ಕ್ರೈಮ್ ನ್ಯೂಸ್

ಟ್ರಕ್ ಅಪಘಾತ ➤ 15 ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ಜಲ್ಗಾಂವ್, ಫೆ. 15. ಭೀಕರ ಟ್ರಕ್‌ ಅಪಘಾತದಲ್ಲಿ ಬರೋಬ್ಬರಿ 15 ಮಂದಿ ಮೃತಪಟ್ಟು ಐವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯ ಯವಾಲ್ ತಾಲೂಕಿನ ಕಿಂಗ್‌ವಾನ್ ಗ್ರಾಮದ ಬಳಿ ನಡೆದಿದೆ. ಮೃತರಲ್ಲಿ 7 ಪುರುಷರು, 6 ಮಹಿಳೆಯರು ಮತ್ತು 2 ಮಕ್ಕಳು ಸೇರಿದ್ದಾರೆ. ಈ ಮಧ್ಯೆ ಟ್ರಕ್ ಚಾಲಕನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಮೃತಪಟ್ಟವರೆಲ್ಲರೂ ಜಿಲ್ಲೆಯ ಅಭೋದಾ, ಕೆರ್ಹಾಲಾ ಮತ್ತು ರಾವರ್‌ನ ಗ್ರಾಮದ ಕಾರ್ಮಿಕರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರಕ್ ಅಪಘಾತ ➤ 15 ಮಂದಿ ಮೃತ್ಯು Read More »

ಕ್ರೈಮ್ ನ್ಯೂಸ್

? ನೀರಿನಲ್ಲಿ ಮುಳುಗಿ ಮೂವರು ಪುಟ್ಟ ಸಹೋದರರ ದುರ್ಮರಣ ➤ ಮನಕಲುಕುವ ಘಟನೆಗೆ ಸಾಕ್ಷಿಯಾಯಿತು ದೇವರನಾಡು..!

(ನ್ಯೂಸ್ ಕಡಬ) newskadaba.com ಪಾಲಕ್ಕಾಡ್, ಫೆ. 14. ಮಾವಿನ ಹಣ್ಣು ತೊಳೆಯಲೆಂದು ಕೆರೆಗೆ ಇಳಿದಿದ್ದ ಮೂವರು ಸಹೋದರರು ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕೇರಳದ ಪಾಲಕ್ಕಾಡ್ ಸಮೀಪದ ಆಲತ್ತೂರು ಎಂಬಲ್ಲಿ ಭಾನುವಾರದಂದು ನಡೆದಿದೆ. ಮೃತಪಟ್ಟವರನ್ನು ಪಾಲಕ್ಕಾಡ್ ಆಲತ್ತೂರು ನಿವಾಸಿ ಜಸೀರ್ ಎಂಬವರ ಪುತ್ರರಾದ ಜಿನ್’ಷಾದ್ (12), ರಿನ್’ಷಾದ್ (7) ಹಾಗೂ ರಿಫಾಸ್ (3) ಎಂದು ಗುರುತಿಸಲಾಗಿದೆ. ಇವರು ಭಾನುವಾರದಂದು ಮನೆ ಸಮೀಪದ ಸಾರ್ವಜನಿಕ ಕೆರೆಯ ಬಳಿ ಮಾವಿನಕಾಯಿ ತೊಳೆಯಲೆಂದು ತೆರಳಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ

? ನೀರಿನಲ್ಲಿ ಮುಳುಗಿ ಮೂವರು ಪುಟ್ಟ ಸಹೋದರರ ದುರ್ಮರಣ ➤ ಮನಕಲುಕುವ ಘಟನೆಗೆ ಸಾಕ್ಷಿಯಾಯಿತು ದೇವರನಾಡು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಿನ್ನೆ ಕಡಬ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಜಿ ಹನೀಫ್ ಕೆ.ಎಂ. ಫೇಸ್‍ಬುಕ್ ಹ್ಯಾಕ್ ➤ ಇಂದು ಕಡಬದ ಭಾಗವತ ರಾಮಚಂದ್ರ ರೈ ಫೇಸ್‍ಬುಕ್ ಹ್ಯಾಕ್ ➤ ಮೆಸೆಂಜರ್ ನಲ್ಲಿ ಹಣ ಕಳುಹಿಸುವಂತೆ ಬೇಡಿಕೆ ಇರಿಸುವ ಅಪರಿಚಿತರು

