ಕ್ರೈಮ್ ನ್ಯೂಸ್

ಬಿಸಿಯೂಟ ಸೇವಿಸಿ 70 ವಿದ್ಯಾರ್ಥಿಗಳು ಅಸ್ವಸ್ಥ..! ➤ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಜ. 11. ಶಾಲೆಯಲ್ಲಿನ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಸುಮಾರು 70 ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಜಿಲ್ಲೆಯ ಹನೂರು ವಡಕೆಹಳ್ಳದಲ್ಲಿ ನಡೆದಿದೆ. ಶಾಲಾ ಮಕ್ಕಳು ಸೇವಿಸಿದ್ದ ಬಿಸಿಯೂಟದಲ್ಲಿ ಹಲ್ಲಿಯೊಂದು ಸತ್ತು ಬಿದ್ದಿರುವುದಾಗಿ ಹೇಳಲಾಗಿದ್ದು, ಅಸ್ವಸ್ಥ ಮಕ್ಕಳನ್ನು ಕೌದಲ್ಲಿಂಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಶಾಲೆಯಲ್ಲಿ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 70 ಕ್ಕೂ ಹೆಚ್ಚು ಮಕ್ಕಳು ಬಿಸಿಯೂಟ ಸೇವಿಸಿ ವಾಂತಿ ಮಾಡುವುದನ್ನು ಕಂಡ ಇತರ ವಿದ್ಯಾರ್ಥಿಗಳು ಊಟ ಸೇವಿಸಿಲ್ಲ ಎಂದು ತಿಳಿದುಬಂದಿದೆ.

ಬಿಸಿಯೂಟ ಸೇವಿಸಿ 70 ವಿದ್ಯಾರ್ಥಿಗಳು ಅಸ್ವಸ್ಥ..! ➤ ಆಸ್ಪತ್ರೆಗೆ ದಾಖಲು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ನೆಲ್ಯಾಡಿ: ಟಾಟಾ ಏಸ್ ಹಾಗೂ ಸಿಲಿಂಡರ್ ಸಾಗಾಟದ ಲಾರಿ ನಡುವೆ ಅಪಘಾತ ➤ ಓರ್ವ ಗಂಭೀರ.!

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜ. 11. ಅಂಚೆ ಇಲಾಖೆಯ ಪಾರ್ಸೆಲ್ ಸಾಗಾಟದ ಟಾಟಾ ಏಸ್ ಹಾಗೂ ಸಿಲಿಂಡರ್ ಸಾಗಾಟದ ಲಾರಿ ನಡುಬೆ ಢಿಕ್ಕಿ ಸಂಭವಿಸಿದ ಪರಿಣಾಮ ಟಾಟಾ ಏಸ್ ಚಾಲಕ ಗಂಭೀರ ಗಾಯಗಿಂಡ ಘಟನೆ ಮಂಗಳೂರು- ಬೆಂಗಳೂರು ರಾ.ಹೆ ಗೋಳಿತೊಟ್ಟು ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಪುತ್ತೂರು ನೆಹರೂನಗರ ನಿವಾಸಿ ರವಿ ಎಂದು ಗುರುತಿಸಲಾಗಿದೆ. ಇವರು ಸುಬ್ರಹ್ಮಣ್ಯದಿಂದ ನೆಟ್ಟಣ, ಕಡಬ, ಅಲಂಕಾರು, ನೆಲ್ಯಾಡಿಯಿಂದ ಅಂಚೆ ಇಲಾಖೆಯ ಬ್ಯಾಗ್ ಕಲೆಕ್ಟ್ ಮಾಡಿಕೊಂಡು ಪುತ್ತೂರಿಗೆ ತೆರಳುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ

ನೆಲ್ಯಾಡಿ: ಟಾಟಾ ಏಸ್ ಹಾಗೂ ಸಿಲಿಂಡರ್ ಸಾಗಾಟದ ಲಾರಿ ನಡುವೆ ಅಪಘಾತ ➤ ಓರ್ವ ಗಂಭೀರ.! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಿಟ್ಲ: ಮದುಮಗನಿಂದ ಕೊರಗಜ್ಜನ ವೇಷ ಧರಿಸಿ ಅವಹೇಳನ ಪ್ರಕರಣ ➤ ಇಬ್ಬರ ಬಂಧನ, ಪ್ರಮುಖ ಆರೋಪಿ ಮದುಮಗ ನಾಪತ್ತೆ

