ಕ್ರೈಮ್ ನ್ಯೂಸ್

ಹೃದಯಾಘಾತ- ಕಾವೂರು ಹೆಡ್ ಕಾನ್ಸ್ಟೇಬಲ್ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 15. ಕಾವೂರು ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಕಳೆದ ಎರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಹನುಮಂತ ಲಮಾಣಿ (38) ಅವರು ಗುರುವಾರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರು ತಮ್ಮ ಊರಾದ ಬಾಗಲಕೋಟೆಗೆ ಹೋಗಿದ್ದ ವೇಳೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. 2008 ರ ಬ್ಯಾಚ್ ನಲ್ಲಿ ಸೇವೆಗೆ ಸೇರ್ಪಡೆಗೊಂಡಿದ್ದ ಇವರು ಮೂಲತಃ ಬಾಗಲಕೋಟೆಯ ಲವಲೇಶ್ವರ ಗ್ರಾಮದವರಾಗಿದ್ದು ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. […]

ಹೃದಯಾಘಾತ- ಕಾವೂರು ಹೆಡ್ ಕಾನ್ಸ್ಟೇಬಲ್ ನಿಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಹೆತ್ತ ತಾಯಿಯ ಮನೆಗೆ ಕನ್ನ ಹಾಕಿದ ಪಾಪಿ ಮಗ        ➤ ಆರೋಪಿಯ ಬಂಧನ                                

(ನ್ಯೂಸ್ ಕಡಬ) newskadaba.com   ಹೆತ್ತ ತಾಯಿಯ ಮನೆಗೆ ಕನ್ನ ಹಾಕಿದ ಮಗನನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ. ಆರೋಪಿಯನ್ನು ಗಿರೀಶ್ ಅಲಿಯಾಸ್ ಸುಣ್ಣ ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ನಡೆಸಿದ ಕೃತ್ಯ ನಿಜವೆಂದು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.          

ಹೆತ್ತ ತಾಯಿಯ ಮನೆಗೆ ಕನ್ನ ಹಾಕಿದ ಪಾಪಿ ಮಗ        ➤ ಆರೋಪಿಯ ಬಂಧನ                                 Read More »

ಕರ್ನಾಟಕ, ಕ್ರೈಮ್ ನ್ಯೂಸ್

ರೈಲ್ವೇ ಬ್ರಿಡ್ಜ್  ಬಳಿ ಮಹಿಳೆಯ ಸರ ಕಳ್ಳತನ     ➤ ಪರಾರಿಯಾಗಿದ್ದ ಆರೋಪಿಯ ಬಂಧನ     

(ನ್ಯೂಸ್ ಕಡಬ) newskadaba.com   ವಿಟ್ಲ, ಡಿ.15  ರೈಲ್ವೇ ಬ್ರಿಡ್ಜ್  ಬಳಿ ಮಹಿಳೆಯ ಸರ ಕಿತ್ತು ಪರಾರಿಯಾದ ಘಟನೆಗೆ ಸಂಬಂಧಿಸಿದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿರಾಗಿದ್ದಾರೆಂದು ತಿಳಿದುಬಂದಿದೆ. ಬಂಧಿತ ಆರೋಪಿಯನ್ನು ರಮೇಶ್ ಎಂದು ಗುರುತಿಸಲಾಗಿದೆ. ಮಹಿಳೆಯೊಬ್ಬರು ಪುತ್ತೂರಿನಿಂದ ಬಂದು ಮಿತ್ತೂರಿನಲ್ಲಿ ಬಸ್ಸಿನಿಂದ ಇಳಿದು ಕೋಲ್ಪೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿ ಸರ ಎಳೆದುಕೊಂಡು ಪರಾರಿಯಾಗಿದ್ದ ಎನ್ನಲಾಗಿದೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.      

ರೈಲ್ವೇ ಬ್ರಿಡ್ಜ್  ಬಳಿ ಮಹಿಳೆಯ ಸರ ಕಳ್ಳತನ     ➤ ಪರಾರಿಯಾಗಿದ್ದ ಆರೋಪಿಯ ಬಂಧನ      Read More »

