ಕ್ರೈಮ್ ನ್ಯೂಸ್

ಪ್ರಪಾತಕ್ಕೆ ಉರುಳಿಬಿದ್ದ ಈಚರ್ ಲಾರಿ ➤ ನಾಲ್ವರು ಮೃತ್ಯು, ಐವರು ಗಂಭೀರ

(ನ್ಯೂಸ್ ಕಡಬ) Newskadaba.com ಹೆಬ್ರಿ, ಅ. 29. ಈಚರ್ ಲಾರಿಯೊಂದು ಪಲ್ಟಿಯಾಗಿ ನಾಲ್ವರು ಮೃತಪಟ್ಟು, ಐವರು ಗಾಯಗೊಂಡ ಘಟನೆ ಆಗುಂಬೆ ಘಾಟಿಯಲ್ಲಿ ನಡೆದಿದೆ. ಈಚರ್ ಲಾರಿಯು ಘಾಟಿಯನ್ನು ಇಳಿಯುವ ಸಂದರ್ಭ ನಿಯಂತ್ರಣ ತಪ್ಪಿದ ಲಾರಿಯು ಪ್ರಪಾತಕ್ಕೆ ಉರುಳಿ ಬಿದ್ದಿದ್ದು, ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. ಐವರು ಗಾಯಾಳುಗಳನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಮೇಲೆತ್ತಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಮೃತಪಟ್ಟವರನ್ನು ಕಾರ್ಕಳದ ಮಿಯ್ಯಾರಿನವರು ಎಂದೆನ್ನಲಾಗಿದೆ. ಹೆಬ್ರಿ ಮತ್ತು ಆಗುಂಬೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರಪಾತಕ್ಕೆ ಉರುಳಿಬಿದ್ದ ಈಚರ್ ಲಾರಿ ➤ ನಾಲ್ವರು ಮೃತ್ಯು, ಐವರು ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್

ನೇತ್ರದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಪವರ್ ಸ್ಟಾರ್

(ನ್ಯೂಸ್ ಕಡಬ) Newskadaba.com ಬೆಂಗಳೂರು, ಅ. 29. ನಟ ಪುನೀತ್ ರಾಜ್ ಕುಮಾರ್ ಅವರು ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ಇದೀಗ ಅವರ ಎರಡೂ ಕಣ್ಣುಗಳನ್ನು ದಾನ ಮಾಡಲಾಗಿದ್ದು, ಈ ಮೂಲಕ ಪುನೀತ್ ರಾಜ್ ಕುಮಾರ್ ಅವರ ಎರಡು ಕಣ್ಣುಗಳು ಇನ್ನು ಕೂಡಾ ಜೀವಂತವಾಗಿರಲಿವೆ. ಪುನೀತ್ ರಾಜ್ ಕುಮಾರ್ ಅವರ ಕಣ್ಣುಗಳು ಇಬ್ಬರಿಗೆ ದೃಷ್ಟಿಯನ್ನು ನೀಡಲಿದ್ದು, ಈ ಮೂಲಕ ಪುನೀತ್ ರಾಜ್ ಕುಮಾರ್ ಅವರು ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.

ನೇತ್ರದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಪವರ್ ಸ್ಟಾರ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ವಿದ್ಯುತ್ ಕಂಬ ಮುರಿದು ಬಿದ್ದು ಕಾರ್ಮಿಕನಿಗೆ ಗಾಯ

