ಕ್ರೈಮ್ ನ್ಯೂಸ್

➤ ಜಯಮಂಗಲಿ ನದಿಯಲ್ಲಿ ಈಜಲು ಹೋದ ಸಹೋದರಿಯರು ನೀರು ಪಾಲು!

(ನ್ಯೂಸ್ ಕಡಬ) newskadaba.com.ಮಧುಗಿರಿ, ಡಿ.28. ಜಯಮಂಗಲಿ ನದಿಯಲ್ಲಿ ಈಜಲು ಹೋದ ಸಹೋದರಿಯರು ನೀರು ಪಾಲಾಗಿರುವ ಘಟನೆ ಮಧುಗಿರಿ ತಾಲೂಕಿನ ವೀರಾಪುರದಲ್ಲಿ ನಡೆದಿದೆ. ಚೆಕ್ ಡ್ಯಾಂನ  ನೀರಿನ ಆಳ ಅರಿಯದೆ ಈಜಲು ಹೋದ ಐವರು ಬಾಲಕಿಯರ ಪೈಕಿ ಮೂವರನ್ನು ಹತ್ತಿರದಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳೆಯರು ರಕ್ಷಿಸಿದ್ದು, ಉಳಿದ ಇಬ್ಬರು ಈಜುಲು ಬರದೆ ನದಿಯಲ್ಲಿ ಮುಳುಗಿದ್ದಾರೆ. ಈ ದುರ್ಘಟನೆಯಲ್ಲಿ ಮೃತಪಟ್ಟವರು ಪ್ರಿಯಾಂಕ (8)  ಹಾಗೂ ಬಿಂದು(9) ಎಂದು ಗುರುತಿಸಲಾಗಿದ್ದು, ಇವರಿಬ್ಬರು ಸಹೋದರಿಯರಾಗಿದ್ದಾರೆ. ಮೃತ ಮಕ್ಕಳು ಕೆಂಪಾಪುರ ಗ್ರಾಮದ ಬಾಬುರವರ ಮಕ್ಕಳಾಗಿದ್ದು, […]

➤ ಜಯಮಂಗಲಿ ನದಿಯಲ್ಲಿ ಈಜಲು ಹೋದ ಸಹೋದರಿಯರು ನೀರು ಪಾಲು! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪೆರ್ನೆ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ➤ ಚಾಲಕ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com. ಪುತ್ತೂರು,  ಡಿ. 28  ಉಪ್ಪಿನಂಗಡಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಮಗುಚಿ ಬಿದ್ದ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿ.28 ರಂದು ನಡೆದಿದೆ. ಬಿ.ಸಿ. ರೋಡ್ ನಿಂದ ಹಾಸನ ಕಡೆ ತೆರಳುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದ ಪರಿಣಾಮ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ. ಹತ್ತಿರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆರ್ನೆ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ➤ ಚಾಲಕ ಅಪಾಯದಿಂದ ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು: ಕೃಷಿ ಜಾಗಕ್ಕೆ ಪ್ರವೇಶಿಸಿ ಹಲ್ಲೆ ಆರೋಪ ➤ ಮಹಿಳೆ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 28. ಕೃಷಿ ಜಾಗಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಗಾಯಗೊಂಡವರನ್ನು ಆಶಾಎಂದು ಗುರುತಿಸಲಾಗಿದೆ. ಅರುಣ್ ಕುಮಾರ್ ರೈ ಮತ್ತು ಕೆಲಸಗಾರರಾದ ವಿನಯ್ ಮತ್ತು ಸುಂದರರವರು ಅಕ್ರಮವಾಗಿ ತಂತಿ ಬೀಲಿ ಹಾಕುತ್ತಿದ್ದು, ಈ ಕುರಿತು ಪ್ರಶ್ನಿಸಿದಾಗ ನನಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂಧಿಸಿ ಮಾನಭಂಗಕ್ಕೆ ಯತ್ನಿಸಿದ್ದಾರಲ್ಲದೆ ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಬಗ್ಗೆ