(ನ್ಯೂಸ್ ಕಡಬ) newskadaba.com ಕಡಬ, ಫೆ.14. ಎರಡು ದಿನಗಳ ಹಿಂದಷ್ಟೇ ಕಡಬ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಜಿ ಕೆ.ಎಂ ಹನೀಫ್ ಅವರ ಫೇಸ್‍ಬುಕ್ ಖಾತೆಯನ್ನು ಹ್ಯಾಕ್ ಮಾಡಿದ್ದ ಅಪರಿಚಿತರು ಮೆಸೇಂಜರ್ ಮೂಲಕ ಹಲವರಿಗೆ ಹಣ ಕಳುಹಿಸಿಕೊಡುವಂತೆ ಮೆಸೇಜ್ ರವಾನಿಸಿದ್ದು, ಈ ನಡುವೆ ಇಂದು ಮತ್ತೆ ಕಡಬದ ಮತ್ತೋರ್ವ ವ್ಯಕ್ತಿಯನ್ನು ಗುರಿ‌ ಮಾಡಲಾಗಿದೆ. ಕಡಬದ ಪ್ರಸಿದ್ಧ ಭಾಗವತರಾದ ರಾಮಚಂದ್ರ ರೈ ಯವರ ಫೇಸ್‍ಬುಕ್ ಖಾತೆಯನ್ನು ಹ್ಯಾಕ್‌ಮಾಡಿರುವ ದುಷ್ಕರ್ಮಿಗಳು ಅವರ ಸ್ನೇಹಿತರಿಗೆ ಮೆಸೆಂಜರ್ ಮೂಲಕ ಹಣ ಕಳುಹಿಸುವಂತೆ ಮನವಿ ಮಾಡಿದ್ದಾರೆ.

ನಿನ್ನೆ ಕಡಬ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಜಿ ಹನೀಫ್ ಕೆ.ಎಂ. ಫೇಸ್‍ಬುಕ್ ಹ್ಯಾಕ್ ➤ ಇಂದು ಕಡಬದ ಭಾಗವತ ರಾಮಚಂದ್ರ ರೈ ಫೇಸ್‍ಬುಕ್ ಹ್ಯಾಕ್ ➤ ಮೆಸೆಂಜರ್ ನಲ್ಲಿ ಹಣ ಕಳುಹಿಸುವಂತೆ ಬೇಡಿಕೆ ಇರಿಸುವ ಅಪರಿಚಿತರು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ತೊಕ್ಕೊಟ್ಟು: ರೈಲು ಢಿಕ್ಕಿ ಹೊಡೆದು ಬ್ಯಾಂಕ್ ಉದ್ಯೋಗಿ ಮೃತ್ಯು

(ನ್ಯೂಸ್ ಕಡಬ) newskadaba.com ಉಳ್ಳಾಲ, ಫೆ. 14. ರೈಲು ಢಿಕ್ಕಿ ಹೊಡೆದ ಪರಿಣಾಮ ಬ್ಯಾಂಕ್ ಉದ್ಯೋಗಿಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ತೊಕ್ಕೊಟ್ಟು ಬಳಿ ನಡೆದಿದೆ. ಮೃತರನ್ನು ಕೋಟೆಕಾರು, ಬೀರಿ ಭಂಡಾರಮನೆ ಬಳಿಯ ನಿವಾಸಿ ಸತೀಶ್ಚಂದ್ರ ನಾಯ್ಕ್ (28) ಎಂದು ಗುರುತಿಸಲಾಗಿದೆ. ಮೃತದೇಹವು ರೈಲು ಹಳಿಯಿಂದ ದೂರಕ್ಕೆ ಎಸೆಯಲ್ಪಟ್ಟ ಸ್ಥಿತಿಯಲ್ಲಿದ್ದು, ಮೃತದೇಹದ ಮೈಯಲ್ಲಿದ್ದ ಬಟ್ಟೆ ಹರಿದು ಚಿಂದಿಯಾಗಿದೆ. ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದು, ಎಳೆದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಇವರು ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದು, ಸಾಲೆತ್ತೂರು ಶಾಖೆಯಿಂದ

ತೊಕ್ಕೊಟ್ಟು: ರೈಲು ಢಿಕ್ಕಿ ಹೊಡೆದು ಬ್ಯಾಂಕ್ ಉದ್ಯೋಗಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

