ಕ್ರೈಮ್ ನ್ಯೂಸ್

ಪುತ್ತೂರು: ಯುವಕನಿಗೆ ಹಲ್ಲೆ- ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಆ. 14. ಏಕಾಏಕಿ ಮನೆಗೆ ನುಗ್ಗಿದ ತಂಡವೊಂದು ಯುವಕನ ಮೇಲೆ  ಹಲ್ಲೆ ನಡೆಸಿದ ಘಟನೆ ವಿಟ್ಲದ ಚಂದಳಿಕೆಯ ಕುರುಂಬಳ ಎಂಬಲ್ಲಿ ನಡೆದಿದೆ.   ಹಲ್ಲೆಗೊಳಗಾದವರನ್ನು ಲೋಕನಾಥ್ ಜೋಗಿ ಎಂಬವರ ಪುತ್ರ ಹೃದಯ್ ಎಂದು ಗುರುತಿಸಲಾಗಿದೆ. ರಸ್ತೆಯ ವಿಚಾರವಾಗಿ ವ್ಯಾಟ್ಸಾಪ್‌ನಲ್ಲಿ ಹಾಕಿದ್ದಾರೆ ಎಂಬವುದಾಗಿ ಜಗಳ ನಡೆದಿದೆ ಎಂದು ತಿಳಿದು ಬಂದಿದೆ. ಗಾಯಾಳುವನ್ನು ವಿಟ್ಲ ಆಸ್ಪತ್ರೆಗೆ ದಾಖಲಿಸಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಪುತ್ತೂರು: ಯುವಕನಿಗೆ ಹಲ್ಲೆ- ಆಸ್ಪತ್ರೆಗೆ ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 14. ಪುತ್ತೂರಿನಲ್ಲಿ ವ್ಯಕ್ತಿಯೊಬ್ಬರಿಂದ ನಗದು ದೋಚಿದ ಪ್ರಕರಣದದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬನ್ನೂರಿನಲ್ಲಿ ಬಂಧಿಸಿದ್ದಾರೆ.   ಬಂಧಿತ ಆರೋಪಿಯನ್ನು ಉಪ್ಪಿನಂಗಡಿ ನಿನ್ನಿಕಲ್ಲು ನಿವಾಸಿ ಶರತ್ ಎಂದು ಗುರುತಿಸಲಾಗಿದೆ. ಈತ 2016ರಲ್ಲಿ ಪುತ್ತೂರು ಪರಿಸರದಲ್ಲಿ ವ್ಯಕ್ತಿಯೋರ್ವರ ನಗದು ದೋಚಿದ ಪ್ರಕರಣದಲ್ಲಿ ಬಂಧಿತರಾಗಿ, ಬಳಿಕ ಜಾಮಿನು ಪಡೆದ ಅವರು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ನ್ಯಾಯಾಲಯವು ಆರೋಪಿ ಶರತ್ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ತನಿಖೆ

ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೊಕ್ಕಡ: ಅನ್ಯಕೋಮಿನ ಜೋಡಿ ಪತ್ತೆ ➤‌ ಪೊಲೀಸರಿಗೊಪ್ಪಿದ ಹಿಂದೂ ಸಂಘಟನಾ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ. 12. ಅನ್ಯ ಕೋಮಿನ ಜೋಡಿಯನ್ನು ತಡೆದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೊಪ್ಪಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ‌. ಗದಗ ಮೂಲದ ರಫೀಕ್ (21)ಎಂಬಾತ ಗದಗ ಮೂಲದ ಹಿಂದೂ ಯುವತಿಯನ್ನು ಧರ್ಮಸ್ಥಳಕ್ಕೆ ಕರೆತಂದು, ಖಾಸಗಿ ಲಾಡ್ಜ್ ಬುಕ್ಕಿಂಗ್ ಮಾಡಲೆಂದು ತೆರಳಿದ್ದು, ಇದು ಅನ್ಯಮತೀಯ ಜೋಡಿ ಎಂದು ತಿಳಿದ ಲಾಡ್ಜ್ ಸಿಬ್ಬಂದಿಯು, ರೂಮ್ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಕೂಡಲೇ ಅಲ್ಲಿಂದ ಕಾಲ್ಕಿತ್ತ ಜೋಡಿ ಬೆಂಗಳೂರು ಕಡೆ ತೆರಳಲು ಬಸ್ ಹತ್ತಿದ್ದರು. ವಿಷಯ ತಿಳಿದ ಹಿಂದೂ