(ನ್ಯೂಸ್ ಕಡಬ) newskadaba.com ವಿಟ್ಲ, ಜ.11. ವಿಟ್ಲದ ಸಾಲೆತ್ತೂರಿನಲ್ಲಿ ಕೊರಗಜ್ಜ ದೈವಕ್ಕೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ವಿಟ್ಲ‌ ಪೊಲೀಸರು ಮಂಗಳವಾರದಂದು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಮಂಗಲ್ಪಾಡಿ ನಿವಾಸಿ, ಪುತ್ತೂರಿನ ಫಾತಿಮಾ ಮ್ಯಾಚಿಂಗ್ ಸೆಂಟರ್ ನ ಮಾಲಕ ಅಹಮ್ಮದ್ ಮುಜ್ತಾಬ್(28) ಹಾಗೂ ಮಂಜೇಶ್ವರ ತಾಲೂಕಿನ ಬಾಯಾರು ಪದವು ನಿವಾಸಿ ಮೊಯ್ದೀನ್ ಮನೀಶ್(19) ಎಂದು ಗುರುತಿಸಲಾಗಿದೆ. ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ ಮದುವೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ

ವಿಟ್ಲ: ಮದುಮಗನಿಂದ ಕೊರಗಜ್ಜನ ವೇಷ ಧರಿಸಿ ಅವಹೇಳನ ಪ್ರಕರಣ ➤ ಇಬ್ಬರ ಬಂಧನ, ಪ್ರಮುಖ ಆರೋಪಿ ಮದುಮಗ ನಾಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ರೈಲಿನಡಿಗೆ ತಲೆಯಿಟ್ಟು ವ್ಯಕ್ತಿ ಆತ್ಮಹತ್ಯೆ..!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 11. ಚಲಿಸುವ ರೈಲಿನಡಿಗೆ ತಲೆಯಿಟ್ಟು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಸಿರೋಡ್ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಘಟನಾ ಸ್ಥಳಕ್ಕೆ ರೈಲ್ವೇ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.  

ಬಂಟ್ವಾಳ: ರೈಲಿನಡಿಗೆ ತಲೆಯಿಟ್ಟು ವ್ಯಕ್ತಿ ಆತ್ಮಹತ್ಯೆ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಆರ್ಥಿಕ‌ ಅಡಚಣೆ ಹಾಗೂ ಸಾಲಬಾಧೆ ಹಿನ್ನೆಲೆ ➤ ಆತ್ಮಹತ್ಯೆಗೆ ಶರಣಾದ ಯುವಕ..!

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 10. ಸಾಲದಿಂದ ಬೇಸತ್ತ ಯುವಕನೋರ್ವ ತಾನು ಕೆಲಸ ಮಾಡುತ್ತಿದ್ದ ಕಛೇರಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ನಲ್ಲಿ ಸೋಮವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕಿನ್ನಿಗೋಳಿ ಪಕ್ಷಿಕೆರೆ ನಿವಾಸಿ ಸುಶಾಂತ್ ಎಂದು ಗುರುತಿಸಲಾಗಿದೆ. ಸುರತ್ಕಲ್ ಕುಳಾಯಿಯ ಸನ್ ರೈಸ್ ಕಾರ್ಪೊರೇಷನ್ ಎಂಬ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಸುಸೈಡ್ ನೋಟ್ ಬರೆದಿಟ್ಟು ಕಛೇರಿಯಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ತಂದೆತಾಯಿ ಹದಿನೈದು ವರ್ಷಗಳ ಹಿಂದೆ ಮೃತಪಟ್ಟಿದ್ದು, ಅಣ್ಣನ ಜೊತೆ ವಾಸವಾಗಿದ್ದ

ಮಂಗಳೂರು: ಆರ್ಥಿಕ‌ ಅಡಚಣೆ ಹಾಗೂ ಸಾಲಬಾಧೆ ಹಿನ್ನೆಲೆ ➤ ಆತ್ಮಹತ್ಯೆಗೆ ಶರಣಾದ ಯುವಕ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸಾಲ ನೀಡದ ಹಿನ್ನೆಲೆ- ಬ್ಯಾಂಕ್ ಗೆ ಬೆಂಕಿ ಇಟ್ಟ ಭೂಪ…!

