ಕ್ರೈಮ್ ನ್ಯೂಸ್

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನ

(ನ್ಯೂಸ್ ಕಡಬ) newskadaba.com . 10. ಕರ್ನಾಟಕದ 10ನೇ ಮುಖ್ಯಮಂತ್ರಿಯಾಗಿ, ದೇಶದ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಮತ್ತು ಹಲವಾರು ಮಹತ್ವದ ಜವಾಬ್ದಾರಿಗಳನ್ನು ನಿಬಾಯಿಸಿ ರಾಜಕಾರಣದಲ್ಲಿ ವಿಶೇಷ ಛಾಪು ಮೂಡಿಸಿದ್ದ ಎಸ್​​.ಎಂ.ಕೃಷ್ಣ ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿಸಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್​​.ಎಂ.ಕೃಷ್ಣರನ್ನು ಮೊದಲು ವೈದೇಹಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಬಳಿಕ ಶ್ವಾಸಕೋಶದ ಸೋಂಕು ಕಾಣಿಸಿಕೊಂಡ ಹಿನ್ನಲೆ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಎಸ್.ಎಂ.ಕೃಷ್ಣರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕೀಯ […]

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನ Read More »

ಕ್ರೈಮ್ ನ್ಯೂಸ್

ರಸ್ತೆ ಅಪಘಾತ: ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ರಾಯಚೂರು, . 09. ರಸ್ತೆ ಅಪಘಾತದಲ್ಲಿ ಬೈಕ್‌ ಸವಾರನೋರ್ವ ಮೃತಪಟ್ಟ ಘಟನೆ ರಾಯಚೂರು ತಾಲೂಕಿನ ಮಾನ್ವಿ ಹೊರವಲಯದಲ್ಲಿ ಸಂಭವಿಸಿದೆ. ಬೈಕ್‌ ಸವಾರನನ್ನು ಹುಣಸಿಹಾಳಹುಡಾ ಗ್ರಾಮದ ನಿವಾಸಿ ಸಿದ್ಧಲಿಂಗ (26) ಎಂದು ಗುರುತಿಸಲಾಗಿದೆ. ಬೈಕ್‌ ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದು, ತಲೆಗೆ ತೀವ್ರ ಪೆಟ್ಟಾಗಿ ರಿಮ್ಸ್‌ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರುಳಿದಿದ್ದಾರೆ. ಬೈಕ್‌ ಹಿಂದೆ ಕುಳಿತಿದ್ದ ಮತ್ತೊಬ್ಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ರಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದ ವೇಳೆ

ರಸ್ತೆ ಅಪಘಾತ: ಸವಾರ ಮೃತ್ಯು Read More »

ಕ್ರೈಮ್ ನ್ಯೂಸ್

ಬಾಂಬ್ ತಯಾರಿಕಾ ವೇಳೆ ಸ್ಫೋಟ: ಮೂವರು ಮೃತ್ಯು..!

(ನ್ಯೂಸ್ ಕಡಬ) newskadaba.com ಪಶ್ಚಿಮ ಬಂಗಾಳ, . 09. ದೇಶಿ ನಿರ್ಮಿತ ಬಾಂಬ್ ತಯಾರಿಸುವ ವೇಳೆ ಸಂಭವಿಸಿದ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದಾರೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬಾಂಬ್ ಸ್ಫೋಟದ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆಯಲ್ಲಿ ತೊಡಗಿದ್ದಾರೆ. ಪೊಲೀಸರ ಪ್ರಕಾರ, ಮನೆಯೊಂದರಲ್ಲಿ ಅಕ್ರಮವಾಗಿ ದೇಶೀ ನಿರ್ಮಿತ ಬಾಂಬ್‌ಗಳನ್ನು ತಯಾರಿಸಲಾಗುತ್ತಿತ್ತು. ಅದೇ ವೇಳೆ ಬಾಂಬ್ ಸ್ಫೋಟಗೊಂಡು 3 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಾಹಿತಿ ಪ್ರಕಾರ ಜಿಲ್ಲೆಯ ಖೈರ್ತಲಾ ನಿವಾಸಿ ಮಾಮುನ್ ಮುಲ್ಲಾ ಎಂಬುವವರ ಮನೆಯಲ್ಲಿ ಭಾನುವಾರ