ಕರ್ನಾಟಕ, ಕ್ರೈಮ್ ನ್ಯೂಸ್
crime, arrest, suspected

ಸೆಂಟ್ರಿಂಗ್ ಶೀಟು ಕಳ್ಳತನ ➤ ಆರು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಬಂಗಾರಪೇಟೆ, ಡಿ. 15. ಮನೆಯ ಸೆಂಟ್ರಿಂಗ್ ಶೀಟುಗಳನ್ನು ಕಳವು ಮಾಡುತ್ತಿದ್ದ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಬಂಗಾರಪೇಟೆಯಲ್ಲಿ ನಡೆದಿದೆ.   ಬಂಧಿತರನ್ನು ಮಾಲೂರು ತಾಲ್ಲೂಕಿನ ಚಿಕ್ಕ ಕಡತೂರು ಗ್ರಾಮದ ಶ್ರೀಧರ್, ಸಂತೋಷ್, ಮಂಜುನಾಥ್, ಅವಿನಾಶ್, ಉಮೇಶ್ ಮತ್ತು ಚಿಕ್ಕ ಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಜೇಡರಹಳ್ಳಿಯ ಜೆ.ಎಂ. ಮನೋಜ್ ಎಂದು ಗುರುತಿಸಲಾಗಿದೆ. ಇವರು ಕೋಲಾರ, ಮಾಸ್ತಿ, ಬೇತಮಂಗಲ ವ್ಯಾಪ್ತಿಯಲ್ಲಿ ಶೀಟುಗಳನ್ನು ಕಳವು ಮಾಡಿ ಬೆಂಗಳೂರು ಕಡೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಸೆಂಟ್ರಿಂಗ್ ಶೀಟು ಕಳ್ಳತನ ➤ ಆರು ಮಂದಿಯ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಾಡಾನೆ ದಾಳಿ ➤ ವ್ಯಕ್ತಿ ಗಂಭೀರ

(ನ್ಯೂಸ್ ಕಡಬ) newskadaba.com ಹನೂರು, ಡಿ. 15. ಕಾಡಾನೆ ದಾಳಿಯಿಂದಾಗಿ ವ್ಯಕ್ತಿಯೋರ್ವ ಗಂಭೀರ ಗಾಯಗೊಂಡ ಘಟನೆ ಮಹದೇಶ್ವರಬೆಟ್ಟದಲ್ಲಿ ಸಂಭವಿಸಿದೆ. ಗಾಯಗೊಂಡವರನ್ನು ಪುಟ್ಟಸ್ವಾಮಿ (40) ಎಂದು ಗುರುತಿಸಲಾಗಿದೆ. ಇವರು ಮಹದೇಶ್ವರ ಬೆಟ್ಟದಿಂದ ಕೊಕ್ಕಬೋರೆ ಗ್ರಾಮದಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಏಕಾಏಕಿ ಆನೆ ದಾಳಿ ನಡೆಸಿದ್ದು, ಪರಿಣಾಮ ಕಾಲಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.

ಕಾಡಾನೆ ದಾಳಿ ➤ ವ್ಯಕ್ತಿ ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆಟವಾಡಲು ಟ್ರ್ಯಾಕ್ಟರ್ ಹತ್ತಿದ್ದ ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 15. ರಸ್ತೆ ಕಾಮಗಾರಿ ಸಲುವಾಗಿ ರಸ್ತೆಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ನಲ್ಲಿ ಚಾಲಕ ಕೀ ಬಿಟ್ಟು ಹೋಗಿದ್ದರ ಪರಿಣಾಮ ಆರು ವರ್ಷದ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ಚಿಕ್ಕ ಬೆಳ್ಳಂದೂರಿನಲ್ಲಿ ನಡೆದಿದೆ. ಮೃತಪಟ್ಟ ಬಾಲಕನನ್ನು ಅಮೋಘ್ ಎಂದು ಗುರುತಿಸಲಾಗಿದೆ. ಚಿಕ್ಕ ಬೆಳ್ಳಂದೂರಿನ ಕಾರ್ಮೆಲ್ ರಾಮ್ ಶಾಲೆಯ ಹಿಂಭಾಗದ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಮಳೆಯ ಕಾರಣ ಎರಡು ದಿನಗಳಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಬಾಲಕ ಅಮೋಘ್ ಆಟವಾಡುತ್ತಾ ಟ್ರ್ಯಾಕ್ಟರ್ ಹತ್ತಿ ಚಾಲಕನ ಸೀಟಿನಲ್ಲಿ

ಆಟವಾಡಲು ಟ್ರ್ಯಾಕ್ಟರ್ ಹತ್ತಿದ್ದ ಬಾಲಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ ಸುಟ್ಟ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯ ದೇಹದ ಗುರುತು ಪತ್ತೆ

(ನ್ಯೂಸ್‌ ಕಡಬ) newskadaba.com ಬೆಳ್ತಂಗಡಿ, ಡಿ. 14  ನಡ ಗ್ರಾ.ಪಂ. ವ್ಯಾಪ್ತಿಯ ಸೊರಕೆ ಸಮೀಪ ರಬ್ಬರ್ ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಡಿ.12 ರಂದು ಪತ್ತೆಯಾಗಿತ್ತು, ಆದರೆ ದೇಹದ ಗುರುತು ಪತ್ತೆಯಾಗಿರಲಿಲ್ಲ,  ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞ ವೈದ್ಯರು ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಮೃತದೇಹ ಮಹಿಳೆದ್ದೇ ಎಂದು ತಜ್ಞರು ಖಚಿತ ಪಡಿಸಿದ್ದಾರೆ. ಸುಮಾರು 30ರಿಂದ 40 ವರ್ಷದ ಮಹಿಳೆಯ ಮೃತದೇಹ ಎಂದು ತಿಳಿದು ಬಂದಿದ್ದು, ಶವ ಸಿಕ್ಕ ಸ್ಥಳದಲ್ಲಿ ಕಾಲು ಉಂಗುರ, ಬಳೆಗಳು ಪತ್ತೆಯಾಗಿವೆ. ಮಹಿಳೆಯ ದೇಹ