(ನ್ಯೂಸ್ ಕಡಬ) newskadaba.com ಹಾವೇರಿ, ಜ. 10. ಸಾಲ ನೀಡಲು ನಿರಾಕರಿಸಿದರೆಂದು ವ್ಯಕ್ತಿಯೋರ್ವ ಪೆಟ್ರೋಲ್ ಸುರಿದು ಬ್ಯಾಂಕ್’ಗೆ ಬೆಂಕಿ ಹಚ್ಚಿದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೆಡಿಗೊಂಡ ಗ್ರಾಮದಲ್ಲಿ ನಡೆದಿದೆ. ಕಿಡಿಗೇಡಿ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ನಿವಾಸಿ ವಸೀಮ್ ಮುಲ್ಲಾ ಎಂದು ಗುರುತಿಸಲಾಗಿದೆ. ಈತ ಸಾಲ ಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದು, ಆದರೆ, ಮ್ಯಾನೇಜರ್ ಈ ಅರ್ಜಿಯನ್ನು ನಿರಾಕರಿಸಿದ್ದರು. ಇದರಿಂದ ತೀವ್ರ ಬೇಸರಗೊಂಡಿದ್ದ ವಸೀಮ್, ಕೋಪಗೊಂಡು ಬ್ಯಾಂಕ್ ನ ಕಿಟಕಿ ಬಾಗಿಲು ತೆಗೆದು ಪೆಟ್ರೋಲ್ ಸುರಿದು

ಸಾಲ ನೀಡದ ಹಿನ್ನೆಲೆ- ಬ್ಯಾಂಕ್ ಗೆ ಬೆಂಕಿ ಇಟ್ಟ ಭೂಪ…! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅತಿಯಾಗಿ ಟಿವಿ ನೋಡಬೇಡ ಎಂದು ಬುದ್ದಿ ಹೇಳಿದ ತಂದೆ ➤ ಆಕ್ರೋಶಗೊಂಡ ಮಗ ಆತ್ಮಹತ್ಯೆ…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 10. ಅತಿಯಾಗಿ ಟಿವಿ ನೋಡಬೇಡ ಎಂದು ಪೋಷಕರು ಬುದ್ದಿ ಹೇಳಿದಕ್ಕೆ ಯುವಕನೊಕರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜೆ.ಜೆ ನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಸೈಯದ್ ಸಾಹಿಲ್ (23) ಎಂದು ಗುರುತಿಸಲಾಗಿದೆ. ಈತ ಯಾವಾಗಲೂ ಮನೆಯಲ್ಲೇ ಇರುತ್ತಿದ್ದು, ಯಾವುದೇ ಕೆಲಸಕ್ಕೂ ಹೋಗದೇ ಟಿವಿ ‌ನೋಡುತ್ತಾ ಕಾಲ ಕಳೆಯುತ್ತಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ತಂದೆ ಯಾವಾಗಲೂ ಟಿವಿ ನೋಡ್ತಾ ಇರ್ತೀಯಾ, ಕೆಲಸಕ್ಕೆ ಹೋಗುವುದಿಲ್ವಾ ಎಂದು ಬೈದಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಸಾಹಿಲ್,

ಅತಿಯಾಗಿ ಟಿವಿ ನೋಡಬೇಡ ಎಂದು ಬುದ್ದಿ ಹೇಳಿದ ತಂದೆ ➤ ಆಕ್ರೋಶಗೊಂಡ ಮಗ ಆತ್ಮಹತ್ಯೆ…! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉಡುಪಿ: ವಿದೇಶಿಗನಿಂದ ಮಹಿಳೆಗೆ ಲಕ್ಷಾಂತರ ರೂ. ವಂಚನೆ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಉಡುಪಿ, ಜ. 10. ಮೆಸೇಂಜರ್ ಮೂಲಕ ಪರಿಚಯವಾದ ವ್ಯಕಿಯೋರ್ವ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿರುವ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಬೈನಲ್ಲಿ ವಾಸವಾಗಿರುವ ಗುಂಡಿಬೈಲು ಮೂಲದ ಕ್ಲೊಟಿಲ್ಡಾ ಡಿಕೋಸ್ತಾ ಎಂಬ ಮಹಿಳೆ ಊರಿಗೆ ಮರಳಿದ್ದು, ಇವರಿಗೆ ಡಿ. 2ರಂದು ಮೆಸೇಂಜರ್ ಮೂಲಕ ರೊಮನಿಯಾ ದೇಶದ ಇಂಗ್ಲೆಂಡ್ ನಲ್ಲಿ ವೈದ್ಯಕೀಯ ವೃತ್ತಿ ಮಾಡಿಕೊಂಡಿರುವುದಾಗಿ ಹೇಳಿಕೊಂಡು ಫಿಲಿಪ್ ಜೇಮ್ಸ್ ಎಂಬಾತನ ಪರಿಚಯವಾಗಿತ್ತು. ಡಿ. 20ರಂದು ಫಿಲಿಪ್ ಜೇಮ್ಸ್, ತನ್ನನ್ನು ದೆಹಲಿ ವಿಮಾನ