ಪುತ್ತೂರು: ಕೃಷಿ ಜಾಗಕ್ಕೆ ಪ್ರವೇಶಿಸಿ ಹಲ್ಲೆ ಆರೋಪ ➤ ಮಹಿಳೆ ಆಸ್ಪತ್ರೆಗೆ ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಾವಿಗೆ ಇಳಿದ ಮಾನಸಿಕ ಅಸ್ವಸ್ಥೆ ಮಹಿಳೆ ➤ ಅಗ್ನಿಶಾಮಕ ದಳದಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 28. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕೆಯ್ಯೂರು ಗ್ರಾಮದ ಮಾಡಾವು ಕಟ್ಟೆ ಬಳಿಯ ನಿವಾಸಿ ಡೇನಿಯಲ್ ಡಿಸೋಜ ಎಂಬವರ ಪತ್ನಿ ವಿನುತ ವೆಗಸ್ ಎಂಬವರು ತಮ್ಮ ಮನೆಯ ಎದುರುಗಡೆ ಇರುವ ಬಾವಿಗೆ ಇಳಿದ ಪ್ರಸಂಗ ನಡೆದಿದೆ.   ವಿಷಯ ತಿಳಿದ ಮಹಿಳೆಯ ಮನೆಯವರು ಪುತ್ತೂರು ಅಗ್ನಿಶಾಮಕ ದಳದವರಿಗೆ ನೀಡಿದ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಮಹಿಳೆಯನ್ನು ಬಾವಿಯಿಂದ ಮೇಲೆಕ್ಕೆತ್ತಿ, ಹೆಚ್ಚಿನ ಚಿಕಿತ್ಸೆಗೆ ಮಹಿಳೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಪುತ್ತೂರು

ಬಾವಿಗೆ ಇಳಿದ ಮಾನಸಿಕ ಅಸ್ವಸ್ಥೆ ಮಹಿಳೆ ➤ ಅಗ್ನಿಶಾಮಕ ದಳದಿಂದ ರಕ್ಷಣೆ Read More »

ಕರಾವಳಿ, ಕ್ರೈಮ್ ನ್ಯೂಸ್

ಟಿಪ್ಪರ್ ಢಿಕ್ಕಿ ➤ ಗಂಭೀರ ಗಾಯಗೊಂಡಿದ್ದ ಕಾಲೇಜು ವಿದ್ಯಾರ್ಥಿನಿ ಮೃತ್ಯು..!

(ನ್ಯೂಸ್ ಕಡಬ) newskadaba.com ಸಾಗರ, ಡಿ. 28.  ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಗಾಯಗೊಂಡ ಮೂವರು ವಿದ್ಯಾರ್ಥಿನಿಯರ ಪೈಕಿ ಓರ್ವ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಬುಧವಾರದಂದು ಶಿವಮೊಗ್ಗದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಶಿಕಾರಿಪುರ ತಾಲೂಕಿನ ಚಿಕ್ಕಕಲವತ್ತಿ ಗ್ರಾಮದ ಪ್ರತಿಮಾ (18) ಎಂದು ಗುರುತಿಸಲಾಗಿದೆ. ಬುಧವಾರದಂದು ಬೆಳಗ್ಗೆ ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಹೋಗುತ್ತಿದ್ದ ವೇಳೆ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರಿಗೆ ಸಣ್ಣ ಪುಟ್ಟ ಗಾಯವಾಗಿತ್ತು. ಹಾಗೂ ಮತ್ತೋರ್ವ ವಿದ್ಯಾರ್ಥಿನಿಗೆ ಗಂಭೀರ ಗಾಯಗಳಾಗಿದ್ದವು. ತೀವ್ರವಾಗಿ

ಟಿಪ್ಪರ್ ಢಿಕ್ಕಿ ➤ ಗಂಭೀರ ಗಾಯಗೊಂಡಿದ್ದ ಕಾಲೇಜು ವಿದ್ಯಾರ್ಥಿನಿ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮನೆಗೆ ಬೆಂಕಿ ➤ ಒಂದೇ ಕುಟುಂಬದ ಐವರು ಸಜೀವ ದಹನ