ಬಾಂಬ್ ತಯಾರಿಕಾ ವೇಳೆ ಸ್ಫೋಟ: ಮೂವರು ಮೃತ್ಯು..! Read More »

ಕ್ರೈಮ್ ನ್ಯೂಸ್

ವಾಷಿಂಗ್ ಮಿಷಿನ್‌ ಸರ್ವೀಸ್ ಹೆಸರಲ್ಲಿ ಗ್ರಾಹಕರಿಗೆ ವಂಚನೆ: ಮೂವರು ಅರೆಸ್ಟ್

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, . 09. ವಾಷಿಂಗ್ ಮಿಷಿನ್‌ ಕಂಪನಿ ಹೆಸರಲ್ಲಿ ಗ್ರಾಹಕರಿಗೆ ಉಚಿತ ಸೇವೆ ನೀಡುವ ನೆಪದಲ್ಲಿ ವಂಚನೆ ಎಸಗುತ್ತಿದ್ದ ಮೂವರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ. ವಿವೇಕಾನಂದ ಎಂಟರ್‌ಪ್ರೆಸಸ್ ಮಾಲೀಕ ಚರಣ್ ಐಎಫ್‌ಬಿ ವಾಷಿಂಗ್ ಮಿಷನ್ ಅಧಿಕೃತ ಸೇವಾದಾರರಾಗಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಎಫ್‌ಬಿ ವಾಷಿಂಗ್ ಮಿಷನ್ ಕೊಳ್ಳುವ ಯಾವುದೇ ಗ್ರಾಹಕರಿಗೆ ಇವರು ಉಚಿತವಾಗಿ ಮನೆಗೆ ಹೋಗಿ ಸೇವೆಕೊಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಇವರಂತೆ ಕಂಪನಿಯ ಹೆಸರು ಹೇಳಿಕೊಂಡು ಗ್ರಾಹಕರ

ವಾಷಿಂಗ್ ಮಿಷಿನ್‌ ಸರ್ವೀಸ್ ಹೆಸರಲ್ಲಿ ಗ್ರಾಹಕರಿಗೆ ವಂಚನೆ: ಮೂವರು ಅರೆಸ್ಟ್ Read More »

ಕ್ರೈಮ್ ನ್ಯೂಸ್

ಗೇಮಿಂಗ್ ಆ್ಯಪ್‌ನಲ್ಲಿ 3 ಕೋಟಿ ಹಣ ಕಳೆದುಕೊಂಡ ಖಾಸಗಿ ಕಂಪನಿಯ ಉದ್ಯೋಗಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 07. ನಗರದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಗೇಮಿಂಗ್ ಆ್ಯಪ್‌ನಲ್ಲಿ ಕೋಟಿ ಕೋಟಿ ಹಣ ಕಳೆದುಕೊಂಡು, ಆ್ಯಪ್‌ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ನಿಶಾಂತ್ ಶ್ರೀವತ್ಸ ಎಂಬವರು ಆನ್‍ಲೈನ್ ಗೇಮಿಂಗ್ ಆ್ಯಪ್‌ನಲ್ಲಿ 3 ಕೋಟಿ ರೂ. ಹಣ ಕಳೆದುಕೊಂಡಿದ್ದು, ಸೆಂಟ್ರಲ್ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪಾಕೇಟ್ 52 ಆ್ಯಪ್‌ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಆನ್‍ಲೈನ್ ಜೂಜಿನ ಆ್ಯಪ್‌ ಆಗಿರುವ ಪಾಕೇಟ್ 52, ಸಣ್ಣ ಪುಟ್ಟ ಬೆಟ್ಟಿಂಗ್ ಹಾಕಿದಾಗ ಗೆಲ್ಲಲು

ಗೇಮಿಂಗ್ ಆ್ಯಪ್‌ನಲ್ಲಿ 3 ಕೋಟಿ ಹಣ ಕಳೆದುಕೊಂಡ ಖಾಸಗಿ ಕಂಪನಿಯ ಉದ್ಯೋಗಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣು..!