ಕೊಕ್ಕಡ: ಅನ್ಯಕೋಮಿನ ಜೋಡಿ ಪತ್ತೆ ➤‌ ಪೊಲೀಸರಿಗೊಪ್ಪಿದ ಹಿಂದೂ ಸಂಘಟನಾ ಕಾರ್ಯಕರ್ತರು Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಚಪ್ಪಲಿಯಲ್ಲಿ ಚಿನ್ನ ಸಾಗಾಟ ➤‌ ಆರೋಪಿ ಅಂದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 11. ಚಪ್ಪಲಿಯಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ ಘಟನೆ ವರದಿಯಾಗಿದೆ. ದುಬೈನಿಂದ ಮಂಗಳೂರಿಗೆ ಮರಳುತ್ತಿದ್ದ ಕಾಸರಗೋಡು ನಿವಾಸಿ, ಚಪ್ಪಲಿಯಲ್ಲಿ 332 ಗ್ರಾಂ ಚಿನ್ನ ಸಾಗಿಸುತ್ತಿದ್ದು, ತಪಾಸಣೆಯ ವೇಳೆ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಮಂಗಳೂರು: ಚಪ್ಪಲಿಯಲ್ಲಿ ಚಿನ್ನ ಸಾಗಾಟ ➤‌ ಆರೋಪಿ ಅಂದರ್ Read More »

ಕರಾವಳಿ, ಕ್ರೈಮ್ ನ್ಯೂಸ್

ಎರಡು ನಕಲಿ ನಂಬರ್ ಪ್ಲೇಟ್ ಗಳನ್ನು ಹೊಂದಿರುವ ಅಪರಿಚಿತ ಓಮ್ನಿ ಕಾರು ಪತ್ತೆ ➤‌ ಕಡಬ ಪೊಲೀಸರಿಂದ ಕಾರಿಗೆ ಲಾಕ್

(ನ್ಯೂಸ್ ಕಡಬ) newskadaba.com ಕಡಬ, ಆ.11. ಎರಡು ನಂಬರ್ ಪ್ಲೇಟ್ ಹೊಂದಿರುವ ಅಪರಿಚಿತ ಕಾರೊಂದು ಮರ್ಧಾಳದಲ್ಲಿ ಕಂಡುಬಂದಿದ್ದು, ಪೊಲೀಸರು ಲಾಕ್ ಮಾಡಿದ್ದಾರೆ. ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಬೇರೆ ಬೇರೆ ನಕಲಿ ನಂಬರ್ ಪ್ಲೇಟ್ ಗಳನ್ನು ಹಾಕಲಾಗಿದ್ದು, ಬುಧವಾರ ರಾತ್ರಿ ಕಡಬ ಠಾಣಾ ಪೊಲೀಸರು ಮರ್ಧಾಳ ಜಂಕ್ಷನ್ ನಲ್ಲಿ ಕಾರಿನ ಚಕ್ರಗಳಿಗೆ ಲಾಕ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಆಂಜನೇಯ ರೆಡ್ಡಿ, ನಕಲಿ ನಂಬರ್ ಪ್ಲೇಟ್ ಹಾಕಿರುವ ಕಾರಿಗೆ ಲಾಕ್ ಮಾಡಲಾಗಿದ್ದು, ಕಾರಿನ

ಎರಡು ನಕಲಿ ನಂಬರ್ ಪ್ಲೇಟ್ ಗಳನ್ನು ಹೊಂದಿರುವ ಅಪರಿಚಿತ ಓಮ್ನಿ ಕಾರು ಪತ್ತೆ ➤‌ ಕಡಬ ಪೊಲೀಸರಿಂದ ಕಾರಿಗೆ ಲಾಕ್ Read More »

