ಕ್ರೈಮ್ ನ್ಯೂಸ್

ಕುಡುಕ ತಂದೆಯ ಹುಚ್ಚಾಟಕ್ಕೆ ಆಸ್ಪತ್ರೆ ಸೇರಿದ ಮಗ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 22. ಕುಡುಕ ತಂದೆಯ ಹುಚ್ಚಾಟಕ್ಕೆ ಮಗನೋರ್ವ ಆಸ್ಪತ್ರೆ ಸೇರಿದ ಘಟನೆ ನಗರದ ಮಹದೇವಪುರದ ರಂಗನಾಥ ಲೇಔಟ್ ನಲ್ಲಿ ಸಂಭವಿಸಿದೆ. ಆರೋಪಿಯನ್ನು ವೆಂಕಟರಾಮ ರೆಡ್ಡಿ ಎಂದು ಗುರುತಿಸಲಾಗಿದೆ. ಆರೋಪಿಯು ಹಣಕ್ಕಾಗಿ ಪದೇ ಪದೇ ಮಗನನ್ನು ಪೀಡಿಸುತ್ತಿದ್ದು, ಮಗ ಹಣ ಕೊಡಲು ನಿರಾಕರಿದ್ದಾನೆ  ಇದರಿಂದ ಕೋಪಗೊಂಡ ತಂದೆ ಮಗನ ತಲೆಗೆ ಮಚ್ಚಿನಿಂದ ಹೊಡೆದು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಡುಕ ತಂದೆಯ ಹುಚ್ಚಾಟಕ್ಕೆ ಆಸ್ಪತ್ರೆ ಸೇರಿದ ಮಗ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಕಾಡಾನೆ ಹಾವಳಿ ➤ ಅಪಾರ ಕೃಷಿ ನಾಶ- ಕೃಷಿಕರು ಹೈರಾಣು

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 22. ಇಲ್ಲಿನ ಗಡಿಪ್ರದೇಶವಾದ ಮಂಡೆಕೋಲು ಗ್ರಾಮದ ಮುರೂರಿನಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ವ್ಯಾಪಕ ಕೃಷಿ ಹಾನಿಯುಂಟಾದ ಘಟನೆ ವರದಿಯಾಗಿದೆ. ಮುರೂರಿನ ಕೋಡೋತ್ ವಿಜಯನ್ ನಾಯರ್ ಎಂಬವರ ತೋಟಕ್ಕೆ ಕಳೆದ ರಾತ್ರಿ ನುಗ್ಗಿದ ಕಾಡಾನೆಗಳು ತೆಂಗಿನಮರ, ಅಡಿಕೆ ಮರ ಹಾಗೂ ಬಾಳೆಗಿಡಗಳನ್ನು ನಾಶಮಾಡಿದೆ. ಈ ಭಾಗದಲ್ಲಿ ಇತ್ತೀಚೆಗೆ ಬೀಡಿಬಿಟ್ಟಿರುವ ಕೃಷಿಯನ್ನು ನಾಶಪಡಿಸುತ್ತಿರುವುದರಿಂದ ಕೃಷಿಕರು ಹೈರಾಣಾಗಿದ್ದಾರೆ. ಈ ಪ್ರದೇಶದಲ್ಲಿ ಹಲವು ವರ್ಷಗಳಿಂದ ಕಾಡಾನೆಗಳು ನಿರಂತರ ದಾಳಿ ನಡೆಸುತ್ತಿದ್ದರೂ, ಅದನ್ನು ತಡೆಯಲು ಶಾಶ್ವತ

