ಕ್ರೈಮ್ ನ್ಯೂಸ್

crime, arrest, suspected

ಉಳ್ಳಾಲ: ದರೋಡೆಗೆ ಹೊಂಚು ಹಾಕುತ್ತಿದ್ದ ಖದೀಮರು ಅರೆಸ್ಟ್…!

(ನ್ಯೂಸ್ ಕಡಬ) newskadaba.com  ಉಳ್ಳಾಲ, ಜ.14. ಕತ್ತಲಲ್ಲಿ ಅಂಗಡಿಗಳ ಬಳಿ ರಾಡಿನ ಜೊತೆಗೆ ಕುಳಿತಿದ್ದ ಇಬ್ಬರನ್ನು ಗಸ್ತು ತಿರುಗುತ್ತಿದ್ದ ಉಳ್ಳಾಲ ಪೊಲೀಸರು ಬಂಧಿಸಿದ್ದು, ಇಬ್ಬರು ಅಂಗಡಿ, ಎಟಿಎಂ, ಮನೆಗಳನ್ನು ದರೋಡೆ ನಡೆಸುವ ಹುನ್ನಾರ ಇಟ್ಟುಕೊಂಡು ಕುಳಿತಿರುವ ಸಂಶಯದಿಂದ ಪ್ರಕರಣ ದಾಖಲಿಸಲಾಗಿದೆ. ಮುಕ್ಕಚ್ಚೇರಿಯ ರಾಯಿಸ್ ಖಾನ್ (23) ಕುಂಪಲ ಯತೀಂ ಖಾನದ ಮಹಮ್ಮದ್ ಮುಜಾಂಬಿಲ್ (28) ಬಂಧಿತರು ಎಂದು ಗುರುತಿಸಲಾಗಿದೆ. ಜಂಕ್ಷನ್ನಿನ ಬಳಿಯ ಅಂಗಡಿಗಳ ಬಾಗಿಲು ಬಳಿ ಕತ್ತಲಲ್ಲಿ ಕುಳಿತಿದ್ದರು. ಗಸ್ತು ತಿರುಗುತ್ತಿದ್ದ ಉಳ್ಳಾಲ ಪೊಲೀಸರು ಅವರನ್ನು ಹಿಡಿದಾಗ […]

ಉಳ್ಳಾಲ: ದರೋಡೆಗೆ ಹೊಂಚು ಹಾಕುತ್ತಿದ್ದ ಖದೀಮರು ಅರೆಸ್ಟ್…! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Theft, crime, Robbery

ಕಾಸರಗೋಡು: ಒಂದೇ ದಿನ ಎರಡು ಮನೆಗೆ ಕನ್ನ ➤ 40 ಪವನ್ ಚಿನ್ನಾಭರಣ ಸಹಿತ ನಗದು ಕಳವು.!

(ನ್ಯೂಸ್ ಕಡಬ) newskadaba.com  ಕಾಸರಗೋಡು, ಜ.14. ಎರಡು ಮನೆಗಳಿಗೆ ನುಗ್ಗಿದ ಕಳ್ಳರು ಸುಮಾರು 40 ಪವನ್ ಚಿನ್ನಾಭರಣ ಮತ್ತು 40 ಸಾವಿರ ರೂ. ನಗದು ಕಳವು ಗೈದ ಘಟನೆ ಕುಂಬಳೆ ಸಮೀಪದ ನಾಯ್ಕಾಪು ವಿನಲ್ಲಿ ನಡೆದಿದೆ. ಬ್ಯಾಂಕ್ ಸಿಬ್ಬಂದಿ ವಾಸುದೇವ ರಾವ್ ಮನೆಗೆ ನುಗ್ಗಿ 35 ಪವನ್ ಚಿನ್ನಾಭರಣ ಮತ್ತು 15 ಸಾವಿರ ರೂ. ನಗದು ಹಾಗೂ ಮೋಹನ್ ದಾಸ್ ಎಂಬವರ ಮನೆಯಿಂದ ಮೂರೂವರೆ ಪವನ್ ಚಿನ್ನಾಭರಣ ಮತ್ತು 25 ಸಾವಿರ ರೂ. ನಗದು ಕಳವು ಮಾಡಲಾಗಿದೆ.