ಕರಾವಳಿ, ಕ್ರೈಮ್ ನ್ಯೂಸ್

ನೀರುಪಾಲಾಗಿದ್ದ ಬಾಲಕಿಯ ಮೃತದೇಹ 48 ಗಂಟೆಗಳ ಬಳಿಕ ಪತ್ತೆ

(ನ್ಯೂಸ್ ಕಡಬ) newskadaba.com ಬೈಂದೂರು, ಆ. 10. ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಕಾಲುಸಂಕ ದಾಟುವಾಗ ಆಯತಪ್ಪಿ ಬಿದ್ದು ನೀರು ಪಾಲಾಗಿದ್ದ ವಿದ್ಯಾರ್ಥಿನಿ ಸನ್ನಿಧಿಯ ಮೃತದೇಹ ಘಟನೆ ನಡೆದ ಸ್ಥಳದಿಂದ 300 ಮೀಟರ್ ದೂರದಲ್ಲಿ ಸಿಕ್ಕಿದೆ. ಸ.ಹಿ.ಪ್ರಾ ಶಾಲೆ ಚಪ್ಪರಿಕೆಯ 2ನೇ ತರಗತಿಯ ವಿದ್ಯಾರ್ಥಿನಿ, ಬೊಳಂಬಳ್ಳಿಯ ಮಕ್ಕಿಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ದಂಪತಿಯ ಪುತ್ರಿ ಸನ್ನಿಧಿ (7) ಸೋಮವಾರ ಸಂಜೆ ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ಸಂದರ್ಭ ಕಾಲು ಸಂಕ ದಾಟುವಾಗ ಆಯತಪ್ಪಿ ನದಿಗೆ

ನೀರುಪಾಲಾಗಿದ್ದ ಬಾಲಕಿಯ ಮೃತದೇಹ 48 ಗಂಟೆಗಳ ಬಳಿಕ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಡಾನೆ ದಾಳಿ- ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಸಿದ್ದಾಪುರ, ಆ. 10. ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಚೆಟ್ಟಳ್ಳಿ ಸಮೀಪದ ಕುಡ್ಲೂರು ಚೆಟ್ಟಳ್ಳಿಯ ಮಲಕೋಡುವಿನಲ್ಲಿ ನಡೆದಿದೆ. ಮೃತಪಟ್ಟವರನ್ನು ಮಲಕೋಡ್ ನಿವಾಸ್ ಮುಹಮ್ಮದ್ ಎಂದು ಗುರುತಿಸಲಾಗಿದೆ. ಇವರು ಎಂದಿನಂತೆ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಹಠಾತ್ತನೆ ಪ್ರತ್ಯಕ್ಷವಾದ ಕಾಡಾನೆ ಇವರ ಮೇಲೆ ದಾಳಿ ಮಾಡಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಇವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸುತ್ತಿರುವ ದಾರಿಮಧ್ಯೆ ಮೃತಪಟ್ಟಿದ್ದಾರೆ ಎಂದೆನ್ನಲಾಗಿದೆ.

ಕಾಡಾನೆ ದಾಳಿ- ವ್ಯಕ್ತಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ದಂಪತಿಗಳ ನಡುವೆ ಕಲಹ ➤‌ ಪತಿಯ ಗುಂಡೇಟಿಗೆ ಪತ್ನಿ ಬಲಿ..!!

(ನ್ಯೂಸ್ ಕಡಬ) newskadaba.com ಮಡಿಕೇರಿ, ಆ. 10. ದಂಪತಿಯ ನಡುವೆ ಕಲಹವೇರ್ಪಟ್ಟು, ಪತಿ ಹಾರಿಸಿದ ಗುಂಡು ತಗುಲಿ ಪತ್ನಿ ಮೃತಪಟ್ಟ ಘಟನೆ ಕುಶಾಲನಗರ ತಾಲೂಕಿನ ಚೆಟ್ಟಳ್ಳಿಯ ಚೇರಳ ಶ್ರೀಮಂಗಲ ಗ್ರಾಮದಲ್ಲಿ ನಡೆದಿದೆ.   ಮೃತಪಟ್ಟವರನ್ನು ಬಟ್ಟೀರ ಷಷ್ಮ (44) ಎಂದು ಗುರುತಿಸಲಾಗಿದೆ. ಪತಿ ಬಟ್ಟೀರ ಗೋಪಾಲ (ಕಿಶನ್) ಗುಂಡು ಹಾರಿಸಿದ ಆರೋಪಿ. ಇವರಿಬ್ಬರ ನಡುವೆ ಮಂಗಳವಾರದಂದು ರಾತ್ರಿ ಗಲಾಟೆ ನಡೆದು, ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಘಟನೆಯ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸರು ಆರೋಪಿ ಗೋಪಾಲನನ್ನು ವಶಕ್ಕೆ ಪಡೆದು

