ಕ್ರೈಮ್ ನ್ಯೂಸ್

ಕರ್ತವ್ಯ ಲೋಪ ಹಿನ್ನೆಲೆ..! ➤ ವಲಯಾರಣ್ಯಧಿಕಾರಿ ಶಿಲ್ಪಾ ಎಸ್.ಎಲ್ ಅಮಾನತು 

(ನ್ಯೂಸ್ ಕಡಬ) newskadaba.com ಹಾಸನ, ಜ. 12. ಕರ್ತವ್ಯ ಲೋಪವೆಸಗಿದ ಕಾರಣಕ್ಕೆ ಸಕಲೇಶಪುರ ವಲಯಾರಣ್ಯಧಿಕಾರಿ ಶಿಲ್ಪಾ ಎಸ್.ಎಲ್ ರವರನ್ನು ಅಮಾನತು ಮಾಡಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜ್ ಕಿಶೋರ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಸಿಬ್ಬಂದಿಯನ್ನು ನಿಯಂತ್ರಿಸುವಲ್ಲಿ, ಅರಣ್ಯ ಅಪರಾಧ ಪ್ರಕರಣಗಳ ತನಿಖೆ ನಡೆಸುವಲ್ಲಿ ವಿಫಲವಾಗಿರುವುದು, ಅವರಿಗೆ ನೀಡಿದ ಭೌತಿಕ ಹಾಗೂ ಆರ್ಥಿಕ ಪ್ರಗತಿಯನ್ನು ಸಾಧಿಸುವಲ್ಲಿ ವಿಫಲತೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.  

ಕರ್ತವ್ಯ ಲೋಪ ಹಿನ್ನೆಲೆ..! ➤ ವಲಯಾರಣ್ಯಧಿಕಾರಿ ಶಿಲ್ಪಾ ಎಸ್.ಎಲ್ ಅಮಾನತು  Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ಆರೋಪ ➤ ಮುಖ್ಯ ಶಿಕ್ಷಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು..!!

(ನ್ಯೂಸ್ ಕಡಬ) newskadaba.com ಮಡಿಕೇರಿ, ಜ. 12. ಇಬ್ಬರು ಶಾಲಾ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿಯಲ್ಲಿ ಶಾಲಾ ಮುಖ್ಯ ಶಿಕ್ಷಕನೊಬ್ಬನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಆರೋಪಿಯನ್ನು ಮನೋಹರ್ ನಾಯಕ್ ಎಂದು ಗುರುತಿಸಲಾಗಿದೆ. ಈತ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಇಬ್ಬರ ಪೈಕಿ ಓರ್ವ ವಿದ್ಯಾರ್ಥಿನಿಯ ಪೋಷಕರು ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಕೊಡಗು ಮಹಿಳಾ ಠಾಣಾ ಪೊಲೀಸರು ಶಿಕ್ಷಕನ

ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ಆರೋಪ ➤ ಮುಖ್ಯ ಶಿಕ್ಷಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು..!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ನಕಲಿ ಸುದ್ದಿಗಳನ್ನು ಹರಡುವ ಯೂಟ್ಯೂಬ್ ಚಾನೆಲ್ ಗಳಿಗೆ ನಿರ್ಬಂಧ ಹೇರಿದ ಕೇಂದ್ರ..! 

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 12. ನಕಲಿ ಸುದ್ದಿ ಚಾನಲ್‌ಗಳು ಜನರನ್ನು ತಪ್ಪುದಾರಿಗೆಳೆಯಲು ಟಿವಿ ಚಾನೆಲ್‌ಗಳ, ದೂರದರ್ಶನ ಸುದ್ದಿ ನಿರೂಪಕರ ನಕಲಿ, ಕ್ಲಿಕ್‌ಬೈಟ್ ಮತ್ತು ಸಂವೇದನೆಯ ಥಂಬ್‌ನೇಲ್‌ಗಳು ಮತ್ತು ಚಿತ್ರಗಳನ್ನು ಬಳಸುತ್ತವೆ ಎಂದು ಆರೋಪಿಸಿರುವ ಮಾಹಿತಿ ಸಚಿವಾಲಯವು ನಕಲಿ ಯೂಟ್ಯೂಬ್ ಚಾನಲ್ ಗಳ ಕಡಿವಾಣಕ್ಕೆ ಮುಂದಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಭಾರತದಲ್ಲಿ ಸುಳ್ಳು ಮಾಹಿತಿಯನ್ನು ಹರಡುತ್ತಿರುವ ಆರು ಯೂಟ್ಯೂಬ್ ಚಾನೆಲ್‌ಗಳನ್ನು ಭೇದಿಸಿದ್ದು, ಚಾನೆಲ್‌ಗಳು ಹರಡುವ ನಕಲಿ ಸುದ್ದಿಗಳನ್ನು ಎದುರಿಸಲು 100 ಕ್ಕೂ ಹೆಚ್ಚು ಸತ್ಯ ತಪಾಸಣೆಗಳನ್ನು

