ಕ್ರೈಮ್ ನ್ಯೂಸ್

ಜೀಪು – ಸ್ಕೂಟರ್ ಢಿಕ್ಕಿ ➤ಸ್ಕೂಟರ್ ಸವಾರಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.13.ಜೀಪು ಮತ್ತು ಸ್ಕೂಟರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡ  ಘಟನೆ  ಇಂದು  ಅಪರಾಹ್ನ ಕುಂಬ್ರ ಜಂಕ್ಷನ್ ನಲ್ಲಿ ನಡೆದಿದೆ.  ಪುತ್ತೂರಿನಿಂದ ಸುಳ್ಯದ ಕಡೆಗೆ ತೆರಳುತ್ತಿದ್ದ ಜೀಪು ಹಾಗೂ ಕೌಡಿಚ್ಚಾರ್ ನಿಂದ ಕುಂಬ್ರಕ್ಕೆ ಬರುತ್ತಿದ್ದ  ಸ್ಕೂಟರ್ ನಡುವೆ ಕುಂಬ್ರ ಜಂಕ್ಷನ್ ನಲ್ಲಿ ಅಪಘಾತ ಸಂಭವಿಸಿದೆ.ಪರಿಣಾಮ ಸ್ಕೂಟರ್ ಸವಾರನಿಗೆ ಸ್ವಲ್ಪ ಗಾಯಗಳಾಗಿವೆ. ಢಿಕ್ಕಿಯನ್ನು ತಪ್ಪಿಸುವ ಭರದಲ್ಲಿ ಜೀಪು ಚಾಲಕ ತನ್ನ ವಾಹನವನ್ನು ರಸ್ತೆ ಬದಿಗೆ ಇಳಿಸಿದ್ದು ಈ ವೇಳೆ ರಸ್ತೆ […]

ಜೀಪು – ಸ್ಕೂಟರ್ ಢಿಕ್ಕಿ ➤ಸ್ಕೂಟರ್ ಸವಾರಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಆಟವಾಡುತ್ತಾ ಬಾವಿಗೆ ಬಿದ್ದು ಬಾಲಕನೋರ್ವ ಮೃತ್ಯು!!      

(ನ್ಯೂಸ್ ಕಡಬ)newskadaba.com ಹೊನ್ನಾವರ, ಫೆ.13. ಮನೆಯ ತೋಟದ ಸಮೀಪ ನಾಯಿಯೊಂದಿಗೆ ಆಟ ಆಡುತ್ತಾ ತೆರಳಿದ ಬಾಲಕನೋರ್ವ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ತಾಲೂಕಿನ ಕಡ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಂದೂರಿನ ನಾಗಭೂಷಣ ದಯಾನಂದ ಹೆಗಡೆ (6) ಎನ್ನುವ ಒಂದನೇ ತರಗತಿ ವಿದ್ಯಾರ್ಥಿ ಆಕಸ್ಮಿಕವಾಗಿ ತೆರೆದ ಬಾವಿಯಲ್ಲಿ ಬಿದ್ದಿದ್ದಾನೆ. ಮಗುವನ್ನು ಕುಟುಂಬದವರು ತೋಟದಲ್ಲಿ ಹುಡುಕಿ ಬಾವಿಯ ಕಡೆ ನೋಡಿದಾಗ ದುರಂತ ಬೆಳಕಿಗೆ ಬಂದಿದೆ.

ಆಟವಾಡುತ್ತಾ ಬಾವಿಗೆ ಬಿದ್ದು ಬಾಲಕನೋರ್ವ ಮೃತ್ಯು!!       Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಾಪು: ಶರತ್‌ ಶೆಟ್ಟಿ ಹತ್ಯೆ ಪ್ರಕರಣ   ➤  ದೈವದ ಮೊರೆ ಹೋದ ಕುಟುಂಬ.!