ಸುಳ್ಯ: ಕಾಡಾನೆ ಹಾವಳಿ ➤ ಅಪಾರ ಕೃಷಿ ನಾಶ- ಕೃಷಿಕರು ಹೈರಾಣು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಎಚ್ಚೆತ್ತ ಕಂದಾಯ ಇಲಾಖೆ ➤ ಅಕ್ರಮ ಮರಳು ಸಾಗಾಟದ 3 ಲಾರಿ ವಶಕ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 22. ಇತ್ತೀಚೆಗೆ ಅಕ್ರಮ ಗಣಿಗಾರಿಕೆ ಮತ್ತು ಮರಳು ಸಾಗಾಟದ ಮೇಲೆ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ಮೂರು ಲಾರಿಗಳನ್ನು ವಶಪಡಿಸಿಕೊಂಡಿರುವ ಘಟನೆ ಸುಳ್ಯದಲ್ಲಿ ವರದಿಯಾಗಿದೆ. ಕಂದಾಯ ನಿರೀಕ್ಷಕರ ತಂಡದ ನೇತೃತ್ವದಲ್ಲಿ ಮರಳು ಸಾಗಾಟ ಮತ್ತು ಕೆಂಪು ಕಲ್ಲಿನ ಸಾಗಾಟದ ಲಾರಿಗಳ ಮೇಲೆ ದಿಢೀರ್ ದಾಳಿ ನಡೆದು ಮೂರು ಲಾರಿಗಳನ್ನು ವಶ ಪಡೆದುಕೊಳ್ಳಲಾಗಿದೆ. ಇದೀಗ ಸದ್ಯ ಮೂರು ವಾಹನಗಳನ್ನು ಕಂದಾಯ ನಿರೀಕ್ಷಕರ ಕಚೇರಿ ಬಳಿ ಇರಿಸಲಾಗಿದ್ದು ಮೇಲಿನ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.  

ಸುಳ್ಯ: ಎಚ್ಚೆತ್ತ ಕಂದಾಯ ಇಲಾಖೆ ➤ ಅಕ್ರಮ ಮರಳು ಸಾಗಾಟದ 3 ಲಾರಿ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸಿಸಿಬಿ ಪೊಲೀಸರ ದಾಳಿ  ➤ ಫಾರ್ಮ್ ನಲ್ಲಿ 29 ವನ್ಯಜೀವಿಗಳು ಪತ್ತೆ    

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 22. ಎಸ್​.ಎಸ್. ಮಲ್ಲಿಕಾರ್ಜುನ ಅವರ ರೈಸ್ ಮಿಲ್​ನಲ್ಲಿ ವನ್ಯ‌ಜೀವಿಗಳು ಪತ್ತೆಯಾಗಿದ್ದು, ದಾವಣಗೆರೆ ನಗರದ ಬಂಬೂ ಬಜಾರ್ ರಸ್ತೆಯಲ್ಲಿ ಇರುವ ಕಲ್ಲೇಶ್ವರ ರೈಸ್ ಮಿಲ್​ ಮೇಲೆ ಬೆಂಗಳೂರು ಸಿಸಿಬಿ ಹಾಗೂ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ 29 ವನ್ಯ ಜೀವಿಗಳು ಪತ್ತೆಯಾಗಿದ್ದು,  ಏಳು ಚುಕ್ಕೆ ಜಿಂಕೆಗಳು, 10 ಕೃಷ್ಣಮೃಗಗಳು, ಏಳು ಕಾಡುಹಂದಿಗಳು, ಮೂರು ಮುಂಗುಸಿಗಳು, ಎರಡು ನರಿಗಳು ಸಿಕ್ಕಿವೆ. ಅವುಗಳನ್ನು ರಕ್ಷಿಸಿ ಅರಣ್ಯ

ಸಿಸಿಬಿ ಪೊಲೀಸರ ದಾಳಿ  ➤ ಫಾರ್ಮ್ ನಲ್ಲಿ 29 ವನ್ಯಜೀವಿಗಳು ಪತ್ತೆ     Read More »

ಕರ್ನಾಟಕ, ಕ್ರೈಮ್ ನ್ಯೂಸ್

ಓಮೈಕ್ರಾನ್ ನ ಬಿಎಫ್ 7 ಉಪತಳಿ  ➤ ದೇಶದಲ್ಲಿ 4 ಹೊಸ ಪ್ರಕರಣ ಪತ್ತೆ      

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 22. ದೇಶದಲ್ಲಿ ಕೊರೋನಾ ವೈರಸ್ ಓಮೈಕ್ರಾನ್ ನ ಉಪತಳಿ ಬಿಎಫ್7 ಸೋಂಕಿನ ನಾಲ್ಕು ಪ್ರಕರಣಗಳು ಜುಲೈ, ಸೆಪ್ಟೆಂಬರ್ ಮತ್ತು ನವೆಂಬರ್ ನಲ್ಲಿ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿದೆ. ಸೋಂಕಿತರೆಲ್ಲರೂ ಗುಣಮುಖರಾಗಿದ್ದಾರೆ. ಗುಜರಾತ್ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರವು ಈ ಪ್ರಕರಣಗಳನ್ನು ಪತ್ತೆ ಮಾಡಿತು. ಎರಡು ಮತ್ತು ಮೂರನೇ ಪ್ರಕರಣವೂ ಗುಜರಾತ್ ನಲ್ಲಿ ಪತ್ತೆಯಾಗಿದ್ದರೆ, ಮತ್ತೊಂದು ಪ್ರಕರಣ ಒಡಿಶಾದಲ್ಲಿ ವರದಿಯಾಗಿದೆ. ಚೀನಾದಲ್ಲಿ ಸದ್ಯ ಅಧಿಕ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗಿರುವುದಕ್ಕೆ ವೈರಸ್ ನ

