ಕ್ರೈಮ್ ನ್ಯೂಸ್

ಮಂಗಳೂರು: ಹಳೆಯ ಸ್ನೇಹಿತೆ ಹಾಗೂ ಆಕೆಯ ಪ್ರಿಯಕರನಿಗೆ ರೌಡಿಯಿಂದ ಹಲ್ಲೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 01. ಯುವತಿಯೋರ್ವಳು ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ ಒಂದರಲ್ಲಿ ಕುಳಿತಿದ್ದ ಸಂದರ್ಭ ಆಕೆಯ ಹಳೆ ಸ್ನೇಹಿತ ಮತ್ತು ಆತನ ಗೆಳೆಯರು ಏಕಾಏಕಿ ದಾಳಿ ನಡೆಸಿದ ಘಟನೆ ನಗರದ ಕದ್ರಿ ಎಂಬಲ್ಲಿ ನಡೆದಿದೆ. ಜ. 30ರಂದು ಮಧ್ಯಾಹ್ನ ಕದ್ರಿಯ ಬಾರ್ ಆ್ಯಂಡ್ ರೆಸ್ಟೋರೆಂಟ್ ವೊಂದರಲ್ಲಿ ಈ ಘಟನೆ ನಡೆದಿದ್ದು, ಇದರ ಸಿಸಿಟಿವಿ ವಿಡಿಯೋ ತುಣುಕು ಇದೀಗ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದೆ. ಆಕೆ ತನ್ನ ಮೂವರು ಗೆಳೆಯರೊಂದಿಗೆ ರೆಸ್ಟೋರೆಂಟ್ ನಲ್ಲಿ ಕುಳಿತಿದ್ದಾಗ ಏಕಾಏಕಿ ನುಗ್ಗಿದ […]

ಮಂಗಳೂರು: ಹಳೆಯ ಸ್ನೇಹಿತೆ ಹಾಗೂ ಆಕೆಯ ಪ್ರಿಯಕರನಿಗೆ ರೌಡಿಯಿಂದ ಹಲ್ಲೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ಮನೆಗೆ ನುಗ್ಗಿ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 31. ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಕಳವುಗೈದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ಎಂಬಲ್ಲಿ ನಡೆದಿದೆ. ನೇಲ್ಯಪಲ್ಕೆ ನಿವಾಸಿ ಖಾದರ್ ಎಂಬವರ ಮನೆಯಿಂದ ಕಳ್ಳತನವಾಗಿದ್ದು, ಸುಮಾರು 22 ಪವನ್ ಚಿನ್ನಾಭರಣ ದೋಚಿದ್ದಾರೆ ಎನ್ನಲಾಗಿದೆ. ಈ ವೇಳೆ ಮನೆಯಲ್ಲಿದ್ದ ಸಿ.ಸಿ ಕ್ಯಾಮರಾ ಆಫ್ ಆಗಿದ್ದು, ಹಿಂಬಾಗಿಲನ್ನು ತೆಗೆಯಲಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬಂಟ್ವಾಳ: ಮನೆಗೆ ನುಗ್ಗಿ ಚಿನ್ನಾಭರಣ ಕಳವು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ದುಬೈನಿಂದ ಅಕ್ರಮ ಚಿನ್ನ ಸಾಗಾಟ ➤ ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 31. ಅಕ್ರಮವಾಗಿ ಚಿನ್ನ‌ಸಾಗಿಸುತ್ತಿದ್ದ ಆರೋಪಿಯೋರ್ವನನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಕಾಸರಗೋಡು ಮೂಲದ ಮಶ್ಕೂರ್ ಎಂದು ಗುರುತಿಸಲಾಗಿದೆ. ಈತನ ಬಳಿ ಸುಮಾರು 30 ಲಕ್ಷ ಮೌಲ್ಯದ 587 ಗ್ರಾಂ ತೂಕದ 24 ಕ್ಯಾರೆಟ್ ಚಿನ್ನ ಪತ್ತೆಯಾಗಿದ್ದು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಂಗಳೂರು: ದುಬೈನಿಂದ ಅಕ್ರಮ ಚಿನ್ನ ಸಾಗಾಟ ➤ ಓರ್ವನ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಾಂಕ್ರೀಟ್ ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ ➤ ಮೂವರು ದುರ್ಮರಣ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 31. ಕಾಂಕ್ರಿಟ್ ಮಿಕ್ಸರ್ ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದಿದೆ. ಮೃತಪಟ್ಟವರನ್ನು ಬಾಗಲೂರಿನ ಶಿವು(26), ಮಿಲನ್ (25) ಹಾಗೂ ಸಾತನೂರಿನ ಮಧು (26) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಅನುಷಾ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಂಕ್ರೀಟ್ ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ ➤ ಮೂವರು ದುರ್ಮರಣ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪ್ರಿಯಕರನ ಜೊತೆ ಓಡಿ ಹೋಗಲೆಂದು ಹೆತ್ತ ಮಗುವನ್ನೇ ಗೋಡೆಗೆ ಗುದ್ದಿ ಕೊಂದ ಕ್ರೂರಿ ತಾಯಿ..!

