ಕ್ರೈಮ್ ನ್ಯೂಸ್

ಭೀಕರ ಅಪಘಾತ: ಕುಂಭ ಮೇಳದಿಂದ ಹಿಂದಿರುಗುತ್ತಿದ್ದ ಬೆಳಗಾವಿಯ ನಾಲ್ವರು ಸೇರಿ ಆರು ಜನ ಸಾವು

(ನ್ಯೂಸ್ ಕಡಬ) newskadaba.com , ಫೆ.07. ಇಂದೋರ್: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ದ್ವಿಚಕ್ರ ವಾಹನ, ಖಾಸಗಿ ಮಿನಿ ಬಸ್ ಮತ್ತು ಟ್ರೇಲರ್ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಳಗಾವಿ ನಾಲ್ವರು ಸೇರಿದಂತೆ ಆರು ಜನ ಸಾವನ್ನಪ್ಪಿದ್ದಾರೆ ಮತ್ತು 16 ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮ್ಹೌ ತಹಸಿಲ್‌ನ ಮಾನ್ಪುರ್ ಪ್ರದೇಶದಲ್ಲಿ ಬೈಕ್ ಮತ್ತು ಮಿನಿ ಬಸ್ ಇಳಿಜಾರಿನಲ್ಲಿ ಚಲಿಸುತ್ತಿದ್ದ ಟ್ರೇಲರ್ ಟ್ರಕ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. […]

ಭೀಕರ ಅಪಘಾತ: ಕುಂಭ ಮೇಳದಿಂದ ಹಿಂದಿರುಗುತ್ತಿದ್ದ ಬೆಳಗಾವಿಯ ನಾಲ್ವರು ಸೇರಿ ಆರು ಜನ ಸಾವು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ದೂಪದ ಮರ – ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಫೆ.03. ಚಲಿಸುತ್ತಿದ್ದ ಬೈಕ್ ಮೇಲೆ ದೂಪದ (ಹಾಲು ಮಡ್ಡಿ) ಮರ ಬಿದ್ದು ಬೈಕ್‌ ಸವಾರ ಗಾಯಗೊಂಡ ಘಟನೆ ಕಡಬ – ಪಂಜ ರಸ್ತೆಯ ಪುಳಿಕುಕ್ಕು ಸಮೀಪ ಮಂಗಳವಾರ ಸಂಜೆ ನಡೆದಿದೆ. ಕಳೆದ ಕೆಲವು ತಿಂಗಳ ಹಿಂದಷ್ಟೇ ಇದೇ ಪರಿಸರದಲ್ಲಿ ದೂಪದ ಮರವೊಂದು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ಸಂಭವಿಸಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಕಡಬ: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ದೂಪದ ಮರ – ಸವಾರ ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ಆಡುಗಳನ್ನು ಕಳವುಗೈದು ಕೊಂದು ಆಂಬ್ಯುಲೆನ್ಸ್ ನಲ್ಲಿ ಸಾಗಾಟಕ್ಕೆ ಯತ್ನ

(ನ್ಯೂಸ್ ಕಡಬ) newskadaba.com ಕಡಬ, ಜ.28. ಖಾಸಗಿ ಗುಡ್ಡದಲ್ಲಿ ಮೇಯಲು ಬಿಟ್ಟಿದ್ದ ಎರಡು ಆಡುಗಳನ್ನು ಕೊಂದು ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ ಕಳ್ಳರು ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಘಟನೆ ಸೋಮವಾರ ರಾತ್ರಿ ಕಡಬ ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದ ಕೊಡೆಂಕೀರಿ ಎಂಬಲ್ಲಿ ನಡೆದಿದೆ. ಸೋಮವಾರ ರಾತ್ರಿ ವೇಳೆ ಕೊಡೆಂಕೀರಿ ನಿವಾಸಿ ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಆಡುಗಳನ್ನು ಕದಿಯುವ ಉದ್ದೇಶದಿಂದ ಬೈಕಿನಲ್ಲಿ ಬಂದ‌ ನಾಲ್ವರು ಆರೋಪಿಗಳು ಗುಡ್ಡೆಯಲ್ಲಿ ಕೊಂದು ಆ ಬಳಿಕ ಆಂಬ್ಯುಲೆನ್ಸ್ ವಾಹನದಲ್ಲಿ ಸಾಗಾಟಕ್ಕೆ ತಯಾರಿ ನಡೆಸುತ್ತಿದ್ದ