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಡಿ. 28. ಗುಡಿಸಲಿಗೆ ಬೆಂಕಿ ಬಿದ್ದ ಪರಿಣಾಮ ಒಂದೇ ಕುಟುಂಬದ 5 ಮಂದಿ ಜೀವಂತವಾಗಿ ಸುಟ್ಟು ಭಸ್ಮವಾದ ದುರ್ಘಟನೆ ಮೌ ಜಿಲ್ಲೆಯ ಶಾಹ್ಪುರ್ ಗ್ರಾಮದಿಂದ ವರದಿಯಾಗಿದೆ. ಶಾಹ್ಪುರ್ ಗ್ರಾಮದ ಗದ್ದಿದೇವಿ ಮತ್ತು ಅವರ ಮೂವರು ಮಕ್ಕಳು ಹಾಗೂ ಮತ್ತೋರ್ವ ವ್ಯಕ್ತಿ ಸೇರಿ ಒಟ್ಟು 5 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮನೆಯ ಸ್ಟವ್ ನಿಂದ ಬೆಂಕಿ ಹೊತ್ತುಕೊಂಡು ಇಡೀ ಗುಡಿಸಲಿಗೆ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ್ದವರು ಹೊರಗೆ ಬರಲಾಗದೇ ಜೀವಂತ

ಮನೆಗೆ ಬೆಂಕಿ ➤ ಒಂದೇ ಕುಟುಂಬದ ಐವರು ಸಜೀವ ದಹನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಂಟ್ವಾಳ: ಕೆಲಸಕ್ಕೆಂದು ತೆರಳಿದ್ದ ಯುವಕ ನಾಪತ್ತೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 28. ಕೆಲಸಕ್ಕೆಂದು ಬೆಂಗಳೂರಿಗೆ ತೆರಳಿದ್ದ ಯುವಕನೋರ್ವ ನಾಪತ್ತೆಯಾದ ಘಟನೆ ಬಂಟ್ವಾಳದಿಂದ ವರದಿಯಾಗಿದೆ. ನಾಪತ್ತೆಯಾದ ಯುವಕನನ್ನು ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮ ಮದ್ದ ನಿವಾಸಿ ಅಬೂಬಕ್ಕರ್ ಎಂಬವರ ಮಗ ಮಹಮ್ಮದ್ ನಿಜಾಮ್ ಎಂದು ಗುರುತಿಸಲಾಗಿದೆ. ಎಸ್ಸ್ಸೆಸ್ಸೆಲ್ಸಿ ತನಕ ವಿದ್ಯಾಭ್ಯಾಸ ಮಾಡಿದ್ದ ಈತ, ಪ್ರಸ್ತುತ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಇತ್ತೀಚೆಗೆ ತನ್ನ ದೇರಳಕಟ್ಟೆಯ ಗೆಳೆಯನೊಂದಿಗೆ ಕೆಲಸಕ್ಕೆಂದು ಬೆಂಗಳೂರಿಗೆ ತೆರಳಿದ್ದು, ಆ ಬಳಿಕ ಯಾವುದೇ ರೀತಿಯ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿರುವುದಾಗಿ ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ

ಬಂಟ್ವಾಳ: ಕೆಲಸಕ್ಕೆಂದು ತೆರಳಿದ್ದ ಯುವಕ ನಾಪತ್ತೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಿಟ್ಲ: ರಿಕ್ಷಾದಲ್ಲಿ ಅಕ್ರಮ ದನದ ಮಾಂಸ ಸಾಗಾಟ ➤ ಪೊಲೀಸ್ ದಾಳಿ ವೇಳೆ ಆರೋಪಿ ಪರಾರಿ