(ನ್ಯೂಸ್ ಕಡಬ) newskadaba.com ಚನ್ನರಾಯಪಟ್ಟಣ, ಜ. 31. ಪ್ರಿಯಕರನ ಜೊತೆ ಓಡಿ ಹೋಗುವ ನೆಪದಲ್ಲಿ ಪಾಪಿ ತಾಯಿಯೋರ್ವಳು ತನ್ನ ಹೆತ್ತ ಮಗುವನ್ನೇ ಕೊಂದ ಘಟನೆ ನಡೆದಿದೆ. ಆರೋಪಿ ತಾಯಿ ಸುಮಾ ಎಂಬಾಕೆ ತನ್ನ ಎರಡು ವರ್ಷದ ಪುತ್ರ ತನ್ಮಯ್‌ ನನ್ನು ಕೊಲೆ ಮಾಡಿದ್ದಾಳೆ. ಈಕೆ ಪ್ರಿಯಕರನ ಜತೆ ಓಡಿ ಹೋಗುವ ಆಲೋಚನೆ ಮಾಡುತ್ತಿದ್ದ ವೇಳೆ ಮಗು ಜೋರಾಗಿ ಅಳುತ್ತಿದ್ದುದ್ದನ್ನು ಕಂಡು ಕೋಪಗೊಂಡು ಗೋಡೆಗೆ ಗುದ್ದಿ ಕೊಲೆ ಮಾಡಿದ್ದಾಳೆ. ಜ.19 ರಂದು ಘಟನೆ ನಡೆದಿದ್ದು ಇದೀಗ ತಡವಾಗಿ ಬೆಳಕಿಗೆ

ಪ್ರಿಯಕರನ ಜೊತೆ ಓಡಿ ಹೋಗಲೆಂದು ಹೆತ್ತ ಮಗುವನ್ನೇ ಗೋಡೆಗೆ ಗುದ್ದಿ ಕೊಂದ ಕ್ರೂರಿ ತಾಯಿ..! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ನಿಯಂತ್ರಣ ತಪ್ಪಿ 40 ಅಡಿ ಆಳಕ್ಕೆ ಉರುಳಿದ ಪೊಲೀಸ್ ಜೀಪ್..! ➤ ಎಸ್.ಐ ಹಾಗೂ ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 30. ಚಾಲಕನ ನಿಯಂತ್ರಣ ತಪ್ಪಿದ ಪೋಲೀಸ್ ಜೀಪೊಂದು ಆಳಕ್ಕೆ ಬಿದ್ದ ಪರಿಣಾಮ ಎಸ್.ಐ ಹಾಗೂ ಚಾಲಕ ಗಾಯಗೊಂಡ ಘಟನೆ ಇಂದು ಮುಂಜಾನೆ ವೇಳೆ ಬಿಸಿರೋಡಿನಲ್ಲಿ ನಡೆದಿದೆ. ಗಾಯಗೊಂಡವರನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಎಸ್.ಐ . ಸಂಜೀವ ಹಾಗೂ ಚಾಲಕ ಸತೀಶ್ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಸುಮಾರು 4.30 ರ ವೇಳೆಗೆ ಬಿಸಿರೋಡಿನಿಂದ ಪಾಣೆಮಂಗಳೂರು ಕಡೆಗೆ ನೈಟ್ ರೌಂಡ್ಸ್ ನ ಡ್ಯೂಟಿಯಲ್ಲಿ ತೆರಳುತ್ತಿದ್ದ ವೇಳೆ ಬಿಸಿರೋಡಿನ ಸರ್ಕಲ್