(ನ್ಯೂಸ್ ಕಡಬ)newskadaba.com ಕಾಪು, ಫೆ.13. ದುಷ್ಮರ್ಮಿಗಳಿಂದ ಹತ್ಯೆಗೊಳಗಾದ ಪಾಂಗಾಳ ಶರತ್‌ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳನ್ನು ಶೀಘ್ರವೇ ಪೊಲೀಸರ ಕೈಗೆ ಸಿಲುಕಿಸುವಂತೆ ಶರತ್‌ ಶೆಟ್ಟಿ ಕುಟುಂಬದವರು ದೈವದ ಮೊರೆ ಹೋಗಿದ್ದಾರೆ. ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ನೇಮ ನಡೆದಿದ್ದು, ಅಲ್ಲಿ ಅವರು ತನ್ನ ಭಾವನ ಸಾವಿಗೆ ಕಾರಣರಾಗಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಡೆಸುತ್ತಿರುವ ಪ್ರಯತ್ನಕ್ಕೆ ದೈವ ಬಲವನ್ನು ಒದಗಿಸಿಕೊಟ್ಟು, ಅವರ ಬಂಧನವಾಗಿ ಕಠಿಣ ಶಿಕ್ಷೆ ದೊರಕುವಂತೆ ಅನುಗ್ರಹಿಸುವಂತೆ ಅವರು ದೈವದ ಮೊರೆ ಹೋಗಿದ್ದಾರೆ.

ಕಾಪು: ಶರತ್‌ ಶೆಟ್ಟಿ ಹತ್ಯೆ ಪ್ರಕರಣ   ➤  ದೈವದ ಮೊರೆ ಹೋದ ಕುಟುಂಬ.! Read More »

ಕರಾವಳಿ, ಕ್ರೈಮ್ ನ್ಯೂಸ್

ಸಾಲದ ವಿಷಯಕ್ಕೆ ಉದ್ಯಮಿಯ ಕೊಲೆ ➤ವೈದ್ಯ ಅರೆಸ್ಟ್

(ನ್ಯೂಸ್ ಕಡಬ) newskadaba.com. ಬೆಳಗಾವಿ. ಫೆ.13.  ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿಯನ್ನು ವೈದ್ಯ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಜಿಲ್ಲೆಯ ಗೋಕಾಕ್‌ ನಗರದ ನಿವಾಸಿ ರಾಜು ಝಂವರ ಮೃತ ದುರ್ದೈವಿ. ಉದ್ಯಮಿ ಗೋಕಾಕ್‌ನಿಂದ ನಾಪತ್ತೆಯಾಗಿದ್ದರು. ಈ ಸಂಬಂಧ  ಗೋಕಾಕ್ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರಿಗೆ ರಾಜು ಅವರ ದ್ವಿಚಕ್ರವಾಹನ ಗೋಕಾಕ್ ನಗರದ ಸಿಟಿ ಆಸ್ಪತ್ರೆ ಬಳಿ ಪತ್ತೆಯಾಗಿತ್ತು. ಹಾಗೇ ಪೊಲೀಸರು ಉದ್ಯಮಿ ರಾಜು ಝಂವರ್‌ಗೆ ಕೊನೆ ಬಾರಿ ಕರೆ ಮಾಡಿದ್ದವರನ್ನು ಕರೆಯಿಸಿ

ಸಾಲದ ವಿಷಯಕ್ಕೆ ಉದ್ಯಮಿಯ ಕೊಲೆ ➤ವೈದ್ಯ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ರೈಲ್ವೇ ಟ್ರ್ಯಾಕ್ ಬಳಿ ಮಹಿಳೆಯೋರ್ವರ ಮೃತದೇಹ ಪತ್ತೆ      

(ನ್ಯೂಸ್ ಕಡಬ)newskadaba.com ಪುತ್ತೂರು, ಫೆ.13. ರೈಲ್ವೇ ಟ್ರ್ಯಾಕ್ ಬಳಿ ಮಹಿಳೆಯೋರ್ವರ ಮೃತದೇಹ ಪತ್ತೆಯಾದ ಘಟನೆ ಪುತ್ತೂರಿನಲ್ಲಿ ಸಂಭವಿಸಿದೆ.   ಮೇಲ್ನೋಟಕ್ಕೆ ಇದು ಮಹಿಳೆಯ ಮೃತದೇಹ ಎಂದು ತಿಳಿಸಿದ್ದಾರೆ.  

