ಕ್ರೈಮ್ ನ್ಯೂಸ್

ಕಡಬ: ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ➤ ಅಪ್ರಾಪ್ತ ಬಾಲಕನ ಬಂಧನ

(ನ್ಯೂಸ್ ಕಡಬ) newskadaba.com ಆಲಂಕಾರು, ಫೆ. 27. ವಾಟ್ಸಾಪ್ ಮೂಲಕ ಧರ್ಮ ನಿಂದನೆ ಧ್ವನಿ ಸಂದೇಶ ರವಾನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಡಗನ್ನೂರು ಕೊಯಿಲದ ಅಪ್ರಾಪ್ತ ಯುವಕನನ್ನು ಮಂಗಳೂರು ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಯುವಕನೋರ್ವ ಧರ್ಮ ನಿಂದನೆ ಧ್ವನಿ ಸಂದೇಶ ರವಾನೆ ಮಾಡಿ ಕೋಮು ಸೌಹಾರ್ದತೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡುವುದಾಗಿ ಇತ್ತೀಚೆಗೆ ಕೂರ್ನಡ್ಕದ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹಮೀದ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಮೊಬೈಲ್ […]

ಕಡಬ: ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ➤ ಅಪ್ರಾಪ್ತ ಬಾಲಕನ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೋರ್ಟ್ ಆವರಣದಲ್ಲೇ ವಕೀಲರ ಬರ್ಬರ ಕೊಲೆ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ವಿಜಯನಗರ, ಫೆ. 27. ನ್ಯಾಯಾಲಯದ ಆವರಣದಲ್ಲೇ ವಕೀಲರೋರ್ವರನ್ನು ಹತ್ಯೆಗೈದ ಆರೋಪಿಯನ್ನು ಬಂಧಿಸಿದ ಘಟನೆ ವರದಿಯಾಗಿದೆ. ಹತ್ಯೆಯಾದವರನ್ನು ಕಾಂಗ್ರೆಸ್ ಮುಖಂಡ, ವಕೀಲ ತಾರಿಹಳ್ಳಿ ವೆಂಕಟೇಶ್ ಎಂದು ಗುರುತಿಸಲಾಗಿದೆ. ಇವರ ಕುತ್ತಿಗೆಯ ಭಾಗಕ್ಕೆ ಮಚ್ಚಿನಿಂದ ಹೊಡೆದು ಅವರ ಸಂಬಂಧಿಯೇ ಆದ ಮನೋಜ್ ಕುಮಾರ್ ಎಂಬಾತ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಕೋರ್ಟ್ ಆವರಣದಲ್ಲೇ ರಕ್ತ ಚೆಲ್ಲಿದ್ದು, ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಕೋರ್ಟ್ ಆವರಣದಲ್ಲೇ ವಕೀಲರ ಬರ್ಬರ ಕೊಲೆ ➤ ಆರೋಪಿ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಹಾಡುಹಗಲೇ ಮನೆಯಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 27. ಮನೆಯೊಂದರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾದ ಘಟನೆ ಫೆ. 26 ರ ಹಾಡುಹಗಲೇ ಪುತ್ತೂರಿನ ದರ್ಬೆಯಲ್ಲಿ ನಡೆದಿದೆ. ಕ್ಯಾಂಪ್ಕೊ ಉದ್ಯೋಗಿ ಬಾನುಕಿರಣ್ ಎಂಬವರ ಮನೆಯಲ್ಲಿ ಸುಮಾರು 3.5ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಬಾನುಕಿರಣ್ ಅವರ ಪತ್ನಿ ಬೆಳಂದೂರು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದು, ಮನೆಯ ಇಬ್ಬರೂ ಉದ್ಯೋಗಸ್ಥರಾಗಿರುವ ಹಿನ್ನಲೆ ಮನೆಯಲ್ಲಿ ಯಾರೂ ಇಲ್ಲದ ಸಮಯ ಈ ಕೃತ್ಯವೆಸಗಲಾಗಿದೆ. ಇಬ್ಬರೂ ಬೆಳಗ್ಗೆ 8.30 ರ ಸುಮಾರಿಗೆ ಮನೆಯಿಂದ ಉದ್ಯೋಗಕ್ಕೆ ತೆರಳಿದ್ದು, ಆ

