ಕ್ರೈಮ್ ನ್ಯೂಸ್

ಹೈಕೋರ್ಟ್ ವಕೀಲ ಅಬ್ದುಲ್ ಫಾರೂಕ್ ಹೃದಯಾಘಾತದಿಂದ ಮೃತ್ಯು                    

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 16. ಹೈಕೋರ್ಟ್ ವಕೀಲ ಹಾಗೂ ಮೂಲತಃ ಮೂಡಬಿದಿರೆ ನಿವಾಸಿ ಅಬ್ದುಲ್ ಫಾರೂಕ್(49) ಹೃದಯಾಘಾತದಿಂದ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅಬ್ದುಲ್ ನಝೀರ್ ಅವರ ಕಿರಿಯ ಸಹೋದರ ಆಗಿರುವ ಅಬ್ದುಲ್ ಫಾರೂಕ್ ಅವರ ಮೃತದೇಹ ಬೆಳುವಾಯಿಗೆ ತರಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಸ್ವಲ್ಪ ಸಮಯ ಮಂಗಳೂರು ಪಾಂಡೇಶ್ವರದಲ್ಲಿ ವಾಸವಾಗಿದ್ದ ಅವರು ಈಗ ಹೈಕೋರ್ಟ್ ವಕೀಲರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು ಎನ್ನಲಾಗಿದೆ.  

ಹೈಕೋರ್ಟ್ ವಕೀಲ ಅಬ್ದುಲ್ ಫಾರೂಕ್ ಹೃದಯಾಘಾತದಿಂದ ಮೃತ್ಯು                     Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಜೇಶ್ವರ ದ-ಅವಾ ಕಾಲೇಜು ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು ➤ ತಮಿಳುನಾಡಿನಲ್ಲಿ ದುರ್ಘಟನೆ

(ನ್ಯೂಸ್ ಕಡಬ) newskadaba.com ಉಪ್ಪಳ, ಡಿ. 15. ಮುತ್ತುಪೇಟೆಯಲ್ಲಿ ಸ್ನಾನಕ್ಕೆಂದು ನೀರಿಗಿಳಿದ ವೇಳೆ ಆಕಸ್ಮಿಕವಾಗಿ ಮುಳುಗಿ ಮಳ್ ಹರ್ ದಅವಾ ಕಾಲೇಜು ವಿದ್ಯಾರ್ಥಿ ಮೃತಪಟ್ಟ ಘಟನೆ ತಮಿಳುನಾಡಿನಲ್ಲಿ ನಡೆದಿದೆ.   ಮೃತ ವಿದ್ಯಾರ್ಥಿಯನ್ನು ಉಪ್ಪಳ ಪೈವಳಿಕೆ ನಿವಾಸಿ ಅನ್ಸಾಫ್ ಎಂದು ಗುರುತಿಸಲಾಗಿದೆ. ಮಂಜೇಶ್ವರದ ಮಳ್ ಹರ್ ದಅವಾ ಕಾಲೇಜಿನಲ್ಲಿ ಓದುತ್ತಿದ್ದ ಅನ್ಸಾಫ್ ಗೆಳೆಯರ ಜೊತೆ ಮುತ್ತುಪೇಟೆ ಝಿಯಾರತ್ ಗೆ ತೆರಳಿದ್ದು, ಝಿಯಾರತ್ ಬಳಿಕ ಸ್ನಾನಕ್ಕೆಂದು ನದಿಗಿಳಿದು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅನ್ಸಾಫ್ ನಿಧನಕ್ಕೆ ಮಳ್ ಹರ್

