ಕ್ರೈಮ್ ನ್ಯೂಸ್

ಅಡಿಕೆಗೆ ಔಷಧಿ ಸಿಂಪಡನೆ ವೇಳೆ ವಿದ್ಯುತ್‌ ತಂತಿ ತಗುಲಿ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ. 28. ವಿದ್ಯುತ್ ತಗುಲಿದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಅರಸಿನಮಕ್ಕಿಯ ಎಂಜೀರ ಎಂಬಲ್ಲಿ ನಡೆದಿದೆ.   ಮೃತಪಟ್ಟವರನ್ನು ಉಡೈರೆ ಕೃಷ್ಣಪ್ಪ ಕುಲಾಲ್(49) ಎಂದು ಗುರುತಿಸಲಾಗಿದೆ. ಕೃಷ್ಣಪ್ಪ ರವರು ತೋಟದಲ್ಲಿ ಅಡಿಕೆಗೆ ಔಷಧಿ ಸಿಂಪಡನೆ ಮಾಡುತ್ತಿದ್ದ ವೇಳೆ ದೋಂಟಿ ಹೆಚ್.ಟಿ. ಲೈನ್ ಗೆ ತಾಗಿ ವಿದ್ಯುತ್‌ ತಗುಲಿ ಈ ದುರ್ಘಟನೆ ನಡೆದಿದೆನ್ನಲಾಗಿದೆ.   ಕೂಡಲೇ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಡಿಕೆಗೆ ಔಷಧಿ ಸಿಂಪಡನೆ ವೇಳೆ ವಿದ್ಯುತ್‌ ತಂತಿ ತಗುಲಿ ವ್ಯಕ್ತಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ನಕಲಿ ದಾಖಲೆ ಸೃಷ್ಟಿ ಆರೋಪ ಮೂವರು ಆರ್.ಟಿಒ ಅಧಿಕಾರಿಗಳ ಅಮಾನತು

(ನ್ಯೂಸ್ ಕಡಬ) newskadaba.com ಜೂ. 28. ಬೆಲೆಬಾಳುವ ಕಾರೊಂದರ ನೋಂದಣಿಯ ವೇಳೆ ನಕಲಿ ದಾಖಲೆ ಸೃಷ್ಟಿಸಿ ಸರಕಾರಕ್ಕೆ ಲಕ್ಷಾಂತರ ರೂ. ತೆರಿಗೆ ವಂಚಿಸಿದ ಆರೋಪದಲ್ಲಿ ಮಂಗಳೂರು ಆರ್‌ಟಿಒ ಕಚೇರಿಯ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿರುವ ಕುರಿತು ವರದಿಯಾಗಿದೆ.   ಆರ್‌ಟಿಒ ಕಚೇರಿಯ ಪ್ರಥಮ ದರ್ಜೆ ಸಹಾಯಕ, ಕಚೇರಿಯ ಅಧೀಕ್ಷಕಿ ಹಾಗೂ ಸ್ಥಾನೀಯ ಸಹಾಯಕಿಯನ್ನು ಅಮಾನತುಗೊಳಿಸಲಾಗಿದೆ. ಮಂಗಳೂರು ಆರ್‌ಟಿಒ ಕಚೇರಿಯಲ್ಲಿ 1,96,95,000 ರೂ.ಗಳ ಐಷಾರಾಮಿ ಕಾರನ್ನು 32,15,000 ರೂ. ಮೌಲ್ಯಕ್ಕೆ ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಆರ್‌ಟಿಒ

ನಕಲಿ ದಾಖಲೆ ಸೃಷ್ಟಿ ಆರೋಪ ಮೂವರು ಆರ್.ಟಿಒ ಅಧಿಕಾರಿಗಳ ಅಮಾನತು Read More »

ಕರಾವಳಿ, ಕ್ರೈಮ್ ನ್ಯೂಸ್

ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 28. ಮಹಿಳೆಯೋರ್ವರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜುಲೈ 2ಕ್ಕೆ ಮುಂದೂಡಿದೆ. ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರಕಾರದ ಪರ ಎಸ್ ಪಿಪಿ ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿ, ಪ್ರಜ್ವಲ್ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಬದಲಾದ ಪರಿಸ್ಥಿತಿ ಇದ್ದರೆ ಸೆಷನ್ಸ್ ಕೋರ್ಟ್ ನಲ್ಲಿ ಅರ್ಜಿ

ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ತಾಯಿಯ ಕೊಲೆ ಪ್ರಕರಣ ವಿಚಾರಣೆ ವೇಳೆ ಸತ್ಯ ಬಹಿರಂಗ

(ನ್ಯೂಸ್ ಕಡಬ) newskadaba.com ಜೂ. 28. ವರ್ಕಾಡಿ ನಲ್ಲೆಂಗಿಯ ಹಿಲ್ಡಾ ಮೊಂತೇರೋರವರ ಕೊಲೆ ಪ್ರಕರಣಕ್ಕೆ ಸಂಬಂಧಿಸದಂತೆ ಆರೋಪಿ ಪುತ್ರ ಮೆಲ್ವಿನ್ ವಿಚಾರಣೆ ವೇಳೆ ಆಸ್ತಿ ಹಾಗೂ ಹಣಕ್ಕಾಗಿ ಈ ಕೃತ್ಯ ನಡೆಸಿದ್ದಾನೆ ಎಂದು ಬೆಚ್ಚಿ ಬೀಳಿಸುವ ಹೇಳಿಕೆಗಳನ್ನು ನೀಡಿದ್ದಾನೆ.   ಈ ವಿಚಾರವಾಗಿ ಕೆಲ ದಿನಗಳಿಂದ ಈತ ತಾಯಿಗೆ ಆಗಾಗ ಕಿರುಕುಳ ನೀಡುತ್ತಿದ್ದ ಮಾತ್ರವಲ್ಲದೇ ಒತ್ತಡ ಹೇರುತ್ತಿದ್ದನು ಎನ್ನಲಾಗಿದೆ. ತನಗೆ ವಿವಾಹ ಮಾಡಿಕೊಡಬೇಕು ಇದಕ್ಕಾಗಿ ಹಣ ನೀಡುವಂತೆ ಮೆಲ್ವಿನ್ ತಾಯಿಯಲ್ಲಿ ಒತ್ತಡ ಹಾಕುತ್ತಿದ್ದನು. . ಇದಲ್ಲದೇ ಆಸ್ತಿಯನ್ನು

ತಾಯಿಯ ಕೊಲೆ ಪ್ರಕರಣ ವಿಚಾರಣೆ ವೇಳೆ ಸತ್ಯ ಬಹಿರಂಗ Read More »

ಕರಾವಳಿ, ಕ್ರೈಮ್ ನ್ಯೂಸ್

ಬ್ಲ್ಯಾಕ್ ಮ್ಯಾಜಿಕ್ ಗಾಗಿ ನಾಯಿಗಳ ಸರಣಿ ಹತ್ಯೆ ಶಂಕೆ!

(ನ್ಯೂಸ್‌ ಕಡಬ) newskadaba.com ಜೂ.28: ಬೆಂಗಳೂರು ಮಹಾದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಪ್ಪ ಲೇಔಟ್‌ನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ತ್ರಿಪಾರ್ಣ ಪಾಯ್ಕ ಎಂಬ ಮಹಿಳೆಯು ನಾಲ್ಕು ದಿನಗಳ ಹಿಂದೆ ತನ್ನದೇ ಪೋಷಣೆಯಲ್ಲಿದ್ದ ನಾಯಿಯನ್ನು ಕತ್ತು ಕೊಯ್ದು ಹತ್ಯೆ ಮಾಡಿ, ಬಟ್ಟೆಯಿಂದ ಸುತ್ತಿಹಾಕಿ ಬಚ್ಚಿಟ್ಟಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಆರೋಪಿತೆಯು ನಾಲ್ಕು ಲ್ಯಾಬ್ರಡರ್ ನಾಯಿಗಳನ್ನು ಸಾಕುತ್ತಿದ್ದರು. ಸುಮಾರು ನಾಲ್ಕು ತಿಂಗಳ ಹಿಂದೆ ಇದೇ ಮಹಿಳೆಯ ಮನೆಯೊಂದರಲ್ಲಿ ಮತ್ತೊಂದು ನಾಯಿ ಕಾಣೆಯಾಗಿದ್ದರೂ, ಇದೀಗ ಮತ್ತೆ