ಕಾಸರಗೋಡು: ಒಂದೇ ದಿನ ಎರಡು ಮನೆಗೆ ಕನ್ನ ➤ 40 ಪವನ್ ಚಿನ್ನಾಭರಣ ಸಹಿತ ನಗದು ಕಳವು.! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೌಟುಂಬಿಕ ಕಲಹ ಹಿನ್ನೆಲೆ ತಾಯಿ ಆತ್ಮಹತ್ಯೆ   ➤ ನೊಂದ ಮಗ ನೇಣಿಗೆ ಶರಣು..!

(ನ್ಯೂಸ್ ಕಡಬ) newskadaba.com  ಬೆಂಗಳೂರು, ಜ.14. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ- ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿ ನಡೆದಿದೆ. ಕುಮಾರಸ್ವಾಮಿ ಲೇಔಟ್‌ನ ವಿಜಯಲಕ್ಷ್ಮಿ (50) ಹಾಗೂ ಅವರ ಪುತ್ರ ಹರ್ಷ (25) ಎಂದು ಗುರುತಿಸಲಾಗಿದೆ. ತಾಯಿ ವಿಜಯಲಕ್ಷ್ಮಿ ಜೊತೆ ಊಟದ ವಿಚಾರಕ್ಕೆ ಮಗ ಹರ್ಷ ರಾತ್ರಿ ಜಗಳವಾಡಿದ್ದ. ಮಗನ ಮಾತಿನಿಂದ ಮನನೊಂದ ವಿಜಯಲಕ್ಷ್ಮಿ ಮನೆಯ ಬಳಿ ಸಂಪಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಳಿಕ ವಿಜಯಲಕ್ಷ್ಮಿ ಅವರನ್ನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಕೌಟುಂಬಿಕ ಕಲಹ ಹಿನ್ನೆಲೆ ತಾಯಿ ಆತ್ಮಹತ್ಯೆ   ➤ ನೊಂದ ಮಗ ನೇಣಿಗೆ ಶರಣು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಲಾಡ್ಜ್ ವೊಂದರಲ್ಲಿ ಪ್ರೇಯಸಿಯಿಂದಲೇ ಪ್ರಿಯಕರನ ಹತ್ಯೆ..!   

(ನ್ಯೂಸ್ ಕಡಬ) newskadaba.com  ಶಿವಮೊಗ್ಗ, ಜ.14. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಹೆರಿಟೇಜ್ ಲಾಡ್ಜ್ ನಲ್ಲಿ ಪ್ರೇಯಸಿಯಿಂದಲೇ  ಪ್ರಿಯಕರನ ಹತ್ಯೆಯಾಗಿರುವ ಭೀಕರ ಘಟನೆ ನಡೆದಿದೆ. ಹಾಸನ ಮೂಲದ ಪರ್ವೇಜ್ ಖಾನ್​ ಎಂಬ ವ್ಯಕ್ತಿಯ ಕೊಲೆಯಾಗಿದೆ. ಪ್ರೇಯಸಿಯೇ ಈ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗುತ್ತಿದ್ದು ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ. ಹಾಸನದ ಚನ್ನರಾಯಪಟ್ಟಣದ ಮೂಲದ ಆಯಿಷಾ ಮತ್ತು ಜಾವಗಲ್​ ಮೂಲದ ಪರ್ವೇಜ್ ಖಾನ್ ಇಬ್ಬರು ಕಳೆದ ಮೂರು ನಾಲ್ಕು ವರ್ಷಗಳಿಂದ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇವರಿಬ್ಬರ

ಲಾಡ್ಜ್ ವೊಂದರಲ್ಲಿ ಪ್ರೇಯಸಿಯಿಂದಲೇ ಪ್ರಿಯಕರನ ಹತ್ಯೆ..!    Read More »

