ಕ್ರೈಮ್ ನ್ಯೂಸ್

ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ ➤ ಇಬ್ಬರು ಮೃತ್ಯು..!

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಡಿ. 30. ಆಕ್ಸಿಜನ್ ಸಿಲಿಂಡರ್ ಒಂದು ಸ್ಫೋಟಗೊಂಡ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಖಾಸಗಿ ಆಸ್ಪತ್ರೆಯ ಹೊರಗೆ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಆಸ್ಪತ್ರೆ ಹಾಗೂ ಸಮೀಪದ ಮನೆಗಳ ಗಾಜುಗಳು ಒಡೆದುಹೋಗಿದ್ದು, ಹಾಗೆಯೇ ಎರಡು ದೇಹಗಳು ಸಂಪೂರ್ಣ ಛಿದ್ರವಾಗಿದೆ ಎನ್ನಲಾಗಿದೆ. ಘಟನೆಯಿಂದಾಗಿ ಹಲವಾರು ಆಮ್ಲಜನಕ ಸಿಲಿಂಡರ್ ಗಳನ್ನು ಸಾಗಿಸುವ ಟ್ರಕ್ ಕೂಡ ರಸ್ತೆಯ ಮಧ್ಯದಲ್ಲಿ ನಿಂತಿರುವುದು ಕಂಡುಬಂದಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ ಹಾಗೂ […]

ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ ➤ ಇಬ್ಬರು ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಿಸಿ ಸಾಂಬಾರ್ ಬಿದ್ದು ಮೂವರು ಶಾಲಾ ಮಕ್ಕಳು ಅಸ್ವಸ್ಥ

(ನ್ಯೂಸ್  ಕಡಬ) newskadaba.com ಯಾದಗಿರಿ, ಡಿ. 30. ಮೈ ಮೇಲೆ ಬಿಸಿ ಸಾಂಬಾರ್ ಬಿದ್ದು ಮೂವರು ಮಕ್ಕಳು ಅಸ್ವಸ್ಥರಾದ ಘಟನೆ ಯಾದಗಿರಿಯ ಜಿಲ್ಲೆಯ ಸುರಪುರ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೊಮ್ಮನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ನೀಡುವ ಸಂದರ್ಭ  ಬಿಸಿ ಸಾಂಬಾರ್ ಮೈಮೇಲೆ ಬಿದ್ದಿದ್ದು, ತಕ್ಷಣವೇ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳು ಅಪಾಯದಿಂದ ಪಾರಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಶಾಲಾ ಸಿಬ್ಬಂದಿಗಳ ನಿರ್ಲಕ್ಷತನದಿಂದ ಈ ಘಟನೆ ನಡೆದಿದೆ ಎಂದು ಪೋಷಕರು

ಬಿಸಿ ಸಾಂಬಾರ್ ಬಿದ್ದು ಮೂವರು ಶಾಲಾ ಮಕ್ಕಳು ಅಸ್ವಸ್ಥ Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಿಟ್ಲ: ಮರಕ್ಕೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 30. ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದಲ್ಲಿ ವರದಿಯಾಗಿದೆ. ಮೃತರನ್ನು ವಂಸತ ರೈ (52) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಡುತ್ತಿದ್ದ ಇವರ ಮೃತದೇಹವು ಇಂದು ಬೆಳಗ್ಗೆ ಸಮೀಪದ ರಬ್ಬರ್ ತೋಟದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದಬಂದಿಲ್ಲ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಆಗಲಿದ್ದಾರೆ.

ವಿಟ್ಲ: ಮರಕ್ಕೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮಾಣಿ; ವಾಹನಗಳ ನಡುವೆ ಸರಣಿ ಅಪಘಾತ ➤ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಮಾಣಿ, ಡಿ. 30. ಮೂರು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಮೂವರು ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಾಣಿಯ ಪಳಿಕೆ ಎಂಬಲ್ಲಿ ನಡೆದಿದೆ. ಮಾಣಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಕಾರು, ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಬಳಿಕ ಅದರ ಹಿಂದಿನಿಂದ ಬರುತ್ತಿದ್ದ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದು  ದುರ್ಘಟನೆ ಸಂಭವಿಸಿದೆನ್ನಲಾಗಿದೆ.