ಉಡುಪಿ: ವಿದೇಶಿಗನಿಂದ ಮಹಿಳೆಗೆ ಲಕ್ಷಾಂತರ ರೂ. ವಂಚನೆ ➤ ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

30 ಗಂಟೆಗಳ ಕಾಲ ಸಮುದ್ರದಲ್ಲಿ ಈಜಾಡಿ ಸಾವನ್ನು ಗೆದ್ದುಬಂದ ಮೀನುಗಾರ..! ➤ ಮಧ್ಯರಾತ್ರಿ ದೋಣಿಯಿಂದ ಹೊರಬಿದ್ದ ಮಂಗಳೂರಿನ ವ್ಯಕ್ತಿ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 10. ಸಮುದ್ರಕ್ಕೆ ಬಿದ್ದು ಸುದೀರ್ಘ 30 ಗಂಟೆಗಳ ಕಾಲ ಈಜಾಡಿ ಸಾವನ್ನು ಗೆದ್ದುಬಂದ ಮೀನುಗಾರರೋರ್ವರು ಅಚ್ಚರಿ ಸೃಷ್ಟಿಸಿದ ಘಟನೆ ವರದಿಯಾಗಿದೆ‌. ಮೀನುಗಾರನನ್ನು ತಮಿಳುನಾಡು ಮೂಲದ ಜೋಸೆಫ್ ಎಂದು ಗುರುತಿಸಲಾಗಿದೆ. ಇವರು ಡಿ. 31ರಂದು ಮಂಗಳೂರಿನಿಂದ ಮೀನುಗಾರಿಕಾ ದೋಣಿಯೊಂದರಲ್ಲಿ ಎಂಟು ಮಂದಿಯ ತಂಡದೊಂದಿಗೆ ತೆರಳಿದ್ದರು. ಜ. 6ರಂದು ಮುಂಜಾನೆ ಎರಡು ಗಂಟೆಯ ಸುಮಾರಿಗೆ ದೋಣಿಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ ಜೋಸೆಫ್ ನಾಪತ್ತೆಯಾಗಿದ್ದರು. ಆಗ ದೋಣಿ ಸಮುದ್ರ ದಡದಿಂದ ಸುಮಾರು 36 ನಾಟಿಕಲ್

30 ಗಂಟೆಗಳ ಕಾಲ ಸಮುದ್ರದಲ್ಲಿ ಈಜಾಡಿ ಸಾವನ್ನು ಗೆದ್ದುಬಂದ ಮೀನುಗಾರ..! ➤ ಮಧ್ಯರಾತ್ರಿ ದೋಣಿಯಿಂದ ಹೊರಬಿದ್ದ ಮಂಗಳೂರಿನ ವ್ಯಕ್ತಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಬ್ರಹ್ಮಣ್ಯ: ಅಪರಿಚಿತ ಮಹಿಳೆಯ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ. 10. ಕುಮಾರಧಾರ ನದಿ ದಡದಲ್ಲಿ ಅಪರಿಚಿತ ಮಹಿಳೆಯೋರ್ವರ ಮೃತದೇಹ ಪತ್ತೆಯಾದ ಕುರಿತು ವರದಿಯಾಗಿದೆ. ಈ ಕುರಿತು ಮಾಹಿತಿ ಪಡೆದ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಿದ್ದಾರೆ. ಮಹಿಳೆಯ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.    

ಸುಬ್ರಹ್ಮಣ್ಯ: ಅಪರಿಚಿತ ಮಹಿಳೆಯ ಮೃತದೇಹ ಪತ್ತೆ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top