ಕರ್ನಾಟಕ, ಕ್ರೈಮ್ ನ್ಯೂಸ್

 ಉಪ್ಪಿನಂಗಡಿ: ಟ್ಯಾಂಕರ್ ಚಲಾಯಿಸುವಾಗಲೇ ಹೃದಯಾಘಾತದಿಂದ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com   ಉಪ್ಪಿನಂಗಡಿ, ಜ.14. ಟ್ಯಾಂಕರ್ ಚಲಾಯಿಸುವಾಗಲೇ ಹೃದಯಾಘಾತಕ್ಕೀಡಾಗಿ ಚಾಲಕ ಕಿಶೋರ್ ಕುಮಾರ್ (53) ಎಂಬವರು ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ವರದಿಯಾಗಿದೆ. ಮೂಲತಃ ಮಂಗಳೂರಿನ ಕಾವೂರು ನಿವಾಸಿಯಾಗಿದ್ದ ಕಿಶೋರ್ ಕುಮಾರ್ ಬೆಂಗಳೂರಿನಿಂದ ಮಂಗಳೂರಿನತ್ತ ಟ್ಯಾಂಕರ್ ಚಲಾಯಿಸುತ್ತಿದ್ದಾಗ ಉಪ್ಪಿನಂಗಡಿ ಸಮೀಪಿಸುತ್ತಿದ್ದಂತೆಯೇ ಹೃದಯಾಘಾತಕ್ಕೆ ಒಳಗಾಗಿರುವುದಾಗಿ ತಿಳಿದುಬಂದಿದೆ. ಕೂಡಲೇ ಟ್ಯಾಂಕರ್ ನಲ್ಲಿದ್ದ ಸಹ ಚಾಲಕ ಟ್ಯಾಂಕರ್‌ನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದರಾದರೂ ಆಸ್ಪತ್ರೆಯಲ್ಲಿ ಅವರು ಮೃತ ಪಟ್ಟಿದ್ದಾರೆಂದು ಘೋಷಿಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿ ನಿಶಾಂತ್ ಶೆಟ್ಟಿ ನೀಡಿದ ದೂರಿನ

 ಉಪ್ಪಿನಂಗಡಿ: ಟ್ಯಾಂಕರ್ ಚಲಾಯಿಸುವಾಗಲೇ ಹೃದಯಾಘಾತದಿಂದ ಚಾಲಕ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಆಟವಾಡುವಾಗ ಮೂಗಿಗೆ ರಬ್ಬರ್ ಹಾಕಿದ 10 ವರ್ಷದ ಬಾಲಕಿ…!! ➤ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದ ವೈದ್ಯರು

(ನ್ಯೂಸ್ ಕಡಬ) newskadaba.com   ಗುಜರಾತ್​, ಜ.14. 10 ವರ್ಷದ ಬಾಲಕಿ ಆಟವಾಡುವಾಗ ತನ್ನ ಮೂಗಿಗೆ ರಬ್ಬರ್ ತುಂಡು ಹಾಕಿಕೊಂಡಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. ರಾಜ್​ಕೋಟ್​ನಲ್ಲಿ ಶಿವಾನಿ ತ್ರಿವೇದಿ ಎಂಬ ಮಗು ಆಟವಾಡುವಾಗ ಮೂಗಿಗೆ ರಬ್ಬರ್ ತುಂಡು ಹಾಕಿಕೊಂಡಿದ್ದು,  ಬಾಲಕಿ ಮೂಗು ಕಟ್ಟಿಕೊಂಡು ಉಸಿರಾಡಲು ಕಷ್ಟವಾಗಿದ್ದು, ಸ್ವಲ್ಪ ದಿನಗಳ ನಂತರ ಮೂಗಿನಿಂದ ದುರ್ವಾಸನೆಯ ದ್ರವ ಮತ್ತು ರಕ್ತ ಹೊರಬರಲು ಪ್ರಾರಂಭಿಸಿದೆ. ಈ ವೇಳೆ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷೆ ನಡೆಸಿದಾಗ ಮೂಗಿನಲ್ಲಿ ಏನೋ

ಆಟವಾಡುವಾಗ ಮೂಗಿಗೆ ರಬ್ಬರ್ ಹಾಕಿದ 10 ವರ್ಷದ ಬಾಲಕಿ…!! ➤ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದ ವೈದ್ಯರು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ರಾಜಾರೋಷವಾಗಿ ನಡೆಸುತ್ತಿರುವ ಜೂಜುಕೇಂದ್ರಗಳು ಮುಚ್ಚುವಂತೆ ಹೋರಾಟ…!!                   