ದಂಪತಿಗಳ ನಡುವೆ ಕಲಹ ➤‌ ಪತಿಯ ಗುಂಡೇಟಿಗೆ ಪತ್ನಿ ಬಲಿ..!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಪ್ಲಾಸ್ಟಿಕ್ ಬ್ಯಾನರ್ ತೆರವುಗೊಳಿಸಿದ ಹಿನ್ನೆಲೆ ➤‌ ತಲ್ವಾರ್ ಹಿಡಿದು ಹುಚ್ಚಾಟ ಮೆರೆದ ಯುವಕ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 10. ಇತ್ತೀಚೆಗೆ ದ.ಕ ಜಿಲ್ಲೆಯಲ್ಲಿ ನಡೆದ ಮಸೂದ್, ಪ್ರವೀಣ್ ನೆಟ್ಟಾರು, ಫಾಝಿಲ್ ಕೊಲೆ ಪ್ರಕರಣವು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಇದರ ನಡುವೆ ಸುಳ್ಯ ತಾಲೂಕಿನ ಕನಕಮಜಲಿನಲ್ಲಿ ಸಂದೀಪ್ ಎಂಬ ಯುವಕನೋರ್ವ ತಲ್ವಾರ್ ಹಿಡಿದು ಊರಿಡೀ ಸುತ್ತಾಡಿ ಹುಚ್ಚಾಟ ಮೆರೆದ ಘಟನೆ ವರದಿಯಾಗಿದೆ. ಪ್ರವೀಣ್ ನೆಟ್ಟಾರು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲೆಂದು ಬ್ಯಾನರ್ ಅಳವಡಿಸುವ ವೇಳೆ ಪ್ಲಾಸ್ಟಿಕ್ ಬ್ಯಾನರ್‌ ಬಳಸದಂತೆ ಗ್ರಾಮ ಪಂಚಾಯತ್ ನಿಂದ ತಿಳಿಸಲಾಗಿತ್ತಾದರೂ, ಸಂದೀಪ್ ಮತ್ತು ಕೆಲವರು ಪ್ಲಾಸ್ಟಿಕ್ ಬ್ಯಾನರ್

ಸುಳ್ಯ: ಪ್ಲಾಸ್ಟಿಕ್ ಬ್ಯಾನರ್ ತೆರವುಗೊಳಿಸಿದ ಹಿನ್ನೆಲೆ ➤‌ ತಲ್ವಾರ್ ಹಿಡಿದು ಹುಚ್ಚಾಟ ಮೆರೆದ ಯುವಕ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ವಿಟ್ಲ ಗ್ರಾ.ಪಂ. ಸದಸ್ಯನಿಗೆ ಹಲ್ಲೆ ಆರೋಪ ➤‌ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ವಿಟ್ಲ, ಆ. 10. ಗ್ರಾ. ಪಂ ಸದಸ್ಯ ಪುನೀತ್ ಮಾಡತ್ತಾರು ಎಂಬವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ. ಬಂಧಿತರನ್ನು ಕೇಪು ಗಣೇಶ ಮತ್ತು ನಿಶಾಂತ್ ಶೆಟ್ಟಿ ನೀರುಮಾರ್ಗ ಎಂದು ಗುರುತಿಸಲಾಗಿದೆ. ವಿಟ್ಲದ ಚಂದಳಿಕೆ ಮಾಡತ್ತಡ್ಕ ರಸ್ತೆಯಲ್ಲಿ ಮಂಗಳವಾರದಂದು ಘಟನೆ ನಡೆದಿತ್ತು. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ವಿಟ್ಲ ಗ್ರಾ.ಪಂ. ಸದಸ್ಯನಿಗೆ ಹಲ್ಲೆ ಆರೋಪ ➤‌ ಇಬ್ಬರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top