ಬಂಟ್ವಾಳ: ನಿಯಂತ್ರಣ ತಪ್ಪಿ 40 ಅಡಿ ಆಳಕ್ಕೆ ಉರುಳಿದ ಪೊಲೀಸ್ ಜೀಪ್..! ➤ ಎಸ್.ಐ ಹಾಗೂ ಚಾಲಕನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಬೆಂಕಿ ಅವಘಡ ➤ ಮನೆ ಸಂಪೂರ್ಣ ಭಸ್ಮ

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 30. ಇಲ್ಲಿನ ಮಹಾಲಿಂಗೇಶ್ವರ ದೇವಾಸ್ಥಾನದ ಬಳಿಯ ದೇವಮಾರು ಗದ್ದೆಯ ಸಮೀಪ ಮನೆಯೊಂದಕ್ಕೆ ಬೆಂಕಿ ಹತ್ತಿಕೊಂಡ ಪರಿಣಾಮ ಮನೆ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಇಂದು ಪುತ್ತೂರಿನಲ್ಲಿ ನಡೆದಿದೆ. ದೇವಾಲಯದ ಗದ್ದೆಯ ಸಮೀಪದ ಸ್ಮಶಾನಕ್ಕೆ ಹೋಗುವ ದಾರಿಯ ಸಮೀಪ ಈ ಮನೆಯಿದ್ದು, ಇಂದು ಮದ್ಯಾಹ್ನ ಈ ದುರ್ಘಟನೆ ಸಂಭವಿಸಿದೆ. ಈ ಮನೆಯಲ್ಕಿ ಪ್ಲಾಸ್ಟಿಕ್ ಬಕೆಟ್ ಹಾಗೂ ಇತರ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡುವ ಗದಗ ಮೂಲದ ವ್ಯಕ್ತಿಗಳು ವಾಸವಾಗಿದ್ದರು ಎನ್ನಲಾಗಿದೆ. ಇಲ್ಲಿ

ಪುತ್ತೂರು: ಬೆಂಕಿ ಅವಘಡ ➤ ಮನೆ ಸಂಪೂರ್ಣ ಭಸ್ಮ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ಕುಡಿತದ ಅಮಲಿನಲ್ಲಿ ಅಟೋ ಡ್ರೈವಿಂಗ್ ➤ ಪಾರ್ಕ್ ಮಾಡಿದ್ದ ಸ್ಕೂಟರ್ ಮೇಲೆಯೇ ರಿಕ್ಷಾ ಹತ್ತಿಸಿದ ಮದ್ಯಪಾನಿ…!

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 30. ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ಮೇಲೆ ಪಾನಮತ್ತನಾಗಿ ಅಮಲಿನಲ್ಲಿದ್ದ ಚಾಲಕನೋರ್ವ ಆಟೋ ರಿಕ್ಷಾ ಹತ್ತಿಸಿದ ಘಟನೆ ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ನಲ್ಲಿ ನಡೆದಿದೆ. ಅಟೋ ಚಾಲಕ ಮದ್ಯದ ನಶೆಯಲ್ಲಿ ರಿಕ್ಷಾ ಚಲಾಯಿಸುತ್ತಿದ್ದ ವೇಳೆ ರಿಕ್ಷಾವನ್ನು ಪಾರ್ಕ್ ಮಾಡಲೆಂದು ಪಾರ್ಕಿಂಗ್ ಜಾಗಕ್ಕೆ ಬಂದು ಅಲ್ಲೇ ನಿಲ್ಲಿಸಿದ್ದ ಸ್ಕೂಟರ್ ಮೇಲೆಯೇ ತನ್ನ ರಿಕ್ಷಾವನ್ನು ಹತ್ತಿಸಿದ್ದಾನೆ . ಘಟನೆಯಲ್ಲಿ ಸ್ಕೂಟರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದನ್ನು ನೋಡಿದ ಸ್ಕೂಟಿ ಸವಾರ