ಮಾಣಿ; ವಾಹನಗಳ ನಡುವೆ ಸರಣಿ ಅಪಘಾತ ➤ ಮೂವರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಪಾರ್ಸೆಲ್ ಬಂದಿದ್ದ ಮಿಕ್ಸಿ ಸ್ಫೋಟ ಪ್ರಕರಣ ➤ ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ಹಾಸನ, ಡಿ. 30. ಇಲ್ಲಿನ ಡಿಟಿಡಿಸಿ ಕೊರಿಯರ್‌ ಕಚೇರಿಯಲ್ಲಿ ಮಿಕ್ಸಿ ಸ್ಫೋಟಗೊಂಡ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿರುವ ಘಟನೆ ಹಾಸನದಲ್ಲಿ ವರದಿಯಾಗಿದೆ. ಬಂಧಿತನನ್ನು ಅನೂಪ್‌ ಕುಮಾರ್‌ ಎಂದು ಗುರುತಿಸಲಾಗಿದೆ. ಈತ ತನ್ನ ಪ್ರೀತಿಗೆ ಸಹಕರಿಸದ ಮಹಿಳೆಯ ಮೇಲೆ ದ್ವೇಷ ಸಾಧಿಸಲು ಆರಂಭಿಸಿ, ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಮಿಕ್ಸಿಗೆ ಡಿಟೋನೇಟರ್‌ ಅಳವಡಿಸಿ ಕೊರಿಯರ್‌ ಮೂಲಕ ಕಳುಹಿಸಿದ್ದ ಎನ್ನಲಾಗಿದೆ.

ಪಾರ್ಸೆಲ್ ಬಂದಿದ್ದ ಮಿಕ್ಸಿ ಸ್ಫೋಟ ಪ್ರಕರಣ ➤ ಆರೋಪಿ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ಕಾರು ಹಾಗೂ ಬೈಕ್ ನಡುವೆ ಅಪಘಾತ ➤ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 30. ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳದ ಕನ್ಯಾಡಿ ಎಂಬಲ್ಲಿ ನಡೆದಿದೆ. ಗಂಭೀರ ಗಾಯಗೊಂಡವರನ್ನು ಧರ್ಮಸ್ಥಳ ನಿವಾಸಿ ನಿತೇಶ್ ಎಂದು ಗುರುತಿಸಲಾಗಿದೆ. ಧರ್ಮಸ್ಥಳದಿಂದ ಉಜಿರೆ ಕಡೆ ಬರುತ್ತಿದ್ದ ಬೈಕ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಕಾರಿನ ಏರ್ ಬ್ಯಾಗ್ ಓಪನ್ ಅಗಿರುವ ಕಾರಣ ಕಾರಿನಲ್ಲಿದ್ದವರಿಗೆ ಯಾವುದೇ ಗಾಯವಾಗಿಲ್ಲ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಬೈಕ್

ಬೆಳ್ತಂಗಡಿ: ಕಾರು ಹಾಗೂ ಬೈಕ್ ನಡುವೆ ಅಪಘಾತ ➤ ಸವಾರ ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉಡುಪಿ: ಬೈಕ್ ಗೆ ಲಾರಿ ಢಿಕ್ಕಿ ➤ ಸಬ್ ಇನ್ಸ್ ಪೆಕ್ಟರ್ ಮೃತ್ಯು.!

(ನ್ಯೂಸ್  ಕಡಬ) newskadaba.com ಉಡುಪಿ, ಡಿ. 30. ಲಾರಿಯೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಮಂಗಳೂರು ಅಬಕಾರಿ ಇಲಾಖೆಯ ಸಬ್ ಇನ್ ಸ್ಪೆಕ್ಟರ್ ಮೃತಪಟ್ಟ ಘಟನೆ ಉಡುಪಿಯ ಹೊರ ವಲಯದ ಅಂಬಾಗಿನಲ್ಲಿ ವರದಿಯಾಗಿದೆ. ಮೃತಪಟ್ಟವರನ್ನು ಬ್ರಹ್ಮಾವರದ ಉಳ್ಳೂರಿನ ನಿವಾಸಿ ಅಬಕಾರಿ ಇನ್ ಸ್ಪೆಕ್ಟರ್ ಶಂಕರ್ (53) ಎಂದು ಗುರುತಿಲಾಗಿದೆ. ಇವರು ಮಂಗಳೂರು ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ಮುಗಿಸಿ ತಮ್ಮ ಬೈಕ್ ನಲ್ಲಿ ಉಳ್ಳೂರು ಕಡೆ ಹೋಗುತ್ತಿದ್ದ ವೇಳೆ ಎದುರಿನಿಂದ ಬಂದ ಲಾರಿ ಢಿಕ್ಕಿ ಹೊಡೆದು ಈ