ಪುತ್ತೂರು: ಹಾಡುಹಗಲೇ ಮನೆಯಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ತನ್ನನ್ನೇ ಗುಂಡಿಕ್ಕಿ ಹತ್ಯೆಗೈಯ್ಯುವ ವಿಡಿಯೋ ಚಿತ್ರೀಕರಿಸಿದ ಯುವಕ ➤ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಮುಝಾಫರ್ ನಗರ, ಫೆ. 27. ತನ್ನನ್ನು ತಾನೇ ಗುಂಡಿಕ್ಕಿ ಹತ್ಯೆ ಮಾಡುವ ಸನ್ನಿವೇಶವನ್ನು ಸ್ವತಃ ಮೃತ ವ್ಯಕ್ತಿಯೇ ಸ್ವಯಂ ಚಿತ್ರೀಕರಿಸಿಕೊಂಡ ಘಟನೆ ಉತ್ತರ ಪ್ರದೇಶದ ಮುಝಾಫರ್ ನಗರದಲ್ಲಿ ನಡೆದಿದೆ. ಗುಂಡೇಟು ತಗುಲಿದ ಯುವಕನ ಕೈಯಿಂದ ಮೊಬೈಲ್ ಜಾರಿ ಕೆಳಕ್ಕೆ ಬಿದ್ದು, ದೃಶ್ಯಗಳು ಕಾಣಿಸುತ್ತಿರಲಿಲ್ಲ. ಆದರೆ ನೋವಿನಿಂದ ನರಳುವ ಆರ್ತನಾದ ಕೇಳಿ ಬರುತ್ತಿದ್ದ 30 ಸೆಕೆಂಡ್ ಗಳ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ. ಹತ್ಯೆಗೀಡಾದ ವ್ಯಕ್ತಿ ಮತ್ತು ಆರೋಪಿಯ ಹೊರತಾಗಿ ಮತ್ತಿಬ್ಬರು

ತನ್ನನ್ನೇ ಗುಂಡಿಕ್ಕಿ ಹತ್ಯೆಗೈಯ್ಯುವ ವಿಡಿಯೋ ಚಿತ್ರೀಕರಿಸಿದ ಯುವಕ ➤ ವಿಡಿಯೋ ವೈರಲ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತೊಕ್ಕೊಟ್ಟು: ಅಕ್ರಮ ಗೋಮಾಂಸ ಸಾಗಾಟ ➤ ತಡೆಹಿಡಿದ ಬಜರಂಗದಳ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ತೊಕ್ಕೊಟ್ಟು, ಫೆ. 27. ಅಕ್ರಮ ಬೀಫ್ ಸ್ಟಾಲ್ ಗೆ ಬರುತ್ತಿದ್ದ ಅಕ್ರಮ ಗೋಮಾಂಸ ಸಾಗಾಟವನ್ನು ಬಜರಂಗದಳ ಕಾರ್ಯಕರ್ತರು ತಡೆದ ಘಟನೆ ತೊಕ್ಕೊಟ್ಟುವಿನಲ್ಲಿ ನಡೆದಿದೆ. ಅಕ್ರಮ ಬೀಫ್ ಸ್ಟಾಲ್ ಗಳನ್ನು ಮುಚ್ಚಿಸುವಂತೆ ಉಳ್ಳಾಲ ಪುರಸಭೆಗೆ ಹಾಗೂ ಪೊಲೀಸ್ ಇಲಾಖೆಗೆ ಬಜರಂಗದಳವು ಕೆಲದಿನಗಳ ಹಿಂದೆ ಮನವಿ ಮಾಡಿದ್ದರೂ ಇಲಾಖೆಯಿಂದ ಯಾವುದೇ ಸ್ಪಂದನೆ ದೊರಕದ ಹಿನ್ನೆಲೆ ಬಜರಂಗದಳ ನೇರ ಕಾರ್ಯಾಚರಣೆ ನಡೆಸಿ ಅಕ್ರಮ ಗೋಮಾಂಸವನ್ನು ತಡೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕರ್ನಾಟಕದಲ್ಲಿ ಗೋಹತ್ಯಾ ಕಾಯ್ದೆ ಜಾರಿಯಲ್ಲಿದ್ದರೂ ಅಕ್ರಮ ಗೋಮಾಂಸ