ಬೆಳ್ತಂಗಡಿ ಸುಟ್ಟ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯ ದೇಹದ ಗುರುತು ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಯಲ್ಲಾಪುರ: ಕಾರುಗಳ ಭೀಕರ ಅಪಘಾತ ➤ಯಕ್ಷಗಾನ ಕಲಾವಿದ ಮೃತ್ಯು

(ನ್ಯೂಸ್‌ ಕಡಬ) newskadaba.com ಯಲ್ಲಾಪುರ , ಡಿ.14 ಅತ್ಯಂತ ವೇಗವಾಗಿ ಬಂದ ಎರಡು ಕಾರುಗಳ ನಡುವೆ ಅಪಘಾತ ನಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ  ಡಿ. 13ರಂದು ನಡೆದಿದೆ. ಈ ಘಟನೆಯಲ್ಲಿ ಖ್ಯಾತ ಯಕ್ಷಗಾನ ಕಲಾವಿದ ತಿಮ್ಮಪ್ಪ ಭಾಗ್ವತ್  ಬಾಳೆಹದ್ದ(65) ತೀವ್ರ ಗಾಯಗೊಂಡಿದ್ದರು ತಕ್ಷಣದಲ್ಲಿ ಅವರನ್ನು ಹತ್ತಿರದ ಶಿರಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಲ್ಲಾಪುರ: ಕಾರುಗಳ ಭೀಕರ ಅಪಘಾತ ➤ಯಕ್ಷಗಾನ ಕಲಾವಿದ ಮೃತ್ಯು Read More »

ಕ್ರೈಮ್ ನ್ಯೂಸ್

ನೇಣು ಬಿಗಿದು ಯುವಕನೋರ್ವ ಮೃತ್ಯು !!!!                           

(ನ್ಯೂಸ್ ಕಡಬ) newskadaba.com  ಕೊಣಾಜೆ, ಡಿ.14  ಯುವಕನೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಸೈಗೋಳಿ ಎಂಬಲ್ಲಿ ಸಂಭವಿಸಿದೆ. ಮೃತ ಯುವಕನನ್ನು ಅಸೈಗೋಳಿ ನಿವಾಸಿ ಅಭಿಲಾಷ್ (36) ಎಂದು ಗುರುತಿಸಲಾಗಿದೆ. ಮನೆ ಮಂದಿ ಸಂಬಂಧಿಕರ ಮದುವೆ ಸಮಾರಂಭಕ್ಕೆ ತೆರಳಿದ್ದರು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಮನೆಯೊಳಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದುಬಂದಿದೆ. ಈ ಕುರಿತು ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.          

ನೇಣು ಬಿಗಿದು ಯುವಕನೋರ್ವ ಮೃತ್ಯು !!!!                            Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪಾದಚಾರಿಗೆ ಟಿಪ್ಪರ್ ಢಿಕ್ಕಿ ➤ ಆಲಂಕಾರು ನಿವಾಸಿ ಮೃತ್ಯು

(ನ್ಯೂಸ್ ಕಡಬ) newskadaba.com ಪೆರ್ಡೂರು, ಡಿ. 14. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ದರೋರ್ವರಿಗೆ ಟಿಪ್ಪರ್ ಢಿಕ್ಕಿ ಹೊಡೆದು, ವೃದ್ದ ಸ್ಥಳದಲ್ಲೇ ಮೃತಪಟ್ಟ ಘಟನೆ ಪೆರ್ಡೂರಿನಲ್ಲಿ ನಡೆದಿದೆ. ಮೃತರನ್ನು ಆಲಂಕಾರು ನಿವಾಸಿ ಮಂಜಯ್ಯ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಪೆರ್ಡೂರಿನಿಂದ ಬರುತ್ತಿದ್ದ ಟಿಪ್ಪರ್ ಢಿಕ್ಕಿ ಹೊಡೆದಿದ್ದು, ಪರಿಣಾಮ ರಸ್ತೆಗೆಸೆಯಲ್ಪಟ್ಟ ಮಂಜಯ್ಯ ಶೆಟ್ಟಿ ಅವರ ತಲೆಯ ಮೇಲೆ ಟಿಪ್ಪರ್ ನ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಪಘಾತದ ಬಳಿಕ ಚಾಲಕ

ಪಾದಚಾರಿಗೆ ಟಿಪ್ಪರ್ ಢಿಕ್ಕಿ ➤ ಆಲಂಕಾರು ನಿವಾಸಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top