ಕಡಬ: ಆಡುಗಳನ್ನು ಕಳವುಗೈದು ಕೊಂದು ಆಂಬ್ಯುಲೆನ್ಸ್ ನಲ್ಲಿ ಸಾಗಾಟಕ್ಕೆ ಯತ್ನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪತ್ನಿಯ ಶವವನ್ನು ಕತ್ತರಿಸಿ ಪ್ರೆಶರ್ ಕುಕ್ಕರ್‌ನಲ್ಲಿ ಅಡುಗೆ ಮಾಡಿದ ಪತಿ

(ನ್ಯೂಸ್ ಕಡಬ) newskadaba.com ಜ.23  ಹೈದರಬಾದ್: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು, ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ಪ್ರೆಶರ್ ಕುಕ್ಕರ್ನಲ್ಲಿ ಕುದಿಸಿ ಅಪರಾಧವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. 45 ವರ್ಷದ ಗುರು ಮೂರ್ತಿ ಎಂಬ ವ್ಯಕ್ತಿ, ತನ್ನ ಪತ್ನಿ ನಾಪತ್ತೆಯಾದ ನಂತರ ಪೊಲೀಸ್ ತನಿಖೆಯ ಸಮಯದಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾನೆ. ಆರೋಪಗಳನ್ನು ಪರಿಶೀಲಿಸಲಾಗುತ್ತಿದೆ. 35 ವರ್ಷದ ವೆಂಕಟ ಮಾಧವಿ ನಾಪತ್ತೆಯಾಗಿದ್ದಾರೆ ಎಂದು ಕುಟುಂಬವು ಜನವರಿ 16ರಂದು ವರದಿ ಮಾಡಿತ್ತು. ಪೊಲೀಸರು ತನಿಖೆ ಆರಂಭಿಸಿದಾಗ, ಅವರಿಗೆ ಗಂಡನ

ಪತ್ನಿಯ ಶವವನ್ನು ಕತ್ತರಿಸಿ ಪ್ರೆಶರ್ ಕುಕ್ಕರ್‌ನಲ್ಲಿ ಅಡುಗೆ ಮಾಡಿದ ಪತಿ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಿಹಾರ : ನಕಲಿ ಮದ್ಯ ಸೇವಿಸಿ 7 ಮಂದಿ ಸಾವು

(ನ್ಯೂಸ್ ಕಡಬ) newskadaba.com ಜ.20: ನಕಲಿ ಮದ್ಯ ಸೇವಿಸಿದ ಶಂಕೆಯ ಮೇಲೆ ಏಳು ಜನರು ಸಾವನ್ನಪ್ಪಿರುವ ಘಟನೆ ಬಿಹಾರದ ಪಶ್ಚಿಮ ಚಂಪಾರಣ್‌ ಜಿಲ್ಲೆಯಲ್ಲಿ ವರದಿಯಾಗಿದೆ. ನಾಲ್ಕು ದಿನಗಳ ಏಳು ಜನರ ಮೃತಪಟ್ಟಿದ್ದು ಈಗಾಗಲೇ ಅವರ ಶವ ಸಂಸ್ಕಾರ ಮಾಡಲಾಗಿದೆ. ಲೌರಿಯಾ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿವೆ ಎಂದು ಪೊಲೀಸ್‌‍ ವರಿಷ್ಠಾಧಿಕಾರಿ ಶೌರ್ಯ ಸುಮನ್‌ ಹೇಳಿದ್ದಾರೆ. ಸ್ಥಳೀಯರು ನಕಲಿ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದರು, ಆದರೆ ಕನಿಷ್ಠ ಎರಡು ಸಾವುಗಳಿಗೆ ಕಾರಣ ಕಳ್ಳಬಟ್ಟಿ ಅಲ್ಲ