ಪುತ್ತೂರು: ರೈಲ್ವೇ ಟ್ರ್ಯಾಕ್ ಬಳಿ ಮಹಿಳೆಯೋರ್ವರ ಮೃತದೇಹ ಪತ್ತೆ       Read More »

ಕರಾವಳಿ, ಕ್ರೈಮ್ ನ್ಯೂಸ್

ಸುರತ್ಕಲ್: ಕಾರ್ಮಿಕರ ನಡುವೆ ಹೊಡೆದಾಟ     ➤  ಓರ್ವ ಮೃತ್ಯು.!

(ನ್ಯೂಸ್ ಕಡಬ)newskadaba.com ಸುರತ್ಕಲ್, ಫೆ.13. ಕ್ಷುಲಕ ಕಾರಣಕ್ಕೆ ಕಾರ್ಮಿಕರ ಮಧ್ಯೆ ಹೊಡೆದಾಟ ನಡೆದು ಓರ್ವ ಮೃತಪಟ್ಟು, ಮತ್ತಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕುಳಾಯಿ ಬಳಿ ಸಂಭವಿಸಿದೆ. ಮೃತ ಯುವಕನ್ನು ಬಿಹಾರ ಮೂಲದ ಚೋಟು ಕುಮಾರ್ (21) ಎಂದು ಗುರುತಿಸಲಾಗಿದೆ. ಮೃತ ಯುವಕ ಮತ್ತು ಆರೋಪಿಗಳು ಕುಳಾಯಿಯ ಮಾರ್ಬಲ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಊಟಕ್ಕೆ ಸಂಬಂಧಿಸಿಂತೆ ಮೂವರ ಮಧ್ಯೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.  

ಸುರತ್ಕಲ್: ಕಾರ್ಮಿಕರ ನಡುವೆ ಹೊಡೆದಾಟ     ➤  ಓರ್ವ ಮೃತ್ಯು.! Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ವಿಮಾನ ನಿಲ್ದಾಣದಲ್ಲಿ 2.60 ಕೋಟಿ ರೂ. ಮೌಲ್ಯದ ವಜ್ರ ವಶ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.13. ಭಾರತದಿಂದ ದುಬೈಗೆ ಅಕ್ರಮವಾಗಿ ವಿಮಾನದಲ್ಲಿ 2.60 ಕೋಟಿ ರೂ. ಮೌಲ್ಯದ ವಜ್ರ ಸಾಗಿಸುತ್ತಿದ್ದ ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾರತೀಯ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದುಬೈಗೆ ಪ್ರಯಾಣ ಬೆಳೆಸಿದ್ದ ಭಟ್ಕಳದ ಅನಸ್ ಮತ್ತು ಅಮ್ಮರ್ ಎಂಬ ಪ್ರಯಾಣಿಕರು ತಮ್ಮ ಶೂ ಮತ್ತು ಬ್ಯಾಗ್ ಅಡಿಯಲ್ಲಿ ಅನುಮಾನ ಬಾರದಂತೆ ವಜ್ರವನ್ನು ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದರು. ಈ ವಜ್ರಗಳನ್ನು ಮುಂಬಯಿಯಿಂದ ತಂದಿದ್ದರು ಎನ್ನಲಾಗಿದೆ.    