ಓಮೈಕ್ರಾನ್ ನ ಬಿಎಫ್ 7 ಉಪತಳಿ  ➤ ದೇಶದಲ್ಲಿ 4 ಹೊಸ ಪ್ರಕರಣ ಪತ್ತೆ       Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಸ್‌ಗಳ ಮುಖಾಮುಖಿ ಅಪಘಾತ ➤ ಕನಿಷ್ಠ 15 ವಿದ್ಯಾರ್ಥಿಗಳು ಮೃತ್ಯು…!

(ನ್ಯೂಸ್ ಕಡಬ) newskadaba.com ನೋನಿ, ಡಿ.21 ಶಾಲಾ ವಿದ್ಯಾರ್ಥಿಗಳನ್ನು ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಬಸ್‌ಗಳು ಅಪಘಾತಕ್ಕೀಡಾಗಿ ಕನಿಷ್ಠ 15 ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಮಣಿಪುರದಲ್ಲಿ ಬುಧವಾರ ನಡೆದಿದೆ. ಲಾಂಗ್ಸಾಯ್ ಟುಬುಂಗ್ ಗ್ರಾಮದ ಬಳಿ ಬಿಷ್ಣುಪುರ್ – ಖೌಪುಮ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಯರಿಪೋಕ್‌ನ ತಂಬಲ್ನು ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಎರಡು ಬಸ್‌ಗಳ ಅಧ್ಯಯನ ಪ್ರವಾಸಕ್ಕೆ ತೆರಳುತ್ತಿದ್ದವು. ಘಟನೆಯಲ್ಲಿ ಕನಿಷ್ಠ 15 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಸಾವಿನ ನಿಖರ ಸಂಖ್ಯೆ

ಬಸ್‌ಗಳ ಮುಖಾಮುಖಿ ಅಪಘಾತ ➤ ಕನಿಷ್ಠ 15 ವಿದ್ಯಾರ್ಥಿಗಳು ಮೃತ್ಯು…! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ   ➤ ಮೂವರು ಆರೋಪಿಗಳ ಬಂಧನ 

(ನ್ಯೂಸ್ ಕಡಬ) newskadaba.com  ಕಾಸರಗೋಡು, ಡಿ.21  19 ರ ಹರೆಯದ ಯುವತಿಗೆ ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೂವರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ ಬಂಧಿತ ಆರೋಪಿಗಳನ್ನು ಮಧೂರು ಪಟ್ಲ ದ.ಜೆ. ಶೈನಿತ್ ಕುಮಾರ್ (30), ಉಪ್ಪಳ ಮಂಗಲ್ಪಾಡಿಯ ಮೋಕ್ಷಿತ್ ಶೆಟ್ಟಿ(43) ಮತ್ತು ಉಳಿಯತ್ತಡ್ಕ ದ.ಎನ್ ಪ್ರಶಾಂತ್(27) ಎಂದು ಗುರುತಿಸಲಾಗಿದೆ.  ಕಾಸರಗೋಡು ಮಹಿಳಾ ಠಾಣಾ ಇನ್ಸ್ ಪೆಕ್ಟರ್ ಪಿ. ಚಂದ್ರಿಕಾ ನೇತೃತ್ವದ ತಂಡವು ಇವರನ್ನು

ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ   ➤ ಮೂವರು ಆರೋಪಿಗಳ ಬಂಧನ  Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಣಿಪುರದ ನೋನಿ ಜಿಲ್ಲೆಯಲ್ಲಿ ಭೀಕರ ಬಸ್ ಅಪಘಾತ ➤ 15 ವಿದ್ಯಾರ್ಥಿಗಳು ಮೃತ್ಯು..!