ಬಿಹಾರ : ನಕಲಿ ಮದ್ಯ ಸೇವಿಸಿ 7 ಮಂದಿ ಸಾವು Read More »

ಕ್ರೈಮ್ ನ್ಯೂಸ್

ಬೆಂಗಳೂರು: KSRTC ಬಸ್ ಚಕ್ರದಡಿ ಸಿಲುಕಿ ಇಬ್ಬರ ದುರ್ಮರಣ

(ನ್ಯೂಸ್ ಕಡಬ) newskadaba.com ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್ ಚಕ್ರಕ್ಕೆ ಸಿಲುಕಿ ಮಗು ಸೇರಿ ಇಬ್ಬರು ಸಾವನ್ನಪ್ಪಿರುವ ದುರ್ಘಟನೆಯೊಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಪಸಿಹಳ್ಳಿ ಬಳಿ ಗುರುವಾರ ನಡೆದಿದೆ. ಮೃತರನ್ನು ವೆಂಕಟೇಶ್​ ಮೂರ್ತಿ (28 ) ಮತ್ತು ಮೋಕ್ಷಿತಾ (8) ಎಂದು ಗುರ್ತಿಸಲಾಗಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆ ಹಾಗೂ ಇಬ್ಬರು ಮಕ್ಕಳೊಂದಿಗೆ ವೆಂಕಟೇಶ್ ಅವರು ದೊಡ್ಡಹಳ್ಳಾಪುರಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ

ಬೆಂಗಳೂರು: KSRTC ಬಸ್ ಚಕ್ರದಡಿ ಸಿಲುಕಿ ಇಬ್ಬರ ದುರ್ಮರಣ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ಬೈಕ್ ಅಪಘಾತ – ಶಾಲಾ ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜ.17. ಸವಾರನ ನಿಯಂತ್ರಣ ತಪ್ಪಿದ ಬೈಕೊಂದು ಮೋರಿಗೆ ಢಿಕ್ಕಿ ಹೊಡೆದ ಪರಿಣಾಮ ಶಾಲಾ ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಬೆಳಿಗ್ಗೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೇರಡ್ಕ ಸಮೀಪ ನಡೆದಿದೆ. ಮೃತ ಬಾಲಕನನ್ನು ಪೇರಡ್ಕದ ಖಾಸಗಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ, ನೂಜಿಬಾಳ್ತಿಲ ಗ್ರಾಮದ ಹೊಸಮನೆ ಕಾನ ನಿವಾಸಿ ವಿಶ್ವನಾಥ್ ಎಂಬವರ ಪುತ್ರ ಆಶಿಶ್(16) ಎಂದು ಗುರುತಿಸಲಾಗಿದೆ. ಮನೆಯಿಂದ ಶಾಲೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಬಾಲಕನನ್ನು

ಕಡಬ: ಬೈಕ್ ಅಪಘಾತ – ಶಾಲಾ ವಿದ್ಯಾರ್ಥಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

6 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆ- ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ಜ.14 ಬೆಂಗಳೂರು: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಹತ್ಯೆ ಮಾಡಿರುವ ಪೈಶಾಚಿಕ ಕೃತ್ಯ ಬೆಂಗಳೂರಿನ ರಾಮಮೂರ್ತಿ ನಗರದ ಹೊಯ್ಸಳ ನಗರದಲ್ಲಿ ನಡೆದಿದೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಹಾರ ಮೂಲದ ಅಭಿಷೇಕ್ ಕುಮಾರ್ (25) ಅತ್ಯಾಚಾರ ಎಸಗಿದ ಆರೋಪಿ. ಸೋಮವಾರ ರಾತ್ರಿ 7.30ರ ಸುಮಾರಿಗೆ ಸುಮಾರಿಗೆ ಘಟನೆ ನಡೆದಿದೆ. ಸೋಮವಾರ ಬಾಲಕಿಯ ಪೋಷಕರು ಗಾರೆ ಕೆಲಸಕ್ಕೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಯಾರು ಇರಲಿಲ್ಲ. ಈ ವೇಳೆ ಮನೆಗೆ ಬಂದ ಅಭಿಷೇಕ್​ ಬಾಲಕಿಯನ್ನು

6 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆ- ಆರೋಪಿ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿ..!