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 07. ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ಬದನಾಜೆಯಲ್ಲಿ ನಡೆದಿದೆ. ಮೃತರನ್ನು ಓಂ ಸಾಯಿ ಇಂಡಸ್ಟ್ರೀಸ್ ನ ಮಾಲಕ ಬದನಾಜೆ ನಿಡ್ಯ ನಿವಾಸಿ ದಾಮೋದರ್ ಪೂಜಾರಿ (60) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.  

ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣು..! Read More »

ಕ್ರೈಮ್ ನ್ಯೂಸ್

ಬಾಣಂತಿಯರು ಹಾಗೂ ಶಿಶುಗಳ ಮರಣ ಪ್ರಕರಣ:  ಆಸ್ಪತ್ರೆ ಮೇಲೆ ಲೋಕಾಯುಕ್ತ ದಾಳಿ

(ನ್ಯೂಸ್ ಕಡಬ) newskadaba.com ಬಳ್ಳಾರಿ, ಡಿ. 07. ಬಳ್ಳಾರಿಯ ಜಿಲ್ಲಾ ಆಸ್ಪತ್ರೆ(ಬಿಮ್ಸ್‌)ಯಲ್ಲಿ ಬಾಣಂತಿಯರು ಹಾಗೂ ಶಿಶುಗಳ ಮರಣ ಪ್ರಕರಣಗಳ ಸಂಬಂಧ ಬಿಮ್ಸ್‌ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ಎಸ್​ಪಿ ಸಿದ್ದರಾಜು ನೇತೃತ್ವದಲ್ಲಿ 25 ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಗಳ ತಂಡ ಬಳ್ಳಾರಿಯ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್​, ಐಸಿಯು, ಔಷಧಿ ದಾಸ್ತಾನು ಉಗ್ರಾಣದಲ್ಲಿ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಬಿಮ್ಸ್​​ ಆಸ್ಪತ್ರೆಯಲ್ಲಿ ಒಂದು ತಿಂಗಳ ಅಂತರದಲ್ಲಿ ಐವರು ಬಾಣಂತಿಯರು ಮೃತಪಟ್ಟಿದ್ದರು. ಈ

ಬಾಣಂತಿಯರು ಹಾಗೂ ಶಿಶುಗಳ ಮರಣ ಪ್ರಕರಣ:  ಆಸ್ಪತ್ರೆ ಮೇಲೆ ಲೋಕಾಯುಕ್ತ ದಾಳಿ Read More »

ಕ್ರೈಮ್ ನ್ಯೂಸ್

ಭಾರತ ಮೂಲದ ವಿದ್ಯಾರ್ಥಿಗೆ ಚಾಕು ಇರಿತ..!

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 07. ಭಾರತ ಮೂಲದ ವಿದ್ಯಾರ್ಥಿಯನ್ನು ಇರಿದು ಹತ್ಯೆಗೈದಿರುವ ಘಟನೆ ಕೆನಡಾದ ಒಂಟಾರಿಯೊದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯ ನಿವಾಸದಲ್ಲೇ ವಾಸವಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಮೃತ ವಿದ್ಯಾರ್ಥಿಯನ್ನು 22 ವರ್ಷದ ಗುರಾಸಿಸ್ ಸಿಂಗ್ ಎಂದು ಗುರುತಿಸಲಾಗಿದೆ. ಲ್ಯಾಂಬ್ಟನ್ ಕಾಲೇಜಿನಲ್ಲಿ ಮೊದಲನೆ ವರ್ಷದ ಬಿಸಿನೆಸ್ ಮ್ಯಾನೇಜ್ ಮೆಂಟ್ ಪದವಿ ವಿದ್ಯಾರ್ಥಿಯಾಗಿದ್ದ ಗುರಾಸಿಸ್ ಸಿಂಗ್ ಅನ್ನು ಆತನ ಕಕೋಣೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದ 36 ವರ್ಷದ ಕ್ರಾಸ್ಲೀ ಹಂಟರ್ ಎಂಬ ವ್ಯಕ್ತಿ ರವಿವಾರ ಚೂರಿಯಿಂದ ಇರಿದಿದ್ದಾನೆ. ಅಡುಗೆ ಕೋಣೆಯಲ್ಲಿ