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 28. ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಘಟನೆ ಇಲ್ಲಿನ ಮೇಗಿನಪೇಟೆಯಲ್ಲಿ ಬುಧವಾರದಂದು ನಡೆದಿದೆ. ಆಟೋ ರಿಕ್ಷಾದಲ್ಲಿ 25 ಕೆ.ಜಿ ಯಷ್ಟು ದನದ ಮಾಂಸ ಸಾಗಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ವಿಟ್ಲ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಹೆಚ್.ಇ. ನಾಗರಾಜ್ ಆದೇಶದ ಮೇರೆಗೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಸಂದೇಶ್ ಶೆಟ್ಟಿ ದಾಳಿ ನಡೆಸಿದ್ದು, ಈ ವೇಳೆ ರಿಕ್ಷಾ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ವಿಟ್ಲ: ರಿಕ್ಷಾದಲ್ಲಿ ಅಕ್ರಮ ದನದ ಮಾಂಸ ಸಾಗಾಟ ➤ ಪೊಲೀಸ್ ದಾಳಿ ವೇಳೆ ಆರೋಪಿ ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯವೆಸಗಿದ ಮಾವ ➤ 15 ವರ್ಷ ಜೈಲು ಶಿಕ್ಷೆ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 28. ಅಪ್ರಾಪ್ತ ವಯಸ್ಸಿನ ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗೆ ಜಿಲ್ಲಾ ಮತ್ತು ಸೆಷನ್ಸ್ ಎಫ್.ಟಿ.ಎಸ್.ಸಿ-|| ನ್ಯಾಯಾಲಯವು 15 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಐವತ್ತು ಸಾವಿರ ರೂ. ದಂಡ ವಿಧಿಸಿದೆ. ಸಂತ್ರಸ್ತ ವಿದ್ಯಾರ್ಥಿನಿಯು 2019ರ ಆ.09 ರಂದು ಶಾಲೆಯಿಂದ ಮರಳಿ ಸ್ನೇಹಿತರ ಜೊತೆಗೆ ಮನೆಗೆ ಹೋಗುತ್ತಿದ್ದ ವೇಳೆ ಆಕೆಯನ್ನು ಹಿಂಬಾಲಿಸಿದ ಮಾವ, ಸ್ನೇಹಿತೆಯನ್ನು ನಿಂದಿಸಿ ಕಳುಹಿಸಿದ್ದ. ನಂತರ ಸಂತ್ರಸ್ತೆಯನ್ನು ಬಲವಂತವಾಗಿ ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದು

ಮಂಗಳೂರು: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯವೆಸಗಿದ ಮಾವ ➤ 15 ವರ್ಷ ಜೈಲು ಶಿಕ್ಷೆ ಪ್ರಕಟ Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಲೇಜು ವಿದ್ಯಾರ್ಥಿನಿಯರಿಗೆ ಟಿಪ್ಪರ್ ಢಿಕ್ಕಿ ➤ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಸಾಗರ, ಡಿ. 28. ಟಪ್ಪರ್ ಢಿಕ್ಕಿ ಹೊಡೆದು ಶಾಲೆಗೆ ತೆರಳುತ್ತಿದ್ದ ಮೂವರು ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ಸಾಗರದ ತಣ್ಣಮನೆ ಸೇತುವೆಯ ಬಳಿ ಬುಧವಾರದಂದು ನಡೆದಿದೆ. ಗಾಯಗೊಂಡವರನ್ನು ಪ್ರತಿಮಾ, ಐಶ್ವರ್ಯಾ ಹಾಗೂ ಅಂಕಿತಾ ಎಂದು ಗುರುತಿಸಲಾಗಿದೆ. ಇವರು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬಂದ ಟಿಪ್ಪರ್ ಢಿಕ್ಕಿ ಹೊಡೆದು ಈ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಾಳುಗಳ ಪೈಕಿ ಪ್ರತಿಮಾ ಎಂಬಾಕೆ ಗಂಭೀರ ಗಾಯಗೊಂಡಿದ್ದು, ಆಕೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ

ಕಾಲೇಜು ವಿದ್ಯಾರ್ಥಿನಿಯರಿಗೆ ಟಿಪ್ಪರ್ ಢಿಕ್ಕಿ ➤ ಮೂವರಿಗೆ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top