(ನ್ಯೂಸ್ ಕಡಬ) newskadaba.com  ಮಂಗಳೂರು, ಜ.14.  ನಗರದಾದ್ಯಂತ ರಾಜಾರೋಷವಾಗಿ ನಡೆಸುತ್ತಿರುವ ಸ್ಕಿಲ್ ಗೇಮ್, ವಿಡಿಯೋ ಗೇಮ್, ಇಸ್ಪೀಟ್ ಕ್ಲಬ್ ಸೇರಿ ಇನ್ನಿತರ ಜೂಜು ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚಬೇಕೆಂದು ಒತ್ತಾಯಿಸಿ ಡಿವೈಎಫ್ಐ ಇದೀಗ ಹೋರಾಟ ಆರಂಭಿಸಿದೆ. 2 ದಿನಗಳ ಹಿಂದೆ ಇಂತಹ ಜೂಜುಕೇಂದ್ರಗಳ ಮುಂದೆ ಸಾಂಕೇತಿಕ ಮುತ್ತಿಗೆ ಹಾಕುವ ಮೂಲಕ ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಗಮನಕ್ಕೆ ತಂದರೂ ಜೂಜುಕೇಂದ್ರಗಳ ವಿರುದ್ದ ಕ್ರಮಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲಗೊಂಡಿದೆ. ಈಗ ಮತ್ತೆ ಜೂಜುಕೇಂದ್ರಗಳು ಎಂದಿನಂತೆ ಪ್ರಾರಂಭಗೊಂಡ ಹಿನ್ನಲೆಯಲ್ಲಿ ಜೂಜುಕೇಂದ್ರಗಳು ಶಾಶ್ವತವಾಗಿ ಮುಚ್ಚುವವರೆಗೆ ಹಲವು ಹಂತದ ಹೋರಾಟ ಸಂಘಟಿಸಲು ಡಿವೈಎಫ್ಐ  ದ.ಕ  ಜಿಲ್ಲಾ ಸಮಿತಿಯು ತೀರ್ಮಾನಿಸಿದೆ. ಕಾನೂನುಬಾಹಿರ ಚಟುವಟಿಕೆಯಾಗಿದ್ದು ನಗರದ ದುಡಿದು ತಿನ್ನುವ ಬೀದಿಬದಿ ವ್ಯಾಪಾರಿಗಳನ್ನು, ದಿನಕೂಲಿ ನೌಕರರನ್ನು, ರಿಕ್ಷಾ ಚಾಲಕ ಇನ್ನಿತರ ಸಣ್ಣ ಆದಾಯಕ್ಕೆ ದುಡಿಯುವ ಜನಸಾಮಾನ್ಯರನ್ನು ಮತ್ತು ವಿದ್ಯಾರ್ಥಿಗಳನ್ನು ಬಲಿಪಡೆಯುತ್ತಿದೆ.   *➤ ಡಿವೈಎಫ್ಐ ತೀರ್ಮಾನ*

ಮಂಗಳೂರು: ರಾಜಾರೋಷವಾಗಿ ನಡೆಸುತ್ತಿರುವ ಜೂಜುಕೇಂದ್ರಗಳು ಮುಚ್ಚುವಂತೆ ಹೋರಾಟ…!!                    Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

➤ಶಿವಮೊಗ್ಗ ಚಿನ್ನಾಭರಣ ರಿಪೇರಿ ಮಾಡಿಸಲು ಬಂದ ವ್ಯಕ್ತಿಯ ಬ್ಯಾಗ್ ಕಳ್ಳತನ..!

(ನ್ಯೂಸ್ ಕಡಬ) newskadaba.com, ಶಿವಮೊಗ್ಗ, ಜ. 14.  ಚಿನ್ನಾಭರಣದ ಪಾಲಿಶ್ ಮತ್ತು ರಿಪೇರಿ ಮಾಡಿಸಲು ಬಂದಿದ್ದ ವ್ಯಕ್ಯಿಯ ಬ್ಯಾಗ್ ​ನ್ನು ಎಗರಿಸಿ ಒಟ್ಟು 2 ಲಕ್ಷ 80 ಸಾವಿರ ರೂ. ಹಣ ಮತ್ತು ಬಂಗಾರದ ಆಭರಣವನ್ನ ಕದ್ದುಕೊಂಡು‌ ಹೋಗಿರುವ ಘಟನೆ ಶಿವಮೊಗ್ಗದಲ್ಲಿ  ನಡೆದಿದೆ. ಈ ಕುರಿತು  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರಿಗಾಗಿ ಹುಡುಕಾಟ ಶುರುವಾಗಿದೆ. ಭದ್ರಾವತಿಯ ಆನ್ವೇರಿಯಿಂದ ಶಿವಮೊಗ್ಗಕ್ಕೆ ಹೊರಟಿದ್ದ ನಾಗರಾಜ್ ರಾಯ್ಕರ್ ಚಿನ್ನಾಭರಣಗಳು ಮತ್ತು ಇನ್ನೊಂದು ಪರ್ಸ್ ನಲ್ಲಿ 2. 80 ಲಕ್ಷ