(ನ್ಯೂಸ್ ಕಡಬ) newskadaba.com  ಮಣಿಪುರ , ಡಿ 21 :  ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಎರಡು ಬಸ್ ಗಳು ನಿಯಂತ್ರಣ ಕಳೆದುಕೊಂಡು ಅಪಘಾತವಾದ ಭೀಕರ ಘಟನೆ ಮಣಿಪುರದ ನೋನಿ ಜಿಲ್ಲೆಯ ಲಾಂಗ್ಸಾಯ್ ತುಬುಂಗ್ ಗ್ರಾಮದ ಬಳಿ ಸಂಭವಿಸಿದೆ. ಅಪಘಾತದಲ್ಲಿ ಕನಿಷ್ಠ 15 ಮಂದಿ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ  ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ವಿದ್ಯಾರ್ಥಿಗಳನ್ನು ಕರೆದು ಕೊಂಡು ಹೋಗುತ್ತಿದ್ದ  ಎರಡು ಬಸ್ ಗಳು ಯಾರಿಪೋಕ್ ನ ತಂಬಲ್ನು ಹೈಯರ್ ಸೆಕೆಂಡರಿ ಶಾಲೆಗೆ ಸೇರಿದ್ದು. ಈ ಬಸ್ಸುಗಳು ಅಧ್ಯಯನ ಪ್ರವಾಸಕ್ಕಾಗಿ

ಮಣಿಪುರದ ನೋನಿ ಜಿಲ್ಲೆಯಲ್ಲಿ ಭೀಕರ ಬಸ್ ಅಪಘಾತ ➤ 15 ವಿದ್ಯಾರ್ಥಿಗಳು ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಟ್ಲ: ಅಪರಿಚಿತ ಮೃತದೇಹದ ಗುರುತು ಪತ್ತೆ..!

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 21. ಗುಡ್ಡದಲ್ಲಿ ಪತ್ತೆಯಾಗಿದ್ದ ಅಪರಿಚಿತ ಕೊಳೆತ ಮೃತದೇಹದ ಗುರುತು ಪತ್ತೆಯಾಗಿದೆ. ಮೃತರನ್ನು ಪುಣಚ ಗ್ರಾಮದ ಕೆದುಮೂಲೆ ದಿ. ವೀರಪ್ಪ ನಾಯ್ಕ್ ಎಂಬವರ ಪುತ್ರ ಕಮಲಾಕ್ಷ ಎಂದು ಗುರುತಿಸಲಾಗಿದೆ. ಮನೆಯಿಂದ ಕೆಲಸಕ್ಕೆಂದು ತೆರಳುತ್ತಿದ್ದ ಕಮಲಾಕ್ಷ ರವರು ತುಂಬಾ ಸಮಯದವರೆಗೆ ಮನೆಗೆ ಮರಳಿ ಬರುತ್ತಿರಲಿಲ್ಲ. ಹೀಗೇ ಮಾಡುತ್ತಿದ್ದ ಇವರು ಕೆಲದಿನಗಳ ಹಿಂದೆ ಕೆಲಸಕ್ಕೆಂದು ತೆರಳಿ ಬಳಿಕ ಮನೆಗೆ ಹಿಂತಿರುಗಿ ಬರಲಿಲ್ಲ ಎಂದು ಮನೆಯವರು ಮಾಹಿತಿ ನೀಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು

ವಿಟ್ಲ: ಅಪರಿಚಿತ ಮೃತದೇಹದ ಗುರುತು ಪತ್ತೆ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
crime, arrest, suspected

ಉಡುಪಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಿಗ

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 21. ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸರಕಾರಿ ನೌಕರನೊಬ್ಬ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ವರದಿಯಾಗಿದೆ.   ಲೋಕಾಯುಕ್ತ ಬಲೆಗೆ ಬಿದ್ದ ಸರಕಾರಿ ನೌಕರನನ್ನು ಪೆರ್ಣಂಕಿಲ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಎನ್.ಪಿ ಎಂದು ಗುರುತಿಸಲಾಗಿದೆ. ಇವರು ವ್ಯಕ್ತಿಯೊಬ್ಬರಿಗೆ ಜಮೀನನ್ನು ಸಕ್ರಮ ಮಾಡಿಕೊಡುವುದಕ್ಕಾಗಿ 10 ಸಾವಿರ ರೂ. ಲಂಚ ಬೇಡಿಕೆ ಇಟ್ಟಿರುವ ಕುರಿತು ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ದೂರುದಾರ 10 ಸಾವಿರ ರೂ. ನೀಡುತ್ತಿದ್ದ ವೇಳೆ ಕಾರ್ಯಾಚರಣೆ

ಉಡುಪಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಿಗ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top