(ನ್ಯೂಸ್ ಕಡಬ) Newskadaba.com ಕಡಬ, ಅ. 29. ವಿದ್ಯುತ್ ತಂತಿ ದುರಸ್ತಿ ಮಾಡುತ್ತಿದ್ದ ವೇಳೆ ಕಂಬ ಮುರಿದು ಬಿದ್ದ ಪರಿಣಾಮ ಕಾರ್ಮಿಕರೋರ್ವರು ಗಾಯಗೊಂಡ ಘಟನೆ ನಡೆದಿದೆ. ಗಾಯಗೊಂಡವರನ್ನು ರಾಜು ಎಂದು ಗುರುತಿಸಲಾಗಿದೆ. ಇವರು ವಿದ್ಯುತ್ ಕಂಬದಲ್ಲಿ ನಿಂತು ಕೆಲಸ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಕಂಬ ತುಂಡಾಗಿ ಬಿದ್ದು, ಸಣ್ಣ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಕಡಬ: ವಿದ್ಯುತ್ ಕಂಬ ಮುರಿದು ಬಿದ್ದು ಕಾರ್ಮಿಕನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಮೀನುಗಾರಿಕೆ ತೆರಳಿದ್ದ ಬೋಟ್ ನಿಂದ ಬಿದ್ದು ಯುವಕ ನಾಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 29. ಮೀನುಗಾರಿಕೆಗೆಂದು ತೆರಳಿದ ಯುವಕನೋರ್ವ ಬೋಟ್ ನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿರುವ ಘಟನೆ ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ನಡೆದಿದೆ. ನಾಪತ್ತೆಯಾದವರನ್ನು ತಮಿಳುನಾಡು ಮೂಲದ ವೆಲ್ ಮುರುಗನ್(24) ಎಂದು ಗುರುತಿಸಲಾಗಿದೆ. ಈತ ಇಲ್ಲಿನ ಮೀನುಗಾರಿಕಾ ದಕ್ಕೆಯಿಂದ ಮೀನುಗಾರಿಕೆಗೆಂದು ತೆರಳಿದ್ದ ಬೋಟ್‌ನಿಂದ ಸಮುದ್ರಕ್ಕೆ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ರಾತ್ರಿ 10:30ಕ್ಕೆ ಹೊರಟಿದ್ದ ಈ ಬೋಟ್ ನಲ್ಲಿ ಒಟ್ಟು 10 ಮಂದಿ ಇದ್ದು, ರಾತ್ರಿ 11:15 ರ ವೇಳೆಗೆ ಅದರಲ್ಲಿದ್ದ ವೆಲ್ ಮುರುಗನ್ ನಾಪತ್ತೆಯಾಗಿದ್ದರು.

ಮಂಗಳೂರು: ಮೀನುಗಾರಿಕೆ ತೆರಳಿದ್ದ ಬೋಟ್ ನಿಂದ ಬಿದ್ದು ಯುವಕ ನಾಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ಕೌಟುಂಬಿಕ ಕಲಹ ಹಿನ್ನೆಲೆ ➤ ಪತ್ನಿ, ಮಗಳನ್ನು ದಾರಿ ಮಧ್ಯೆ ಬಿಟ್ಟುಹೋದ ಪತಿ

(ನ್ಯೂಸ್ ಕಡಬ) Newskadaba.com ಕಡಬ, ಅ. 29. ಕಾರಿನಲ್ಲಿ ತೆರಳುತ್ತಿದ್ದ ವೇಳೆ ವ್ಯಕ್ತಿಯೋರ್ವರು ತನ್ನ ಹೆಂಡತಿ ಹಾಗೂ ಮಗಳನ್ನು ದಾರಿ ಮಧ್ಯೆಯೇ ಬಿಟ್ಟು ಹೋದ ಘಟನೆ ನಡೆದಿದೆ. ತಾಲೂಕಿನ ಸಿರಿಬಾಗಿಲು ನಿವಾಸಿ 9 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಇದರ ಪೈಕಿ ಓರ್ವ ಮಗ ಬುದ್ಧಿ ಮಾಂದ್ಯನಾಗಿದ್ದು, ಮದುವೆಯಾದ ಬಳಿಕ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಇದರ ಕುರಿತು ಈ ಮೊದಲು ಪತ್ನಿ ಪುತ್ತೂರು ಮಹಿಳಾ ಠಾಣೆ ಮತ್ತು ಮಹಿಳಾ ಸಾಂತ್ವನ ಕೇಂದ್ರಕ್ಕೆ

ಕಡಬ: ಕೌಟುಂಬಿಕ ಕಲಹ ಹಿನ್ನೆಲೆ ➤ ಪತ್ನಿ, ಮಗಳನ್ನು ದಾರಿ ಮಧ್ಯೆ ಬಿಟ್ಟುಹೋದ ಪತಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಖಾಸಗಿ ಬಸ್ ಹಾಗೂ ಆಟೋ ರಿಕ್ಷಾ ನಡುವೆ ಢಿಕ್ಕಿ ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) Newskadaba.com ಬಂಟ್ವಾಳ,‌ ಅ. 29. ಖಾಸಗಿ ಬಸ್ ಹಾಗೂ ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಆಟೋ ಚಾಲಕ ಹಾಗೂ ಸಹಪ್ರಯಾಣಿಕ ಗಾಯಗೊಂಡ ಘಟನೆ ಬಿ ಸಿ ರೋಡು ಸಮೀಪದ ಪೊಳಲಿ ರಸ್ತೆಯ ಕಲ್ಪನೆ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ನೇರಳಕಟ್ಟೆ ನಿವಾಸಿ ಮುಹಮ್ಮದ್ ನಿಹಾಲ್ ಹಾಗೂ ಸಹ ಪ್ರಯಾಣಿಕ ಮುಹಮ್ಮದ್ ಹನೀಫ್ ಎಂದು ಗುರುತಿಸಲಾಗಿದೆ. ಪೊಳಲಿಯಿಂದ ಬಿ ಸಿ ರೋಡ್ ಕಡೆ ಬರುತ್ತಿದ್ದ ಖಾಸಗಿ ಬಸ್ ಹಾಗೂ ಬಿ.ಸಿ.ರೋಡಿನಿಂದ ಅಡ್ಡೂರು ಕಡೆ ತೆರಳುತ್ತಿದ್ದ