ನಕಲಿ ಸುದ್ದಿಗಳನ್ನು ಹರಡುವ ಯೂಟ್ಯೂಬ್ ಚಾನೆಲ್ ಗಳಿಗೆ ನಿರ್ಬಂಧ ಹೇರಿದ ಕೇಂದ್ರ..!  Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೈಕ್ ಹಾಗೂ ಮೊಬೈಲ್ ಕಳವು ಪ್ರಕರಣ ➤ ಮೂವರು ಅರೆಸ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 12. ಕಳವು ಮಾಡಿದ ಬೈಕ್ ಗಳಲ್ಲಿ ಸಂಚರಿಸುತ್ತಾ ಒಂಟಿಯಾಗಿ ಓಡಾಡುವವರ ಮೊಬೈಲ್ ದೋಚಿ ಪರಾರಿಯಾಗುತ್ತಿದ್ದ ಮೂವರು ಖದೀಮರನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಂಧಿತರನ್ನು ಯಲಹಂಕ ಶ್ರೀನಿವಾಸಪುರದ ಮುಬಾರಕ್ ಅಲಿಯಾಸ್ ಡೂಮ್(20), ಅಗ್ರಹಾರ ಲೇಔಟ್ ನ ಸುನೀಲ್ ಅಲಿಯಾಸ್ ಚಿತ್ತು(20) ಹಾಗೂ ಯಲಹಂಕದ ಇಸ್ಮಾಯಿಲ್ ಅಲಿಯಾಸ್ ಜಿಶಾನ್ (19) ಎಂದು ಗುರುತಿಸಲಾಗಿದೆ.

ಬೈಕ್ ಹಾಗೂ ಮೊಬೈಲ್ ಕಳವು ಪ್ರಕರಣ ➤ ಮೂವರು ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಾಲೇಜಿನ ಶೌಚಾಲಯದೊಳಗೆ ನುಗ್ಗಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ..!  

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 12. ಕಾಲೇಜಿನಲ್ಲಿ ಕಾಮುಕನೊಬ್ಬ ವಿದ್ಯಾರ್ಥಿನಿಯರ ಶೌಚಾಲಯದೊಳಗೆ ನುಗ್ಗಿ, ವಿದ್ಯಾರ್ಥಿನಿಯೋರ್ವಳನ್ನು ಕೈ ಹಿಡಿದೆಳೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕಾಲೇಜಿನ ಶೌಚಾಲಯದೊಳಗೆ ನುಗ್ಗಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ..!   Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆಹಾರ ನಿಗಮದಲ್ಲಿ ಲಂಚ ಹಗರಣ..! ➤  50 ಕಡೆ ಸಿಬಿಐ ದಾಳಿ               

(ನ್ಯೂಸ್ ಕಡಬ) newskadaba.com  ಹೊಸದಿಲ್ಲಿ, ಜ.12. ಆಹಾರ ಧಾನ್ಯಗಳ ಖರೀದಿ ಮತ್ತು ವಿತರಣೆ ಸಂಬಂಧ ಭಾರತೀಯ ಆಹಾರ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡಗಳು ಪಂಜಾಬ್‌, ಹರಿಯಾಣ ಮತ್ತು ದಿಲ್ಲಿಯ ಒಟ್ಟು 50 ಕಡೆ ದಾಳಿ ನಡೆಸಿವೆ ಎನ್ನಲಾಗಿದೆ. 50 ಸಾವಿರ ರೂ. ಲಂಚ ಪಡೆಯುವ ವೇಳೆ ನಿಗಮದ ಡಿಜಿಎಂ ರಾಜೀವ್‌  ಕುಮಾರ್‌ ಮಿಶ್ರಾ ಅವರು ಸಿಕ್ಕಿಬಿದ್ದ ಪ್ರಕರಣದ ಬೆನ್ನಲ್ಲೇ ಈ ದಾಳಿ ನಡೆದಿದೆ. ಸಿಬಿಐ ಇದುವರೆಗೂ 74 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ

ಆಹಾರ ನಿಗಮದಲ್ಲಿ ಲಂಚ ಹಗರಣ..! ➤  50 ಕಡೆ ಸಿಬಿಐ ದಾಳಿ                Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಂಗಳೂರಿನ ಕುಖ್ಯಾತ ರೌಡಿಶೀಟರ್ ಅರೆಸ್ಟ್..!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.12.   ಎರಡ ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಬೆಂಗಳೂರಿನ ಕುಖ್ಯಾತ ರೌಡಿಶೀಡರ್ ನನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಬಂಧಿತನನ್ನು ಮುನೇಲ್ ಎಂದು ಗುರುತಿಸಲಾಗಿದೆ.  ಈತನ ಮೇಲೆ ಕೊಲೆಯತ್ನ, ರಾಬರಿ, ಜೀವ ಬೆದರಿಕೆ ಮುಂತಾದ ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ.