ಭಾರತ ಮೂಲದ ವಿದ್ಯಾರ್ಥಿಗೆ ಚಾಕು ಇರಿತ..! Read More »

ಕ್ರೈಮ್ ನ್ಯೂಸ್

ಬೈಕ್ ಅಪಘಾತದಲ್ಲಿ ಗಾಯಗೊಡಿದ್ದ ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಡಿ. 07. ಬೈಕ್ ನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮೂಡಬಿದ್ರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಪಡುಮಾರ್ನಾಡು ಗ್ರಾಮದ ಬನ್ನಡ್ಕ  ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಚಿನ್ನದ ಕೆಲಸಗಾರ, ತೋಡಾರು ಗ್ರಾಮದ ಸೀತಾರಾಮ ಆಚಾರ್ಯ (46) ಎಂದು ಗುರುತಿಸಲಾಗಿದೆ. ಮೂಡುಬಿದಿರೆ ಜ್ಯೋತಿನಗರದಲ್ಲಿ ಚಿನ್ನದ ವೃತ್ತಿಗೆ ಸಂಬಂಧಿಸಿದ ವಿಘ್ನೇಶ್ ಮೆಷಿನ್ ಕಟ್ಟಿಂಗ್ ಉದ್ಯಮವನ್ನು ನಡೆಸುತ್ತಿದ್ದು ಜನವರಿ ೩ರಂದು ನಡೆಯಲಿದ್ದ ಅವರ ಪುತ್ರನ ಉಪನಯನದ ಕಾಗದವನ್ನು ವಿತರಿಸಿ ವಾಪಸ್ಸು ಬರುತ್ತಿದ್ದ ವೇಳೆ ಬನ್ನಡ್ಕ ಬಳಿ ಬೈಕ್‌ನಿಂದ ಬಿದ್ದಿದ್ದರು.

ಬೈಕ್ ಅಪಘಾತದಲ್ಲಿ ಗಾಯಗೊಡಿದ್ದ ವ್ಯಕ್ತಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಕಬ್ಬಿಣದ ಗೇಟ್ ಮೈಮೇಲೆ ಉರುಳಿಬಿದ್ದು 6 ವರ್ಷದ ಬಾಲಕ ಮೃತ್ಯು..!

(ನ್ಯೂಸ್ ಕಡಬ) newskadaba.com ಅಂಕೋಲಾ, . 05.  ಮನೆ ಎದುರಿನ ಗೇಟ್ ಹತ್ತಿ ಆಟವಾಡುತ್ತಿದ್ದ ವೇಳೆ ಕಬ್ಬಿಣದ ಗೇಟ್ ಬಿದ್ದು ಮೈಮೇಲೆ ಉರುಳಿಬಿದ್ದ ಪರಿಣಾಮ ಆರು ವರ್ಷದ ಬಾಲಕ ಮೃತಪಟ್ಟ ಘಟನೆ ಅಂಕೋಲಾ ತಾಲೂಕಿನ ಕನಸೆಗದ್ದೆಯಲ್ಲಿ ನಡೆದಿದೆ. ಮೃತಪಟ್ಟ ಬಾಲಕನನ್ನು ಕನಸೆಗದ್ದೆಯ ಜಾವೇದ್ ಶೇಖ್ (6) ಎಂದು ಗುರುತಿಸಲಾಗಿದೆ. ಪಟ್ಟಣದ ಉರ್ದು ಮಾಧ್ಯಮದ ಶಾಲೆಯ ಒಂದನೇ ತರಗತಿಗೆ ವಿದ್ಯಾರ್ಥಿಯಾಗಿದ್ದ ಈತ ಮನೆಯ ಎದುರಿನ ಗೇಟನಲ್ಲಿ ತನ್ನ ಸಹಪಾಠಿಗಳೊಂದಿಗೆ ಆಟವಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ತಕ್ಷಣ ಮಗುವನ್ನು

ಕಬ್ಬಿಣದ ಗೇಟ್ ಮೈಮೇಲೆ ಉರುಳಿಬಿದ್ದು 6 ವರ್ಷದ ಬಾಲಕ ಮೃತ್ಯು..! Read More »

ಕ್ರೈಮ್ ನ್ಯೂಸ್
Scroll to Top