ಖಾಸಗಿ ಬಸ್ ಹಾಗೂ ಆಟೋ ರಿಕ್ಷಾ ನಡುವೆ ಢಿಕ್ಕಿ ➤ ಇಬ್ಬರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಪಬ್ ಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಹಿನ್ನೆಲೆ ➤ ನಗರದ ಪಬ್ ಗಳ ಮೇಲೆ ದಿಢೀರ್ ಪೊಲೀಸ್ ದಾಳಿ

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 29. ಪಬ್ ಗಳು ಕೋವಿಡ್ ನಿಯಮಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪದ ಹಿನ್ನೆಲೆ ನಗರದಲ್ಲಿರುವ ಪಬ್‌ಗಳಿಗೆ ಗುರುವಾರ ರಾತ್ರಿ ವೇಳೆ ಪೊಲೀಸರು ಹಠಾತ್ ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ. ಪಬ್‌ಗಳು ಕೋವಿಡ್ ನಿಯಮವನ್ನು ಪಾಲನೆ ಮಾಡುತ್ತಿಲ್ಲ, ಪಬ್‌ನೊಳಗೆ ಬಲ್ಬ್ ವ್ಯವಸ್ಥೆ ಸೇರಿದಂತೆ ಕೆಲವೊಂದು ನಿಯಮಗಳನ್ನು ಗಾಳಿಗೆ ತೂರಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಕೇಳಿ ಬಂದ ಆರೋಪದ ಮೇರೆಗೆ ಪೊಲೀಸರು ದಿಢೀರ್ ದಾಳಿ ಮಾಡಿ ತಪಾಸಣೆ ನಡೆಸಿದ್ದು, ಪಬ್ ಮೇಲ್ವಿಚಾರಕ ಹಾಗೂ ಸಿಬ್ಬಂದಿಗಳಿಗೆ

ಮಂಗಳೂರು: ಪಬ್ ಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಹಿನ್ನೆಲೆ ➤ ನಗರದ ಪಬ್ ಗಳ ಮೇಲೆ ದಿಢೀರ್ ಪೊಲೀಸ್ ದಾಳಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಆಯತಪ್ಪಿ ಕೆಸರು ತುಂಬಿದ್ದ ನೀರಿಗೆ ಬಿದ್ದ ವಿದ್ಯಾರ್ಥಿ- ಸ್ಥಿತಿ ಗಂಭೀರ

(ನ್ಯೂಸ್ ಕಡಬ) Newskadaba.com ಪುತ್ತೂರು, ಅ. 28. ಮದರಸ ವಿದ್ಯಾರ್ಥಿಯೋರ್ವ ಕೆಸರು ತುಂಬಿದ ನೀರಿಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಮಾಡನ್ನೂರಿನಲ್ಲಿ ನಡೆದಿದೆ. ವಿದ್ಯಾರ್ಥಿಗಳೆಲ್ಲ ಕೊಳದ ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಓರ್ವ ಬಾಲಕ ಆಯತಪ್ಪಿ ಕೆಸರು ತುಂಬಿದ ನೀರಿಗೆ ಬಿದ್ದಿದ್ದು, ತುಂಬಾ ಹೊತ್ತಾದರೂ ಹೊರಬರಲಾರದೆ ಕೆಸರು ನೀರಿನಲ್ಲಿ ಬಾಕಿಯಾಗಿದ್ದ ಎಂದು ತಿಳಿದುಬಂದಿದೆ. ಗಂಭೀರ ಗಾಯಗೊಂಡ ವಿಧ್ಯಾರ್ಥಿಯನ್ನು ಪುತ್ತೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ.