ಮಂಜೇಶ್ವರ ದ-ಅವಾ ಕಾಲೇಜು ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು ➤ ತಮಿಳುನಾಡಿನಲ್ಲಿ ದುರ್ಘಟನೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಕಾರು, ಲಾರಿ ಹಾಗೂ ಬೈಕ್ ನಡುವೆ ಸರಣಿ ಅಪಘಾತ ➤ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಅರಂತೋಡು, ಡಿ. 15. ಲಾರಿ, ಕಾರು ಹಾಗು ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರರು ಗಾಯಗೊಂಡ ಘಟನೆ ಸುಳ್ಳ-ಮೆಡಿಕೇರಿ ರಾಜ್ಯ ಹೆದ್ದಾರಿಯ ಪಾಲಡ್ಕ ಎಂಬಲ್ಲಿ ನಡೆದಿದೆ. ಗಾಯಗೊಂಡ ಬೈಕ್ ಸವಾರರನ್ನು  ಪೆರಾಜೆ ಗ್ರಾಮದ ದೊಡ್ಡಡ್ಕ ದೀನರಾಜ್ ಹಾಗೂ ಕಂಜಿಪಿಲಿ ಪುರುಷೋತ್ತಮ ಎಂದು ಗುರುತಿಸಲಾಗಿದೆ. ಇನ್ನೊಂದೆಡೆ ಕಾರು, ಲಾರಿ ನಡುವೆ ಢಿಕ್ಕಿ ಸಂಭವಿಸಿದ್ದು, ಗಾಯಾಳುವನ್ನು ಸುಳ್ಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಬೈಕ್ ನ್ನು ಒವರ್ ಟೇಕ್ ಮಾಡಿ ಮುನ್ನುಗುತ್ತಿದ್ದ

ಸುಳ್ಯ: ಕಾರು, ಲಾರಿ ಹಾಗೂ ಬೈಕ್ ನಡುವೆ ಸರಣಿ ಅಪಘಾತ ➤ ಸವಾರ ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Crime

ಮಾಜಿ ನಗರಸಭೆ ಅಧ್ಯಕ್ಷೆಯ ಪತಿಗೆ ಹಲ್ಲೆ ➤ ಆರೋಪಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 15. ನಗರಸಭೆ ಮಾಜಿ ಅಧ್ಯಕ್ಷೆ ಶಾಂತಾ ನಾಯ್ಕ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿಯೋರ್ವ ಅವರ ಪತಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಗುರುವಾರದಂದು ಬೆಳಗ್ಗೆ ಇಂದ್ರಾಳಿ ಸಮೀಪ ನಡೆದಿದೆ. ಹಲ್ಲೆಗೊಳಗಾದವರನ್ನು ಕೃಷ್ಣನಾಯ್ಕ್ ಎಂದು ಗುರುತಿಸಲಾಗಿದೆ. ಆರೋಪಿ ಅರ್ಜುನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಅರ್ಜುನ್ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ. ಈ ಕುರಿತು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಜಿ ನಗರಸಭೆ ಅಧ್ಯಕ್ಷೆಯ ಪತಿಗೆ ಹಲ್ಲೆ ➤ ಆರೋಪಿ ಪೊಲೀಸ್ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಹಾಸ್ಟೇಲ್ ಟಾಯ್ಲೇಟ್ ನಲ್ಲಿ ಚಾಕುವಿನಿಂದ ಚುಚ್ಚಿ ಯುವಕ ಆತ್ಮಹತ್ಯೆ  

(ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ. 15. ಕತ್ತು ಕೊಯ್ದುಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆಯಾಗಿರುವ ಘಟನೆ ಕಾಲೇಜಿನ ಹಾಸ್ಟೇಲ್ ಒಳಭಾಗದಲ್ಲಿ ಸಂಭವಿಸಿದೆ. ಮೃತ ಯುವಕನನ್ನು ನಿತಿನ್ ( 19 ) ಎಂದು ಗುರುತಿಸಲಾಗಿದೆ. ಮೃತ ವಿದ್ಯಾರ್ಥಿಯು ಬನ್ನೇರುಘಟ್ಟ ಸಮೀಪ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೆರಳ ಮೂಲದ ವಿದ್ಯಾರ್ಥಿಯಾಗಿದ್ದಾನೆಂದು ತಿಳಿದುಬಂದಿದೆ. ಕಾಲೇಜಿನ ಶೌಚಾಲಯದಲ್ಲಿ ಚಾಕುವಿನಿಂದ ತಾನೆ ಚುಚ್ಚಿಕೊಂಡು ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ.      