ಬ್ಲ್ಯಾಕ್ ಮ್ಯಾಜಿಕ್ ಗಾಗಿ ನಾಯಿಗಳ ಸರಣಿ ಹತ್ಯೆ ಶಂಕೆ! Read More »

ಕ್ರೈಮ್ ನ್ಯೂಸ್

ಮದುವೆಯಾಗುವುದಾಗಿ ನಂಬಿಸಿ ಮೋಸ ಗಂಡು ಮಗುವಿಗೆ ಜನ್ಮವಿತ್ತ ವಿದ್ಯಾರ್ಥಿನಿ..!

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 28. ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಗರ್ಭವತಿಯನ್ನಾಗಿಸಿದ ಪ್ರಕರಣದ ಸಂತ್ರಸ್ತೆ ಶುಕ್ರವಾರದಂದು ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿರುವ ಕುರಿತು ವರದಿಯಾಗಿದೆ. ವರದಿಯ ಪ್ರಕಾರ, ಪುತ್ತೂರು ಬಪ್ಪಳಿಗೆ ನಿವಾಸಿ ಶ್ರೀಕೃಷ್ಣ ಜೆ.ರಾವ್ ಎಂಬಾತ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಮನೆಗೆ ಕರೆಸಿಕೊಂಡು ಬಲವಂತದ ದೈಹಿಕ ಸಂಪರ್ಕ ಬೆಳೆಸಿ ಇದೀಗ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವುದಾಗಿ ಸಂತ್ರಸ್ತೆ ನೀಡಿದ್ದ ದೂರಿನ ಮೇರೆಗೆ ಜೂ.25ರಂದು ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ

ಮದುವೆಯಾಗುವುದಾಗಿ ನಂಬಿಸಿ ಮೋಸ ಗಂಡು ಮಗುವಿಗೆ ಜನ್ಮವಿತ್ತ ವಿದ್ಯಾರ್ಥಿನಿ..! Read More »

ಕರಾವಳಿ, ಕ್ರೈಮ್ ನ್ಯೂಸ್

ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ 68.3 ಲಕ್ಷ ರೂ. ವಂಚನೆ- ದೂರು ದಾಖಲು

(ನ್ಯೂಸ್ ಕಡಬ) newskadaba.com ಜೂ. 27. ಆನ್‌ ಲೈನ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭದ ಭರವಸೆ ನೀಡಿ 68.3 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.   ದೂರಿನ ಪ್ರಕಾರ, ಅಪರಿಚಿತರು ಅಜಿತ್ ಕುಮಾರ್ ಎಂಬವರನ್ನು ‘372 SCBI ಇನ್ವೆಸ್ಟಿಂಗ್ ಲ್ಯಾಬ್’ ಎಂಬ ವಾಟ್ಸಾಪ್ ಗುಂಪಿಗೆ ಸೇರಿಸಿ ಬಳಿಕ, ಗುಂಪಿನ ಸದಸ್ಯರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸುವ ಸಂದೇಶಗಳನ್ನು ಕಳುಹಿಸಿದ್ದಾರೆ.

ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ 68.3 ಲಕ್ಷ ರೂ. ವಂಚನೆ- ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಕಾರು, ಬಸ್ ನಡುವೆ ಅಪಘಾತ – ವಾಹನಗಳು ಜಖಂ

(ನ್ಯೂಸ್ ಕಡಬ) newskadaba.com ಜೂ. 27. ಕಾರು ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ನಡುವೆ ಅಪಘಾತ ಸಂಭವಿಸಿದ ಘಟನೆ ಸಂಪಾಜೆ ಸಮೀಪದ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ದೇವರಕೊಲ್ಲಿ ಸಮೀಪ ಗುರುವಾರ ರಾತ್ರಿ ನಡೆದಿದೆ. ಸುಳ್ಯ ಕಡೆಯಿಂದ ಮೈಸೂರು ಕಡೆ ತೆರಳುತ್ತಿದ್ದ ಕಾರು ಮತ್ತು ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನಡುವೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಅಪಘಾತದಲ್ಲಿ ಕಾರು ಹಾಗೂ ಬಸ್ ಎರಡೂ ವಾಹನಗಳು ಜಖಂಗೊಂಡಿದೆ.