ಆಯತಪ್ಪಿ ಕೆಸರು ತುಂಬಿದ್ದ ನೀರಿಗೆ ಬಿದ್ದ ವಿದ್ಯಾರ್ಥಿ- ಸ್ಥಿತಿ ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಗುತ್ತಿಗಾರು: ಅಡಿಕೆ ಕದ್ದರೆಂದು ದೇವಸ್ಥಾನಕ್ಕೆ ತೆರಳಿ ಹರಕೆ ಸಲ್ಲಿಸಿದ ಕುಟುಂಬ

(ನ್ಯೂಸ್ ಕಡಬ) Newskadaba.com ಗುತ್ತಿಗಾರು, ಅ. 28. ತೋಟದಿಂದ ಹಣ್ಣಡಿಕೆ ಕದ್ದರೆಂದು ದೇವಸ್ಥಾನಕ್ಕೆ ತೆರಳಿ ಹರಕೆ ಸಲ್ಲಿಸಿದ ಘಟನೆ ಗುತ್ತಿಗಾರು ಗ್ರಾಮದ ಪುರ್ಲುಮಕ್ಕಿ ಎಂಬಲ್ಲಿ ನಡೆದಿದೆ. ಗುತ್ತಿಗಾರಿನ ಪುರ್ಲುಮಕ್ಕಿಯ ಎನ್.ಎಲ್.ಈಶ್ವರ ಎಂಬವರ ಮನೆಯಿಂದ ಕೊಂಚ ದೂರದಲ್ಲಿರುವ ತೋಟಕ್ಕೆ ನುಗ್ಗಿದ ಕಳ್ಳರು ಅಡಿಕೆ ಗೊಂಚಲು ತೆಗೆದು ಅದರಿಂದ ಅಡಿಕೆ ತೆಗೆದು ಖಾಲಿ ಗೊಂಚಲನ್ನು ತೋಟದಲ್ಲೇ ಬಿಸಾಡಿರುವುದು ಕಂಡು ಬಂದಿದೆ. ಈ ಕುರಿತು ಮನೆಯವರು ವಳಲಂಬೆ ಶ್ರೀ ಶಂಖಪಾಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.

ಗುತ್ತಿಗಾರು: ಅಡಿಕೆ ಕದ್ದರೆಂದು ದೇವಸ್ಥಾನಕ್ಕೆ ತೆರಳಿ ಹರಕೆ ಸಲ್ಲಿಸಿದ ಕುಟುಂಬ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ತೊಕ್ಕೊಟ್ಟು ಫ್ಲೈಓವರ್ ನಲ್ಲಿ ಬೈಕ್ ಅಪಘಾತ ➤ 20 ಅಡಿ ಆಳದ ರಸ್ತೆಗೆ ಬಿದ್ದು ಸವಾರ ದಾರುಣ ಮೃತ್ಯು

(ನ್ಯೂಸ್ ಕಡಬ) Newskadaba.com ಉಳ್ಳಾಲ, ಅ.27. ಬೈಕ್ ಅಪಘಾತದಲ್ಲಿ ರಸ್ತೆಗೆಸೆಯಲ್ಪಟ್ಟು, ಬೈಕ್ ಸವಾರನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಬುಧವಾರದಂದು ಸಂಜೆ ತೊಕ್ಕೊಟ್ಟು ಫ್ಲೈ ಓವರ್ ನಲ್ಲಿ ನಡೆದಿದೆ.   ಮೃತಪಟ್ಟವರನ್ನು ಕುಂಪಲ ಸರಳಾಯ ಕಾಲನಿ ನಿವಾಸಿ ಸುಬ್ರಹ್ಮಣ್ಯ ರಾವ್ ಸಿಂಧ್ಯ(45) ಎಂದು ಗುರುತಿಸಲಾಗಿದೆ. ಇಂದು ಸಂಜೆ ಸುಬ್ರಹ್ಮಣ್ಯ ಅವರು ಮಂಗಳೂರಿನಿಂದ ಕುಂಪಲ ಕಡೆಗೆ ತೊಕ್ಕೊಟ್ಟು ಫ್ಲೈಓವರ್ ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿ ಮೇಲ್ಸೇತುವೆಯಿಂದ 20 ಅಡಿ ಆಳದ ಸರ್ವಿಸ್ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಪರಿಣಾಮ ತಲೆಗೆ ಗಂಭೀರ

ತೊಕ್ಕೊಟ್ಟು ಫ್ಲೈಓವರ್ ನಲ್ಲಿ ಬೈಕ್ ಅಪಘಾತ ➤ 20 ಅಡಿ ಆಳದ ರಸ್ತೆಗೆ ಬಿದ್ದು ಸವಾರ ದಾರುಣ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top