? ಮರ್ಧಾಳ: ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು ➤ ಪ್ರಯಾಣಿಕರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಮರ್ಧಾಳ, ಫೆ. 14. ಚಾಲಕನ ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರೊಂದು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಂಬ ಮುರಿದಿದ್ದು, ಕಾರು ಸಂಪೂರ್ಣ ಜಖಂಗೊಂಡ ಘಟನೆ ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಎಂಬಲ್ಲಿ ನಡೆದಿದೆ. ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕಾರು ಮರ್ಧಾಳ ಜಂಕ್ಷನ್ ಬಳಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಚಾಲಕ ನಿದ್ದೆಯ ಮಂಪರಿನಲ್ಲಿದ್ದುದೇ ಘಟನೆಗೆ ಕಾರಣವೆನ್ನಲಾಗಿದೆ. ಕಾರಿನಲ್ಲಿದ್ದವರು ಪವಾಡಸದೃಶ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮೆಸ್ಕಾಂ

? ಮರ್ಧಾಳ: ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು ➤ ಪ್ರಯಾಣಿಕರು ಅಪಾಯದಿಂದ ಪಾರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಝೀರೋ ಟ್ರಾಫಿಕ್ ನಲ್ಲಿ ಕರೆದೊಯ್ದ ಸುಹಾನಾ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 14. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಪುತ್ತೂರಿನ ಸುಹಾನಾ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸುಹಾನಾಳು ಶ್ವಾಸಕೋಶ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದು, ಅವರನ್ನು ಕಾರುಣ್ಯ ನಿಧಿ ಕರ್ನಾಟಕ ಚಾರಿಟೇಬಲ್ ಟ್ರಸ್ಟ್ (ರಿ) ಇದರ ವತಿಯಿಂದ ವಿಶೇಷ ಝೀರೋ ಟ್ರಾಫಿಕ್ ಆಂಬ್ಯುಲೆನ್ಸ್ ಮೂಲಕ ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲದೇ ಆಕೆಯ ಚಿಕಿತ್ಸೆಯ ವೆಚ್ಚವನ್ನೂ ಕೂಡಾ ವಹಿಸಿಕೊಂಡಿತ್ತು. ಸುಹಾನಳಿಗೆ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಕಾಲಾವಕಾಶವನ್ನು ಕೂಡ ನೀಡಿದ್ದರಾದರೂ ಇಂದು

ಝೀರೋ ಟ್ರಾಫಿಕ್ ನಲ್ಲಿ ಕರೆದೊಯ್ದ ಸುಹಾನಾ ಇನ್ನಿಲ್ಲ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

? ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ ➤ ಆಸ್ಪತ್ರೆಗೆ ದಾಖಲಿಸಿ ಆಸರೆಯಾದ ಖಾಕಿ ಪೊಲೀಸ್ ಅಧಿಕಾರಿ

(ನ್ಯೂಸ್ ಕಡಬ) newskadaba.com ಗದಗ, ಫೆ. 14. ಬಸ್ ನಿಲ್ದಾಣದಲ್ಲಿ ಪತ್ತೆಯಾದ ನವಜಾತ ಶಿಶುವೊಂದನ್ನು ಪೋಲಿಸರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ಇಲ್ಲಿನ ಗಜೇಂದ್ರಗಡ ಸಮೀಪ ನಡೆದಿದೆ. ಬಸ್ ನಿಲ್ದಾಣದ ಬಳಿ ನವಜಾತ ಶಿಶುವಿನ ಆಳುವಿನ ಧ್ವನಿ ಸ್ಥಳಿಯರಿಗೆ ಕೇಳಿಸಿದ್ದು, ಸಾರ್ವಜನಿಕರು ಧ್ವನಿ ಕೇಳಿದ ಕಡೆ ಹುಡುಕಿದಾಗ ಬಟ್ಟೆಯಲ್ಲಿ ಸುತ್ತಿದ್ದ ನವಜಾತ ಗಂಡು ಶಿಶು ಪತ್ತೆಯಾಗಿದೆ. ತಕ್ಷಣವೇ ಸಮೀಪದ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಗಜೇಂದ್ರಗಡ ಠಾಣೆಯ ಹಿರಿಯ ಅಧಿಕಾರಿ ಭೀಮರಾಜ್, ಮಗುವನ್ನ ವಶಕ್ಕೆ ಪಡೆದುಕೊಂಡು ಸ್ಥಳೀಯರಿಂದ

? ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ ➤ ಆಸ್ಪತ್ರೆಗೆ ದಾಖಲಿಸಿ ಆಸರೆಯಾದ ಖಾಕಿ ಪೊಲೀಸ್ ಅಧಿಕಾರಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

? ಮಂಗಳೂರು: ಕೋಕೇನ್ ಮಾರಾಟಕ್ಕೆ ಯತ್ನ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 14. ಕೋಕೇನ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಇಕನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ವಿಭಾಗದ ಪೊಲೀಸರು ಬಿಜೈ ಕೆಎಂಸಿ ಕಾಲೇಜು ಆಸುಪಾಸಿನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೋಳಾರ ಮಾರಿಗುಡಿ ನಿವಾಸಿ ಸುಪ್ರೀತ್ (35) ಎಂದು ಗುರುತಿಸಲಾಗಿದೆ. ಆತನಿಂದ 2 ಲಕ್ಷ ರೂ. ಬೆಲೆಬಾಳುವ 21.13 ಗ್ರಾಂ ಕೊಕೇನ್ ಸಹಿತ ಎರಡು ಮೊಬೈಲ್ ಫೋನ್ ಹಾಗೂ ಎರಡು ಸಾವಿರ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

? ಮಂಗಳೂರು: ಕೋಕೇನ್ ಮಾರಾಟಕ್ಕೆ ಯತ್ನ ➤ ಆರೋಪಿ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಸಿನಿಮಾ

? ನೆಲ್ಯಾಡಿ: ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ನಡುವೆ ಅಪಘಾತ ಪ್ರಕರಣ ➤ ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ. 14. ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ನಡುವೆ ಶನಿವಾರದಂದು ಢಿಕ್ಕಿ ಸಂಭವಿಸಿದ್ದು, ಪರಿಣಾಮ ಗಂಭೀರ ಗಾಯಗೊಂಡಿದ್ದ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತ ಮಹಿಳೆಯನ್ನು ಕೊಕ್ಕಡ ಪಟ್ರಮೆ ನಿವಾಸಿ ಮರಿಯಮ್ಮ (59) ಎಂದು ಗುರುತಿಸಲಾಗಿದೆ. ಇವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ವಿರುದ್ದ ದಿಕ್ಕಿನಿಂದ ಬಂದ ಬಸ್ ನಡುವೆ ಅಡ್ಡಹೊಳೆ ಎಂಬಲ್ಲಿ ಅಪಘಾತ ಸಂಭವಿಸಿತ್ತು. ಪರಿಣಾಮ ಕಾರಿನಲ್ಲಿದ್ದ ಐವರಿಗೆ ಗಂಭೀರ ಗಾಯಗಳಾಗಿದ್ದು, ಇವರ ಪೈಕಿ ಮಹಿಳೆಯೋರ್ವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

? ನೆಲ್ಯಾಡಿ: ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ನಡುವೆ ಅಪಘಾತ ಪ್ರಕರಣ ➤ ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

? ಬೈಕ್ ಗಳೆರಡರ ನಡುವೆ ಅಪಘಾತ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಮಂಡ್ಯ, ಫೆ. 13.‌ ಬೈಕ್ ಗಳೆರಡರ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ಮಳವಳ್ಳಿ-ಕೊಳ್ಳೇಗಾಲ ಮುಖ್ಯ ರಸ್ತೆಯ ರಾಷ್ಟ್ರೀಯ ಹೆದ್ದಾರಿ ದಾಸನದೊಡ್ಡಿ ಗ್ರಾಮದ ಬಳಿ ನಡೆದಿದೆ. ಮೃತರನ್ನು ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಹೊಂಬಾಳೇಗೌಡ(45) ಎಂದು ಗುರುತಿಸಲಾಗಿದೆ. ಹೊಂಬಾಳೇಗೌಡರು ದಾಸನದೊಡ್ಡಿ ಗ್ರಾಮದಿಂದ ಕೊಳ್ಳೇಗಾಲದ ಕಡೆಗೆ ತಮ್ಮ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಹೊಂಬಾಳೆಗೌಡ ಅವರನ್ನು

? ಬೈಕ್ ಗಳೆರಡರ ನಡುವೆ ಅಪಘಾತ ➤ ಸವಾರ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top