ತೊಕ್ಕೊಟ್ಟು: ಅಕ್ರಮ ಗೋಮಾಂಸ ಸಾಗಾಟ ➤ ತಡೆಹಿಡಿದ ಬಜರಂಗದಳ ಕಾರ್ಯಕರ್ತರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನೆಲ್ಯಾಡಿ: ಗ್ಯಾಸ್ ಟ್ಯಾಂಕರ್ – ಡೀಸೆಲ್ ಟ್ಯಾಂಕರ್ ನಡುವೆ ಮುಖಾಮುಖಿ ಢಿಕ್ಕಿ ➤ ಬೆಳ್ಳಂಬೆಳಗ್ಗೆ ನಡೆಯಿತು ಅಪಘಾತ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.27. ಅನಿಲ ಸಾಗಾಟದ ಟ್ಯಾಂಕರ್ ಹಾಗೂ ಡೀಸೆಲ್ ಟ್ಯಾಂಕರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಡೀಸೆಲ್ ಟ್ಯಾಂಕರ್ ಚಾಲಕ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಹೊಸಮಜಲು ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಮಂಗಳೂರಿನಿಂದ ಗ್ಯಾಸ್ ತುಂಬಿಕೊಂಡು ಬೆಂಗಳೂರಿನತ್ತ ತೆರಳುತ್ತಿದ್ದ ಟ್ಯಾಂಕರ್ ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಡೀಸೆಲ್‌ನ ಟ್ಯಾಂಕರ್ ನಡುವೆ ಹೊಸಮಜಲು ಸಮೀಪ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡಿರುವ ಡೀಸೆಲ್‌ ಟ್ಯಾಂಕರ್ ಚಾಲಕನನ್ನು

ನೆಲ್ಯಾಡಿ: ಗ್ಯಾಸ್ ಟ್ಯಾಂಕರ್ – ಡೀಸೆಲ್ ಟ್ಯಾಂಕರ್ ನಡುವೆ ಮುಖಾಮುಖಿ ಢಿಕ್ಕಿ ➤ ಬೆಳ್ಳಂಬೆಳಗ್ಗೆ ನಡೆಯಿತು ಅಪಘಾತ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಆರ್ ಬಿ ಐ ನಿಂದ ಹಣ ತುಂಬಿಸಿಕೊಂಡು ಹೋಗುತ್ತಿದ್ದ ಕಂಟೇನರ್ ಪಲ್ಟಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 26. ಆರ್‌ಬಿಐ ನಿಂದ ಹಣ ತುಂಬಿಸಿಕೊಂಡು ಹೋಗುತ್ತಿದ್ದ ಕಂಟೇನರ್ ಲಾರಿಯೊಂದು ಪಲ್ಟಿಯಾಗಿರುವ ಘಟನೆ ರಾಮನಗರದ ಬಿಡದಿ ಬಳಿಯ ಕಲ್ಲುಗೋಪಹಳ್ಳಿ ಬಳಿ ನಡೆದಿದೆ. ಮೈಸೂರು ಆರ್.ಬಿ.ಐ ನಿಂದ ಬೆಂಗಳೂರಿಗೆ ಹಣ ತುಂಬಿಸಿಕೊಂಡು ಹೋಗುತ್ತಿದ್ದ ಕಂಟೇನರ್ ಲಾರಿಯು ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲುಗೋಪಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬೆಂಗಳೂರು ಮೈಸೂರು ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕಾರಣ ರಸ್ತೆಯಲ್ಲಿ ಅಲ್ಲಲ್ಲಿ ತಿರುವುಗಳನ್ನು ಮಾಡಿದ್ದು, ಈ ಕಾರಣದಿಂದಾಗಿ ಕಂಟೇನರ್‌

ಆರ್ ಬಿ ಐ ನಿಂದ ಹಣ ತುಂಬಿಸಿಕೊಂಡು ಹೋಗುತ್ತಿದ್ದ ಕಂಟೇನರ್ ಪಲ್ಟಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆರೆಸ್ಸೆಸ್ ಹಾಗೂ ಎಸ್ಡಿಪಿಐ ನಡುವೆ ಘರ್ಷಣೆ ➤ 8 ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಕೇರಳ, ಫೆ. 25.‌ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಡಿಪಿಐನ 8 ಮಂದಿ ಕಾರ್ಯಕರ್ತರನ್ನು ಬಂಧಿಸಿದ ಘಟನೆ ನಡೆದಿದೆ. ಬುಧವಾರ ರಾತ್ರಿ ಚೆರ್ತಲಾ ಸಮೀಪದ ನಾಗಂಕುಲಂಗರದಲ್ಲಿ ನಡೆದ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತ ನಂದು(23) ಎಂಬಾತ ಮೃತಪಟ್ಟಿದ್ದು, ಅಲ್ಲದೇ ಎಸ್ಡಿಪಿಐ ಹಾಗೂ ಆರೆಸ್ಸೆಸ್ ನ ಆರು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಅಲಪ್ಪುಳ ಹಾಗೂ ಎರ್ನಾಕುಲಂನ ವಿವಿಧ ಆಸ್ಪತ್ರೆಗಳಲ್ಲಿ ಸೇರಿಸಲಾಗಿದೆ. ಆರ್ ಎಸ್ ಎಸ್ ಸಂಘಟನೆಗೆ ಸೇರಿದ ಓರ್ವ ಕಾರ್ಯಕರ್ತನ