ಮಂಗಳೂರು: ಕುಡಿತದ ಅಮಲಿನಲ್ಲಿ ಅಟೋ ಡ್ರೈವಿಂಗ್ ➤ ಪಾರ್ಕ್ ಮಾಡಿದ್ದ ಸ್ಕೂಟರ್ ಮೇಲೆಯೇ ರಿಕ್ಷಾ ಹತ್ತಿಸಿದ ಮದ್ಯಪಾನಿ…! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೆಎಸ್ಸಾರ್ಟಿಸಿ ಚಾಲಕನ ನಿರ್ಲಕ್ಷ್ಯ ಮತ್ತು ಅಜಾಗರೂಕತೆ ➤ ಪ್ರಯಾಣಿಕ ಮಹಿಳೆ ಬಸ್ಸಿನಿಂದ ಹೊರಕ್ಕೆಸೆಯಲ್ಪಟ್ಟು ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ವಿಟ್ಲ, ಜ. 30. ಕೆಎಸ್ಸಾರ್ಟಿಸಿ ಬಸ್ ಚಾಲಕನೋರ್ವ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಬಸ್ ಚಲಾಯಿಸಿದ ಪರಿಣಾಮ ಬಸ್ಸಿನ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೋರ್ವರು ಹೊರಕ್ಕೆಸೆಯಲ್ಪಟ್ಟು ಡಾಮಾರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕರವೀರ ಅಂಗನವಾಡಿ ಬಳಿ ನಡೆದಿದೆ. ಗಂಭೀರ ಗಾಯಗೊಂಡವರನ್ನು ಬಂಟ್ವಾಳ ತಾಲೂಕು ಕೇಪು ಗ್ರಾಮದ ಮೈರಕವೀರದವರಾದ ಪುಷ್ಪಾವತಿ ಎಂದು ಗುರುತಿಸಲಾಗಿದೆ. ಇವರು ಫೋಟೋ ತೆಗೆಸಲೆಂದು ವಿಟ್ಲ ಪೇಟೆಗೆ ತಮ್ಮ ಮಗಳು ಹಾಗೂ ಮೊಮ್ಮಗಳೊಂದಿಗೆ ಹೋಗಿ ವಾಪಸು

ಕೆಎಸ್ಸಾರ್ಟಿಸಿ ಚಾಲಕನ ನಿರ್ಲಕ್ಷ್ಯ ಮತ್ತು ಅಜಾಗರೂಕತೆ ➤ ಪ್ರಯಾಣಿಕ ಮಹಿಳೆ ಬಸ್ಸಿನಿಂದ ಹೊರಕ್ಕೆಸೆಯಲ್ಪಟ್ಟು ಗಂಭೀರ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಜೇಶ್ವರ: ಬೇಕರಿ ಹಾಗೂ ಹೊಟೆಲ್ ನುಗ್ಗಿ ಕಳ್ಳತನಕ್ಕೆ ಯತ್ನ ➤ ಸಿಸಿಟಿವಿಯಲ್ಲಿ ದೃಶ್ಯ ಸೆರೆ

(ನ್ಯೂಸ್ ಕಡಬ) newskadaba.com  ಮಂಜೇಶ್ವರ, ಜ. 29. ಹೋಟೆಲ್ ಮತ್ತು ಬೇಕರಿಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಘಟನೆ ತೂಮಿನಾಡು ಎಂಬಲ್ಲಿ ನಡೆದಿದ್ದು, ಇದರ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಇಲ್ಲಿನ ಮಾಸ್ಟರ್ ಮೈಂಡ್ ಜಂಕ್ಷನ್ ನಲ್ಲಿರುವ ಮೂಕಾಂಬಿಕಾ ಹೋಟೆಲ್ ಮತ್ತು ಹನಿ ಹೆಸರಿನ ಬೇಕರಿಗೆ ನುಗ್ಗಿ ಕಳ್ಳತನಕ್ಕೆತ್ನಿಸಿದ್ದಲ್ಲದೆ ಹೋಟೆಲ್ ನ ಗಾಜುಗಳನ್ನು ಪುಡಿಗೈದು ಬಳಿಕ ಹಣಕ್ಕಾಗಿ ತಡಕಾಡಿದ್ದಾನೆ. ಒಳಭಾಗದಿಂದಲೇ ನುಗ್ಗಿದ ಈತ ಕ್ಯಾಶ್ ಡ್ರವರನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾನೆ. ಬೆಳಿಗ್ಗೆ ಕೃತ್ಯ ಬೆಳಕಿಗೆ ಬಂದಿದ್ದು, ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ

ಮಂಜೇಶ್ವರ: ಬೇಕರಿ ಹಾಗೂ ಹೊಟೆಲ್ ನುಗ್ಗಿ ಕಳ್ಳತನಕ್ಕೆ ಯತ್ನ ➤ ಸಿಸಿಟಿವಿಯಲ್ಲಿ ದೃಶ್ಯ ಸೆರೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top