ಬೆಂಗಳೂರಿನ ಕುಖ್ಯಾತ ರೌಡಿಶೀಟರ್ ಅರೆಸ್ಟ್..!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಳೆದ ವರ್ಷ ಅಣ್ಣ ಮೃತಪಟ್ಟ ದಿನವೇ ಈ ವರ್ಷ ತಮ್ಮ ಮೃತ್ಯು..!

(ನ್ಯೂಸ್ ಕಡಬ) newskadaba.com  ಹಾಸನ, ಜ.12. ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಹಾಸನದ ಬೇಲೂರು ತಾಲ್ಲೂಕಿನ ನೆಟ್ಟೆಕೆರೆ ಗ್ರಾಮದಲ್ಲಿ ವರದಿಯಾಗಿದೆ. ಮೃತಪಟ್ಟವರನ್ನು ದಿಲೀಪ್ (21) ಎಂದು ಗುರುತಿಸಲಾಗಿದೆ. ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಅಚ್ಚರಿ ಎಂದರೆ ದಿಲೀಪ್ ಅಣ್ಣ ಶ್ರೀಧರ್  2022ರ  ಜನವರಿ 9 ರಂದು ಅನಾರೋಗ್ಯದಿಂದ ಮೃತಪಟ್ಟಿದ್ದರು. ಈ ಘಟನೆ ನಡೆದ ಒಂದು ವರ್ಷದ ಬಳಿಕ ಅದೇ ದಿನಾಂಕದಂದು ದಿಲೀಪ್ ಮೃತಪಟ್ಟಿದ್ದಾರೆ

ಕಳೆದ ವರ್ಷ ಅಣ್ಣ ಮೃತಪಟ್ಟ ದಿನವೇ ಈ ವರ್ಷ ತಮ್ಮ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ; ಭಜರಂಗದಳದ ಮುಖಂಡನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ..!         

(ನ್ಯೂಸ್ ಕಡಬ) newskadaba.com  ಬಂಟ್ವಾಳ, ಜ.12. ಬಜರಂಗದಳದ ಮುಖಂಡನೋರ್ವನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾದ ಘಟನೆ ಪಾಣೆಮಂಗಳೂರು ಹಳೆ ಸೇತುವೆ ಬಳಿ ಸಂಭವಿಸಿದೆ. ಮೃತಪಟ್ಟವರನ್ನು ಸಜೀಪ ನಿವಾಸಿ ರಾಜೇಶ್ ಪೂಜಾರಿ ಎಂದು ಗುರುತಿಸಲಾಗಿದೆ. ರಾಜೇಶ್ ಪೂಜಾರಿ ಬಜರಂಗದಳದ ಕಲ್ಲಡ್ಕ ಪ್ರಖಂಡ ಗೋ ರಕ್ಷಣಾ ಪ್ರಮುಖ ಆಗಿದ್ದರು ಎಂದು ತಿಳಿದುಬಂದಿದೆ. ಯುವಕ ನದಿಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಮುಸ್ಲಿಮ್ ಯುವಕರ ತಂಡ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಕಾರದೊಂದಿಗೆ ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಿದೆ. ಮೃತದೇಹವನ್ನು

ಬಂಟ್ವಾಳ; ಭಜರಂಗದಳದ ಮುಖಂಡನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ..!          Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉದ್ಘಾಟನೆಗೂ ಮುನ್ನವೇ ವಂದೇ ಭಾರತ್ ರೈಲಿಗೆ ಕಲ್ಲೆಸೆದ ಕಿಡಿಗೇಡಿಗಳು..!  

(ನ್ಯೂಸ್ ಕಡಬ) newskadaba.com  ಆಂಧ್ರ ಪ್ರದೇಶ, ಜ.12.   ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲೇಟು ಬಿದ್ದಿದ್ದು, ಬೋಗಿಗಳಿಗೆ ಹಾನಿಯಾಗಿದೆ. ಪ್ರಧಾನಿ ಮೋದಿ ಈ ರೈಲನ್ನು ಜನವರಿ 19 ರಂದು ಗ್ರೀನ್‌ ಸಿಗ್ನಲ್‌ ನೀಡಬೇಕಿತ್ತು. ಆದರೆ, ಉದ್ಘಾಟನೆಗೂ ಮುನ್ನವೇ ಈ ರೀತಿ ಕಿಡಿಗೇಡಿಗಳು ಕಲ್ಲೆಸೆದಿರುವ ಘಟನೆ ನಡೆದಿದೆ. ಟ್ರಯಲ್‌ ರನ್‌ ಮುಗಿಸಿ ಮರ್ರಿಪೇಲಂನಿಂದ ವಿಶಾಖಪಟ್ಟಣ ರೈಲ್ವೆ ಸ್ಟೇಷನ್‌ಗೆ ವಂದೇ ಭಾರತ್‌ ಟ್ರೈನ್‌ ಹೋಗುವಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಘಟನೆ

ಉದ್ಘಾಟನೆಗೂ ಮುನ್ನವೇ ವಂದೇ ಭಾರತ್ ರೈಲಿಗೆ ಕಲ್ಲೆಸೆದ ಕಿಡಿಗೇಡಿಗಳು..!   Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top