ಹಾಸ್ಟೇಲ್ ಟಾಯ್ಲೇಟ್ ನಲ್ಲಿ ಚಾಕುವಿನಿಂದ ಚುಚ್ಚಿ ಯುವಕ ಆತ್ಮಹತ್ಯೆ   Read More »

ಕರ್ನಾಟಕ, ಕ್ರೈಮ್ ನ್ಯೂಸ್

ಚಂದ್ರು ಸಾವಿನ ಪ್ರಕರಣ ➤ ತನಿಖೆ ಕೈಗೆತ್ತಿಕೊಂಡ ಸಿಐಡಿ

(ನ್ಯೂಸ್‌ ಕಡಬ) newskadaba.com ಬೆಂಗಳೂರು, ಡಿ. 15. ಹೊನ್ನಾಳಿ ಶಾಸಕ ರೇಣುಕಾಚಾರ‍್ಯ ಸೋದರನ ಪುತ್ರ ಚಂದ್ರಶೇಖರ್ ಸಾವಿನ ಪ್ರಕರಣ ಸಿಐಡಿಗೆ ಒಪ್ಪಿಸಲಾಗಿದ್ದು, ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ತಂಡ ಶಾಸಕ ರೇಣುಕಾಚಾರ‍್ಯ ಅವರ ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳ ತಂಡ ಚಂದ್ರಶೇಖರ್ ಕೊನೆಯ ಬಾರಿ ಯಾರನ್ನು ಭೇಟಿಯಾಗಿದ್ದ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಬುಧವಾರ ರೇಣುಕಾಚರ‍್ಯ ಕುಟುಂಬಸ್ಥರ ವಿಚಾರಣೆ ಮಾಡಿದ ಸಿಐಡಿ ತಂಡ ಹಲವು ವಿಷಯಗಳ ಬಗ್ಗೆ ಮಾಹಿತಿ

ಚಂದ್ರು ಸಾವಿನ ಪ್ರಕರಣ ➤ ತನಿಖೆ ಕೈಗೆತ್ತಿಕೊಂಡ ಸಿಐಡಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಭಟ್ಕಳ : ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ  ➤ ಇಬ್ಬರು ಯುವಕರು ಮೃತ್ಯು          

(ನ್ಯೂಸ್ ಕಡಬ) newskadaba.com  ಭಟ್ಕಳ, ಡಿ. 15. ಬೈಕ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಬೈಕ್ ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾ.ಹೆ.66 ರ ಮೂಡ್ ಭಟ್ಕಳ ಬೈಪಾಸ್ ಬಳಿ ಸಂಭವಿಸಿದೆ. ಮೃತಪಟ್ಟವರನ್ನು ತಲಾಂದಸಬ್ಬತ್ತಿ ನಿವಾಸಿ ಶೇಖರ್ ಸುಬ್ರಮಣ್ಯ ನಾಯ್ಕ (25) ಹಾಗೂ ಮಂಜುನಾಥ್ ನಾಯ್ಕ್ (30) ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಯುವಕರಿಬ್ಬರು ನಗರದ ಹೋಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಊಟ ಮುಗಿಸಿ ಹೋಟೆಲ್ ನಲ್ಲಿ ವಿಶ್ರಾಂತಿಗೆ ಹೋಗುತ್ತಿದ್ದ ವೇಳೆ

ಭಟ್ಕಳ : ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ  ➤ ಇಬ್ಬರು ಯುವಕರು ಮೃತ್ಯು           Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Crime

