹೊಡೆದು ಕೊಂದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಆರೋಪಿಯನ್ನು ಜಾನ್ಸನ್ (47) ಎಂದು ಗುರುತಿಸಲಾಗಿದೆ. ಈತ ಪತ್ನಿ ಕೇರಳ ಮೂಲದ ಸೌಮ್ಯಾ ಜಾನ್ಸನ್ ಳಿಗೆ ಮರದ ತುಂಡಿನಿಂದ ಹುಬ್ಬಿನ ಜಾಗಕ್ಕೆ ಹೊಡೆದಿದ್ದಲ್ಲದೆ ತಲೆಯ ಹಿಂದಿನ ಭಾಗಕ್ಕೆ ಬಲವಾದ ಏಟು ಕೊಟ್ಟು ಕೊಲೆ ಮಾಡಿದ್ದಾನೆಂದು ಆಕೆಯ ಸಹೋದರ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ. ಪ್ರತೀದಿನ ಕುಡಿದು ಬಂದು ಈತ ಮನಯಲ್ಲಿ ಜಗಳಕ್ಕಿಳಿಯುತ್ತಿದ್ದ ಮತ್ತು ಆಕೆಯ ಮೇಲೆ ಸದಾ ಸಂಶಯ

ಬೆಳ್ತಂಗಡಿ: ಹೆಂಡತಿಯನ್ನೇ ಕೊಲೆಗೈದ ಭೂಪ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top