ಆರೆಸ್ಸೆಸ್ ಹಾಗೂ ಎಸ್ಡಿಪಿಐ ನಡುವೆ ಘರ್ಷಣೆ ➤ 8 ಮಂದಿಯ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಡುಪಿ: ಕಾಂಗ್ರೆಸ್ ಮುಖಂಡನ ಮನೆಗೆ ನುಗ್ಗಿ ಮನೆ ಹಾಗೂ ವಾಹನಕ್ಕೆ ಹಾನಿ ➤ ಜೀವ ಬೆದರಿಕೆ

(ನ್ಯೂಸ್ ಕಡಬ) newskadaba.com ಉಡುಪಿ, ಫೆ. 25. ಉಪ್ಪೂರು ಸೊಸೈಟಿ ಅಧ್ಯಕ್ಷ, ಸಮಾಜಸೇವಕ ಹಾಗೂ ಹಾವಂಜೆ ಗ್ರಾಮ ಪಂಚಾಯತ್‍ ಸದಸ್ಯ ರಮೇಶ್ ಎನ್.ಶೆಟ್ಟಿ ಕುಕ್ಕೆಹಳ್ಳಿ ಅವರಿಗೆ ಜೀವ ಬೆದರಿಕೆಯೊಡ್ಡಿರುವ ಘಟನೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಫೆ.23ರಂದು ರಾತ್ರಿ 10.30ರ ವೇಳೆಗೆ ಮನೆಗೆ ಬಂದ ಕೆಲವರು ಇವರ ಮನೆಗೆ ಮತ್ತು ವಾಹನಕ್ಕೆ ಹಾನಿ ಮಾಡಿದ್ದಲ್ಲದೇ ಮನೆಯ ಗೇಟಿನ ಲೈಟ್ ಗಳನ್ನೂ ಒಡೆದು ಹಾಕಿದ್ದಾರೆ. ಜೊತೆಗೆ ರಮೇಶ್ ಎಂಬವರಿಗೆ ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ದೂರಲಾಗಿದೆ.

ಉಡುಪಿ: ಕಾಂಗ್ರೆಸ್ ಮುಖಂಡನ ಮನೆಗೆ ನುಗ್ಗಿ ಮನೆ ಹಾಗೂ ವಾಹನಕ್ಕೆ ಹಾನಿ ➤ ಜೀವ ಬೆದರಿಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

? ಕಚೇರಿಯಲ್ಲೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ತಹಶೀಲ್ದಾರ್ ಹತ್ಯೆಗೆ ಯತ್ನ

(ನ್ಯೂಸ್ ಕಡಬ) newskadaba.com ಬಾಗಲಕೋಟೆ, ಫೆ. 25.‌ ಆಸ್ತಿ ಪತ್ರಕ್ಕೆ ಸಂಬಂಧಿಸಿ ತಹಶೀಲ್ದಾರ್ ಓರ್ವರಿಗೆ ಸೀಮೆ ಎಣ್ಣೆ ಸುರಿದು ತಂದೆ-ಮಗ ಬೆಂಕಿಹಚ್ಚಲು ಪ್ರಯತ್ನಿಸಿರುವ ಘಟನೆ ಜಮಖಂಡಿಯಲ್ಲಿ ನಡೆದಿದೆ. ಆರೋಪಿಗಳನ್ನು ಲಕ್ಷ್ಮಣ ಹಾಗೂ ಅವರ ಪುತ್ರ ಬಸವರಾಜ ಎಂದು ಗುರುತಿಸಲಾಗಿದೆ. ಗ್ರೇಡ್ 2 ತಹಶೀಲ್ದಾರ್ ನಾಗಪ್ಪ ಬಿರಡಿ ಎಂಬವರ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಲು ಪ್ರಯತ್ನಿಸಿದ್ದು, ತಕ್ಷಣವೇ ತಹಶೀಲ್ದಾರ್ ಕಚೇರಿಯಿಂದ ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಆರೋಪಿ ಲಕ್ಷ್ಮಣ ಎಂಬವರು 2016ರಲ್ಲಿ ಬಾಗಲಕೋಟೆ

? ಕಚೇರಿಯಲ್ಲೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ತಹಶೀಲ್ದಾರ್ ಹತ್ಯೆಗೆ ಯತ್ನ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top