ಪ್ರೀತಿ ವಿಚಾರಕ್ಕೆ ಜಗಳ- ಚೂರಿ ಇರಿತ

(ನ್ಯೂಸ್ ಕಡಬ) newskadaba.com ಕಲಬುರ್ಗಿ, ಡಿ. 15. ಪ್ರೀತಿ ಪ್ರೇಮದ ವಿಚಾರಕ್ಕೆ ನರ್ಸಿಂಗ್ ವಿದ್ಯಾರ್ಥಿಗೆ ಚಾಕು ಇರಿದಿರುವ ಘಟನೆ ನಗರದ ನೂರ್ ಬಾಗ್ ಕಾಲೋನಿಯಲ್ಲಿ ನಡೆದಿದೆ. ಚಾಕು ಇರಿತಕ್ಕೆ ಒಳಗಾದ ವಿದ್ಯಾರ್ಥಿಯನ್ನು ಮಹಮ್ಮದ್ ಎಹ್ತೇಶಾಮ್ (19) ದು ಗುರುತಿಸಲಾಗಿದೆ. ಈತ ಕಲಬುರಗಿ ಖಾಸಗಿ ಕಾಲೇಜಿನಲ್ಲಿ ನರ್ಸಿಂಗ್ ಪ್ರಥಮ ವರ್ಷ ಓದುತ್ತಿದ್ದು, ತನ್ನ ಸಹಪಾಠಿಯ ಜೊತೆ ಪ್ರೇಮದಲ್ಲಿ ಬಿದ್ದಿದ್ದ. ಈ ವಿಚಾರಕ್ಕೆ ಮುಜಾಮಿಲ್ ಹಾಗೂ ಎಹೆತೇಶಾಮ್ ನಡುವೆ ಜಗಳ ನಡೆದಿದ್ದು, ಬಳಿಕ ಅದು ವಿಕೋಪಕ್ಕೆ ತಿರುಗಿ ಎಹ್ತೇಶಾಮ್ ಗೆ

ಪ್ರೀತಿ ವಿಚಾರಕ್ಕೆ ಜಗಳ- ಚೂರಿ ಇರಿತ Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಿದ್ಯುತ್ ತಂತಿ ತಗುಲಿ ರೈತ ಮೃತ್ಯು  ➤ ಸಾರ್ವಜನಿಕರಿಂದ ಆಕ್ರೋಶ  

(ನ್ಯೂಸ್ ಕಡಬ) newskadaba.com  ಹೊಸಪೇಟೆ, ಡಿ. 15. ಹೊಲದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹೊಸಪೇಟೆಯಲ್ಲಿ ಸಂಭವಿಸಿದೆ. ಮೃತರನ್ನು ಮೂಲಿಮನಿ ಯರಿಸ್ವಾಮಿ (21)  ಎಂದು ಗುರುತಿಸಲಾಗಿದೆ. ಎಂದಿನಂತೆ ಹೊಲಕ್ಕೆ ತೆರಳಿದಾಗ ಹರಿದು ಬಿದ್ದ ವಿದ್ಯುತ್ ತಂತಿಯನ್ನು ತುಳಿದು ಪರಿಣಾಮ ಈ ಅವಘಡ ಸಂಭವಿಸಿದೆ.  ಜೆಸ್ಕಾಂ ಇಲಾಖೆಯ ನಿರ್ಲಕ್ಷಕ್ಕೆ ರೈತನೋರ್ವ ಪ್ರಾಣ ಕಳೆದುಕೊಳ್ಳುವಂತಾಯಿತು ಎಂದು ಆಕ್ರೋಶ  ವ್ಯಕ್ತಪಡಿಸಿದರು.    

ವಿದ್ಯುತ್ ತಂತಿ ತಗುಲಿ ರೈತ ಮೃತ್ಯು  ➤ ಸಾರ್ವಜನಿಕರಿಂದ ಆಕ್ರೋಶ   Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಸ್ಕೂಟರ್ ಹಾಗೂ ಲಾರಿ ನಡುವೆ ಢಿಕ್ಕಿ ➤ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 15. ಸ್ಕೂಟರ್‌ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಪರ್ಲಡ್ಕ ಜಂಕ್ಷನ್ ನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಗಾಯಗೊಂಡ ಸ್ಕೂಟರಗ ಸವಾರನನ್ನು ಕಾಂತಪ್ಪ ಮೂಲ್ಯ ಎಂದು ಗುರುತಿಸಲಾಗಿದೆ. ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ಮತ್ತು ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಸ್ಕೂಟರ್ ನಡುವೆ ಪರ್ಲಡ್ಕ ಬೈಪಾಸ್ ಜಂಕ್ಷನ್ ನಲ್ಲಿ ಡಿಕ್ಕಿ ಸಂಭವಿಸಿದ್ದು, ಪರಿಣಾಮ

ಪುತ್ತೂರು: ಸ್ಕೂಟರ್ ಹಾಗೂ ಲಾರಿ ನಡುವೆ ಢಿಕ್ಕಿ ➤ ಸವಾರನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top