ಮಂಗಳೂರು: ವಿಮಾನ ನಿಲ್ದಾಣದಲ್ಲಿ 2.60 ಕೋಟಿ ರೂ. ಮೌಲ್ಯದ ವಜ್ರ ವಶ Read More »

ಕರಾವಳಿ, ಕ್ರೈಮ್ ನ್ಯೂಸ್

ಉದ್ಯಮಿ ಅಪಹರಿಸಿ ಹತ್ಯೆ ಪ್ರಕರಣ ➤ ಇಬ್ಬರು ಆರೋಪಿಗಳ ಬಂಧನ

(ನ್ಯೂಸ್ ಕಡಬ)newskadaba.com ಹಾಸನ. ಫೆ.12. ಹಾಸನದ ಉದ್ಯಮಿಯೋರ್ವನನ್ನು ಅಪಹರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನವೀನ್ ಮತ್ತು ಸಾಗರ್ ಬಂಧಿತ ಆರೋಪಿಗಳು ಎಂದು ಎಸ್ಪಿ ಹರಿರಾಮ್ ಶಂಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಹಾಸನದ ಗವೇನಹಳ್ಳಿ ಬೈಪಾಸ್ ಸಮೀಪ ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದ ಲಿಖಿತ್‌ ಗೌಡ (26) ಹತ್ಯೆಗೀಡಾದ ಯುವಕನಾಗಿದ್ದು, ಈತನ ಮೃತದೇಹ ಇತ್ತೀಚೆಗೆ ಹಾಸನ ತಾಲೂಕಿನ ಯೋಗೀಹಳ್ಳಿ ಅರಣ್ಯದಲ್ಲಿ ಪತ್ತೆಯಾಗಿತ್ತು ಎನ್ನಲಾಗಿದೆ.  

ಉದ್ಯಮಿ ಅಪಹರಿಸಿ ಹತ್ಯೆ ಪ್ರಕರಣ ➤ ಇಬ್ಬರು ಆರೋಪಿಗಳ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೈಕ್ ಗೆ ಟಿಪ್ಪರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತ್ಯು               

(ನ್ಯೂಸ್ ಕಡಬ)newskadaba.com ತುಮಕೂರು, ಫೆ.12. ತುಮಕೂರಿನಲ್ಲಿ ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಚಿಕ್ಕ ಹುಲಿಕುಂಟೆಯ ಅನಿಲ್ ಹಾಗೂ ಆಂದ್ರದ ಶ್ರೀಧರ್ ಎಂದು ಗುರುತಿಸಲಾಗಿದೆ. ಇಬ್ಬರು ಬೈಕ್ ನಲ್ಲಿ ಸೌತೆಕಾಯಿ ವ್ಯಾಪಾರಕ್ಕೆ ತೆರಳುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಈ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.    

ಬೈಕ್ ಗೆ ಟಿಪ್ಪರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತ್ಯು                Read More »

ಕರ್ನಾಟಕ, ಕ್ರೈಮ್ ನ್ಯೂಸ್

8 ವರ್ಷಗಳಿಂದ ದ್ವಿಪತ್ನಿತ್ವ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ                

(ನ್ಯೂಸ್ ಕಡಬ)newskadaba.com ಕಾಸರಗೋಡು, ಫೆ.12. ಮೊದಲ ಪತ್ನಿಗೆ ತಿಳಿಯದಂತೆ ಎರಡನೇ ಮದುವೆಯಾಗಿದ್ದ ದ್ವಿಪತ್ನಿತ್ವ ಪ್ರಕರಣದಲ್ಲಿ ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪುತ್ತೂರಿನ ದರ್ಬೆ ನಿವಾಸಿ ಅಬ್ದುಲ್ ಹಮೀದ್ (50) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ಹಮೀದ್ ಅವರ ಮೊದಲ ಪತ್ನಿ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಬಳಿಕ ಅಬ್ದುಲ್ 2014ರಲ್ಲಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದ. ಈ ಸಂಬಂಧ ಅಬ್ದುಲ್‌ನ ಮೊದಲ ಪತ್ನಿ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಬ್ದುಲ್‌ಗಾಗಿ ಹುಡುಕಾಟ ನಡೆಸಿದ್ದರು. ಅಬ್ದುಲ್‌ ಮೇಲೆ

8 ವರ್ಷಗಳಿಂದ ದ್ವಿಪತ್ನಿತ್ವ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ                 Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top