ಕಾರು, ಬಸ್ ನಡುವೆ ಅಪಘಾತ – ವಾಹನಗಳು ಜಖಂ Read More »

ಕರಾವಳಿ, ಕ್ರೈಮ್ ನ್ಯೂಸ್

ಹುಲಿಗಳ ಅಸಹಜ ಸಾವು ಪ್ರಕರಣ – ಐವರನ್ನು ವಶಕ್ಕೆ ಪಡೆದು ವಿಚಾರಣೆ

(ನ್ಯೂಸ್ ಕಡಬ) newskadaba.com ಜೂ. 27.  ಮಹದೇಶ್ವರ ಬೆಟ್ಟದಲ್ಲಿ ಹುಲಿ ಮತ್ತು ನಾಲ್ಕು ಮರಿಗಳ ಅಸ್ವಾಭಾವಿಕ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಗುರುವಾರ ಆದೇಶಿಸಿದ್ದು, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಐವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.   ಈ ಬಗ್ಗೆ ದುಃಖ ವ್ಯಕ್ತಪಡಿಸಿದ ಖಂಡ್ರೆ, ತಕ್ಷಣವೇ ಇದರ ಬಗ್ಗೆ ತನಿಖೆಗೆ ಆದೇಶಿಸಿದ್ದರು, ಇದನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ನೇತೃತ್ವದ ತಂಡವು ನೇತೃತ್ವ ವಹಿಸಿದ್ದು, ಪ್ರಕರಣವನ್ನು

ಹುಲಿಗಳ ಅಸಹಜ ಸಾವು ಪ್ರಕರಣ – ಐವರನ್ನು ವಶಕ್ಕೆ ಪಡೆದು ವಿಚಾರಣೆ Read More »

ಕರ್ನಾಟಕ, ಕ್ರೈಮ್ ನ್ಯೂಸ್
crime, arrest, suspected

ಭದ್ರತಾ ಮಾಹಿತಿ ಸೋರಿಕೆ ಆರೋಪ ನೌಕಾಪಡೆ ಸಿಬ್ಬಂದಿಯ ಬಂಧನ

(ನ್ಯೂಸ್ ಕಡಬ) newskadaba.com ಜೂ. 27. ಭದ್ರತಾ ಮಾಹಿತಿಯನ್ನು ಪಾಕಿಸ್ತಾನಕ್ಕೆ ತಲುಪಿಸುತ್ತಿದ್ದ ಭಾರತೀಯ ನೌಕಾಪಡೆ ಸಿಬಂದಿಯೊಬ್ಬನನ್ನು ಬಂಧಿಸಿರುವ ಕುರಿತು ವರದಿಯಾಗಿದೆ.   ಬಂಧಿತನನ್ನು ನೌಕಾಪಡೆಯ ಗುಮಾಸ್ತನಾದ ವಿಶಾಲ್‌ ಯಾದವ್‌ ಎಂದು ಗುರುತಿಸಲಾಗಿದೆ.   ಈತ ಭಾರತೀಯ ಮಹಿಳೆಯ ಸೋಗಿನಲ್ಲಿದ್ದ ಪಾಕಿಸ್ತಾನಿ ವ್ಯಕ್ತಿಯಿಂದ ಆಪರೇಷನ್‌ ಸಿಂಧೂರ ಮಾಹಿತಿಗೆ 50,000 ರೂ. ಸೇರಿದಂತೆ, ವಿವಿಧ ಭದ್ರತಾ ಗುಟ್ಟುಗಳನ್ನು ಬಿಟ್ಟುಕೊಟ್ಟದ್ದಕ್ಕಾಗಿ ಈವರೆಗೆ 2 ಲಕ್ಷ ರೂ. ಹಣವನ್ನು ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ.

ಭದ್ರತಾ ಮಾಹಿತಿ ಸೋರಿಕೆ ಆರೋಪ ನೌಕಾಪಡೆ ಸಿಬ್ಬಂದಿಯ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top