(ನ್ಯೂಸ್ ಕಡಬ) newskadaba.com ಡಿ. 19. ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಟ್ರಾವೆಲ್ ವಾಹನವೊಂದು ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ಹೆದ್ದಾರಿಯ ಫರಂಗಿಪೇಟೆ ಎಂಬಲ್ಲಿ ಪಲ್ಟಿಯಾದ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿರುವ ಟಿ.ಟಿ.ವಾಹನ ಬೆಳಿಗ್ಗೆ 6:30ರ ಸುಮಾರಿಗೆ ಫರಂಗಿಪೇಟೆ ಜಂಕ್ಷನ್ ನಲ್ಲಿ ಡಿವೈಡರ್ ಮೇಲೆ ಏರಿ ಬಳಿಕ ಹೆದ್ದಾರಿಗೆ ಪಲ್ಟಿಯಾಗಿದೆ. ಟಿ.ಟಿ.ಯಲ್ಲಿ ಸುಮಾರು 10 ಮಂದಿ ಪ್ರಯಾಣಿಕರಿದ್ದು, ಯಾವುದೇ ಪ್ರಾಣಾಯಾವಿಲ್ಲದೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬೆಳಗ್ಗಿನ ಹೊತ್ತು ಚಾಲಕ ನಿದ್ಧೆ ಮಂಪರಿನಲ್ಲಿ ನಿಯಂತ್ರಣ ಕಳೆದು ಡಿವೈಡರ್

ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿ..! Read More »

ಕರಾವಳಿ, ಕ್ರೈಮ್ ನ್ಯೂಸ್

4 ವಿದ್ಯಾರ್ಥಿನಿಯರು ಮೃತಪಟ್ಟ ಪ್ರಕರಣ- 7 ಮಂದಿ ಶಿಕ್ಷಕರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಡಿ. 12. ಮುರುಡೇಶ್ವರ ಸಮುದ್ರ ತೀರದಲ್ಲಿ ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿನಿಯರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕಿ ಸೇರಿ ಒಟ್ಟು 7 ಶಿಕ್ಷಕರನ್ನು ಪೊಲೀಸರು ವಶಕ್ಕೆ ಪಡೆದಿರುವ ಕುರಿತು ವರದಿಯಾಗಿದೆ. ಕೋಲಾರದಿಂದ ಮುರುಡೇಶ್ವರಕ್ಕೆ ಪ್ರವಾಸ ತೆರಳಿದ್ದವರ ಪೈಕಿ ನಾಲ್ಕು ಜನ ವಿದ್ಯಾರ್ಥಿನಿಯರು ನೀರು ಪಾಲಾದ ಬಳಿಕ ಉತ್ತರ ಕನ್ನಡ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಒಂದೆಡೆ ಮುರುಡೇಶ್ವರ ಬೀಚ್ ನಲ್ಲಿ ನಿರ್ಬಂಧ ಹೇರಲಾಗಿದ್ದು, ಇನ್ನೊಂದೆಡೆ ಮುಖ್ಯ ಶಿಕ್ಷಕಿ ಸಹಿತ ಒಟ್ಟು 7 ಶಿಕ್ಷಕರನ್ನು ಪೊಲೀಸರು

4 ವಿದ್ಯಾರ್ಥಿನಿಯರು ಮೃತಪಟ್ಟ ಪ್ರಕರಣ- 7 ಮಂದಿ ಶಿಕ್ಷಕರು ಪೊಲೀಸ್ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top