ಉಡುಪಿ: ಬೈಕ್ ಗೆ ಲಾರಿ ಢಿಕ್ಕಿ ➤ ಸಬ್ ಇನ್ಸ್ ಪೆಕ್ಟರ್ ಮೃತ್ಯು.! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸುಬ್ರಹ್ಮಣ್ಯ: ಗರ್ಭಧರಿಸಿದ ಅಪ್ರಾಪ್ತ ಬಾಲಕಿ ➤ ಆಟೋ ಚಾಲಕನ ಬಂಧನ

(ನ್ಯೂಸ್  ಕಡಬ) newskadaba.com ಸುಬ್ರಹ್ಮಣ್ಯ, ಡಿ. 30. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆ ಗರ್ಭವತಿಯಾಗಲು ಕಾರಣನಾಗಿದ್ದಾನೆಂಬ ಆರೋಪದಡಿಯಲ್ಲಿ ಆಟೋ ಚಾಲಕನೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಬಂಧಿತನನ್ನು ಯೇನೆಕಲ್ಲಿನ ಆಟೋ ಚಾಲಕ ಜೀವನ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾದ ಹಿನ್ನೆಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಸುಬ್ರಹ್ಮಣ್ಯ: ಗರ್ಭಧರಿಸಿದ ಅಪ್ರಾಪ್ತ ಬಾಲಕಿ ➤ ಆಟೋ ಚಾಲಕನ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಪ್ರಧಾನಿ ಮೋದಿ ತಾಯಿ ಹೀರಾಬೆನ್ ವಿಧಿವಶ ➤ ಸಿಎಂ ಬೊಮ್ಮಾಯಿ ಸಂತಾಪ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 30. ವಯೋಸಹಜ ಖಾಯಿಲೆದಿಂದ ಶತಾಯುಷಿಯಾಗಿ ಬದುಕಿ ಇಂದು ಇಹಲೋಕ ತ್ಯಜಿಸಿದ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.   ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಮತ್ತು ಹೀರಾಬೆನ್ ಅವರ ತಾಯಿ-ಮಗನ ಸಂಬಂಧ ವಿಶಿಷ್ಟವಾಗಿತ್ತು. ಅದನ್ನು ಹಲವು ಬಾರಿ ಅವರು ತೋರಿಸಿಕೊಂಡಿದ್ದರು. ಒಬ್ಬ ತಾಯಿಯಾಗಿ ಮಗನಲ್ಲಿ ತುಂಬಬೇಕಾದ ದೇಶಭಕ್ತಿ, ಆದರ್ಶ ಗುಣಗಳು, ಕರ್ಮಯೋಗ ಗುಣಗಳನ್ನು ಪ್ರಧಾನಿ ಮೋದಿಯವರಲ್ಲಿ ತುಂಬಿ

ಪ್ರಧಾನಿ ಮೋದಿ ತಾಯಿ ಹೀರಾಬೆನ್ ವಿಧಿವಶ ➤ ಸಿಎಂ ಬೊಮ್ಮಾಯಿ ಸಂತಾಪ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಭೀಕರ ರಸ್ತೆ ಅಪಘಾತ ➤ ಭಾರತೀಯ ಕ್ರಿಕಟರ್ ರಿಷಭ್ ಪಂತ್ ಗಂಭೀರ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 30. ಕಾರೊಂದು ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಭಾರತದ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಗಂಭೀರ ಗಾಯಗೊಂಡ ಘಟನೆ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಶುಕ್ರವಾರದಂದು ಬೆಳಗ್ಗೆ ಸಂಭವಿಸಿದೆ. ಇವರು ಉತ್ತರಾಖಂಡದಿಂದ ದೆಹಲಿಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದ್ದು, ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ, ರಿಷಬ್ ಪಂತ್ ಅವರ ಹಣೆ ಮತ್ತು ಕಾಲಿಗೆ ಗಾಯಗಳಾಗಿವೆ. ಸದ್ಯ ರಿಷಬ್ ಪಂತ್

ಭೀಕರ ರಸ್ತೆ ಅಪಘಾತ ➤ ಭಾರತೀಯ ಕ್ರಿಕಟರ್ ರಿಷಭ್ ಪಂತ್ ಗಂಭೀರ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top