➤ಶಿವಮೊಗ್ಗ ಚಿನ್ನಾಭರಣ ರಿಪೇರಿ ಮಾಡಿಸಲು ಬಂದ ವ್ಯಕ್ತಿಯ ಬ್ಯಾಗ್ ಕಳ್ಳತನ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸುರತ್ಕಲ್: ಗುಡ್ಡ ಕುಸಿತ…!!   ➤  ಓರ್ವ ಮೃತ್ಯು, ಇನ್ನೋರ್ವನಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಸುರತ್ಕಲ್, ಜ.14. ಕೆಲಸ ಮಾಡುವಾಗ ಗುಡ್ಡ ಕುಸಿತ ಉಂಟಾಗಿ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸುರತ್ಕಲ್ ನಲ್ಲಿ ವರದಿಯಾಗಿದೆ. ಮೃತರನ್ನು ಓಬಲೇಶ್ವರ ಎಂದು ಗುರುತಿಸಲಾಗಿದೆ.  ಈತ ರೈಲ್ವೇ ಸೇತುವೆಯ ಬಳಿ ಕೆಲಸ ಮಾಡುತ್ತಿದ್ದಾಗ ಗುಡ್ಡ ಕುಸಿದು ಮಣ್ಣು ಮೈಮೇಲೆ ಬಿದ್ದಿದೆ. ಘಟನೆಯಲ್ಲಿ ಗೋವಿಂದಪ್ಪ, ತಿಮ್ಮಪ್ಪ, ಈರಣ್ಣ, ಸಂಜೀವ ಹಾಗೂ ಆತನ ಪತ್ನಿ ತೃಪ್ತಿ ಅವರ ಮೇಲೂ ಮಣ್ಣು ಬಿದ್ದು ಗಾಯಗಳಾಗಿವೆ ಎನ್ನಲಾಗಿದೆ. ಗೋವಿಂದಪ್ಪ ಅವರಿಗೆ ಗಂಭೀರ ಗಾಯಗಳಾಗಿದೆ ಎಂದು ವರದಿ

ಸುರತ್ಕಲ್: ಗುಡ್ಡ ಕುಸಿತ…!!   ➤  ಓರ್ವ ಮೃತ್ಯು, ಇನ್ನೋರ್ವನಿಗೆ ಗಂಭೀರ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಿಟ್ಲ: ಅನ್ಯಕೋಮಿನ ವಿದ್ಯಾರ್ಥಿನಿ ಜೊತೆ ಮಾತನಾಡಿದ್ದಕ್ಕೆ ಕಾಲೇಜು ವಿದ್ಯಾರ್ಥಿಗೆ ಹಲ್ಲೆ ➤  ಆರೋಪಿಗಳ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಜ.14. ಬಸ್ಸಿನಲ್ಲಿ ವಿದ್ಯಾರ್ಥಿನಿ ಜತೆ ಮಾತನಾಡಿದ್ದಾರೆಂದು ತಂಡವೊಂದು ವಿದ್ಯಾರ್ಥಿಗೆ ಹಲ್ಲೆ ನಡೆಸಿರುವ ಕುರಿತು ವಿಟ್ಲದಲ್ಲಿ ವರದಿಯಾಗಿದೆ. ಮಂಗಳಪದವು ನಿವಾಸಿ ಅಬ್ಬಾಸ್ ಎಂಬವರ ಪುತ್ರ ಮಹಮ್ಮದ್‌ ಶಾಕೀರ್‌ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ವಿಟ್ಲ ಠಾಣೆಗೆ ದೂರು ನೀಡಿದ್ದಾನೆ ಎನ್ನಲಾಗಿದೆ. ಈ ಕುರಿತು ಕೆಲಿಂಜ ನಿವಾಸಿಗಳಾದ ಚಂದ್ರಶೇಖರ, ಪ್ರಜ್ವಲ್‌, ರೋಹಿತ್‌ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಂಗಳೂರು ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿರುವ ಶಾಕೀರ್‌ ಕಾಲೇಜಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಮನೆಗೆ ಬರುತ್ತಿದ್ದಾಗ

ವಿಟ್ಲ: ಅನ್ಯಕೋಮಿನ ವಿದ್ಯಾರ್ಥಿನಿ ಜೊತೆ ಮಾತನಾಡಿದ್ದಕ್ಕೆ ಕಾಲೇಜು ವಿದ್ಯಾರ್ಥಿಗೆ ಹಲ್ಲೆ ➤  ಆರೋಪಿಗಳ ವಿರುದ್ದ ದೂರು ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top